ಹಿಂದಿ ಆಯ್ತು ಈಗ ತೆಲುಗು ಬಿಗ್ ಬಾಸ್ ಕೂಡ ಓಟಿಟಿಯಲ್ಲಿ ಪ್ರಸಾರ?
ಹಲವು ರಿಯಾಲಿಟಿ ಶೋಗಳು ಇದ್ದರು ಕೂಡ ಬಿಗ್ ಬಾಸ್ ತನ್ನ ಛಾಪು ಯಾವತ್ತು ಕಮ್ಮಿ ಮಾಡಿಕೊಂಡಿಲ್ಲ. ಬಿಗ್‌ಬಾಸ್ ಅನ್ನು ಪ್ರತಿದಿನ ನೋಡುವ ಒಂದು ವರ್ಗದ ವೀಕ್ಷಕರು ಇದ್ದಾರೆ ಹೀಗಾಗಿ ಪ್ರತೀ ಬಾಷೆಯಲ್ಲೂ ಬಿಗ್ ಆರಂಭ ವಾದಾಗ ಅಲ್ಲಿ ಒಂದು ಕುತೂಹಲ, ಕಾತುರತೆ ಹೆಚ್ಚಾಗೆ ಇರುತ್ತೆ. ಮೊನ್ನೆ ಮೊನ್ನೆಯಷ್ಟೆ ಹಿಂದಿ ಬಿಗ್ ಸೀಸನ್ ಹದಿನೈದು ಮುಕ್ತಾಯ ವಾಗಿದೆ. ಈಗ ತೆಲುಗು ಬಿಗ್ ಬಾಸ್ ಬಗ್ಗೆ ಮತ್ತೊಂದು ಸುದ್ದಿ ಕೇಳಿ ಬರುತ್ತಿದೆ. ಅದೇನು ಅಂತ ಮುಂದೆ ಓದಿ..
ಕಿರುತೆರೆಯ ಲೋಕದಲ್ಲಿ ಹಲವು ರಿಯಾಲಿಟಿ ಶೋ ಗಳು ಈಗಾಗಲೇ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಅಲ್ಲದೇ ಹೊಸ ಹೊಸ ಕಾನ್ಸೆಪ್ಟ್ ಗಳೊಂದಿಗೆ ಹೊಸ ಹೊಸ ರಿಯಾಲಿಟಿ ಶೋ ಗಳು ಕಿರುತೆರೆಗೆ ಎಂಟ್ರಿ ನೀಡುತ್ತಲೇ ಇರುತ್ತವೆ. ಆದರೆ ಈ ಎಲ್ಲಾ ರಿಯಾಲಿಟಿ ಶೋ ಗಳ ನಡುವೆಯೇ ಒಂದು ರಿಯಾಲಿಟಿ ಶೋ ಮಾತ್ರ ತನ್ನದೇ ಆದ ಛಾಪನ್ನು ಮೂಡಿಸಿದೆ, ಹೌದು ಬಿಗ್ ಬಾಸ್ ರಿಯಾಲಿಟಿ ಶೋ ಗೆ ಕಿರುತೆರೆಯಲ್ಲಿ ಇರುವ ಕ್ರೇಜ್ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಪ್ರತಿ ಬಾರಿಯೂ ಹೊಸ ಸೀಸನ್ ಯಾವಾಗ ಎಂದು ಕಾಯುವ ಬಿಗ್ ಬಾಸ್‌ನ ಅಭಿಮಾನಿಗಳ ದೊಡ್ಡ ಬಳಗವೇ ಇದೆ.
ಸದ್ಯದ ಸುದ್ದಿಯ ಪ್ರಕಾರ ತೆಲುಗಿನಲ್ಲಿ ಇದೇ ಫೆಬ್ರವರಿ 27 ರಿಂದ ಓಟಿಟಿಯಲ್ಲಿ ಬಿಗ್ ಬಾಸ್ ಆರಂಭವಾಗಲಿದೆ ಎನ್ನಲಾಗಿದ್ದು, ದಕ್ಷಿಣದಲ್ಲಿ ಓಟಿಟಿಯಲ್ಲಿ ಬಿಗ್ ಬಾಸ್ ಮೊದಲ ಬಾರಿಗೆ ತೆಲುಗಿನಲ್ಲಿ ಪ್ರಸಾರವಾಗಲಿದೆ ಎನ್ನುವ ಸುದ್ದಿ ಈಗ ಗಮನ ಸೆಳೆದಿದೆ. ಈ ಸುದ್ದಿ ನಿಜವೇ ಆದಲ್ಲಿ ದಕ್ಷಿಣದಲ್ಲಿ ಮೊದಲ ಓಟಿಟಿ ಬಿಗ್ ಬಾಸ್ ಇದಾಗಲಿದೆ. ಇನ್ನು ಇಂತಹ ಬಿಗ್ ಬಾಸ್ ಕನ್ನಡದಲ್ಲಿ ಬಂದರೂ ಆಶ್ಚರ್ಯ ಪಡಬೇಕಿಲ್ಲ.


ಇನ್ನು ಕನ್ನಡ ಬಿಗ್ ಬಾಸ್ ಸೂಸನ್ 9ರ ಬಗ್ಗೆ ಮಾತನಾಡಿದ್ದ ಕಿಚ್ಚ ಸುದೀಪ್ ಅಕ್ಟೋಬರ್, ನವೆಂಬರ್‌ನಲ್ಲಿ ಬಿಗ್ ಬಾಸ್ ಕನ್ನಡ 9 ಶುರುವಾಗತ್ತೆ ಎಂದು ಹೇಳಲಾಗಿತ್ತು, ಆದರೆ ಆರಂಭವಾಗಲಿಲ್ಲ. ಸ್ವತಃ ಕಿಚ್ಚ ಸುದೀಪ್ ಅವರೇ ಜನವರಿಯಲ್ಲಿ ಬಿಗ್ ಬಾಸ್ ಶುರುವಾಗಲಿದೆ ಎಂದು ಹೇಳಿದ್ದರು ಅದು ಕೂಡ ಆಗಲಿಲ್ಲಾ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ 'ಕೋಟಿಗೊಬ್ಬ 3' ಸಿನಿಮಾ ಸಕ್ಸಸ್ ಮೀಟ್‌ನಲ್ಲಿ ಭಾಗವಹಿಸಿದ್ದ ಕಿಚ್ಚ ಸುದೀಪ್ ಅವರು ಮಾಧ್ಯಮದ ಪ್ರಶ್ನೆಗಳಿಗೆ ಉತ್ತರ ನೀಡಿದ್ದರು. ಆ ವೇಳೆ ಅವರು "ಬಿಗ್ ಬಾಸ್ ಕನ್ನಡ ಸೀಸನ್ 9 ಜನವರಿಯಲ್ಲಿ ಆರಂಭವಾಗಲಿದೆ. ಓಟಿಟಿಯಲ್ಲಿ ಬಿಗ್ ಬಾಸ್ ಬರೋದಿಲ್ಲ, ವಾಹಿನಿ ಇದ್ದಾಗ ಯಾಕೆ ಬಿಗ್ ಬಾಸ್ ಓಟಿಟಿಯಲ್ಲಿ ಬರತ್ತೆ? ಹಿಂದಿಯಲ್ಲಿ ಓಟಿಟಿ ಬಂದಿರಬಹುದು, ಆದರೆ ಕನ್ನಡದಲ್ಲಿ ಹಾಗೆ ಆಗಲ್ಲ" ಎಂದು ಹೇಳಿದ್ದಾರೆ. ಓಟಿಟಿ ಬಿಗ್ ಬಾಸ್ ಬಗ್ಗೆ ತಿಳಿಸಿದ್ದರು. ಹೀಗಾಗಿ ಈಗ ಕೇಳಿ ಬರುತ್ತಿರುವ ತೆಲುಗು ಓಟಿಟಿ ಬಿಗ್ ಬಾಸ್ ಬಗ್ಗೆ ಇನ್ನಷ್ಟೆ ಖಚಿತ ಮಾಹಿತಿ ಗೊತ್ತಾಗಬೇಕಿದೆ.


Click it and Unblock the Notifications











