'ಮನಿಹೈಸ್ಟ್' ಎಕ್ಸ್‌ಕ್ಲೂಸಿವ್ ದೃಶ್ಯ ಬಿಡುಗಡೆ: ಪ್ರೊಫೆಸರ್ ನಾಪತ್ತೆ!

ಜನಪ್ರಿಯ ನೆಟ್‌ಫ್ಲಿಕ್ಸ್‌ ವೆಬ್ ಸರಣಿ 'ಮನಿಹೈಸ್ಟ್‌'ನ ಐದನೇ ಸೀಸನ್‌ನ ಮೊದಲ ಭಾಗ ಈಗಾಗಲೇ ಬಿಡುಗಡೆ ಆಗಿದೆ. ಐದನೇ ಸೀಸನ್‌ನ ಇನ್ನೊಂದು ಭಾಗ ಡಿಸೆಂಬರ್ 03ಕ್ಕೆ ಬಿಡುಗಡೆ ಆಗಲಿದ್ದು, ಅದು 'ಮನಿಹೈಸ್ಟ್' ಸರಣಿಯ ಕೊನೆಯ ಭಾಗವಾಗಿರಲಿದೆ.

ಸೀಸನ್‌ನ ಕೊನೆಯ ಭಾಗ ಬಿಡುಗಡೆಗೆ ಇನ್ನೂ ಎರಡು ತಿಂಗಳಿರುವಂತೆಯೇ ನೆಟ್‌ಫ್ಲಿಕ್ಸ್‌, ಎಕ್ಸ್‌ಕ್ಲ್ಯೂಸಿವ್ ದೃಶ್ಯವೊಂದನ್ನು ಯೂಟ್ಯೂಬ್‌ನಲ್ಲಿ ಹಂಚಿಕೊಂಡಿದೆ.

ಸೀಸನ್‌ ಐದರ ಮೊದಲ ಭಾಗದಲ್ಲಿ ವೆಬ್ ಸರಣಿಯ ಬಹಳ ಮುಖ್ಯ ಪಾತ್ರವಾಗಿದ್ದ ಟೊಕಿಯೊ ಸಾಯುತ್ತಾಳೆ. ಮಾಜಿ ಇನ್‌ಸ್ಪೆಕ್ಟರ್ ಬಂಧನದಲ್ಲಿದ್ದ ಪ್ರೊಫೆಸರ್ ಬಿಡುಗಡೆ ಪಡೆದುಕೊಳ್ಳುತ್ತಾನೆ. ಆದರೆ ಈಗ ನೆಟ್‌ಫ್ಲಿಕ್ಸ್‌ ಹಂಚಿಕೊಂಡಿರುವ ದೃಶ್ಯದಲ್ಲಿ ಪ್ರೊಫೆಸರ್ ಕಾಣೆಯಾಗಿರುವ ಬಗ್ಗೆ ಬ್ಯಾಂಕ್‌ ಆಫ್‌ ಸ್ಪೇನ್‌ನಲ್ಲಿ ದರೋಡೆಯಲ್ಲಿ ನಿರತವಾಗಿರುವ ಗುಂಪು ಮಾತನಾಡಿಕೊಳ್ಳುತ್ತಿದೆ.

Money Heist Season 05 Volume 2 Exclusive Scene Released By Netflix

ಬ್ಯಾಂಕ್‌ ಆಫ್‌ ಸ್ಪೇನ್‌ನಲ್ಲಿ ದರೋಡೆ ಇನ್ನೂ ಮುಂದುವರೆಯುತ್ತಿದ್ದು, ದರೋಡೆಕೋರ ಗುಂಪಿಗೆ ಹೊರಗಿನಿಂದಲೇ ಪ್ರೊಫೆಸರ್ ಸಲಹೆಗಳನ್ನು, ಸೂಚನೆಗಳನ್ನು ನೀಡುತ್ತಿರುತ್ತಾನೆ. ಆದರೆ ಈಗ ಏಕಾ-ಏಕಿ ಪ್ರೊಫೆಸರ್ ಕಾಣದಂತಾಗಿರುವುದು ಒಳಗಿರುವವರಿಗೆ ತೀವ್ರ ಆತಂಕ ಉಂಟು ಮಾಡಿದೆ.

ಬ್ಯಾಂಕ್‌ ಆಫ್‌ ಸ್ಪೇನ್‌ನಲ್ಲಿರುವ 90 ಟನ್ ಚಿನ್ನವನ್ನು ಕರಿಗಿಸಿಟ್ಟು ಈಗ ಅದನ್ನು ಹೊರಗೆ ಹೇಗೆ ತೆಗೆದುಕೊಂಡು ಹೋಗಬೇಕು ಎಂಬ ಗೊಂದಲಕ್ಕೆ ಸಿಲುಕಿದ್ದಾರೆ ಒಳಗಿರುವ ದರೋಡೆಕೋರರು. ಪ್ರೊಫೆಸರ್ ಸಂಪರ್ಕಕ್ಕೆ ಸಿಗದೇ ಇರುವುದು ಅವರಲ್ಲಿ ಆತಂಕದ ಜೊತೆಗೆ ಪರಸ್ಪರ ಭಿನ್ನಾಭಿಪ್ರಾಯಕ್ಕೂ ಕಾರಣವಾಗಿದೆ.

ಬಂದೂಕು ಹಿಡಿದುಕೊಂಡು ಗುಂಪಿನ ಇತರ ಸದಸ್ಯರ ಮೇಲೆ ಪಲೆಮ್ರೊ ತನ್ನ ಅಭಿಪ್ರಾಯ ಹೇರುತ್ತಿದ್ದಾನೆ. ಬ್ಯಾಂಕ್‌ ಆಫ್ ಸ್ಪೇನ್‌ನಲ್ಲಿರುವ ಒತ್ತೆಯಾಳುಗಳನ್ನು ಮುಂದಿಟ್ಟುಕೊಂಡು ಹೊರಗಿರುವ ಪೊಲೀಸ್ ಮುಖ್ಯಸ್ಥ ತಮಾಯೊ ಜೊತೆ ಒಪ್ಪಂದ ಮಾಡಿಕೊಳ್ಳುವುದು ಪಲೆಮ್ರೊ ಐಡಿಯಾ. ಆದರೆ ಇದಕ್ಕೆ ಗುಂಪಿನ ಇತರ ಸದಸ್ಯರು ಒಪ್ಪಿಗೆ ಸೂಚಿಸುತ್ತಿಲ್ಲ. ಇದು ನೆಟ್‌ಫ್ಲಿಕ್ಸ್‌ ಬಿಡುಗಡೆ ಮಾಡಿರುವ ಎಕ್ಸ್‌ಕ್ಲ್ಯೂಸಿವ್ ದೃಶ್ಯದ ಸಾರಾಂಶ.

'ಮನಿಹೈಸ್ಟ್' ವೆಬ್ ಸರಣಿಯ ಐದನೇ ಸೀಸನ್‌ನ ಮೊದಲ ಭಾಗದಲ್ಲಿ ಪೊಲೀಸರ ಮೇಲುಗೈ ಆಗಿದೆ. ಟೊಕಿಯೊ ನಿಧನ ಹೊಂದಿದ್ದಾಳೆ. ಹೆಲ್‌ಸಿಂಕಿ ಸಾಯುವ ಸ್ಥಿತಿಯಲ್ಲಿದ್ದಾನೆ. ದರೋಡೆಕೋರ ಗುಂಪಿಗೆ ಬಹಳ ದೊಡ್ಡ ಹಿನ್ನೆಡೆ ಆಗಿದೆ. ಡಿಸೆಂಬರ್ 03 ರಂದು ಬಿಡುಗಡೆ ಆಗಲಿರುವ ಕೊನೆಯ ಭಾಗದಲ್ಲಿ ಉಳಿದ ದರೋಡೆಕೋರರ ಗುಂಪು ಸಹ ಸಾಯುತ್ತದೆಯೇ ಅಥವಾ ಪೊಲೀಸರಿಗೆ ಶರಣಾಗುತ್ತಾರೊ ಅಥವಾ ಬ್ಯಾಂಕ್‌ ಆಫ್ ಸ್ಪೇನ್‌ನಿಂದ ತಪ್ಪಿಸಿಕೊಂಡು ಹೊರಗೆ ಹೋಗುತ್ತಾರೆಯೋ? ಕಾದು ನೋಡಬೇಕಿದೆ. ಪ್ರೊಫೆಸರ್ ಕಣ್ಮರೆ ಆಗಿದ್ದಾನೆಯೇ, ಸತ್ತು ಹೋಗಿದ್ದಾನೆಯೇ ಎಂಬುದು ಸಹ ಕುತೂಹಲ ಮೂಡಿಸಿದೆ.

More from Filmibeat

English summary
Money Heist season 05 volume 2nd exclusive scene released by Netflix. Volume 2 is going to release on December 03 on Netflix.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X