'ಮನಿ ಹೈಸ್ಟ್' ಪ್ರಿಯರಿಗೆ ಆಘಾತಕಾರಿ ಸುದ್ದಿ: ಮುಂದಕ್ಕಿಲ್ಲ ಕಳ್ಳ-ಪೊಲೀಸ್ ಆಟ
ಇದು ವೆಬ್ ಸೀರೀಸ್‌ಗಳ ಜಮಾನಾ. ಸಿನಿಮಾಗಳನ್ನೂ ಮೀರಿಸಿ ವೆಬ್ ಸರಣಿಗಳು ಜನಪ್ರಿಯತೆ ಗಳಿಸುತ್ತಿವೆ. ನೆಟ್‌ಫ್ಲಿಕ್ಸ್‌ನ ಕೆಲವು ವೆಬ್‌ಸರಣಿಗಳಂತೂ ಜನಪ್ರಿಯತೆಯ ಉತ್ತುಂಗದಲ್ಲಿವೆ.
Recommended Video
ಬ್ರೇಕಿಂಗ್ ಬ್ಯಾಡ್, ನಾರ್ಕೋಸ್, ಸ್ಟ್ರೇಂಜರ್ ಥಿಂಗ್ಸ್, ಡಾರ್ಕ್, ಸೇಕ್ರೆಡ್ ಗೇಮ್ಸ್ ಹೀಗೆ ಪಟ್ಟಿ ಬೆಳೆಯುತ್ತಲೇ ಸಾಗುತ್ತದೆ. ಈ ಜನಪ್ರಿಯ ವೆಬ್ ಸರಣಿಗಳಲ್ಲಿ ಲಿಸ್ಟ್ ಮೊದಲ ಐದರಲ್ಲಿ ಸ್ಥಾನ ಪಡೆದುಕೊಳ್ಳುತ್ತದೆ 'ಮನಿ ಹೈಸ್ಟ್'.
'ಲಾ ಕಾಸಾ ಡಿ ಪೆಪೆಲ್' ಮೂಲ ಹೆಸರಿನ ಈ ಸ್ಪ್ಯಾನಿಶ್ ವೆಬ್ ಸರಣಿ ವಿಶ್ವದಾದ್ಯಂತ ಅತಿ ಹೆಚ್ಚು ಜನಪ್ರಿಯಗೊಂಡಿರುವ ವೆಬ್‌ಸರಣಿ. ಭಾರತದಲ್ಲಿಯೂ ಈ ವೆಬ್ ಸರಣಿಗೆ ಅತಿ ಹೆಚ್ಚು ವೀಕ್ಷಕರಿದ್ದಾರೆ. ನಾಲ್ಕು ಸೀಸನ್ ಮುಗಿಸಿರುವ ಈ ವೆಬ್ ಸರಣಿಯ ಐದನೇ ಸರಣಿ ಚಿತ್ರೀಕರಣ ಪ್ರಾರಂಭ ಆಗಿದೆ. ಆದರೆ ಇದರ ಜೊತೆಗೆ 'ಮನಿಹೈಸ್ಟ್' ಅಭಿಮಾನಿಗಳಿಗೆ ಆಘಾತಕಾರಿ ಸುದ್ದಿ ಸಹ ಒಂದಿದೆ.

ನಾಲ್ಕು ಸೀಸನ್ ಮಾತ್ರವೇ ಪ್ರಸಾರವಾಗಿದೆ
'ಮನಿ ಹೈಸ್ಟ್' ಈ ವರೆಗೆ ನಾಲ್ಕು ಸೀಸನ್‌ಗಳು ಪ್ರಸಾರವಾಗಿದೆ. ನಾಲ್ಕನೇ ಸೀಸನ್ ಏಪ್ರಿಲ್ 3 ರಂದು ಬಿಡುಗಡೆ ಆಗಿತ್ತು. ಬಿಡುಗಡೆ ಆಗುತ್ತಿದ್ದಂತೆ ಹಲವು ದಾಖಲೆಗಳನ್ನು ತನ್ನ ಹೆಸರಿಗೆ ಮಾಡಿಕೊಂಡಿತು. ಇದೀಗ ಐದನೇ ಸೀಸನ್ ಚಿತ್ರೀಕರಣ ಪ್ರಾರಂಭವಾಗುತ್ತಿದೆ.

ಐದನೇ ಸೀಸನ್ ಕೊನೆಯ ಸೀಸನ್ ಆಗಿರಲಿದೆ
ಆದರೆ ಮನಿಹೈಸ್ಟ್ ಪ್ರಿಯರಿಗೆ ಆಘಾತಕಾರಿ ಸುದ್ದಿಯೊಂದಿದ್ದು, ಮನಿಹೈಸ್ಟ್ 5 ನೇ ಸರಣಿಯೇ ಮನಿಹೈಸ್ಟ್‌ನ ಕೊನೆಯ ಸೀಸನ್ ಆಗಿರಲಿದೆ. ಆ ನಂತರ ಮನಿಹೈಸ್ಟ್ ಪ್ರಸಾರವಾಗುವುದಿಲ್ಲ ಎಂದು ಮನಿಹೈಸ್ಟ್ ತಂಡ ಹೇಳಿದೆ.

ನಾಲ್ಕನೇ ಸೀಸನ್ ಮುಗಿದದ್ದು ಎಲ್ಲಿಗೆ?
ಹೌದು, ಮನಿಹೈಸ್ಟ್ ತಂಡದ ಪ್ರಕಾರ ಮನಿಹೈಸ್ಟ್ 5 ಕೊನೆಯ ಸೀಸನ್ ಆಗಿರಲಿದೆ. ಬ್ಯಾಂಕ್ ಆಫ್ ಸ್ಪೈನ್ ನಲ್ಲಿ ಎಲ್ಲರೂ ಉಳಿದಿರುವಾಗ ಅವರನ್ನು ಬಿಡಿಸಿಕೊಂಡು ಬರಲು ಫ್ರೊಫೆಸರ್ ಅದ್ಭುತ ಪ್ಲಾನ್ ಹೂಡಿ ಅದನ್ನು ಜಾರಿಗೆ ತರುತ್ತಿರುವಾಗಲೇ ಇನ್‌ಪೆಕ್ಟರ್ ಅಲಿಸಿಯಾ ಫ್ರೊಫೆಸರ್ ಅನ್ನು ನೇರವಾಗಿ ಎದುರುಗೊಳ್ಳುತ್ತಾಳೆ. ಅಲ್ಲಿಗೆ ಮನಿಹೈಸ್ಟ್‌ನ ನಾಲ್ಕನೇ ಸೀಸನ್ ಮುಕ್ತಾಯವಾಗಿದೆ.

ಫ್ರೊಫೆಸರ್ ಸಾಯುತ್ತಾನೆಯೇ?
ಐದನೇ ಸೀಸನ್ ಏನಾಗಲಿದೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಐದನೇ ಸೀಸನ್ ಮನಿಹೈಸ್ಟ್‌ನ ಕೊನೆಯ ಸೀಸನ್ ಆಗಿರುವುದಾದರೆ, ಫ್ರೊಫೆಸರ್ ಸಾಯುತ್ತಾನೆಯೇ. ಬ್ಯಾಂಕ್ ಆಫ್ ಸ್ಪೇನ್‌ನಲ್ಲಿರುವ ಗ್ಯಾಂಗ್ ಸದಸ್ಯರ ಕತೆಯೇನು ಎಂಬ ಕುತೂಹಲ ಈಗಲೇ ಪ್ರಾರಂಭವಾಗಿಬಿಟ್ಟಿದೆ.


Click it and Unblock the Notifications











