ಈ ವಾರ ಒಟಿಟಿಗೆ ಬಂದ ಸಿನಿಮಾಗಳಿವು: ಇಲ್ಲಿದೆ ಪಟ್ಟಿ

ಚಿತ್ರಮಂದಿರಗಳಿಗೆ ಪ್ರಬಲ ಪೈಪೋಟಿಯನ್ನೇ ಒಟಿಟಿ ನೀಡುತ್ತಿದೆ. ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಉಚ್ರಾಯ ಸ್ಥಿತಿ ತಲುಪಿದ್ದ ಒಟಿಟಿ ಈಗ ಹಲವು ಜನರ ಮನೊರಂಜನೆಯ ಪ್ರಮುಖ ಮಾಧ್ಯಮವಾಗಿ ಮಾರ್ಪಟ್ಟಿದೆ.ಚಿತ್ರಮಂದಿರಗಳಿಗೆ ಪ್ರಬಲ ಪೈಪೋಟಿಯನ್ನೇ ಒಟಿಟಿ ನೀಡುತ್ತಿದೆ. ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಉಚ್ರಾಯ ಸ್ಥಿತಿ ತಲುಪಿದ್ದ ಒಟಿಟಿ ಈಗ ಹಲವು ಜನರ ಮನೊರಂಜನೆಯ ಪ್ರಮುಖ ಮಾಧ್ಯಮವಾಗಿ ಮಾರ್ಪಟ್ಟಿದೆ.

ಸಿನಿಮಾಗಳು ಚಿತ್ರಮಂದಿರ ದಾಟಿಕೊಂಡು ಒಟಿಟಿಗೆ ಬಂದಾಗಲಷ್ಟೆ ಕಾದು ನೋಡುವ ವೀಕ್ಷಕರ ಒಂದು ವರ್ಗವೂ ಇದೀಗ ಹುಟ್ಟಿಕೊಂಡಿದೆ. ಒಟಿಟಿ ನೀಡುವ ಆಯ್ಕೆಯ ಸ್ವಾತಂತ್ರ್ಯದ ಪ್ರತಿಫಲ ಇದು.

ಅಂತೆಯೇ ಒಟಿಟಿಗಳು ಸಹ ನಾ ಮುಂದು ತಾ ಮುಂದು ಎಂದು ತನ್ನ ಸಬ್‌ಸ್ಕ್ರೈಬರ್‌ಗಳಿಗೆ ಹೊಸ-ಹೊಸ ಸಿನಿಮಾಗಲು, ವೆಬ್ ಸರಣಿಗಳನ್ನು ನೀಡುತ್ತಿವೆ. ಇತ್ತೀಚೆಗಂತೂ ಈ ಸ್ಪರ್ಧೆ ಹೆಚ್ಚಾಗಿದೆ. ಸ್ಪರ್ಧೆ ಹೆಚ್ಚಾದಷ್ಟು ವೀಕ್ಷಕ ಪ್ರಭುವಿಗೆ ಒಳ್ಳೆಯ ಸಿನಿಮಾಗಳು ಬೆರಳ ತುದಿಯಲ್ಲಿಯೇ ಸಿಗುವಂತಾಗಿದೆ. ಇದೀಗ ಮತ್ತೊಂದು ವಾರಾಂತ್ಯ ಬಂದಿದ್ದು, ಒಟಿಟಿಗಳಲ್ಲಿ ಹಲವು ಸಿನಿಮಾಗಳು, ವೆಬ್ ಸರಣಿಗಳು ಬಿಡುಗಡೆ ಆಗುತ್ತಿವೆ. ಇಲ್ಲಿದೆ ಪಟ್ಟಿ...

'ರಾಮಾ ರಾವ್ ಆನ್ ಡ್ಯೂಟಿ', 'ಕೆರೋಸಿನ್'

'ರಾಮಾ ರಾವ್ ಆನ್ ಡ್ಯೂಟಿ', 'ಕೆರೋಸಿನ್'

ತೆಲುಗಿನ ಸ್ಟಾರ್ ನಟ ರವಿತೇಜ ನಟಿಸಿರುವ 'ರಾಮಾ ರಾವ್ ಆನ್ ಡ್ಯೂಟಿ' ಸಿನಿಮಾ ಇಂದು (ಸೆಪ್ಟೆಂಬರ್ 16)ರಂದು ಸೋನಿ ಲಿವ್ ಒಟಿಟಿಯಲ್ಲಿ ಬಿಡುಗಡೆ ಆಗಿದೆ. ಈ ಸಿನಿಮಾವು ಜುಲೈ 29 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಆದರೆ ಉತ್ತಮ ಪ್ರದರ್ಶನ ಕಾಣುವಲ್ಲಿ ವಿಫಲವಾಗಿತ್ತು. ಇನ್ನು ತೆಲುಗಿನ 'ಕೆರೊಸಿನ್' ಹೆಸರಿನ ಸಿನಿಮಾ ತೆಲುಗಿನ ಆಹಾ ಒಟಿಟಿಯಲ್ಲಿ ಸೆಪ್ಟೆಂಬರ್ 16ರಂದು ಬಿಡುಗಡೆ ಆಗಿದೆ.

ನೇರವಾಗಿ ಒಟಿಟಿಗೆ ಬಂದ 'ಜೋಗಿ'

ನೇರವಾಗಿ ಒಟಿಟಿಗೆ ಬಂದ 'ಜೋಗಿ'

ಹಿಂದಿಯ ಹೊಸ ಸಿನಿಮಾ 'ಜೋಗಿ' ನೇರವಾಗಿ ಒಟಿಟಿಯಲ್ಲಿ ತೆರೆ ಕಾಣುತ್ತಿದೆ. ದೆಹಲಿಯಲ್ಲಿ ನಡೆದ ಸಿಖ್ಖರ ಮಾರಣ ಹೋಮದ ಬಗೆಗಿನ ಕತೆಯನ್ನು ಸಿನಿಮಾ ಒಳಗೊಂಡಿದೆ. ಇದೊಂದು ನಿಜ ಕತೆ ಎಂದು ಚಿತ್ರತಂಡ ಹೇಳಿಕೊಂಡಿದ್ದು, ಸಿಖ್ಖರ ಮಾರಣಹೋಮದ ಸಂದರ್ಭದಲ್ಲಿ ದೆಹಲಿಯಿಂದ ದೊಡ್ಡ ಸಂಖ್ಯೆಯ ಸಿಖ್ಖರನ್ನು ಪಂಜಾಬ್‌ಗೆ ಸ್ಥಳಾಂತರಿಸಿದ ಸಾಹಸಮಯ ಕತೆಯನ್ನು ಸಿನಿಮಾದಲ್ಲಿ ಹೇಳಲಾಗಿದೆ. ಸಿನಿಮಾದಲ್ಲಿ ದಿಲ್ಜಿತ್ ದುಸ್ಸಾಂಜ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

'ದಹನ್' ಹಿಂದಿ ವೆಬ್ ಸರಣಿ ಹಾಟ್‌ಸ್ಟಾರ್‌ನಲ್ಲಿ

'ದಹನ್' ಹಿಂದಿ ವೆಬ್ ಸರಣಿ ಹಾಟ್‌ಸ್ಟಾರ್‌ನಲ್ಲಿ

ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ 'ದಹನ್' ಹೆಸರಿನ ಹಿಂದಿ ಭಾಷೆಯ ವೆಬ್ ಸರಣಿಯೊಂದು ಸೆಪ್ಟೆಂಬರ್ 16 ರಂದು ಬಿಡುಗಡೆ ಆಗಿದೆ. ಹಳ್ಳಿಯೊಂದರಲ್ಲಿ ಆತ್ಮವೊಂದು ಅಡಗಿರುತ್ತದೆ. ಆ ಆತ್ಮಕ್ಕೆ ಹಳ್ಳಿಯವರು ಪೂಜೆ ಮಾಡುತ್ತಿರುತ್ತಾರೆ. ಆದರೆ ಅಲ್ಲಿಗೆ ಬರುವ ಜಿಲ್ಲಾಧಿಕಾರಿಯೊಬ್ಬರು ಅಲ್ಲಿನ ವಿಶೇಷ ಸಂಪನ್ಮೂಲವಾದ ಕಲ್ಲಿಗೂ ಹಳ್ಳಿಗರು ಹೇಳುವ ದೆವ್ವದ ಕತೆಗೂ ಸಂಬಂಧವಿದೆಯೆಂದು ದೆವ್ವದ ಕತೆಯನ್ನು ನಂಬದೆ ಆತ್ಮ ಬಂಧಿಸಲ್ಪಟ್ಟ ಗುಹೆ ಒಡೆಯುವಂತೆ ಮಾಡುತ್ತಾಳೆ ಆ ನಂತರ ಹಳ್ಳಿಯಲ್ಲಿ ರಕ್ತಪಾತವೇ ಶುರುವಾಗುತ್ತದೆ.

ಇಂಗ್ಲೀಷ್‌ನ ಹಲವು ಸಿನಿಮಾ, ವೆಬ್ ಸರಣಿ ಬಿಡುಗಡೆ

ಇಂಗ್ಲೀಷ್‌ನ ಹಲವು ಸಿನಿಮಾ, ವೆಬ್ ಸರಣಿ ಬಿಡುಗಡೆ

ಹಾರರ್ ಮಾದರಿ ಕತೆಯುಳ್ಳ 'ಗುಡ್‌ನೈಟ್ ಮಾಮಿ' ವೆಬ್ ಸರಣಿ ಸೆಪ್ಟೆಂಬರ್ 16ರಿಂದ ಸ್ಟ್ರೀಮ್ ಆಗಲಿದೆ. ಕಾಲೇಜು ಯುವತಿಯ ಕತೆಯುಳ್ಳ 'ಹಾರ್ಟ್‌ಬ್ರೇಕೀಂಗ್ ಹೈ' ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ. 'ಡೂ ರಿವೇಂಜ್', 'ಅಟೇನ್‌ಶನ್ ಪ್ಲೀಸ್' ವೆಬ್ ಸರಣಿಗಳು ಸಹ ನೆಟ್‌ಫ್ಲಿಕ್ಸ್‌ನಲ್ಲಿ ಇದೇ ವಾರ ತೆರೆಗೆ ಬರುತ್ತಿವೆ. ಇದರ ಹೊರತಾಗಿ ತಮಿಳಿನ 'ಕಡಮಿಯಾಯ್ ಸೈ' ಸಿನಿಮಾ ಸೌತ್ ಸಿಂಪ್ಲಿ ಒಟಿಟಿಯಲ್ಲಿ ತೆರೆಗೆ ಬರುತ್ತಿದೆ. 'ಶಿಕ್ಷಾ ಮಂಡಲ್' ವೆಬ್ ಸರಣಿ ಎಂಎಕ್ಸ್‌ ಪ್ಲೇಯರ್‌ನಲ್ಲಿ ತೆರೆಗೆ ಬಂದಿದೆ.

More from Filmibeat

English summary
Here is the list of Movies and Web series releasing on OTT this week from September 16. Telugu's Rama Rao On Duty movie releasing on OTT this week.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X