For Quick Alerts
  ALLOW NOTIFICATIONS  
  For Daily Alerts

  ನಯನತಾರಾ ಸಿನಿಮಾಕ್ಕೆ ದುಬಾರಿ ಬೆಲೆ ನೀಡಿದ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್

  |

  ನಾಯಕಿ ಪ್ರಧಾನ ಸಿನಿಮಾಗಳಿಗೆ ಪ್ರೇಕ್ಷಕರು ಕಡಿಮೆ, ಮಾರುಕಟ್ಟೆ ಸೀಮಿತ ಎಂಬುದು ಸಿನಿಮಾ ಮಾರುಕಟ್ಟೆ ತಜ್ಞರ(?!) ಮಾತು. ಆದರೆ ಈ ಮಾತನ್ನು ಸುಳ್ಳು ಮಾಡಿದ್ದಾರೆ ಕೆಲವು ನಟಿಯರು.

  ಸಾವಿತ್ರಿ, ವಿಜಯಶಾಂತಿ, ಮಾಲಾಶ್ರಿ, ಶ್ರೀದೇವಿ, ಹೇಮಾಮಾಲಿನಿ, ಶ್ರುತಿ ಇನ್ನೂ ಹಲವು ನಟಿಯರು ತಮ್ಮ ಸ್ವಂತ ಚಾರ್ಮ್‌ ನಿಂದ ಸಿನಿಮಾಗಳನ್ನು ಗೆಲ್ಲಿಸಿದ್ದಾರೆ. ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಈ ಪಟ್ಟಿಯಲ್ಲಿ ನಯನತಾರಾ ಹೆಸರೂ ಸಹ ಸೇರಿಸಬಹುದಾಗಿದೆ.

  ಓಟಿಟಿಯಲ್ಲಿ ಬಿಡುಗಡೆಯಾಗಲಿದೆ ನಯನತಾರ ಹೊಸ ಚಿತ್ರಓಟಿಟಿಯಲ್ಲಿ ಬಿಡುಗಡೆಯಾಗಲಿದೆ ನಯನತಾರ ಹೊಸ ಚಿತ್ರ

  ನಟಿ ನಯನತಾರಾ ಸಿನಿಮಾಕ್ಕೆ ಭಾರಿ ಬೆಲೆಯನ್ನೇ ನೀಡಿ ಕೊಂಡುಕೊಂಡಿದೆ ಒಟಿಟಿ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌. ಸ್ಯಾಟಲೈಟ್ ಹಕ್ಕಿನ ಮೊತ್ತವೂ ಸೇರಿದರೆ ಒಳ್ಳೆಯ ಮೊತ್ತವನ್ನೇ ಪಡೆದುಕೊಂಡಿದೆ ನಯನತಾರಾ ಹೊಸ ಸಿನಿಮಾ.

  ನಯನತಾರಾ ದೇವಿ ಅವತಾರದಲ್ಲಿ ಕಾಣಿಸಿಕೊಂಡಿರುವ 'ಮೂಕುತಿ ಅಮ್ಮನ್' ಸಿನಿಮಾ ಡಿಸ್ನಿ ಪ್ಲಸ್‌ಗೆ ಮಾರಾಟವಾಗಿದೆ. ಸಿನಿಮಾಕ್ಕೆ 20 ಕೋಟಿ ಹಣ ನೀಡಿದೆ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಒಟಿಟಿ.

  20 ಕೋಟಿ ಹಣಕ್ಕೆ ಹಕ್ಕು ಮಾರಾಟ

  20 ಕೋಟಿ ಹಣಕ್ಕೆ ಹಕ್ಕು ಮಾರಾಟ

  ಕೆಲವು ಮೂಲಗಳ ಪ್ರಕಾರ ಸ್ಯಾಟಲೈಟ್ ಹಕ್ಕು ಹಾಗೂ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ ಎರಡೂ ಸೇರಿ 20 ಕೋಟಿಗೆ ಮೂಕುತಿ ಅಮ್ಮನ್ ಸಿನಿಮಾ ಮಾರಾಟವಾಗಿದೆ ಎನ್ನಲಾಗುತ್ತಿದೆ. ಸಿನಿಮಾದ ಒಟ್ಟು ಬಂಡವಾಳಕ್ಕೆ ಹೋಲಿಸಿದರೆ ಇದು ಸಾಮಾನ್ಯ ಮೊತ್ತವೇನೂ ಅಲ್ಲ.

  ಪೌರಾಣಿಕ ಸಿನಿಮಾಕ್ಕೆ ದೊಡ್ಡ ಮೊತ್ತವನ್ನೇ ನೀಡಲಾಗಿದೆ

  ಪೌರಾಣಿಕ ಸಿನಿಮಾಕ್ಕೆ ದೊಡ್ಡ ಮೊತ್ತವನ್ನೇ ನೀಡಲಾಗಿದೆ

  ಆದರೂ ಸಹ ನಟಿ ನಯನತಾರಾ ಅವರ ಅದರಲ್ಲಿಯೂ ಪೌರಾಣಿಕ ಸಿನಿಮಾಕ್ಕೆ ಇದು ಭಾರಿ ದೊಡ್ಡವೇ ಎಂಬ ಮಾತುಗಳು ತಮಿಳು ಸಿನಿ ಉದ್ಯಮದಲ್ಲಿ ಕೇಳಿಬರುತ್ತಿದೆ. ಸ್ಟಾರ್ ನಟರೂ ಸಹ ಒಟಿಟಿ ಕಡೆಗೆ ಮುಖ ಮಾಡುವಂತೆ ಮಾಡಿದೆ ಈ ಡೀಲ್.

  ಪ್ರಿಯತಮನ ಹುಟ್ಟುಹಬ್ಬಕ್ಕೆ ಲಕ್ಷಾಂತರ ಖರ್ಚು ಮಾಡಿದ ನಯನತಾರಾಪ್ರಿಯತಮನ ಹುಟ್ಟುಹಬ್ಬಕ್ಕೆ ಲಕ್ಷಾಂತರ ಖರ್ಚು ಮಾಡಿದ ನಯನತಾರಾ

  ಇಬ್ಬರು ನಿರ್ದೇಶಕರು ನಿರ್ದೇಶಿಸಿರುವ ಸಿನಿಮಾ

  ಇಬ್ಬರು ನಿರ್ದೇಶಕರು ನಿರ್ದೇಶಿಸಿರುವ ಸಿನಿಮಾ

  ಸಿನಿಮಾದಲ್ಲಿ ನಟಿ ನಯನತಾರಾ ದೇವಿ ಅವತಾರದಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ. ಸಿನಿಮಾದಲ್ಲಿ ಆರ್‌ಜೆ ಬಾಲಾಜಿ, ಉರ್ವಶಿ, ಇಂಧುಜಾ ರವಿಚಂದ್ರನ್ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾವನ್ನು ಎನ್‌.ಜೆ.ಸರವಣನ್, ಆರ್‌ಜೆ ಬಾಲಾಜಿ ನಿರ್ದೇಶಿಸಿದ್ದಾರೆ. ಇಶಾರಿ ಕೆ ಗಣೇಶ್ ಸಿನಿಮಾವನ್ನು ನಿರ್ಮಿಸಿದ್ದಾರೆ.

  ಹಲವು ಸಿನಿಮಾಗಳನ್ನು ಬ್ಯುಸಿ ನಯನತಾರಾ

  ಹಲವು ಸಿನಿಮಾಗಳನ್ನು ಬ್ಯುಸಿ ನಯನತಾರಾ

  ಮೂಕುತಿ ಅಮ್ಮನ್ ಹೊರತಾಗಿ ಇನ್ನೂ ಹಲವು ಸಿನಿಮಾಗಳಲ್ಲಿ ನಯನತಾರಾ ಬ್ಯುಸಿಯಾಗಿದ್ದಾರೆ. ಕಾತು ವಾಕುಲ್ ರೆಂಡು ಕಾದಲ್, ರಜನಿಕಾಂತ್ ನಟನೆಯ ಅನ್ನಾತೆ, ಟ್ರಿಶ್ನಾ, ಆಟೋ ರಾಜಾ, ಕೊಟ್ಟಾಯಂ ಕುರುಬಾನ, ನೇಟ್ರಿಕನ್ ಸಿನಿಮಾಗಳಲ್ಲಿ ನಯನತಾರಾ ನಟಿಸುತ್ತಿದ್ದಾರೆ.

  ಈ ಸುದ್ದಿ ಹರಡಿಸಿದ ನೀವೆಲ್ಲ ಜೋಕರ್ಸ್ ಎಂದ ನಯನತಾರಾ!ಈ ಸುದ್ದಿ ಹರಡಿಸಿದ ನೀವೆಲ್ಲ ಜೋಕರ್ಸ್ ಎಂದ ನಯನತಾರಾ!

  English summary
  Actress Nayanthara's Mukoothi Amman movie sold for for whopping amount of money for OTT.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X