ಈ ವಾರ ಒಟಿಟಿಗೆ ಬಂದಿವೆ ಹಲವು ಹಿಟ್ ಸಿನಿಮಾಗಳು: ನಿಮ್ಮ ಆಯ್ಕೆ ಯಾವುದು?

ಚಿತ್ರಮಂದಿರಗಳಿಗೆ ಪ್ರಬಲ ಪೈಪೋಟಿಯನ್ನೇ ಒಟಿಟಿ ನೀಡುತ್ತಿದೆ. ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಉಚ್ರಾಯ ಸ್ಥಿತಿ ತಲುಪಿದ್ದ ಒಟಿಟಿ ಈಗ ಹಲವು ಜನರ ಮನೊರಂಜನೆಯ ಪ್ರಮುಖ ಮಾಧ್ಯಮವಾಗಿ ಮಾರ್ಪಟ್ಟಿದೆ.ಚಿತ್ರಮಂದಿರಗಳಿಗೆ ಪ್ರಬಲ ಪೈಪೋಟಿಯನ್ನೇ ಒಟಿಟಿ ನೀಡುತ್ತಿದೆ. ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಉಚ್ರಾಯ ಸ್ಥಿತಿ ತಲುಪಿದ್ದ ಒಟಿಟಿ ಈಗ ಹಲವು ಜನರ ಮನೊರಂಜನೆಯ ಪ್ರಮುಖ ಮಾಧ್ಯಮವಾಗಿ ಮಾರ್ಪಟ್ಟಿದೆ.

ಸಿನಿಮಾಗಳು ಚಿತ್ರಮಂದಿರ ದಾಟಿಕೊಂಡು ಒಟಿಟಿಗೆ ಬಂದಾಗಲಷ್ಟೆ ಕಾದು ನೋಡುವ ವೀಕ್ಷಕರ ಒಂದು ವರ್ಗವೂ ಇದೀಗ ಹುಟ್ಟಿಕೊಂಡಿದೆ. ಒಟಿಟಿ ನೀಡುವ ಆಯ್ಕೆಯ ಸ್ವಾತಂತ್ರ್ಯದ ಪ್ರತಿಫಲ ಇದು.

ಅಂತೆಯೇ ಒಟಿಟಿಗಳು ಸಹ ನಾ ಮುಂದು ತಾ ಮುಂದು ಎಂದು ತನ್ನ ಸಬ್‌ಸ್ಕ್ರೈಬರ್‌ಗಳಿಗೆ ಹೊಸ-ಹೊಸ ಸಿನಿಮಾಗಲು, ವೆಬ್ ಸರಣಿಗಳನ್ನು ನೀಡುತ್ತಿವೆ. ಇತ್ತೀಚೆಗಂತೂ ಈ ಸ್ಪರ್ಧೆ ಹೆಚ್ಚಾಗಿದೆ. ಸ್ಪರ್ಧೆ ಹೆಚ್ಚಾದಷ್ಟು ವೀಕ್ಷಕ ಪ್ರಭುವಿಗೆ ಒಳ್ಳೆಯ ಸಿನಿಮಾಗಳು ಬೆರಳ ತುದಿಯಲ್ಲಿಯೇ ಸಿಗುವಂತಾಗಿದೆ. ಇದೀಗ ಮತ್ತೊಂದು ವಾರಾಂತ್ಯ ಬಂದಿದ್ದು, ಒಟಿಟಿಗಳಲ್ಲಿ ಹಲವು ಸಿನಿಮಾಗಳು, ವೆಬ್ ಸರಣಿಗಳು ಬಿಡುಗಡೆ ಆಗುತ್ತಿವೆ. ಇಲ್ಲಿದೆ ಪಟ್ಟಿ...

ಕನ್ನಡದ ಯಾವ ಸಿನಿಮಾ ಒಟಿಟಿಗೆ?

ಕನ್ನಡದ ಯಾವ ಸಿನಿಮಾ ಒಟಿಟಿಗೆ?

ಪುನೀತ್ ರಾಜ್‌ಕುಮಾರ್ ಅತಿಥಿ ಪಾತ್ರದಲ್ಲಿ ನಟಿಸಿರುವ 'ಲಕ್ಕಿ ಮ್ಯಾನ್' ಸಿನಿಮಾ ಒಟಿಟಿಗೆ ಬಂದಿದೆ. ಕೆಲ ದಿನಗಳ ಹಿಂದಷ್ಟೆ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿದ್ದ 'ಲಕ್ಕಿಮ್ಯಾನ್' ಪುನೀತ್ ರಾಜ್‌ಕುಮಾರ್ ಕೃಪೆಯಿಂದ ಒಳ್ಳೆಯ ಓಪನಿಂಗ್ ಪಡೆದುಕೊಂಡಿತ್ತು. ಇದೀಗ ಈ ಸಿನಿಮಾ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿದೆ. ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ ಮುಖ್ಯಪಾತ್ರದಲ್ಲಿದ್ದು, ಈ ಸಿನಿಮಾ ತಮಿಳಿನ 'ಓ ಮೈ ಕಡವುಲೆ' ಸಿನಿಮಾದ ರೀಮೇಕ್ ಆಗಿದೆ.

ತೆಲುಗಿನ ಯಾವ ಸಿನಿಮಾಗಳು ಒಟಿಟಿಗೆ?

ತೆಲುಗಿನ ಯಾವ ಸಿನಿಮಾಗಳು ಒಟಿಟಿಗೆ?

ತೆಲುಗಿನ ಹಲವು ಸಿನಿಮಾಗಳು ಈ ವಾರ ಒಟಿಟಿಗೆ ಬರುತ್ತಿವೆ. ಸೂಪರ್ ಹಿಟ್ ಸಿನಿಮಾ 'ಕಾರ್ತಿಕೇಯ 2' ಜೀ 5 ನಲ್ಲಿ ತೆರೆಗೆ ಬಂದಿದೆ. ಐದು ಭಾಷೆಗಳಲ್ಲಿ ಈ ಸಿನಿಮಾ ವೀಕ್ಷಣೆಗೆ ಲಭ್ಯವಿದೆ. 'ದೊಂಗಲುನ್ನಾರು ಜಾಗೃತ' ತೆಲುಗು ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗಿದೆ. ಸಿನಿಮಾದಲ್ಲಿ ಕಳ್ಳನೊಬ್ಬ ಕಾರು ಕದಿಯಲು ಹೋಗಿ, ಕಾರಿನಲ್ಲೇ ಬಂಧಿಯಾಗುವ ಕತೆ ಇದೆ. 'ಆ ಅಮ್ಮಾಯಿ ಗುರಿಂಚಿ ಮೀಕು ಚಪ್ಪಾಲಿ' ಸಿನಿಮಾ ಸಹ ಇತ್ತೀಚೆಗೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು, ಈ ಸಿನಿಮಾ ಇದು ಅಮೆಜಾನ್‌ ಪ್ರೈಂನಲ್ಲಿ ಬಿಡುಗಡೆ ಆಗಿದೆ.

ಬಿಡುಗಡೆ ಆಗುತ್ತಿರುವ ಮಲಯಾಳಂ ಸಿನಿಮಗಳು ಯಾವುವು?

ಬಿಡುಗಡೆ ಆಗುತ್ತಿರುವ ಮಲಯಾಳಂ ಸಿನಿಮಗಳು ಯಾವುವು?

ಒಂದು ಎಟಿಎಂ, ಅದರ ಕಾವಲುಗಾರ, ಅವನಿಗೆ ಭೇಟಿಯಾಗುವ ಅಗಂತುಕನ ಕತೆ ಹೊಂದಿರುವ ಕ್ರೈಂ ಥ್ರಿಲ್ಲರ್ 'ಈಶೋ' ಸೋನಿಯಲ್ಲಿ ಬಿಡುಗಡೆ ಆಗಿದೆ. ಇಬ್ಬರು ಹೀರೋಗಳ ನಡುವಿನ ಕಾದಾಟದ ಕತೆ ಹೊಂದಿರುವ 'ಒರು ತೆಕ್ಕನ್ ತಲ್ಲು ಕೇಸ್' ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ತೆರೆ ಕಂಡಿದೆ. ಕೊಲೆ, ಗ್ಯಾಂಗ್‌ಸ್ಟರ್, ತನಿಖೆ ವಿಷಯಗಳನ್ನು ಆಧರಿಸಿದ 'ಒಟ್ಟು' ಮಲಯಾಳಂ ಸಿನಿಮಾ ಇದೇ ವಾರ ಅಮೆಜಾನ್ ಪ್ರೈಂನಲ್ಲಿ ತೆರೆಗೆ ಬಂದಿದೆ.

ಹಿಂದಿಯ ಯಾವ ಸಿನಿಮಾಗಳು ಬರುತ್ತಿವೆ ಈ ವಾರ?

ಹಿಂದಿಯ ಯಾವ ಸಿನಿಮಾಗಳು ಬರುತ್ತಿವೆ ಈ ವಾರ?

ಅಕ್ಷಯ್ ಕುಮಾರ್ ನಟಿಸಿದ್ದ ಸಿನಿಮಾ 'ರಕ್ಷಾ ಬಂಧನ್' ಈ ವಾರ ಜೀ5 ನಲ್ಲಿ ತೆರೆಗೆ ಬಂದಿದೆ. ಸಿನಿಮಾದಲ್ಲಿ ಅಕ್ಷಯ್ ಕುಮಾರ್ ನಾಲ್ವರು ಯುವತಿಯ ಅಣ್ಣನ ಪಾತ್ರದಲ್ಲಿ ನಟಿಸಿದ್ದಾರೆ. ಆಮಿರ್ ಖಾನ್ ರ ಮಹಾತ್ವಾಕಾಂಕ್ಷೆಯ ಸಿನಿಮಾ 'ಲಾಲ್ ಸಿಂಗ್ ಚಡ್ಡ' ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗಿದೆ. ಚಿತ್ರಮಂದಿರಗಳಲ್ಲಿ ಈ ಸಿನಿಮಾ ಫ್ಲಾಪ್ ಆಗಿತ್ತು. ಮಾಧುರಿ ದೀಕ್ಷಿತ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಹಾಸ್ಯಮಯ ಕೌಟುಂಬಿಕ ಸಿನಿಮಾ 'ಮಜಾ ಮಾ' ಅಮೆಜಾನ್ ಪ್ರೈಂನಲ್ಲಿ ತೆರೆಗೆ ಬಂದಿದೆ.

More from Filmibeat

English summary
Movies that releasing on OTT this week from October 07. Kannada movie luckyman also released this week.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X