ಈ ವಾರ ಒಟಿಟಿಗೆ ಬಂದ ಸಿನಿಮಾಗಳ್ಯಾವುವು? ನಿಮ್ಮ ಆಯ್ಕೆ ಯಾವುದು?

ಪ್ರತಿ ಶುಕ್ರವಾರದಂದು ಚಿತ್ರಮಂದಿರಗಳಿಗೆ ಹೊಸ ಸಿನಿಮಾಗಳು ಲಗ್ಗೆ ಇಡುವ ಮಾದರಿಯಲ್ಲಿಯೇ ಒಟಿಟಿಗಳಿಗೆ ಹೊಸ ಸಿನಿಮಾಗಳು ಲಗ್ಗೆ ಇಡುತ್ತವೆ. ಚಿತ್ರಮಂದಿರ ಅಥವಾ ಒಟಿಟಿ ಯಾವುದೇ ಆಗಿರಲಿ ವೀಕೆಂಡ್ ಅನ್ನು ಮನೊರಂಜನಾಭರಿತ ಮಾಡಬೇಕೆಂಬುದೇ ಗುರಿ.

ಈ ವಾರ ಚಿತ್ರಮಂದಿರಗಳಲ್ಲಿ ಹಲವು ಹೊಸ ಸಿನಿಮಾಗಳು ಬಿಡುಗಡೆ ಆಗಿವೆ. 'ಪೆಟ್ರೊಮ್ಯಾಕ್ಸ್', 'ಗಾರ್ಗಿ' ಸಿನಿಮಾಗಳಿಗೆ ಬಹಳ ಒಳ್ಳೆಯ ವಿಮರ್ಶೆಗಳೇ ಕೇಳಿ ಬಂದಿವೆ. ಇನ್ನು ಒಟಿಟಿಯಲ್ಲಿಯೂ ಸಹ ಈ ಶುಕ್ರವಾರ, ಶನಿವಾರಗಳಂದು ಹಲವು ಸಿನಿಮಾಗಳು ಬಂದಿವೆ.

ಅಸಲಿಗೆ ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಬಹಳ ಒಳ್ಳೆಯ ಸಿನಿಮಾಗಳು ಒಟಿಟಿ ಬಂದಿಲ್ಲವೆಂದೇ ಹೇಳಬೇಕಾಗುತ್ತದೆ. ಕನ್ನಡದ ಒಂದೂ ಸಿನಿಮಾ ಈ ವಾರ ಒಟಿಟಿಗೆ ಬಂದಿಲ್ಲ. ಹಾಗಿದ್ದರೆ ಯಾವ ಯಾವ ಭಾಷೆಯ ಯಾವ ಸಿನಿಮಾಗಳು ಒಟಿಟಿಗೆ ಬಂದಿವೆ ಇಲ್ಲಿದೆ ಪಟ್ಟಿ.

ತೆಲುಗಿನ ಒಂದು ಸಿನಿಮಾ, ವೆಬ್ ಸರಣಿ

ತೆಲುಗಿನ ಒಂದು ಸಿನಿಮಾ, ವೆಬ್ ಸರಣಿ

ಇತ್ತೀಚೆಗೆ ಬಿಡುಗಡೆ ಆದ ತೆಲುಗು ಸಿನಿಮಾ 'ಸಮ್ಮತಮೇ' 'ಆಹಾ' ಒಟಿಟಿಯಲ್ಲಿ ಬಿಡುಗಡೆ ಆಗುತ್ತಿದೆ. ಜೊತೆಗೆ 'ಮಾ ನೀಳ್ಳ ಟ್ಯಾಂಕ್' ಹೆಸರಿನ ತೆಲುಗು ವೆಬ್ ಸರಣಿ ಜೀ5 ನಲ್ಲಿ ಬಿಡುಗಡೆ ಆಗಿದೆ. ಈ ವೆಬ್ ಸರಣಿ ತಮಿಳು ಭಾಷೆಯಲ್ಲಿಯೂ ವೀಕ್ಷಣೆಗೆ ಲಭ್ಯವಿದೆ. 'ಸಮ್ಮತಮೇ' ಎರಡು ವಾರದ ಹಿಂದಷ್ಟೆ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿ ವಿಮರ್ಶಕರಿಂದ ಉತ್ತಮ ವಿಮರ್ಶೆ ಪಡೆದಿತ್ತು.

ತಮಿಳು ಸಿನಿಮಾಗಳು

ತಮಿಳು ಸಿನಿಮಾಗಳು

ತಮಿಳಿನ 'ಮಾಮನಿಧನ್' ಸಿನಿಮಾ 'ಆಹಾ' ಒಟಿಟಿಯಲಲಿ ಬಿಡುಗಡೆ ಆಗಿದೆ. ಜೊತೆಗೆ ಸತ್ಯರಾಜ್, ಆರ್‌ಜೆ ಬಾಲಾಜಿ, ಊರ್ವಶಿ ಇನ್ನೂ ಕೆಲವರು ಮುಖ್ಯ ಪಾತ್ರದಲ್ಲಿ ನಟಿಸಿರುವ ಹಾಸ್ಯಮಯ ಕೌಟುಂಬಿಕ ಸಿನಿಮಾ 'ವೀಟ್ಲ ವಿಸೇಷಂ' ಸಿನಿಮಾ ಜೀ 5 ನಲ್ಲಿ ತೆರೆಗೆ ಬರುತ್ತಿದೆ.

ಹಿಂದಿಯ ಹಲವು ಸಿನಿಮಾಗಳು

ಹಿಂದಿಯ ಹಲವು ಸಿನಿಮಾಗಳು

ಹಿಂದಿಯ 'ಜಾದೂಗರ್' ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗಿದೆ. ಜಾದೂಗಾರ ಆಗಿದ್ದ ಯುವಕನೊಬ್ಬ ಪ್ರೀತಿಸಿದ ಯುವತಿಗಾಗಿ ತನ್ನ ಕಾಲೊನಿಯ ಫುಟ್‌ಬಾಲ್ ತಂಡವನ್ನು ಫೈನಲ್‌ಗೆ ಕರೆದುಕೊಂಡು ಹೋಗುವ ಆಸಕ್ತಿಕರ ಕತೆಯನ್ನು ಸಿನಿಮಾ ಒಳಗೊಂಡಿದೆ. ಜೊತೆಗೆ 'ಶೂರ್‌ವೀರ್' ಸಿನಿಮಾ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆ ಆಗಿದೆ. 'ಜನ್ ಹಿತ್ ಮೆ ಜಾರಿ' ಸಿನಿಮಾ ಜೀ5 ನಲ್ಲಿ ತೆರೆಗೆ ಬಂದಿದೆ.

ಬೆಂಗಾಲಿ ಮತ್ತು ಮಲಯಾಳಂ

ಬೆಂಗಾಲಿ ಮತ್ತು ಮಲಯಾಳಂ

ಮಲಯಾಳಂನ 'ಕುಂಜೆಲ್ದೊ' ಸಿನಿಮಾ ಜೀ5 ನಲ್ಲಿ ತೆರೆಗೆ ಬಂದಿದೆ. ಕಾಲೇಜು ಪ್ರೇಮಕತೆಯುಳ್ಳ ಈ ಸಿನಿಮಾದ ಟ್ರೈಲರ್ ಈಗಾಗಲೇ ಸೂಪರ್ ಹಿಟ್ ಆಗಿದೆ. ಸಿನಿಮಾದ ಹಾಡುಗಳು ಸಹ ವೈರಲ್ ಆಗಿವೆ. ಇನ್ನು ಬೆಂಗಾಲಿಯ ಎರಡು ಸಿನಿಮಾಗಳು ಈ ವಾರ ಒಟಿಟಿಯಲ್ಲಿ ಬಿಡುಗಡೆ ಆಗುತ್ತಿವೆ. 'ಎಕ್ಸ್‌ ಈಕ್ವಲ್ಸ್‌ ಟು ಪ್ರೇಮ್' ಸಿನಿಮಾ ಬೆಂಗಾಲಿ ಒಟಿಟಿ ಹೊಯ್‌ ಚೋಯ್‌ನಲ್ಲಿ ತೆರೆಗೆ ಬಂದಿದೆ. ಮತ್ತೊಂದು ಬೆಂಗಾಲಿ ಸಿನಿಮಾ 'ಕೊಲ್ಕಟ್ಟಾರ್ ಹರಿ' ಜೀ5 ನಲ್ಲಿ ಬಿಡುಗಡೆ ಆಗಿದೆ.

More from Filmibeat

English summary
Here is the movies list which releasing on OTT this week starting from July 15. No Kannada movie releasing this week.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X