ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗಲಿದೆ ನಾಗಾರ್ಜುನ ನಟನೆಯ ಹೊಸ ಸಿನಿಮಾ?

ಬಾಲಿವುಡ್‌ನ ಕೆಲವು ಸ್ಟಾರ್ ನಟರುಗಳು ತಮ್ಮ ಸಿನಿಮಾಗಳನ್ನು ಒಟಿಟಿ ಫ್ಲ್ಯಾಟ್‌ಫಾರ್ಮ್‌ ನಲ್ಲಿ ಬಿಡುಗಡೆಗೊಳಿಸಿ ಆರಾಮವಾಗಿದ್ದಾರೆ. ಆದರೆ ದಕ್ಷಿಣ ಭಾರತದ ಹಲವು ಸ್ಟಾರ್ ನಟರು ಒಟಿಟಿಯಿಂದ ದೂರವೇ ಇದ್ದಾರೆ.

ನಟ ಸೂರ್ಯಾ ತಮ್ಮ ಸಿನಿಮಾ 'ಸೂರರೈ ಪೊಟ್ರು' ವನ್ನು ಅಮೆಜಾನ್‌ಗೆ ಮಾರಿದ್ದಾರೆ ಎಂಬುದನ್ನು ಹೊರತುಪಡಿಸಿದರೆ ಮತ್ತಾವ ದಕ್ಷಿಣದ ಸ್ಟಾರ್ ನಟ ತಮ್ಮ ಸಿನಿಮಾವನ್ನು ಒಟಿಟಿಗೆ ನೀಡಿಲ್ಲ, ಬದಲಿಗೆ ಚಿತ್ರಮಂದಿರಗಳಲ್ಲಿಯೇ ಬಿಡುಗಡೆ ಮಾಡಲು ಕಾಯುತ್ತಿದ್ದಾರೆ.

ಈ ನಡುವೆ ತೆಲುಗಿನ ಖ್ಯಾತ ನಟ ನಾಗಾರ್ಜುನ, ತಮ್ಮ ಹೊಸ ಸಿನಿಮಾವನ್ನು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಮಾಡಲು ಹೂ ಎಂದಿದ್ದಾರೆ ಎನ್ನಲಾಗಿದೆ. ಅವರ ಹೊಸ ಆಕ್ಷನ್ ಸಿನಿಮಾ 'ವೈಲ್ಡ್ ಡಾಗ್' ನೇರವಾಗಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ.

Nagarjunas Wild Dog Movie May Release In Netflix

ವೈಲ್ಡ್‌ ಡಾಗ್ ಸಿನಿಮಾದ ಡಿಜಿಟಲ್ ಪ್ರಸಾರ ಹಕ್ಕನ್ನು ನೆಟ್‌ಫ್ಲಿಕ್ಸ್ ಪಡೆದುಕೊಂಡಿದ್ದು, ಒಟಿಟಿ ಫ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆ ಮಾಡಲಿದೆ. ವಿಶೇಷವೆಂದರೆ ಏಕಕಾಲಕ್ಕೆ ಈ ಸಿನಿಮಾ ಚಿತ್ರಮಂದಿರದಲ್ಲಿಯೂ ಬಿಡುಗಡೆ ಆಗಲಿದೆಯಂತೆ.

ಹೊಸ ನಿರ್ದೇಶಕ ಅಶಿಶೋರ್ ಸೊಲೊಮನ್ 'ವೈಲ್ಡ್ ಡಾಗ್' ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಇದು ಅಶಿಶೋರ್ ನಿರ್ದೇಶನದ ಮೊದಲ ಸಿನಿಮಾ. ಸಿನಿಮಾದಲ್ಲಿ ನಾಗಾರ್ಜುನ ವಿಜಯ್ ವರ್ಮಾ ಹೆಸರಿನ ಎನ್‌ಐಎ ವಿಶೇಷ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇತ್ತೀಚೆಗಷ್ಟೆ ಈ ಸಿನಿಮಾದ ಚಿತ್ರೀಕರಣ ಹಿಮಾಲಯ ಸಮೀಪ ನಡೆದಿದೆ. ಚಿತ್ರೀಕರಣ ಸ್ಥಳದ ವಿಡಿಯೋಗಳನ್ನು ನಾಗಾರ್ಜುನ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

More from Filmibeat

English summary
Akkineni Nagarjuna's new movie Wild Dog may release in Netflix. It will release in theaters also.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X