ತಿಂಗಳಿಗೂ ಮೊದ್ಲೆ ಓಟಿಟಿಯಲ್ಲಿ 'ದಸರಾ': ಸ್ಟ್ರೀಮಿಂಗ್ ಡೇಟ್ ಘೋಷಿಸಿದ ನೆಟ್‌ಫ್ಲಿಕ್ಸ್

ನಾನಿ ನಟನೆಯ ತೆಲುಗಿನ 'ದಸರಾ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಎನಿಸಿಕೊಂಡಿದ್ದು ಗೊತ್ತೇಯಿದೆ. ಆದರೆ ತೆರೆಕಂಡು ತಿಂಗಳು ಪೂರೈಸುವ ಮುನ್ನವೇ ಸಿನಿಮಾ ಓಟಿಟಿಗೆ ಬರ್ತಿದೆ. ಇದು ಕೆಲವರಿಗೆ ಅಚ್ಚರಿ ಮೂಡಿಸಿದೆ. ದೊಡ್ಡ ದೊಡ್ಡ ಸಿನಿಮಾಗಳು ಬಹಳ ಬೇಗ ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಬರ್ತಿರೋದು ವಿಪರ್ಯಾಸ. ಮಾರ್ಚ್‌ 30ರಂದು 'ದಸರಾ' ಸಿನಿಮಾ ವಿಶ್ವದಾದ್ಯಂತ ತೆರೆಗಪ್ಪಳಿಸಿತ್ತು.

ನಿರ್ದೇಶಕ ಶ್ರೀಕಾಂತ್ ಒದೆಲ ಮೊದಲ ಪ್ರಯತ್ನದಲ್ಲೇ ಸೂಪರ್ ಸಕ್ಸಸ್ ಕಂಡಿದ್ದರು. ಮೊದಲ ವಾರವೇ ಸಿನಿಮಾ 100 ಕೋಟಿ ರೂ. ಕಲೆಕ್ಷನ್ ಮಾಡಿ ಎಲ್ಲೆ ಹುಬ್ಬೇರಿಸಿತ್ತು. ಈ ಪೀರಿಯಡ್ ಆಕ್ಷನ್ ಸಿನಿಮಾದಲ್ಲಿ ನಾನಿ ಜೋಡಿಯಾಗಿ ಕೀರ್ತಿ ಸುರೇಶ್ ನಟಿಸಿದ್ದರೆ ಪ್ರಮುಖ ಪಾತ್ರವೊಂದರಲ್ಲಿ ಕನ್ನಡ ನಟ ದೀಕ್ಷಿತ್ ಶೆಟ್ಟಿ ಮಿಂಚಿದ್ದಾರೆ. ಅಂದಾಜು 60 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಸಿನಿಮಾ ಭರ್ಜರಿ ಬೆಳೆ ತೆಗೆದಿದೆ. ಸಿನಿಮಾ ಸಕ್ಸಸ್ ಖುಷಿಯಲ್ಲಿ ನಿರ್ಮಾಪಕರು ತಂಡಕ್ಕೆ ಉಡುಗೊರೆಗಳನ್ನು ನೀಡಿದ್ದರು.

Nani Starrer Dasara to stream on Netflix from April 27, 2023

'ದಸರಾ' ಸಿನಿಮಾ ಏಪ್ರಿಲ್ 27ಕ್ಕೆ ನೆಟ್‌ಫ್ಲಿಕ್ಸ್‌ನಲ್ಲಿ ಸ್ಕ್ರೀಮಿಂಗ್ ಆಗಲಿದೆ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಓಟಿಟಿಗೆ ಬರ್ತಿದೆ. ಹಿಂದಿ ವರ್ಷನ್ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಭಾರೀ ಮೊತ್ತಕ್ಕೆ ನೆಟ್‌ಫ್ಲಿಕ್ಸ್ 'ದಸರಾ' ಹಕ್ಕುಗಳನ್ನು ಸ್ವಂತ ಮಾಡಿಕೊಂಡಿದೆ ಎನ್ನಲಾಗ್ತಿದೆ. ಈ ಸುದ್ದಿ ಕೇಳಿ ನಾನಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಸಿನಿಮಾ ನೋಡದೇ ಇದ್ದವರು ಕೂಡ ಇನ್ನೊಂದು ವಾರದಲ್ಲಿ ಓಟಿಟಿ ಬರುತ್ತಾ ಎಂದು ಕಾಯ್ತಿದ್ದಾರೆ.

ಸಿಂಗರೇಣಿ ಸಮೀಪದ ವೀರ್ಲಪಲ್ಲಿ ಪ್ರಾಂತ್ಯದ ಸುತ್ತಾ 'ದಸರಾ' ಕಥೆ ಸುತ್ತುತ್ತದೆ. ಧರಣಿ(ನಾನಿ), ಸೂರಿ(ದೀಕ್ಷಿತ್) ಹಾಗೂ ವೆನ್ನೆಲ (ಕೀರ್ತಿ ಸುರೇಶ್) ಬಾಲ್ಯ ಸ್ನೇಹಿತರು. ಸೂರಿಗಾಗಿ ತನ್ನ ಪ್ರೀತಿಯನ್ನು ಕೂಡ ಧರಣಿ ತ್ಯಾಗ ಮಾಡುತ್ತಾನೆ. ರೈಲಿನಲ್ಲಿ ಕಲ್ಲಿದ್ದಲು ಕದಿಯುವುದು, ಕುಡಿಯುವುದು, ಸ್ನೇಹಿತರೆಲ್ಲಾ ಒಟ್ಟಾಗಿ ಸುತ್ತಾಡೋದು ಅವರ ನಿತ್ಯ ಕಾಯಕ. ಆದರೆ ಊರಿನ ಪಂಚಾಯಿತಿ ಚುನಾವಣೆ ಅವರ ಜೀವನವನ್ನು ಪ್ರಭಾವಿತಗೊಳಿಸುತ್ತವೆ. ಚಿನ್ನ ನಂಬಿ(ಶೈನ್ ಟಾಮ್ ಚಾಕೋ) ಸ್ಪರ್ಧಿಸಿದ ಆ ಚುನಾವಣೆಯಲ್ಲಿ ಸೂರಿ ಮತ್ತು ಆತನ ಸ್ನೇಹಿತರು ರಾಜಣ್ಣ(ಸಾಯಿಕುಮಾರ್)ನಿಗೆ ಬೆಂಬಲವಾಗಿ ನಿಂತು ಗೆಲ್ಲಿಸುತ್ತಾರೆ. ಅಲ್ಲಿಂದ ಮುಂದೆ ನಡೆಯುವ ಘಟನೆಗಳಿಂದ ಮೂವರು ಸ್ನೇಹಿತರ ಜೀವನದಲ್ಲಿ ಏನೆಲ್ಲಾ ಆಗುತ್ತೆ ಅನ್ನೋದು ಸಿನಿಮಾ ಕಥೆ.

Nani Starrer Dasara to stream on Netflix from April 27, 2023

ಕಥೆ ಹಳೇಯದ್ದೇ ಅನ್ನಿಸಿದ್ರು ಅದನ್ನು ಮಾಸ್ ಮಸಾಲಾ ಅಂಶಗಳನ್ನು ಸೇರಿಸಿ ಬಹಳ ಸೊಗಸಾಗಿ ಕಟ್ಟಿಕೊಡಲಾಗಿತ್ತು. ತೆಲಂಗಾಣ ಶೈಲಿ ಭಾಷೆ, ಡೈಲಾಗ್ಸ್, ಆಕ್ಷನ್ ಎಲ್ಲವೂ ಚಿತ್ರಕ್ಕೆ ಪ್ಲಸ್ ಆಗಿತ್ತು. ಇದೇ ಕಾರಣಕ್ಕೆ 'ದಸರಾ' ಸಿನಿಮಾ ಪ್ರೇಕ್ಷಕರ ಮನಗೆದ್ದಿತ್ತು. ಸದ್ಯ ಥಿಯೇಟರ್‌ಗಳಲ್ಲಿ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ನಾನಿ ಸಿನಿಕರಿಯರ್‌ನಲ್ಲೇ ಬಿಗ್ಗೆಸ್ಟ್ ಹಿಟ್ ಸಿನಿಮಾ ಎನಿಸಿಕೊಂಡಿದೆ. ಇನ್ನು ಯಾವುದೇ ದೊಡ್ಡ ಸಿನಿಮಾಗಳು ಬರದೇ ಇದ್ದಿದ್ದು ಕೂಡ 'ದಸರಾ' ಕಲೆಕ್ಷನ್‌ಗೆ ಸಹಾಯಕವಾಗಿತ್ತು.

ಓವರ್‌ಸೀಸ್‌ನಲ್ಲಿ 2 ಮಿಲಿಯನ್ ಡಾಲರ್‌ಗೂ ಹೆಚ್ಚು ಗಳಿಕೆ ಕಂಡಿರುವ ಸಿನಿಮಾ ವರ್ಲ್ಡ್‌ವೈಡ್ 120 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿದೆ. ಸಾಮಾನ್ಯವಾಗಿ ಯಾವುದೇ ಸಿನಿಮಾ ಆದರೂ ಥಿಯೇಟರ್‌ಗೆ ಬಂದು 49 ದಿನಗಳ ನಂತರ ಓಟಿಟಿಗೆ ಬರುತ್ತೆ. ಆದರೆ 'ದಸರಾ' ರೀತಿಯ ದೊಡ್ಡ ಸಿನಿಮಾ ಕೂಡ ಈಗ 27 ದಿನಕ್ಕೆಲ್ಲಾ ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಬರ್ತಿದೆ.

Nani Starrer Dasara to stream on Netflix from April 27, 2023

ಶ್ರೀ ಲಕ್ಷ್ಮಿ ವೆಂಕಟೇಶ್ವರ ಸಿನಿಮಾಸ್ ಬ್ಯಾನರ್‌ನಲ್ಲಿ ಸುಧಾಕರ್ ಚೆರುಕುರಿ ದಸರಾ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಸಿಕ್ಕ ರೆಸ್ಪಾನ್ಸ್ ನೋಡಿ ಖುಷಿಯಾಗಿದ್ದ ನಿರ್ಮಾಪಕರು ತಂಡಕ್ಕೆ ಸದಸ್ಯರಿಗೆ ಚಿನ್ನದ ನಾಣ್ಯಗಳನ್ನು ಉಡುಗೊರೆಯಾಗಿ ನೀಡಿದ್ದರು. ಇನ್ನು ನಿರ್ದೇಶಕ ಶ್ರೀಕಾಂತ್ ಓದೆಲಗೆ BMW ಕಾರ್ ಉಡುಗೊರೆಯಾಗಿ ನೀಡಿದ್ದು ಭಾರೀ ಸುದ್ದಿ ಆಗಿತ್ತು.

More from Filmibeat

English summary
Nani Starrer Dasara to stream on Netflix from April 27, 2023. Dasara manage to earn Rs 120 crore gross mark at the worldwide box office. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X