For Quick Alerts
  ALLOW NOTIFICATIONS  
  For Daily Alerts

  'ಬಾಹುಬಲಿ' ತಂಡ ಸೇರಿಕೊಂಡ ನಟಿ ನಯನತಾರಾ

  |

  ನಟಿ ನಯನತಾರಾ 'ಬಾಹುಬಲಿ' ತಂಡ ಸೇರಿಕೊಳ್ಳಲಿದ್ದಾರೆ. 'ಬಾಹುಬಲಿ' ಸಿನಿಮಾದ ಮುಖ್ಯ ಮಹಿಳಾ ಪಾತ್ರಗಳಲ್ಲಿ ನಟಿಸಿರುವ ಅನುಷ್ಕಾ ಶೆಟ್ಟಿ ಮತ್ತು ರಮ್ಯಾ ಕೃಷ್ಣ ಜೊತೆಗೆ ಈಗ ನಯನತಾರಾ ಸಹ ಸೇರಿಕೊಂಡಿದ್ದಾರೆ.

  'ಬಾಹುಬಲಿ' ಸಿನಿಮಾ ಬಿಡುಗಡೆ ಆಗಿ ದೊಡ್ಡ ಹಿಟ್ ಆಗಿದ್ದು, ಇದೀಗ 'ಬಾಹುಬಲಿ'ಯ ಪ್ರೀಕ್ವೆಲ್ ತಯಾರಾಗುತ್ತಿದೆ. 'ಬಾಹುಬಲಿ' ಸಿನಿಮಾದಲ್ಲಿ ಹೇಳಲಾಗಿರುವ ಕತೆಗೆ ಮುಂಚೆಯ ಕತೆಯನ್ನು ಕಲ್ಪಿಸಿಕೊಂಡು ಅದರ ಆಧಾರದ ಮೇಲೆ ವೆಬ್ ಸರಣಿಯೊಂದನ್ನು ನಿರ್ಮಿಸಲಾಗುತ್ತಿದೆ. ಮಾಹಿಷ್ಮತಿ ಸಾಮ್ರಾಜ್ಯ ಸ್ಥಾಪನೆ, ಶಿವಗಾಮಿ ರಾಣಿ ಹೇಗಾದಳೆಂಬ ಕತೆ ಇತರೆ ವಿಷಯಗಳು ವೆಬ್ ಸರಣಿಯಲ್ಲಿ ಇರಲಿವೆ.

  ಈ ವೆಬ್ ಸರಣಿಗೆ ರಾಜಮೌಳಿ ಬಂಡವಾಳ ಹೂಡಿದ್ದು, ನಟಿ ನಯನತಾರಾ ವೆಬ್ ಸರಣಿಯ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಇದಕ್ಕೆ 'ಬಾಹುಬಲಿ; ಬಿಫೋರ್‌ ದಿ ಬಿಗಿನಿಂಗ್' ಎಂದು ಹೆಸರಿಡಲಾಗಿದೆ. ನೆಟ್‌ಫ್ಲಿಕ್ಸ್‌ನಲ್ಲಿ ವೆಬ್ ಸರಣಿ ಪ್ರಸಾರವಾಗಲಿದೆ.

  'ಬಾಹುಬಲಿ; ಬಿಫೋರ್‌ ದಿ ಬಿಗಿನಿಂಗ್' ವೆಬ್ ಸರಣಿಯು ಶಿವಗಾಮಿಯು ಮಾಹಿಶ್ಮತಿಯ ರಾಣಿ ಹೇಗಾದಳು, ಅವಳು ಎದುರಿಸಿದ ಸವಾಲುಗಳೇನು ಎಂಬುದನ್ನು ಆಧರಿಸಿರಲಿದೆ. ವೆಬ್ ಸರಣಿಯಲ್ಲಿ ಶಿವಗಾಮಿಯ ಪಾತ್ರವನ್ನು ವಮಿಕಾ ಗಬ್ಬಿ ನಿರ್ವಹಿಸಲಿದ್ದಾರೆ.

  'ಬಾಹುಬಲಿ; ಬಿಫೋರ್‌ ದಿ ಬಿಗಿನಿಂಗ್'ನಲ್ಲಿ ನಯನತಾರಾ ಅವರದ್ದು ಯಾವ ಪಾತ್ರ ಎಂಬುದು ಇನ್ನೂ ಬಹಿರಂಗಗೊಂಡಿಲ್ಲ. ಬಾಹುಬಲಿಯ ತಾಯಿಯ ಪಾತ್ರ ಆಗಿರಬಹುದು ಎಂಬ ಅನುಮಾನವನ್ನು ವ್ಯಕ್ತಪಡಿಸಲಾಗಿದೆ. ಅಂದರೆ ಶಿವಗಾಮಿಯ ಸಹೋದರಿಯ ಪಾತ್ರ.

  'ಬಾಹುಬಲಿ' ಬಿಫೋರ್‌ ದಿ ಬಿಗಿನಿಂಗ್' ವೆಬ್ ಸರಣಿಯ ಕೆಲವು ಎಪಿಸೋಡ್‌ಗಳನ್ನು ಚಿತ್ರೀಕರಿಸಲಾಗಿತ್ತು, ಆದರೆ ಗುಣಮಟ್ಟ ಸರಿಯಿಲ್ಲದ ಕಾರಣದಿಂದ ಅದನ್ನು ಕೈಬಿಟ್ಟು, ಹೊಸ ತಂಡದೊಂದಿಗೆ ಮತ್ತೆ ಚಿತ್ರೀಕರಣದಲ್ಲಿ ತೊಡಗಲಾಗುತ್ತಿದೆ. 'ಬಾಹುಬಲಿ' ನಿರ್ದೇಶಕ ರಾಜಮೌಳಿ 'ಬಾಹುಬಲಿ; ಬಿಫೋರ್‌ ದಿ ಬಿಗಿನಿಂಗ್‌ಗೆ' ಸಹ ನಿರ್ಮಾಪಕ ಆಗಿದ್ದಾರೆ.

  'ಬಾಹುಬಲಿ; ಬಿಫೋರ್‌ ದಿ ಬಿಗಿನಿಂಗ್' ಸರಣಿಯು ಆನಂದ್ ನೀಲಕಂಠನ್ ಅವರ 'ರೈಸ್ ಆಫ್ ಶಿವಗಾಮಿ', 'ಚತುರಂಗ', 'ಕ್ವೀನ್ ಆಫ್ ಮಾಹೀಷ್ಮತಿ' ಪುಸ್ತಕಗಳನ್ನು ಆಧರಿಸಿದೆ.

  English summary
  Actress Nayanathara to join 'Bahubali; Before The Beginning' team. It is the prequel of Bahubali movies directed by SS Rajamouli.
  Monday, July 19, 2021, 9:35
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X