ನೆಟ್‌ಫ್ಲಿಕ್ಸ್‌ನಲ್ಲಿ ನಯನತಾರಾ, ವಿಘ್ನೇಶ್ ಮದುವೆ: ಹೊರ ಬಿತ್ತು ಪ್ರೋಮೊ!

ಹಲವು ವರ್ಷಗಳ ಪ್ರೀತಿಯ ನಂತರ ನಯನತಾರಾ ಮತ್ತು ವಿಘ್ನೇಶ್ ಜೋಡಿಯ ಮದುವೆ ಆಗಿದ್ದಾರೆ. 2015 ರಿಂದ ಪ್ರಣಯ ಪಕ್ಷಿಗಳಂತೆ ಹಾರಾಡುತ್ತಾ ಇರುವ ಈ ಜೋಡಿ ಮದುವೆ ಬಂಧಕ್ಕೆ ಒಳಗಾಗಿದೆ ಈ ಜೋಡಿ. ಈ ಸ್ಟಾರ್ ಜೋಡಿಯ ಮದುವೆ ಅದ್ಧೂರಿಯಾಗಿ ನೆರವೇರಿದೆ.

ನಟಿ ನಯನತಾರಾ ಮತ್ತು ವಿಘ್ನೇಶ್ ಮದುವೆ ನೆರವೇರಿದೆ. ಅಪ್ತರ ಸಮ್ಮುಖದಲ್ಲಿ ಈ ಜೋಡಿ ಸಂಪ್ರದಾಯ ಬದ್ಧವಾಗಿ ಮದುವೆ ಮಾಡಿಕೊಂಡಿದೆ ಈ ಜೋಡಿ. ಜೂನ್ 9 ರಂದು ನಯನತಾರಾ ಮದುವೆ ಅದ್ಧೂರಿಯಾಗಿ ನಡೆದಿದೆ. ಸಾಕಷ್ಟು ಸಿನಿಮಾ ಕಲಾವಿದರು ಇವರ ಮದುವೆಯಲ್ಲಿ ಭಾಗಿಯಾಗಿದ್ದರು.

ಇನ್ನು ಈ ಜೋಡಿಯ ಮದುವೆ ಫೋಟೊಗಳನ್ನು ನೋಡಲು ಪ್ರೇಕ್ಷಕರು ಹೆಚ್ಚು ಕಾತುರದಿಂದ ಕಾಯುತ್ತಿದ್ದರು. ಅಂತೆಯೇ ಮದುವೆಯ ಬಳಿಕ ಮೊದಲ ಫೋಟೊ ಹಂಚಿಕೊಂಡಿದ್ದರು ವಿಘ್ನೇಶ್ ಶಿವನ್ ಮತ್ತು ನಯನತಾರಾ. ಆದರೆ ಇವರ ಮದುವೆ ವಿಡಿಯೋಗಾಗಿ ಕಾಯುತ್ತಾ ಇರುವವರಿಗೆ ಈಗ ಸಿಹಿ ಸುದ್ದಿ ಸಿಕ್ಕಿದೆ.

ನೆಟ್‌ಫ್ಲಿಕ್ಸ್ ಜೊತೆಗೆ ಮದುವೆ ಒಪ್ಪಂದ!

ನೆಟ್‌ಫ್ಲಿಕ್ಸ್ ಜೊತೆಗೆ ಮದುವೆ ಒಪ್ಪಂದ!

ನಯನತಾರಾ ಮದುವೆ ಹಕ್ಕನ್ನು ನೆಟ್‌ಫ್ಲಿಕ್ಸ್ ಖರೀದಿ ಮಾಡಿದೆ. ಮದುವೆಯ ಇಡೀ ಖರ್ಚನ್ನು ನೆಟ್‌ಫ್ಲಿಕ್ಸ್ ನೋಡಿಕೊಂಡಿದೆ ಎನ್ನಲಾಗಿದೆ. ನಯನತಾರಾ ಮತ್ತು ವಿಘ್ನೇಶ್ ಮದುವೆಯ ವಿಡಿಯೋಗಳನ್ನು ಇನ್ನು ಎಲ್ಲೂ ಹಂಚಿಕೊಂಡಿಲ್ಲ. ಕೆಲವು ಫೋಟೊಗಳನ್ನು ಮಾತ್ರವೇ ದಂಪತಿ ಹಂಚಿಕೊಂಡಿದ್ದಾರೆ. ಇವರ ಮದುವೆಯ ಸಂಪೂರ್ಣ ವಿಡಿಯೋ ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲಿದೆ. ಈಗಾಗಲೇ ನೆಟ್‌ಫ್ಲಿಕ್ಸ್ ಜೊತೆಗೆ ಒಪ್ಪಂದ ಆಗಿದ್ದು ಸದ್ಯದಲ್ಲಿಯೇ ವಿಡಿಯೋ ಪ್ರಸಾರವಾಗಲಿದೆ.

ಪ್ರೋಮೊ ರಿಲೀಸ್!

ಪ್ರೋಮೊ ರಿಲೀಸ್!

ನಯನತಾರಾ ವಿಘ್ನೇಶ್ ಮದುವೆ ವಿಡಿಯೋ ಸದ್ಯದಲ್ಲಿಯೇ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗಲಿದೆ. ಈ ಬಗ್ಗೆ ನೆಟ್‌ಫ್ಲಿಕ್ಸ್ ಪ್ರೋಮೊ ಬಿಡುಗಡೆ ಮಾಡಿದೆ. ನಯನತಾರಾ ವಿಘ್ನೇಶ್ ತಮ್ಮ ದಾಂಪತ್ಯದ ಬಗ್ಗೆ, ಮದುವೆ ಬಗ್ಗೆ ಮಾತನಾಡಿರುವ ಸಣ್ಣ ತುಣುಕನ್ನು ನೆಟ್‌ಫ್ಲಿಕ್ಸ್‌ನಲ್ಲಿ ಹರಿಬಿಡಲಾಗಿದೆ. ಜೊತೆಗೆ ಇವರ ಅದ್ಧೂರಿ ಮದುವೆಯ ವಿಡಿಯೋ ತುಣುಕನ್ನು ಕೂಡ ಸೇರಿಸಲಾಗಿದೆ.

ನಯನತಾರಾಳನ್ನು ಹೊಗಳಿದ ವಿಘ್ನೇಶ್!

ನಯನತಾರಾಳನ್ನು ಹೊಗಳಿದ ವಿಘ್ನೇಶ್!

ಸದ್ಯ ನೆಟ್‌ಫ್ಲಿಕ್ಸ್ ರಿಲೀಸ್ ಮಾಡಿರುವ ಪ್ರೋಮೊದಲ್ಲಿ ನಯನತಾರಾ ಮತ್ತ ವಿಘ್ನೇಶ್ ವಿಡಿಯೋ ಹರಿಬಿಡಲಾಗಿದೆ. ಈ ವಿಡಿಯೋದಲ್ಲಿ ವಿಘ್ನೇಶ್ ನಯನತಾರಾ ಬಗ್ಗೆ ಮಾತನಾಡಿದ್ದಾರೆ. "ಒಬ್ಬ ಮಹಿಳೆಯಾಗಿ, ಒಬ್ಬ ಮನುಷ್ಯಳಾಗಿಯೇ ಆಕೆಯ ನೇಚರ್ ಸ್ಫೂರ್ತಿಯಾಗಿದೆ. ಆಕೆಯ ವ್ಯಕ್ತಿತ್ವ ಒಳಗೂ, ಹೊರಗೂ ತುಂಬಾ ಸುಂದರವಾಗಿದೆ." ಎಂದು ವಿಘ್ನೇಶ್ ಶಿವನ್ ಹೇಳಿಕೊಂಡಿದ್ದಾರೆ. ಇನ್ನು ನಯನತಾರಾ ಕೆಲಸದಲ್ಲಿ ಮಾತ್ರವೇ "ನನಗೆ ನಂಬಿಕೆ ಇದೆ. ಹಾಗಾಗಿ ನನ್ನ ಸುತ್ತಲೂ ಹೆಚ್ಚು ಪ್ರೀತಿ ಆವರಿಸಿದೆ ಎನ್ನುವುದನ್ನು ತಿಳಿದರೆ ಖುಷಿಯಾಗುತ್ತದೆ." ಎಂದಿದ್ದಾರೆ.

ಅತಿಥಿಗಳ ಫೋಟೊ ವೈರಲ್!

ಅತಿಥಿಗಳ ಫೋಟೊ ವೈರಲ್!

ಇತ್ತೀಚಿಗಷ್ಟೆ ಈ ತಾರಾ ಜೋಡಿ ಮದುವೆಯಾಗಿ ಒಂದು ತಿಂಗಳ ಸಂಭ್ರಮವನ್ನು ಆಚರಿಸಿದ್ದರು. ಒಂದು ತಿಂಗಳ ಖುಷಿಯನ್ನು ಹಂಚಿಕೊಳ್ಳಲು ಮತ್ತೊಂದಿಷ್ಟು ಫೋಟೊವನ್ನು ಶೇರ್ ಮಾಡಿದ್ದರು. ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಶಾರುಖ್ ಖಾನ್ ಭೇಟಿಯ ಫೋಟೊವನ್ನು ಹಂಚಿಕೊಂಡಿದ್ದರು. ಶಾರುಖ್ ಖಾನ್ ಜೊತೆಗಿನ ಫೋಟೊ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಶಾರುಖ್ ಖಾನ್‌ಗೆ ನಿರ್ದೇಶಕ ಅಟ್ಲೀ ಕುಮಾರ್ ಸಾಥ್ ನೀಡಿದ್ದರು.

More from Filmibeat

English summary
Nayanthara, Vignesh Shivan Wedding Video Coming Soon On Netflix, Promo Released, Know More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X