For Quick Alerts
  ALLOW NOTIFICATIONS  
  For Daily Alerts

  ಸಮಂತಾ 'ಫ್ಯಾಮಿಲಿ ಮ್ಯಾನ್-2' ಟ್ರೈಲರ್: ನಾಗ ಚೈತನ್ಯ ಕೊಟ್ಟ ಅಂಕವೆಷ್ಟು? ಸೆಲೆಬ್ರಿಟಿಗಳು ಹೇಳಿದ್ದೇನು?

  |

  ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿ ಸಿನಿ ಅಬಿಮಾನಿಗಳ ಮನಗೆದ್ದಿದ್ದ 'ದಿ ಫ್ಯಾಮಿಲಿ ಮ್ಯಾನ್' ಮತ್ತೆ ಪಾರ್ಟ್-2 ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದೆ. 'ಫ್ಯಾಮಿಲಿ ಮ್ಯಾನ್-2' ವೆಬ್ ಸೀರಿಸ್ ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಸದ್ಯ ಟ್ರೈಲರ್ ಬಿಡುಗಡೆಯಾಗಿದ್ದು ನಿರೀಕ್ಷೆ ಮತ್ತಷ್ಟು ಹೆಚ್ಚಿಸಿದೆ.

  ಕೊಲ್ಲಲು ಬಂದ ಸಮಂತಾ: ಕುತೂಹಲ ಮೂಡಿಸಿದ 'ದಿ ಫ್ಯಾಮಿಲಿ ಮ್ಯಾನ್ 2'ಕೊಲ್ಲಲು ಬಂದ ಸಮಂತಾ: ಕುತೂಹಲ ಮೂಡಿಸಿದ 'ದಿ ಫ್ಯಾಮಿಲಿ ಮ್ಯಾನ್ 2'

  ವೆಬ್ ಸರಣಿಯ ನಾಯಕನಾಗಿ ಮನೋಜ್ ಬಾಜಪೇಯಿ ಮತ್ತು ಪತ್ನಿಯ ಪಾತ್ರದಲ್ಲಿ ಪ್ರಿಯಾಮಣಿ ಕಾಣಿಸಿಕೊಂಡಿದ್ದಾರೆ. ಮೊದಲ ಸೀಸನ್ ನಲ್ಲೂ ಇಬ್ಬರೂ ಪತಿ-ಪತ್ನಿಯ ಪಾತ್ರದಲ್ಲಿ ಬಣ್ಣಹಚ್ಚಿದ್ದರು. ಇನ್ನು ಈ ಬಾರಿ ಸಮಂತಾ ಎಂಟ್ರಿ ವೆಬ್ ಸಿರೀಸ್ ನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

  ಫ್ಯಾಮಿಲಿ ಮ್ಯಾನ್-2 ನ ಹೈಲೆಟ್ ದಕ್ಷಿಣದ ಸುಂದರಿ ನಟಿ ಸಮಂತಾ ಅಕ್ಕಿನೇನಿ. ಸಮಂತಾ ಪಾತ್ರಕ್ಕೆ ಸಿನಿ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ...

  ಸಮಂತಾ ಪಾತ್ರಕ್ಕೆ ಸಿನಿ ಗಣ್ಯರು ಫಿದಾ

  ಸಮಂತಾ ಪಾತ್ರಕ್ಕೆ ಸಿನಿ ಗಣ್ಯರು ಫಿದಾ

  ಸಮಂತಾ ಅಕ್ಕಿನೇನಿ ಎಲ್‌ಟಿಟಿಇ ಉಗ್ರಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗ್ಲಾಮರ್ ಪಾತ್ರಗಳಿಗೆ ಬಣ್ಣ ಹಚ್ಚುತ್ತಿದ್ದ ಸಮಂತಾ ಮೊದಲ ಬಾರಿಗೆ ಇಂಥ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ರಿಲೀಸ್ ಆಗಿರುವ ಟ್ರೈಲರ್ ಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಮಂತಾ ಪಾತ್ರಕ್ಕೆ ಅಭಿಮಾನಿಗಳು ಮಾತ್ರವಲ್ಲದೆ ಗಣ್ಯರು ಸಹ ಫಿದಾ ಆಗಿದ್ದಾರೆ.

  ನಾಗ ಚೈತನ್ಯ ಕೊಟ್ಟ ಅಂಕ ಎಷ್ಟು?

  ನಾಗ ಚೈತನ್ಯ ಕೊಟ್ಟ ಅಂಕ ಎಷ್ಟು?

  ಸಮಂತಾ ಅಕ್ಕಿನೇನಿ ಪತಿ ನಾಗ ಚೈತನ್ಯ ಟ್ರೈಲರ್ ಗೆ ಕಾತರದಿಂದ ಕಾಯುತ್ತಿರುವುದಾಗಿ ಹೇಳಿದ್ದರು. ಸದ್ಯ ರಿಲೀಸ್ ಆಗಿರುವ ಟ್ರೈಲರ್ ನೋಡಿ, 'ತುಂಬಾ ಇಷ್ಟವಾಗಿದೆ. 10ಕ್ಕೆ 10 ಅಂಕ' ಎಂದು ಹೇಳಿದ್ದಾರೆ. ಪತಿಯ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಸಮಂತಾ 'ಈ ಅಂಕ ನನ್ನ ಪಾತ್ರಕ್ಕಾ ಅಥವಾ ಟ್ರೈಲರ್ ಗಾ' ಎಂದು ಹೇಳಿದ್ದಾರೆ.

  ನಿರ್ದೇಶಕಿ ನಂದಿನಿ ಮತ್ತು ತಾಪ್ಸಿ ಹೇಳಿದ್ದೇನು?

  ನಿರ್ದೇಶಕಿ ನಂದಿನಿ ಮತ್ತು ತಾಪ್ಸಿ ಹೇಳಿದ್ದೇನು?

  ಇನ್ನು ಓ ಬೇಬಿ ನಿರ್ದೇಶಕಿ ನಂದಿನಿ ರೆಡ್ಡಿ ಪ್ರಿತಿಕ್ರಿಯೆ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಟಿ ತಾಪ್ಸಿ ಪನ್ನು, ತುಂಬಾ ಅದ್ಭುತವಾಗಿದೆ. ಸರ್ ನಿಮ್ಮ ಅಭಿನಯ ಅದ್ಭುತ. ಸಮಂತಾ ನಿಮ್ಮನ್ನು ಈ ಹೊಸ ಲುಕ್ ನಲ್ಲಿ ನೋಡಲು ಕಾತರಳಾಗಿದ್ದೇನೆ' ಎಂದು ಹೇಳಿದ್ದಾರೆ.

  ಟ್ರೈಲರ್ ಮೆಚ್ಚಿದ ಕಬೀರ್ ದುಹಾನ್ ಸಿಂಗ್

  ಟ್ರೈಲರ್ ಮೆಚ್ಚಿದ ಕಬೀರ್ ದುಹಾನ್ ಸಿಂಗ್

  ನಟ ಕಬೀರ್ ದುಹಾನ್ ಸಿಂಗ್ ಟ್ವೀಟ್ ಮಾಡಿ, ಅದ್ಭುತವಾದ ಟ್ರೈಲರ್. ವೆಬ್ ಸೀರಿಸ್ ನೋಡಲು ಕಾಯುತ್ತಿದ್ದೀನಿ. ಸಮಂತಾ ತುಂಬಾ ಭಯಾನಕವಾಗಿ ಕಾಣಿಸುತ್ತಾರೆ' ಎಂದು ಹೇಳಿದ್ದಾರೆ.

  ಜೂನ್ ಗೆ ಸೀರಿಸ್ ಬಿಡುಗಡೆ

  ಜೂನ್ ಗೆ ಸೀರಿಸ್ ಬಿಡುಗಡೆ

  ಇನ್ನೂ ಮಂದಿ ಪ್ರತಿಕ್ರಿಯೆ ನೀಡಿ ಸಮಂತಾ ಲುಕ್ ಮತ್ತು ಅಭಿನಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಮೊದಲ ಸೀಸನ್ ನಿರ್ದೇಶಿಸಿದ್ದ ರಾಜ್ ಮತ್ತು ಡಿಕೆ ಈ ಸೀಸನ್ ಅನ್ನೂ ನಿರ್ದೇಶನ ಮಾಡಿದ್ದಾರೆ. 'ದಿ ಫ್ಯಾಮಿಲಿ ಮ್ಯಾನ್' ಸೀಸನ್ 2, ಜೂನ್ 4 ಕ್ಕೆ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಲಿದೆ.

  English summary
  Naga Chaitanya and other Celebs react to Samantha's Family man-2 trailer.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X