Netflix India 2026 : 29 ವರ್ಷದ ನಂತರ ಸನ್ನಿ ಡಿಯೋಲ್-ಅಕ್ಷಯ್ ಖನ್ನಾ ಮುಖಾಮುಖಿ-11 ಸಿನಿಮಾ,19 ವೆಬ್ ಸೀರೀಸ್

ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಚಿತ್ರಮಂದಿರ ಮನರಂಜನೆಯ ತಾಣವಾಗಿತ್ತು. ಹೆಚ್ಚೆಂದರೆ ಟಿವಿ. ಆದರೆ ಇಂದು ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಓಟಿಟಿ ವೇದಿಕೆಗಳು ಮನರಂಜನೆಯ ವ್ಯಾಖ್ಯಾನವನ್ನೇ ಬದಲಿಸಿವೆ. ಎಣಿಕೆಗೆ ನಿಲುಕದ ಸಂಖ್ಯೆಯಲ್ಲಿ ಓಟಿಟಿ ಪ್ಲಾಟ್‌ಫಾರ್ಮ್‌ಗಳು ಜನ್ಮ ಪಡೆದಿವೆ. ಕೊರೊನಾ ನಂತರ ಕಡಿವಾಣ ಹಾಕಲಾಗದಂತೆ ಬೆಳೆದು ನಿಂತಿವೆ.

ಮಿಲೇನಿಯಲ್ಸ್ ಅಂದರೆ 18 ರಿಂದ 35ರ ವಯೋಮಾನದವರನ್ನೇ ಗುರಿಯಾನ್ನಾಗಿಸಿಕೊಂಡು ದಿನಗಳೆದಂತೆ ಎಲ್ಲರ ದಿನ ನಿತ್ಯದ ಪ್ರಮುಖ ಭಾಗವಾದ ಈ ಓಟಿಟಿಯ ಮೂಲಕ ಸೂಪರ್ ಸ್ಟಾರ್‍‌ಗಳ ದಂಡು ನಿಮಗೆ ಮನರಂಜನೆಯ ರಸದೌತಣ ಬಡಿಸಲು ರೆಡಿಯಾಗಿದೆ.

Netflix 2026 Sunny Deol s Legal War Saif s Election Epic and the Bollywood Takeover Revealed

ಹೌದು.. ಅಮೆಜಾನ್ ಸೇರಿ ಇನ್ನುಳಿದ ಓಟಿಟಿ ವೇದಿಕೆಗಳಿಗೆ ತೀವೃ ಸ್ಫರ್ಧೆಯನ್ನೊಡ್ಡುವ ನೆಟ್‌ಫ್ಲಿಕ್ಸ್ 2026ರ ಸಿನೆ ಕ್ಯಾಲೆಂಡರ್ ನ ಬಿಡುಗಡೆ ಮಾಡಿದೆ. ಹನ್ನೊಂದು ಸಿನಿಮಾ ಮತ್ತು ಹತ್ತೊಂಬತ್ತು ವೆಬ್ ಸರಣಿಗಳನ್ನು ಘೋಷಿಸಿದೆ. ಎಲ್ಲವೂ ಅತಿರಥ ಮಹಾರಥರ ಚಿತ್ರಗಳೇ ಮತ್ತು ವೆಬ್ ಸರಣಿಗಳೇ. ಹಾಗಿದ್ದರೆ, ಈ ವರ್ಷ ಯಾವೆಲ್ಲ ಸಿನಿಮಾ ಮತ್ತು ಸೀರಿಸ್‌ಗಳು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿವೆ ಎಂದು ತಿಳಿಯಲು ಮುಂದೆ ಓದಿ.


1. ಇಕ್ಕ

68ರ ಹರೆಯದಲ್ಲಿ ಮೈ ಕೊಡವಿ ಎದ್ದು ನಿಂತ ಸನ್ನಿ ಡಿಯೋಲ್ ಅಭಿನಯದ ಚಿತ್ರ ''ಇಕ್ಕ''. ವಿಶೇಷ ಅಂದರೆ ಈ ಚಿತ್ರದಲ್ಲಿ ಸದ್ಯ ಧುರಂಧರ್ ನ ಅಲೆಯಲ್ಲಿ ತೇಲುತ್ತಿರುವ ಅಕ್ಷಯ್ ಖನ್ನಾ ಕೂಡ ಇದ್ದಾರೆ. ಬಾರ್ಡರ್ (1997) ಚಿತ್ರದ ನಂತರ ಅಂದರೆ ಬರೋಬ್ಬರಿ 29 ವರ್ಷದ ನಂತರ ಅಕ್ಷಯ್ ಖನ್ನಾ ಮತ್ತು ಸನ್ನಿ ಡಿಯೋಲ್ ತೆರೆ ಹಂಚಿಕೊಂಡ ಚಿತ್ರ ಇದು ಎನ್ನುವುದು ಮತ್ತೊಂದು ವಿಶೇಷ. ಸಿದ್ಧಾರ್ಥ್ ಮಲ್ಹೋತ್ರಾ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ದಿಯಾ ಮಿರ್ಜಾ, ತಿಲೋತ್ತಮಾ ಶೋಮೆ, ಸಂಜೀದಾ ಶೇಖ್, ಶಿಶಿರ್ ಶರ್ಮಾ ಮತ್ತು ಆಕಾಂಕ್ಷಾ ರಂಜನ್ ಕೂಡ ಈ ಚಿತ್ರದಲ್ಲಿದ್ದಾರೆ.


2. ಹಮ್ ಹಿಂದೂಸ್ತಾನಿ

''ಕೆಹತಾ ಹೈ ದಿಲ್ ಬಾರ್ ಬಾರ್''.. ''ರಹೀಸ್''.. ''ಅಗ್ನಿ''.. ಚಿತ್ರಗಳನ್ನು ನಿರ್ದೇಶನ ಮಾಡಿದ್ದ ರಾಹುಲ್ ಡೋಲಾಕಿಯಾ ದೇಶದ ಮೊದಲ ಪ್ರಜಾಪ್ರಭುತ್ವದ ಚುನಾವಣೆಯ ಸುತ್ತ ಈ ಬಾರಿ ಕಥೆಯನ್ನು ಹೆಣೆದಿದ್ದಾರೆ. ''ಹಮ್ ಹಿಂದೂಸ್ತಾನಿ'' ಚಿತ್ರದಲ್ಲಿ ಸೈಫ್ ಅಲಿ ಖಾನ್, ಪ್ರತೀಕ್ ಗಾಂಧಿ, ದೀಪಕ್ ಡೋಬ್ರಿಯಲ್, ಮಿಮಿ ಚಕ್ರವರ್ತಿ, ಸಾರಿಕಾ ಮತ್ತು ಶ್ರದ್ಧಾ ದಂಗರ್ ಈ ಚಿತ್ರದಲ್ಲಿ ಪ್ರಮುಖವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ.

3. ಘೂಸ್ಕೋರ್ ಪಂಡತ್

ತಮ್ಮ ಬಿಗಿಯಾದ ನಿರೂಪಣಾ ಶೈಲಿಯಿಂದಲೇ ಹೆಸರು ಮಾಡಿರುವ ಬರಹಗಾರ ಮತ್ತು ನಿರ್ದೇಶಕ ನೀರಜ್ ಪಾಂಡೆ ಈ ಬಾರಿ ಭ್ರಷ್ಟ ಮತ್ತು ಕ್ರೂರ ಪೊಲೀಸ್ ಅಧಿಕಾರಿಯ ಕಥೆಯನ್ನು ಹೇಳಲು ಅಣಿಯಾಗಿದ್ದಾರೆ. ''ಘೂಸ್ಕೋರ್ ಪಂಡತ್'' ಚಿತ್ರದಲ್ಲಿ ಮನೋಜ್ ಬಾಜ್‌ಪೇಯಿ ಪ್ರಮುಖ ಪಾತ್ರ ನಿರ್ವಹಿಸಿದ್ದು ರಿತೇಶ್ ಶಾ ನಿರ್ದೇಶನ ಚಿತ್ರಕ್ಕಿದೆ. ನುಸ್ರತ್ ಭರುಚಾ, ಸಾಕಿಬ್ ಸಲೀಮ್, ಅಕ್ಷಯ್ ಒಬೆರಾಯ್ ಮತ್ತು ದಿವ್ಯಾ ದತ್ತಾ ಉಳಿದ ಮುಖ್ಯ ಪಾತ್ರದಲ್ಲಿದ್ದಾರೆ.

4. ಅಕ್ಯೂಸ್ಡ್

ಕೊಂಕಣಾ ಸೇನ್ ಶರ್ಮಾ ಮತ್ತು ಪ್ರತಿಭಾ ರಣಂತ ''ಅಕ್ಯೂಸ್ಡ್'' ಚಿತ್ರದಲ್ಲಿ ಅಭಿನಯಿಸಿದ್ದಾರೆ. ಲಂಡನ್‌ನಲ್ಲಿನ ಸಲಿಂಗಕಾಮಿ ವೈದ್ಯೆಯ ವಿರುದ್ಧ ಮಾಡಲಾದ ಆರೋಪ ಹೇಗೆ ಆ ವೈದ್ಯೆಯ ಜೀವನವನ್ನೇ ಬುಡಮೇಲಾಗಿಸುತ್ತೆ ಎನ್ನುವ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಕರಣ್ ಜೋಹರ್ ಹಣ ಹೂಡಿದ್ದು ಅನುಭೂತಿ ಮಿಶ್ರಾ ಚಿತ್ರವನ್ನು ನಿರ್ದೇಶಿಸಿದ್ದಾರೆ.


5. ಕರ್ತವ್ಯ

ಸೈಫ್ ಅಲಿ ಖಾನ್, ರಾಸಿಕಾ ದುಗ್ಗಲ್, ಸಂಜಯ್ ಮಿಶ್ರಾ, ಸೌರಭ್ ದ್ವಿವೇದಿ, ಜಾಕಿರ್ ಹುಸೇನ್, ಮನೀಶ್ ಚೌಧರಿ, ಅಭಿನಯಿಸಿರುವ ಕರ್ತವ್ಯ ಕೂಡ ''ನೆಟ್‌ಫ್ಲಿಕ್ಸ್‌''ನಲ್ಲಿ ಈ ವರ್ಷ ಪ್ರಸಾರವಾಗಲಿದೆ. ಪೊಲೀಸ್ ಅಧಿಕಾರಿಯ ಸುತ್ತ ಈ ಚಿತ್ರದ ಕಥೆಯನ್ನು ಹೆಣೆಯಲಾಗಿದೆ.

ನೆಟ್ ಫ್ಲಿಕ್ಸ್‌ನಲ್ಲಿ ಪ್ರಸಾರವಾಗಲಿರುವ ಇನ್ನುಳಿದ ಚಿತ್ರಗಳ ಪಟ್ಟಿ

6. ''ಗಾಂಧಾರಿ'' - ತಾರಾಬಳಗ- ತಾಪ್ಸಿ ಪನ್ನು, ಇಶ್ವಾಕ್ ಸಿಂಗ್, ಛಾಯಾ ಕದಂ, ಸ್ವಸ್ತಿಕಾ ಮುಖರ್ಜಿ, ಮಿತಾ ವಶಿಷ್ಟ್, ಜತಿನ್ ಸರ್ನಾ

7. ''ಲಸ್ಟ್ ಸ್ಟೋರೀಸ್ 3''- ತಾರಾಬಳಗ- ರಾಧಿಕಾ ಆಪ್ಟೆ, ಕೊಂಕಣಾ ಸೇನ್ ಶರ್ಮಾ, ವಿಜಯ್ ವರ್ಮಾ, ಅಭಿಷೇಕ್ ಬ್ಯಾನರ್ಜಿ, ಗುರುಫತೇಹ್ ಪಿರ್ಜಾಡಾ, ಸನಾ ಥಾಂಪಿ, ಅಲಿ ಫಜಲ್, ರಾಧಿಕಾ ಮದನ್, ಅದಿತಿ ರಾವ್ ಹೈದರಿ ಮತ್ತು ಸಿದ್ಧಾರ್ಥ್

8.''ಮಾ ಬಹನ್''-ತಾರಾಬಳಗ - ಮಾಧುರಿ ದೀಕ್ಷಿತ್, ತೃಪ್ತಿ ಡಿಮ್ರಿ, ರವಿ ಕಿಶನ್, ಧರ್ಣಾ ದುರ್ಗಾ.

9. ''ಮೇಡ್ ಇನ್ ಕೊರಿಯಾ''-ತಾರಾಬಳಗ- ಪ್ರಿಯಾಂಕಾ ಮೋಹನ್,ಪಾರ್ಕ್ ಹೈ-ಜಿನ್

10. ''ತಕ್ಷಕುಡು''-ತಾರಾಬಳಗ- ಆನಂದ್ ದೇವರಕೊಂಡ, ನಿತಾಂಶಿ ಗೋಯಲ್

11. ''ಟೋಸ್ಟರ್''- ತಾರಾಬಳಗ - ರಾಜ್‌ಕುಮಾರ್ ರಾವ್, ಸನ್ಯಾ ಮಲ್ಹೋತ್ರಾ, ಅರ್ಚನಾ ಪೂರನ್ ಸಿಂಗ್, ಅಭಿಷೇಕ್ ಬ್ಯಾನರ್ಜಿ, ಫರಾಹ್ ಖಾನ್, ಉಪೇಂದ್ರ ಲಿಮಾಯೆ, ವಿನೋದ್ ರಾವತ್, ಜಿತೇಂದ್ರ ಜೋಶಿ ಮತ್ತು ಸೀಮಾ ಪಹ್ವಾ.

ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗಲಿರುವ ವೆಬ್ ಸರಣಿಗಳ ಪಟ್ಟಿ

1.''ದಿ ಗ್ರೇಟ್ ಇಂಡಿಯನ್ ಕಪಿಲ್ ಶರ್ಮಾ ಶೋ ಸೀಸನ್ 5''

2. ''ಫ್ಯಾಮಿಲಿ ಬಿಸಿನೆಸ್'' - ತಾರಾಬಳಗ - ಅನಿಲ್ ಕಪೂರ್ ಮತ್ತು ವಿಜಯ್ ವರ್ಮಾ ಜೊತೆಗೆ ಅಕ್ಷಾಶ್ ಖುರಾನಾ, ರಿಯಾ ಚಕ್ರವರ್ತಿ, ನೇಹಾ ಧೂಪಿಯಾ, ಅನಂತ್ ನಾಗ್, ಕನ್ವಲ್ಜಿತ್ ಸಿಂಗ್, ಧ್ರುವ್ ಸೆಹ್ಗಲ್, ನಂದೀಶ್ ಸಂಧು, ಟಿನಾ ದೇಸಾಯಿ, ರೋಹನ್ ಮೆಹ್ರಾ, ಕಮಲ್ ಸದಾನಾ, ರೈಮಾ ಸೇನ್, ಇನಾಯತ್ ಸೂದ್ ಮತ್ತು ಮದೂ ಷಾ

3. ''ಸೂಪರ್ ಸುಬ್ಬು'' (ನೆಟ್‌ಫ್ಲಿಕ್ಸ್‌ನ ಮೊದಲ ತೆಲುಗು ಸರಣಿ)-ತಾರಾಗಣ- ಸುಂದೀಪ್ ಕಿಶನ್, ಮಿಥಿಲಾ ಪಾಲಕರ್, ಮುರಳಿ ಶರ್ಮಾ, ಮಾನಸಾ ಚೌಧರಿ ಮತ್ತು ಗೆಟಪ್ ಶ್ರೀನು

4.''ಧಿಂಡೋರಾ ಸೀಸನ್ 2''- ತಾರಾಬಳಗ- ಭುವನ್ ಬಾಮ್, ಅಬ್ಬಾಸ್ ದಲಾಲ್, ಹುಸೇನ್ ದಲಾಲ್, ಚೇತನ್ ಡಾಂಗೆ, ಗೋಪಾಲ್ ದತ್, ಶುಭಂ ದುಬೆ ಮತ್ತು ಅನಂತ್ ದುಬೆ

5. ''ಹಲೋ ಬಚ್ಚನ್''- ತಾರಾಬಳಗ-ನೀತ್ ಕುಮಾರ್ ಸಿಂಗ್, ವಿಕ್ರಮ್ ಕೊಚ್ಚರ್ ಮತ್ತು ಗಿರಿಜಾ ಓಕ್ ಗೋಡ್ಬೋಲೆ

6.''ಮುಸಾಫಿರ್ ಕೆಫೆ''- ತಾರಾಬಳಗ- ವಿಕ್ರಾಂತ್ ಮೆಸ್ಸಿ

7.''ಲೆಗಸಿ''-ತಾರಾಬಳಗ- ಆರ್. ಮಾಧವನ್, ಅಭಿಷೇಕ್ ಬ್ಯಾನರ್ಜಿ, ನಿಮಿಷಾ ಸಜಾಯನ್, ಗೌತಮ್ ಕಾರ್ತಿಕ್ ಮತ್ತು ಗುಲ್ಷನ್ ದೇವಯ್ಯ

8.''ಚುಂಬಕ್''- ತಾರಾಬಳಗ- ನೀನಾ ಗುಪ್ತಾ, ದೇವೇನ್ ಭೋಜನಿ, ಅಮೈರಾ ದಸ್ತೂರ್, ಅನಂತ್ ವಿ. ಜೋಶಿ, ಸುಮೀತ್ ವ್ಯಾಸ್, ಮಾನಸಿ ಪಾರೇಖ್, ಅರ್ಜುನ್ ಬಿಜ್ಲಾನಿ, ಹೆಲ್ಲಿ ಷಾ, ಸುಮೀತ್ ರಾಘವನ್ ಮತ್ತು ಸಂದೀಪಾ ಧರ್

9.''#ಲವ್''-ತಾರಾಬಳಗ- ಅರ್ಜುನ್ ದಾಸ್ ಮತ್ತು ಐಶ್ವರ್ಯಾ ಲಕ್ಷ್ಮಿ

10.''ದೇಸಿ ಬ್ಲಿಂಗ್''-ತಾರಾಬಳಗ- ಕರಣ್ ಕುಂದ್ರಾ, ತೇಜಸ್ವಿ ಪ್ರಕಾಶ್, ಸತೀಶ್ ಸಂಪಾಲ್, ತಬಿಂದಾ ಸಂಪಾಲ್, ರಿಜ್ವಾನ್ ಸಾಜನ್, ಅಡೆಲ್, ಸಾಜನ್, ಸನಾ ಸಾಜನ್, ಪಮೇಲಾ ಸೆರೆನಾ, ದ್ಯುತಿ ಪಾರುಕ್, ಇರಿನಾ ಕಿನಾಖ್, ಅಲಿಝೇ ಮಿರ್ಜಾ, ಲೈಲಿ ಮಿರ್ಜಾ ಮತ್ತು ಜಾನ್ವಿ ಗೌರ್

11. ''ಗ್ಲೋರಿ''-ತಾರಾಬಳಗ- ದಿವ್ಯೇಂದು, ಪುಲ್ಕಿತ್ ಸಾಮ್ರಾಟ್, ಸುವಿಂದರ್ ವಿಕ್ಕಿ

12.''ಕೋಹ್ರಾ ಸೀಸನ್ 2''-ತಾರಾಬಳಗ- ಮೋನಾ ಸಿಂಗ್, ಬರುನ್ ಸೋಬ್ತಿ, ರಣ್ವಿಜಯ್ ಸಿಂಗ್, ಪೂಜಾ ಭಮೃರಾ, ಅನುರಾಗ್ ಅರೋರಾ ಮತ್ತು ಪ್ರೇರಕ್ ಮೆಹ್ತಾ

13.''ಲಾಕ್ ಅಪ್'' -ರಿಯಾಲಿಟಿ ಶೋ

14.''ಮಾಮ್ಲಾ ಲೀಗಲ್ ಹೈ ಸೀಸನ್ 2''-ತಾರಾಬಳಗ- ರವಿ ಕಿಶನ್, ನಿಧಿ ಬಿಷ್ತ್, ನೈಲಾ ಗ್ರೆವಾಲ್, ಅನಂತ್ ಜೋಶಿ, ಅಂಜುಮ್ ಬಾತ್ರಾ, ಕುಶಾ ಕಪಿಲಾ ಮತ್ತು ದಿನೇಶ್ ಲಾಲ್ ಯಾದವ್

15.''ಯೆ ದಿಲ್ ಸುನ್ ರಹಾ ಹೈ''-ತಾರಾಬಳಗ- ಶಹೀರ್ ಶೇಖ್, ಮೋಹಿತ್ ಮಲಿಕ್ ಮತ್ತು ಝೋಯಾ ಅಫ್ರೋಜ್

16. ''ಮಿಸ್‌ಮ್ಯಾಚ್ಡ್ ಸೀಸನ್ 4''-ತಾರಾಬಳಗ- ರೋಹಿತ್ ಸರಫ್, ಪ್ರಾಜಕ್ತಾ ಕೋಲಿ, ವಿದ್ಯಾ ಮಾಲ್ವಡೆ, ರಣವಿಜಯ್ ಸಿಂಗ್, ವಿದ್ಯಾ ಮಾಲ್ವಡೆ, ಅಹ್ಸಾಸ್ ಚನ್ನಾ, ತಾರುಕ್ ರೈನಾ, ಮಸ್ಕನ್ ಜಾಫರಿ ಮತ್ತು ಅಭಿನವ್ ಶರ್ಮಾ

17.''ಆಪರೇಷನ್ ಸಫೇದ್ ಸಾಗರ್''- ತಾರಾಬಳಗ- ಸಿದ್ಧಾರ್ಥ್, ಜಿಮ್ಮಿ ಶೇರ್‌ಗಿಲ್, ಅಭಯ್ ವರ್ಮಾ, ದಿಯಾ ಮಿರ್ಜಾ, ಪ್ರಾಜಕ್ತಾ ಕೋಲಿ, ಆದಿಲ್ ಹುಸೇನ್, ಮಿಹಿರ್ ಆಹುಜಾ, ತಾರುಕ್ ರೈನಾ, ಅರ್ನವ್ ಭಾಸಿನ್, ಮತ್ತು ಅಮೃತಾ ಬಾಗ್ಚಿ

18.''ತಲಾಶ್: ಎ ಮದರ್ಸ್ ಸರ್ಚ್''- ತಾರಾಬಳಗ- ಪರಿಣಿತಿ ಚೋಪ್ರಾ, ಸೋನಿ ರಾಜ್‌ದಾನ್, ಅನುಪ ಸೋನಿ, ಜೆನಿಫರ್ ವಿಂಗೆಟ್, ತಾಹಿರ್ ಭಾಸಿನ್, ಹರ್ಲೀನ್ ಸೇಥಿ, ಧ್ರುವ್ ಚೌಧರಿ ಮತ್ತು ಸುಮೀತ್ ವ್ಯಾಸ್

19. ''ತಸ್ಕರಿ: ದಿ ಸ್ಮಗ್ಲರ್ಸ್ ವೆಬ್''(ಈಗಾಗಲೇ ಬಿಡುಗಡೆಯಾಗಿರುವ ಸರಣಿ) -ತಾರಾಬಳಗ- ಇಮ್ರಾನ್ ಹಶ್ಮಿ, ಶರದ್ ಕೇಲ್ಕರ್, ಅಮೃತಾ ಖವಿಲ್ಕರ್, ನಂದೀಶ್ ಸಿಂಗ್ ಸಂಧು, ಅನುರಾಗ್ ಸಿನ್ಹಾ ಮತ್ತು ಝೋಯಾ ಅಫ್ರೋಜ್ ಪ್ರಮುಖ ಪಾತ್ರಗಳಲ್ಲಿದ್ದಾರೆ.

More from Filmibeat

English summary
Sunny Deol, Anil Kapoor, and Saif Ali Khan are heading to Netflix! Explore the 2026 lineup featuring 'Family Business,' 'Ikka,' and 'Maa Behen.' Don't miss out!
Read more about: netflix bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X