'ಮನಿ ಹೈಸ್ಟ್' ಕೊನೆ ಭಾಗ: ನೋಡಿದವರು ನಿದ್ದೆ ಮಾಡಲಾರರು ಎಂದ ನಟ

ಜಗತ್ ವಿಖ್ಯಾತ ವೆಬ್ ಸರಣಿ 'ಮನಿ ಹೈಸ್ಟ್'ನ ಕೊನೆಯ ಡಿಸೆಂಬರ್ 03 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗಲಿದೆ. ಈ ಜನಪ್ರಿಯ ವೆಬ್ ಸರಣಿಯ ಕೊನೆಯ ಭಾಗ ಇದಾಗಿರಲಿದ್ದು, ಅಭಿಮಾನಿಗಳು ಕಾತರದಿಂದ ಬಿಡುಗಡೆ ದಿನಕ್ಕಾಗಿ ಕಾಯುತ್ತಿದ್ದಾರೆ.

'ಮನಿ ಹೈಸ್ಟ್'ನ ಕೊನೆಯ ಭಾಗದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟ್ರೈಲರ್, ಟೀಸರ್‌ಗಳು ಈಗಾಗಲೇ ಬಿಡುಗಡೆ ಆಗಿ ಕೋಟ್ಯಂತರ ಜನರನ್ನು ತಲುಪಿವೆ. ಇದರ ನಡುವೆ ವೆಬ್ ಸರಣಿಯ ನಟರ ಸಂದರ್ಶನಗಳ ಕಿರು ವಿಡಿಯೋ ಒಂದನ್ನು ಇದೀಗ ಬಿಡುಗಡೆ ಮಾಡಲಾಗಿದೆ. ಸಂದರ್ಶನದ ಜೊತೆಗೆ ಚಿತ್ರೀಕರಣದ ತುಣುಕುಗಳು ಸಹ ವಿಡಿಯೋದಲ್ಲಿ ಅಡಕವಾಗಿವೆ.

'ಮನಿ ಹೈಸ್ಟ್ ಸೀಸನ್ 2ರ ಮೊದಲ ಭಾಗ ಈಗಾಗಲೇ ಬಿಡುಗಡೆ ಆಗಿದೆ. ಮೊದಲ ಭಾಗದ ಅಂತ್ಯದಲ್ಲಿ 'ಮನಿಹೈಸ್ಟ್' ಪ್ರಮುಖ ಪಾತ್ರ ಟೊಕಿಯೋ ಅಸುನೀಗಿದ್ದಾಳೆ. ಆದರೆ ಇದೀಗ ಬಿಡುಗಡೆ ಆಗಿರುವ ವಿಡಿಯೋ ತುಣುಕಿನಲ್ಲಿ ನಿರ್ದೇಶಕ ಅಲೆಕ್ಸ್ ಪಿನ್ಯಾ ಟೋಕಿಯೋ ಪಾತ್ರಧಾರಿಯನ್ನು ''ನೀನು ಮತ್ತೊಮ್ಮೆ ಶೋನಲ್ಲಿ ಬರುವುದಾದರೆ ಹೇಗೆ ಕಾಣಿಸಿಕೊಳ್ಳಲು ಇಚ್ಛಿಸುತ್ತೀಯ?'' ಎಂದು ಕೇಳುವ ದೃಶ್ಯವಿದೆ. ಇದು ಟೋಕಿಯೊ ಅಭಿಮಾನಿಗಳ ಖುಷಿ ಹೆಚ್ಚಲು ಜೊತೆಗೆ ಕುತೂಹಲ ಮೂಡಲು ಕಾರಣವಾಗಿದೆ.

Money Heist Season 5 Part Two Will Release On Netflix On December 03

ವಿಡಿಯೋದಲ್ಲಿ ಮಾತನಾಡಿರುವ ಫ್ರೊಫೆಸರ್ ಪಾತ್ರಧಾರಿ ಅಲ್ವಾರೊ ಮೊರ್ಟೆ, ''ಈ ಕೊನೆಯ ಸೀಸನ್ ಬಹಳವೇ ಉದ್ವೇಗವನ್ನು ಪ್ರೇಕ್ಷಕರಿಗೆ ನೀಡಲಿದೆ. ಹಲವು ತಿರುವು, ಆಕ್ಷನ್ ಮತ್ತು ಭಾವನೆಗಳ ಹೊಯ್ದಾಟವನ್ನು ಹೊಂದಿರಲಿದೆ'' ಎಂದಿದ್ದಾರೆ.

'ಮನಿ ಹೈಸ್ಟ್'ನಲ್ಲಿ ಹೆಲ್ಸಿಂಕಿ ಪಾತ್ರದಲ್ಲಿ ನಟಿಸಿರುವ ಡಾರ್ಕೊ ಪೆರ್ಸಿ ಮಾತನಾಡಿ, ''ಈ ಸೀಸನ್‌ನ ಕೊನೆಯ ಭಾಗದ ಎಪಿಸೋಡ್‌ಗಳನ್ನು ನೋಡಿದ ಬಳಿಕ ಜನರು ನಿದ್ದೆ ಮಾಡಲು ಸಾಧ್ಯವಿಲ್ಲ, ಎಪಿಸೋಡ್‌ಗಳು ಅಷ್ಟು ಕಾಡುತ್ತವೆ'' ಎಂದಿದ್ದಾರೆ. ಮುಂದುವರೆದು, ''ಮನಿ ಹೈಸ್ಟ್'ನ ಅಭಿಮಾನಿಗಳಿಗೆ ಯಾವುದೇ ಕಾರಣಕ್ಕೂ ನಿರಾಶೆ ಮಾಡುವುದಿಲ್ಲ. ನೀವೇನು ನೋಡಲು ಕಾತರರಾಗಿದ್ದೀರೋ ಅದು ಈ ಹಿಂದಿನ ಎಲ್ಲ ಸೀಸನ್‌ಗಳಿಗಿಂತಲೂ ಪವರ್‌ಫುಲ್ ಆಗಿರಲಿದೆ'' ಎಂದಿದ್ದಾರೆ.

ಇದೇ ತಿಂಗಳ ಆರಂಭದಲ್ಲಿ 'ಮನಿಹೈಸ್ಟ್' ಸೀಸನ್ 5ರ ಕೊನೆಯ ಭಾಗದ ಟ್ರೇಲರ್ ಬಿಡುಗಡೆ ಮಾಡಲಾಗಿತ್ತು. ಕೊನೆಯ ಭಾಗವು ಭಾರಿ ಆಕ್ಷನ್‌ನಿಂದ ತುಂಬಿರಲಿದೆ ಜೊತೆಗೆ ಹಲವು ತಿರುವುಗಳು ಸಹ ಇರಲಿವೆ ಎಂಬುದು ಟ್ರೇಲರ್‌ನಿಂದಲೇ ಗೊತ್ತಾಗುತ್ತಿತ್ತು. ಜೊತೆಗೆ ವೆಬ್ ಸರಣಿ ಪ್ರಾರಂಭವಾದಾಗಿನಿಂದ ಈವರೆಗೆ ಇದೇ ಮೊದಲ ಬಾರಿಗೆ ಫ್ರೊಫೆಸರ್ ಪಾತ್ರಧಾರಿ ದರೋಡೆ ನಡೆಯುತ್ತಿರುವ ಜಾಗಕ್ಕೆ ಹೋಗಿ ತಮ್ಮವರನ್ನು ಸೇರಿಕೊಳ್ಳಲಿದ್ದಾರೆ ಎಂಬುದನ್ನೂ ಟ್ರೇಲರ್‌ನಲ್ಲಿ ತೋರಿಸಿದ್ದರು. ಇದು ವೆಬ್ ಸರಣಿಯ ಬಗ್ಗೆ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ.

'ಬ್ಯಾಂಕ್‌ ಆಫ್‌ ಸ್ಪೇನ್‌ನಲ್ಲಿ ದರೋಡೆ ಇನ್ನೂ ಮುಂದುವರೆಯುತ್ತಿದ್ದು, ದರೋಡೆಕೋರ ಗುಂಪಿಗೆ ಹೊರಗಿನಿಂದಲೇ ಪ್ರೊಫೆಸರ್ ಸಲಹೆಗಳನ್ನು, ಸೂಚನೆಗಳನ್ನು ನೀಡುತ್ತಿರುತ್ತಾನೆ. ಆದರೆ ಈಗ ಏಕಾ-ಏಕಿ ಪ್ರೊಫೆಸರ್ ಕಾಣದಂತಾಗಿರುವುದು ಒಳಗಿರುವವರಿಗೆ ತೀವ್ರ ಆತಂಕ ಉಂಟು ಮಾಡಿದೆ. ಬ್ಯಾಂಕ್‌ ಆಫ್‌ ಸ್ಪೇನ್‌ನಲ್ಲಿರುವ 90 ಟನ್ ಚಿನ್ನವನ್ನು ಕರಗಿಸಿಟ್ಟು ಈಗ ಅದನ್ನು ಹೊರಗೆ ಹೇಗೆ ತೆಗೆದುಕೊಂಡು ಹೋಗಬೇಕು ಎಂಬ ಗೊಂದಲಕ್ಕೆ ಸಿಲುಕಿದ್ದಾರೆ ಒಳಗಿರುವ ದರೋಡೆಕೋರರು. ಪ್ರೊಫೆಸರ್ ಸಂಪರ್ಕಕ್ಕೆ ಸಿಗದೇ ಇರುವುದು ಅವರಲ್ಲಿ ಆತಂಕದ ಜೊತೆಗೆ ಪರಸ್ಪರ ಭಿನ್ನಾಭಿಪ್ರಾಯಕ್ಕೂ ಕಾರಣವಾಗಿದೆ. ಈ ನಡುವೆ ಗುಂಪಿನ ಪ್ರಮುಖ ಸದಸ್ಯೆ ಟೋಕಿಯೊ ಕೂಡ ಅಸುನೀಗಿದ್ದಾಳೆ, ಬ್ಯಾಂಕ್‌ನ ಒಳಗಿರುವವರು ಆತಂಕಿತರಾಗಿದ್ದಾರೆ, ಪೊಲೀಸರು ಬ್ಯಾಂಕ್ ಒಳಗೆ ಪ್ರವೇಶಿಸಿ ದರೋಡೆಕೋರರ ಮೇಲೆ ಯುದ್ಧದಲ್ಲಿ ತೊಡಗಿದ್ದಾರೆ. ದರೋಡೆಕೋರರು ಜೀವಂತವಾಗಿ ಬ್ಯಾಂಕ್‌ನಿಂದ ಹೊರಗೆ ಹೋಗುವ ಸಾಧ್ಯತೆಗಳೆಲ್ಲ ಬಹುತೇಕ ಬಂದ್ ಆಗಿವೆ' ಇದು ಈವರೆಗೆ ನಡೆದಿರುವ ಕತೆ, ಡಿಸೆಂಬರ್ 03 ರಂದು ಬಿಡುಗಡೆ ಆಗುವ ಐದನೇ ಸೀಸನ್‌ನ ಕೊನೆಯ ಭಾಗದಲ್ಲಿ, ದರೋಡೆಕೋರರು ಪೊಲೀಸರಿಂದ ತಪ್ಪಿಸಿಕೊಂಡು ಚಿನ್ನವನ್ನು ಹೊರಗೆ ಸಾಗಿಸುತ್ತಾರೆಯೇ ಅಥವಾ ಪೊಲೀಸರ ಗುಂಡಿಗೆ ಬಲಿಯಾಗುತ್ತೆರೆಯೇ ಅಥವಾ ಪೊಲೀಸರಿಗೆ ಶರಣಾಗಿ ಜೀವ ಉಳಿಸಿಕೊಳ್ಳುತ್ತಾರೆಯೇ ಎಂಬುದು ಗೊತ್ತಾಗಲಿದೆ.

More from Filmibeat

English summary
Money Heist season 5 part two will release on Netflix on December 03. Making video of ast part released by production team.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X