ಪತ್ರಕರ್ತನ ಪಾತ್ರದಲ್ಲಿ ನಾಗಚೈತನ್ಯ ಓಟಿಟಿಗೆ ಪದಾರ್ಪಣೆ!

ಕೆಲವು ವರ್ಷಗಳ ಕೆಳಗೆ ನಾಗಚೈತನ್ಯ ಹಾಗೂ ಸಮಂತಾ ಅವರದು ಮೋಸ್ಟ್ ರೊಮ್ಯಾಂಟಿಕ್ ಕಪಲ್ ಅಂತ ಕರೆಸಿಕೊಂಡ ಜೋಡಿ. ಪ್ರೀತಿಸಿ ಮದುವೆಯಾದ ಈ ಕಪಲ್ ನಡುವಿನ ತುಂಟಾಟ, ಕಾಲೆಳೆಯುವ ಮಾತುಗಳು, ಮುದ್ದಾಟಗಳನ್ನೆಲ್ಲ ಅವರ ಫ್ಯಾನ್ಸ್ ಎಂಜಾಯ್ ಮಾಡುತ್ತಿದ್ದರು. ಆವಾಗಿನ ಅವರ ಲೈಫನ್ನ ಕಂಡವರು ಯಾರೂ ಈ ಜೋಡಿ ಬೇರ್ಪಡಬಹುದು ಅಂತ ಊಹಿಸಲೂ ಸಾಧ್ಯವಿರಲಿಲ್ಲ. ಆದರೆ ಕಳೆದ ವರ್ಷ ಈ ಜೋಡಿ ಸಡನ್ನಾಗಿ ಬೇರ್ಪಟ್ಟಿತು. ಇದಕ್ಕೇನು ಕಾರಣ ಅನ್ನೋದನ್ನು ಈ ಇಬ್ಬರೂ ಬಾಯಿಬಿಟ್ಟು ಹೇಳಿಲ್ಲಾ. ಆದರೆ ಡಿವೋರ್ಸ್ ನಂತರ ಸಮಂತಾ ಮತ್ತು ನಾಗಜೈತನ್ಯ ಇಬ್ಬರು ತಮ್ಮ ತಮ್ಮ ಸಿನಿಮಾಗಲ್ಲಿ ಹೆಚ್ಚೆಚ್ಚು ತೊಡಗಿಸಿಕೊಳ್ಳುತ್ತಿದ್ದಾರೆ.

ಶುರು ಶುರುವಿನಲ್ಲಿ ಇವರಿಬ್ಬರೂ ಬೇರ್ಪಡೋದಕ್ಕೆ ಸಮಂತಾನೇ ಕಾರಣ ಅಂತ ಈ ಜನಪ್ರಿಯ ನಟಿಯ ತೇಜೋವಧೆಯನ್ನೂ ಮಾಡಲಾಯ್ತು. ಆದರೆ ಸ್ವಲ್ಪ ದಿನದಲ್ಲೇ ಇದರಲ್ಲಿ ಸಮಂತಾಗಿಂತ ನಾಗಚೈತನ್ಯ ತಪ್ಪೇ ಹೆಚ್ಚಿದೆ ಅಂತ ಅನಿಸಿದ್ದೇ ಎಲ್ಲರೂ ಸೈಲೆಂಟಾದರು. ನಂತರ ನಾಗ ಚೈತನ್ಯ ಅವರ ಲವ್ ಸ್ಟೋರಿ ಸಿನಿಮಾ ರಿಲೀಸ್ ಆಗಿ ತಕ್ಕ ಮಟ್ಟಿಗೆ ರೆಸ್ಪಾನ್ಸ್ ಕೂಡ ಪಡೆದುಕೊಂಡಿದೆ. ಬಾಲಿವುಡ್‌ನಲ್ಲಿ ನಾಗ ಚೈತನ್ಯ ಡೆಬ್ಯೂ ಅಮೀರ್ ಖಾನ್ ಜೊತೆ ಲಾಲ್ ಸಿಂಗ್ ಚಡ್ಡಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇದೆಲ್ಲದರ ಹೊರತಾಗಿ ಈಗ ನಾಗಚೈತನ್ಯ ಸಿನಿಮಾ ಬಗ್ಗೆ ಮತ್ತೊಂದು ಅಪ್‌ಡೇಟ್ ಸಿಕ್ಕಿದೆ. ನಾಗ ಚೈತನ್ಯ ಮತ್ತೊಂದು ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಅದುವೇ ಓಟಿಟಿ ಎಂಟ್ರಿ.

ಹೌದು ನಾಗ ಚೈತನ್ಯ ಈ ವರ್ಷ ಓಟಿಟಿಗೆ ಪದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ. ವಿಕ್ರಮ್ ಕೆ. ಕುಮಾರ್ ನಿರ್ದೇಶಿಸಲಿರುವ ಸಾಹಸಮಯ ವೆಬ್ ಸರಣಿಯು ಶೀಘ್ರದಲ್ಲೇ ಸೆಟ್ಟೇರಲಿದೆ. ಮೂಲಗಳ ಪ್ರಕಾರ ಹಲವಾರು ಖಾಸಗೀ ಮ್ಯಾಗಝಿನ್‌ಗಳು ಈ ಬಗ್ಗೆ ಈಗಾಗಲೇ ವರದಿ ನೀಡಿದ್ದು ಶೀರ್ಷಿಕೆ ಬಗ್ಗೆಯೂ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಖಾಸಗೀ ಮ್ಯಾಗಝಿನ್‌ಗಳ ಉಲ್ಲೇಖದ ಪ್ರಕಾರ ನಾಗ ಚೈತನ್ಯ ಡೆಬ್ಯು ಓಟಿಟಿ ವೆಬ್ ಸರಣಿಯ ಟೈಟಲ್ ಬಂದು 'ದೂತ' ಅಂದರೆ ಸಂದೇಶವಾಹಕ ಎಂಬ ಶೀರ್ಷಿಕೆಯ ಇರಲಿದೆ ಎಂದು ಅಂದಾಜಿಸಲಾಗಿದೆ.

Naga Chaitanya to Make OTT Debut With Supernatural Thriller Series
ಸಸ್ಪೆನ್ಸ್ ಥ್ರಿಲ್ಲರ್ ಸರಣಿಯ ವೆಬ್ ಸೀರಿಸ್ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರೀಮಿಯರ್ ಆಗಲಿದೆ. ನಿರ್ದೇಶಕ ವಿಕ್ರಮ್ ಕುಮಾರ್ ವೆಬ್​ ಸರಣಿಯನ್ನು ಅದ್ಭುತವಾಗಿ ರಚಿಸಲು ರೆಡಿಯಾಗಿದ್ದಾರೆ. ನಾಗಚೈತನ್ಯ OTT ಪ್ರವೇಶವು ಅದ್ಧೂರಿಯಾಗೇ ಇರಲಿದೆ. ನಾಗಚೈತನ್ಯ ಆವರ ಚೊಚ್ಚಲ ವೆಬ್​ ಸೀರಿಸ್​ಗೆ ಅಮೆಜಾನ್​ ಪ್ರೈಮ್​ ಬಹುದೊಡ್ಡ ಬಜೆಟ್​ ನಿಗದಿ ಪಡಿಸಿದೆಯಂತೆ. ಹೀಗಾಗಿ ಈ ವೆಬ್​ ಸರಣಿಯ ಮೇಲೆ ಇನ್ನಷ್ಟು ನಿರೀಕ್ಷೆ ಹೆಚ್ಚಾಗಿದೆ.

Naga Chaitanya to Make OTT Debut With Supernatural Thriller Series
ಮೂಲಗಳ ಪ್ರಕಾರ ನಾಗಚೈತನ್ಯ ಅವರ ಈ ವೆಬ್ ಸೀರಿಸ್‌ನಲ್ಲಿ ಪತ್ರಕರ್ತನ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕಾಗಿ ಜಿಮ್‌ನಲ್ಲಿ ವರ್ಕ್‌ಔಟ್ ಮಾಡುತ್ತಿರುವ ನಾಗಚೈತನ್ಯ ಎಲ್ಲಾ ರೀತಿಯ ತಯಾರಿಯನ್ನು ಮಾಡಿಕೊಳ್ಳುತ್ತಿದ್ದಾರೆ. ಈ ವೆಬ್ ಸರಣಿಯಲ್ಲಿ ನಾಗಚೈತಗೆ ಪ್ರೀಯಾ ಭವಾನಿ ಶಂಕರ್ ನಾಯಕಿಯಾಗಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ನಾಗ ಚೈತನ್ಯ ನಟಿಸಲಿರುವ ಈ ವೆಬ್ ಸರಣಿಯು ಮೂರು ಸೀಸನ್‌ನಲ್ಲಿ ತೆರೆಕಾಣಲಿದ್ದು, ಪ್ರತೀ ಸರಣಿಯಲ್ಲಿಯೂ ಹತ್ತು ಸಂಚಿಕೆಗಳು ಇರಲಿದೆ. ಹಾಗೇ ಇದು ಬಿಗ್ ಬಜೆಟ್‌ನ ವೆಬ್ ಸರಣಿ ಆಗಿರೋದರಿಂದ ಅಭಿಮಾನಿಗಳ ನಿರೀಕ್ಷೆ ಕೂಡ ಹೆಚ್ಚಾಗಿದೆ.

More from Filmibeat

English summary
Telugu actor Naga Chaitanya is all set to enter the OTT space, reports have confirmed.Naga Chaitanya will reportedly be making his OTT debut with a web series, and the project will be directed by Vikram K Kumar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X