2022ರ ಅತ್ಯುತ್ತಮ ವೆಬ್ ಸರಣಿ ಯಾವುದು? ಇಲ್ಲಿದೆ ಪಟ್ಟಿ

ಟಿವಿಗಳು ಪ್ರಚಲಿತವಾದಾಗ ಸಿನಿಮಾ ಮಂದಿ ಆತಂಕಕ್ಕೆ ಒಳಗಾಗಿದ್ದರಂತೆ, ಟಿವಿಗಳಿಂದಾಗಿ ಸಿನಿಮಾ ನೋಡುವವರ ಸಂಖ್ಯೆ ಕಡಿಮೆ ಆಗುತ್ತದೆಂದು. ಹಾಗೇನೂ ಆಗಲಿಲ್ಲ ಆದರೆ ಈಗ ಸಿನಿಮಾಕ್ಕೆ ದೊಡ್ಡ ಸ್ಪರ್ಧೆಯನ್ನು ಒಡ್ಡುತ್ತಿರುವುದು ವೆಬ್ ಸರಣಿಗಳು.

ಒಟಿಟಿಗಳು ಬಂದಮೇಲೆ ವೆಬ್ ಸರಣಿಗಳು ಬಹಳ ಜನಪ್ರಿಯವಾಗಿವೆ. ಸಿನಿಮಾಗಳಂತೆಯೇ ಜನ ಕಾದಿದ್ದು ವೆಬ್ ಸರಣಿಗಳನ್ನು ನೋಡುತ್ತಿದ್ದಾರೆ. ವೆಬ್ ಸರಣಿಗಳಿಗೆ ವ್ಯಸನಿಗಳಾಗಿರುವ ಎಷ್ಟೋ ಮಂದಿ ಒಟಿಟಿ ಗ್ರಾಹಕರಿದ್ದಾರೆ. ಒಟಿಟಿಗಳಂತೂ ಸಿನಿಮಾಗಳಿಗಿಂತಲೂ ವೆಬ್ ಸರಣಿಗಳಿಂದಲೇ ದೊಡ್ಡ ಸಂಖ್ಯೆಯ ಗ್ರಾಹಕರನ್ನು ಸೆಳೆಯುತ್ತಿವೆ.

'ಬ್ರೇಕಿಂಗ್ ಬ್ಯಾಡ್', 'ಮನಿ ಹೈಸ್ಟ್', 'ಸ್ಟ್ರೇಂಜರ್ಸ್ ಥಿಂಗ್ಸ್', 'ಗೇಮ್ ಆಫ್ ಥ್ರೋನ್ಸ್' ಇನ್ನೂ ಹಲವು ವೆಬ್ ಸರಣಿಗಳು ವಿಶ್ವದಾದ್ಯಂತ ಖ್ಯಾತಿಗಳಿಸಿವೆ. ಭಾರತದಲ್ಲಿ ಸಹ ಹಲವು ವೆಬ್ ಸರಣಿಗಳು ನಿರ್ಮಾಣಗೊಳ್ಳುತ್ತಿದ್ದು, ಕೆಲವು ಗುಣಮಟ್ಟದ ವೆಬ್ ಸರಣಿಗಳು ನಮ್ಮಲ್ಲೂ ಇವೆ. ಈ ವರ್ಷ (2022)ರಲ್ಲಿ ಈವರೆಗೆ ಬಿಡುಗಡೆ ಆಗಿರುವ ಅತ್ಯುತ್ತಮ ವೆಬ್ ಸರಣಿಗಳಲ್ಲಿ ಟಾಪ್ ಟೆನ್ ವೆಬ್ ಸರಣಿಗಳನ್ನು ಐಎಂಡಿಬಿ ಗುರುತಿಸಿದ್ದು, ಪಟ್ಟಿ ಇಲ್ಲಿದೆ.

'ದಿ ಫೇಮ್ ಗೇಮ್'

'ದಿ ಫೇಮ್ ಗೇಮ್'

ಬಾಲಿವುಡ್‌ನ ಜನಪ್ರಿಯ ನಟಿ ಮಾಧುರಿ ದೀಕ್ಷಿತ್ ನಟಿಸಿರುವ 'ದಿ ಫೇಮ್ ಗೇಮ್' ಈ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ. ಇದೇ ವರ್ಷ ಫೆಬ್ರವರಿಯಲ್ಲಿ ಈ ವೆಬ್ ಸರಣಿ ಬಿಡುಗಡೆ ಆಗಿದ್ದು, ಹಲವು ವೀಕ್ಷಕರು ಈ ವೆಬ್ ಸರಣಿಗಿದ್ದಾರೆ. ವೆಬ್ ಸರಣಿಯನ್ನು ಬಿಜೊಯ್ ನಂಬಿಯಾರ್, ಕರಿಶ್ಮಾ ಕೊಹ್ಲಿ ನಿರ್ದೇಶನ ಮಾಡಿದ್ದು, ನೆಟ್‌ಪ್ಲಿಕ್ಸ್‌ನಲ್ಲಿ ವೀಕ್ಷಣೆಗೆ ಲಭ್ಯವಿದೆ.

'ಮಾಯ' ನೆಟ್‌ಫ್ಲಿಕ್ಸ್

'ಮಾಯ' ನೆಟ್‌ಫ್ಲಿಕ್ಸ್

ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುತ್ತಿರುವ 'ಮಾಯ' ವೆಬ್ ಸರಣಿ ಐಎಂಡಿಬಿಯ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. ಈ ಥ್ರಿಲ್ಲರ್ ಕತೆಯನ್ನು ಹೊಂದಿರುವ ಈ ವೆಬ್ ಸರಣಿಗೆ ಹಲವು ಮಂದಿ ವೀಕ್ಷಕರಿದ್ದಾರೆ.

'ಎಸ್ಕೇಪ್ ಲೈವ್' ವೆಬ್ ಸರಣಿ

'ಎಸ್ಕೇಪ್ ಲೈವ್' ವೆಬ್ ಸರಣಿ

ಸಾಮಾಜಿಕ ಜಾಲತಾಣದ ಅಪಾಯಗಳು, ಅವಾಂತರಗಳ ಬಗೆಗಿನ ಕತೆಯನ್ನು ಹೊಂದಿರುವ 'ಎಸ್ಕೇಪ್ ಲೈವ್' ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗುತ್ತಿದ್ದು, ಈ ವೆಬ್ ಸರಣಿಯು ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. ಈ ವೆಬ್ ಸರಣಿ ನಟ ಸಿದ್ಧಾರ್ಥ್ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ಅದರಲ್ಲಿಯೂ ಕನ್ನಡಿಗನ ಪಾತ್ರದಲ್ಲಿ ಸಿದ್ಧಾರ್ಥ್ ನಟಿಸಿರುವುದು ವಿಶೇಷ.

'ಅಪಹರಣ್' ಥ್ರಿಲ್ಲರ್ ವೆಬ್ ಸರಣಿ

'ಅಪಹರಣ್' ಥ್ರಿಲ್ಲರ್ ವೆಬ್ ಸರಣಿ

ವೂಟ್ ಹಾಗೂ ಆಲ್ಟ್ ಬಾಲಾಜಿ ಒಟಿಟಿಗಳಲ್ಲಿ ಪ್ರಸಾರವಾಗುತ್ತಿರುವ ಥ್ರಿಲ್ಲರ್ ವೆಬ್ ಸರಣಿ 'ಅಪಹರಣ್' ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ಅರುಣೋಧಯ್ ಸಿಂಗ್, ಮಿಹಿಲ್ ಗಿಲ್ ಸೇರಿದಂತೆ ಹಲವು ಪ್ರತಿಭಾನ್ವಿತ ನಟರನ್ನು ಒಳಗೊಂಡಿರುವ ಈ ವೆಬ್ ಸರಣಿಯನ್ನು ಸಿದ್ಧಾರ್ಥ್ ಸೇನ್‌ಗುಪ್ತಾ ನಿರ್ದೇಶನ ಮಾಡುತ್ತಿದ್ದಾರೆ. ನಿರ್ಮಾಣ ಮಾಡುತ್ತಿರುವುದು ಹಿಂದಿ ಟಿವಿ ಲೋಕದ ಕಿಂಗ್ ನಿರ್ಮಾಪಕಿ ಏಕ್ತಾ ಕಪೂರ್.

'ಏ ಖಾಲಿ ಖಾಲಿ ಆಂಕೇನ್' ವೆಬ್ ಸರಣಿ

'ಏ ಖಾಲಿ ಖಾಲಿ ಆಂಕೇನ್' ವೆಬ್ ಸರಣಿ

ಇದೇ ವರ್ಷ ಜನವರಿಯಲ್ಲಿ ಬಿಡುಗಡೆ ಆದ 'ಏ ಖಾಲಿ ಖಾಲಿ ಆಂಕೇನ್' ವೆಬ್ ಸರಣಿ ಆರನೇ ಸ್ಥಾನದಲ್ಲಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುತ್ತಿರುವ ಈ ವೆಬ್ ಸರಣಿಯು ರೊಮ್ಯಾಂಟಿಕ್ ಥ್ರಿಲ್ಲರ್ ಕತೆ ಹೊಂದಿದೆ. ಈ ವೆಬ್ ಸರಣಿಯನ್ನು ಸಿದ್ಧಾರ್ಥ್ ಸೇನ್‌ಗುಪ್ತಾ ನಿರ್ದೇಶನ ಮಾಡುತ್ತಿದ್ದು, ನಿರ್ಮಾಣ ಮಾಡಿರುವುದು ಜ್ಯೋತಿ ಸಾಗರ್. ಈ ವೆಬ್ ಸರಣಿಯ ಎರಡನೇ ಸೀಸನ್ ಸಹ ಬರಲಿದೆ.

ಮೆಡಿಕಲ್ ಮಾಫಿಯಾದ 'ಹ್ಯೂಮನ್'

ಮೆಡಿಕಲ್ ಮಾಫಿಯಾದ 'ಹ್ಯೂಮನ್'

ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗುತ್ತಿರುವ ಭಿನ್ನ ಕತೆಯುಳ್ಳ 'ಹ್ಯೂಮನ್' ವೆಬ್ ಸರಣಿ ಐದನೇ ಸ್ಥಾನದಲ್ಲಿದೆ. ಜನವರಿಯಲ್ಲಿ ಬಿಡುಗಡೆ ಆದ ಈ ವೆಬ್ ಸರಣಿ ವೈದ್ಯಕೀಯ ಲೋಕದ ಕರಾಳತೆಯನ್ನು ಬಿಚ್ಚಿಡುವ ಕತೆ ಹೊಂದಿದೆ. ಔಷಧಗಳ ಪ್ರಯೋಗ ಸೇರಿದಂತೆ ಆಸ್ಪತ್ರೆಗಳ ಭ್ರಷ್ಟಾಚಾರಗಳನ್ನು ಈ ವೆಬ್ ಸರಣಿ ಹೊರಗಿಡುತ್ತದೆ. ಈ ವೆಬ್ ಸರಣಿಯ ಮೊದಲ ಸೀಸನ್‌ನ ಹತ್ತು ಎಪಿಸೋಡ್‌ಗಳು ಈವರೆಗೆ ಬಿಡುಗಡೆ ಆಗಿದೆ.

'ಪಂಚಾಯತ್ ಸೀಸನ್ 2'

'ಪಂಚಾಯತ್ ಸೀಸನ್ 2'

'ಪಂಚಾಯತ್' ಭಾರತದ ಅತ್ಯಂತ ಜನಪ್ರಿಯ ವೆಬ್ ಸರಣಿಗಳಲ್ಲಿ ಒಂದು. ಇದೀಗ ಅಮೆಜಾನ್ ಪ್ರೈಂನಲ್ಲಿ ಪಂಚಾಯತ್‌ನ ಎರಡನೇ ಸೀಸನ್ ಬಿಡುಗಡೆ ಆಗಿದೆ. ಪಟ್ಟಣದ ಯುವಕನೊಬ್ಬ ಪಂಚಾಯಿತಿ ಅಧಿಕಾರಿಯಾಗಿ ಹಳ್ಳಿಯೊಂದಕ್ಕೆ ಹೋಗುವ ಕತೆಯನ್ನು ಈ ವೆಬ್ ಸರಣಿ ಒಳಗೊಂಡಿದೆ. ಜಿತೇಂದ್ರ ಕುಮಾರ್ ಈ ವೆಬ್ ಸರಣಿಯಲ್ಲಿ ಅದ್ಭುತವಾಗಿ ನಟಿಸಿದ್ದಾರೆ.

'ರಾಕೆಟ್ ಬಾಯ್ಸ್'

'ರಾಕೆಟ್ ಬಾಯ್ಸ್'

ವಿಜ್ಞಾನಿಗಳಾದ ಹೋಮಿ ಬಾಬ, ವಿಕ್ರಮ್ ಸಾರಾಭಾಯಿ ಜೀವನ ಆಧರಿಸಿದ 'ರಾಕೆಟ್ ಬಾಯ್ಸ್' ವೆಬ್ ಸರಣಿ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ನಟ ಜಿಮ್ ಸರ್ಬಾ ಹೋಮಿ ಬಾಬ ಪಾತ್ರದಲ್ಲಿ ನಟಿಸಿದ್ದು, ವಿಕ್ರಂ ಸಾರಾಭಾಯಿ ಪಾತ್ರದಲ್ಲಿ ಇಶ್ವಕ್ ಸಿಂಗ್ ನಟಿಸಿದ್ದಾರೆ. ವೆಬ್ ಸರಣಿಯಲ್ಲಿ ರಜಿನಾ ಕ್ಯಾಸೆಂಡ್ರಾ, ಸಬಾ ಅಜಾದ್ ಸಹ ನಟಿಸಿದ್ದಾರೆ.

ದಿ ಗ್ರೇಟ್ ಇಂಡಿಯನ್ ಮರ್ಡರ್

ದಿ ಗ್ರೇಟ್ ಇಂಡಿಯನ್ ಮರ್ಡರ್

ಫೆಬ್ರವರಿ ನಾಲ್ಕರಂದು ಬಿಡುಗಡೆ ಆಗಿರುವ 'ದಿ ಗ್ರೇಟ್ ಇಂಡಿಯನ್ ಮರ್ಡರ್' ಐಎಂಬಿಡಿಯ ಮಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. 'ಸ್ಕ್ಯಾಮ್ 1992' ವೆಬ್ ಸರಣಿಯಿಂದ ಖ್ಯಾತಿ ಗಳಿಸಿದ ಪ್ರತೀಕ್ ಗಾಂಧಿ, ನಟಿ ರೀಚಾ ಚಡ್ಡಾ ಈ ವೆಬ್ ಸರಣಿಯಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ತಿಗ್ಮಾಂಶು ಧ್ಹುಲಿಯಾ ಈ ವೆಬ್ ಸರಣಿಯನ್ನು ನಿರ್ದೇಶನ ಮಾಡಿದ್ದಾರೆ. ಹೋಮ್ ಮಿನಿಸ್ಟರ್ ಪುತ್ರನ ಕೊಲೆಯ ಪ್ರಕರಣ ಭೇಧಿಸುವ ಕತೆಯನ್ನು ವೆಬ್ ಸರಣಿ ಒಳಗೊಂಡಿದೆ.

'ಕ್ಯಾಂಪಸ್ ಡೈರೀಸ್'

'ಕ್ಯಾಂಪಸ್ ಡೈರೀಸ್'

ಎಂಎಕ್ಸ್ ಪ್ಲೇಯರ್ಸ್‌ನಲ್ಲಿ ಬಿಡುಗಡೆ ಆಗಿರುವ 'ಕ್ಯಾಂಪಸ್ ಡೈರೀಸ್' ಅತ್ಯುತ್ತಮ ವೆಬ್ ಸರಣಿಯ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಡ್ರಾಮಾ, ರೊಮಾನ್ಸ್, ಕಾಮಿಡಿ ಜಾನರ್‌ಗೆ ಸೇರಿದ ಈ ವೆಬ್ ಸರಣಿಯು ಕಾಲೇಜಿನಲ್ಲಿ ನಡೆಯುವ ಆಸಕ್ತಿಕರ ಘಟನೆಗಳ ಗುಚ್ಛವಾಗಿದೆ. ಈ ಸರಣಿಯು ಭಾರತದ ಈ ವರ್ಷದ ಈವರೆಗಿನ ಅತ್ಯುತ್ತಮ ವೆಬ್ ಸರಣಿ ಎನಿಸಿಕೊಂಡಿದೆ ಐಎಂಡಿಬಿ ರೇಟಿಂಗ್ ಪ್ರಕಾರ.

More from Filmibeat

English summary
Here is the list of most popular web series in India in year 2022 according to IMDb list. IMDb released top ten Indian web series in 2022 till now.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X