twitter
    For Quick Alerts
    ALLOW NOTIFICATIONS  
    For Daily Alerts

    ಗೇಮಿಂಗ್‌ನತ್ತ ಹೊರಟ ನೆಟ್‌ಫ್ಲಿಕ್ಸ್‌: ದೊಡ್ಡ ಒಪ್ಪಂದಕ್ಕೆ ಸಹಿ

    |

    ಸಿನಿಮಾ, ವೆಬ್ ಸರಣಿ, ಡಾಕ್ಯುಮೆಂಟರಿಗಳನ್ನು ಒದಗಿಸುತ್ತಿರುವ ನೆಟ್‌ಫ್ಲಿಕ್ಸ್‌, ವಿಶ್ವದ ನಂಬರ್ 1 ಒಟಿಟಿ ಎಂದು ಗುರುತಿಸಿಕೊಂಡಿದೆ.

    ಹಲವು ಅತ್ಯುತ್ತಮ, ಸಿನಿಮಾಗಳು, ವೆಬ್ ಸರಣಿಗಳನ್ನು ಪ್ರೇಕ್ಷಕರಿಗೆ ಒದಗಿಸಿರುವ, ಒದಗಿಸುತ್ತಿರುವ ನೆಟ್‌ಫ್ಲಿಕ್ಸ್‌ ವಿಡಿಯೋ ಗೇಮಿಂಗ್ ವಿಭಾಗಕ್ಕೆ ಎಂಟ್ರಿ ನೀಡುತ್ತಿದೆ. ತಾನು ಆನ್‌ಲೈನ್ ಗೇಮಿಂಗ್ ಸರ್ವೀಸ್ ನೀಡುವುದಾಗಿ ಈ ಹಿಂದೆಯೇ ಘೋಷಿಸಿದ್ದ ನೆಟ್‌ಫ್ಲಿಕ್ಸ್‌ ಈಗ ಈ ನಿಟ್ಟಿನಲ್ಲಿ ದೊಡ್ಡ ಹೆಜ್ಜೆಯೊಂದನ್ನು ಇಟ್ಟಿದೆ.

    ಆನ್‌ಲೈನ್ ಗೇಮಿಂಗ್ ಸರ್ವೀಸ್‌ನಲ್ಲಿ ಹೆಸರು ಮಾಡಿರುವ ಅಮೆರಿಕದ ನೈಟ್ ಸ್ಕೂಲ್ ಸ್ಟುಡಿಯೋ ಜೊತೆ ನೆಟ್‌ಫ್ಲಿಕ್ಸ್ ಒಪ್ಪಂದ ಮಾಡಿಕೊಂಡು ಗೇಮಿಂಗ್ ಕ್ಷೇತ್ರಕ್ಕೆ ಅಧಿಕೃತವಾಗಿ ಕಾಲಿಟ್ಟಿದ್ದು, ಮುಂದಿನ ದಿನಗಳಲ್ಲಿ ಗೇಮಿಂಗ್ ಕ್ಷೇತ್ರದಲ್ಲಿ ಹೊಸ ಕ್ರಾಂತಿಯೊಂದನ್ನು ಮೂಡಿಸುವ ಭರವಸೆ ಹುಟ್ಟುಹಾಕಿದೆ.

     Netflix Acquired Gaming Company Night School Studio

    ನೈಟ್ ಸ್ಕೂಲ್ ಸ್ಟುಡಿಯೋ 2014ರಿಂದಲೂ ಗೇಮಿಂಗ್ ಉದ್ಯಮದಲ್ಲಿದ್ದು, ನೈಟ್ ಸ್ಕೂಲ್ ಸ್ಟುಡಿಯೋ ತಯಾರಿಸಿರುವ ಗೇಮ್‌ಗಳು ಸೋನಿ ಪಿಎಸ್‌ 5, ಎಕ್ಸ್‌ ಬಾಕ್ಸ್, ನಿಂಟೆಂಡೊ ಸ್ವಿಚ್‌ ಸೇರಿದಂತೆ ಇನ್ನೂ ಹಲವು ಪ್ರಮುಖ ಗೇಮಿಂಗ್ ಡಿವೈಸ್‌ಗಳಲ್ಲಿ ಆಡಲು ಲಭ್ಯವಿವೆ. ನೈಟ್ ಸ್ಕೂಲ್ ಸ್ಟುಡಿಯೋ ನಿರ್ಮಿಸಿರುವ 'ಆಕ್ಸೆನ್‌ಫ್ರೀ' ಗೇಮ್ ಬಹಳ ಜನಪ್ರಿಯ.

    ನೈಟ್‌ ಸ್ಕೂಲ್ ಸ್ಟುಡಿಯೋ ಖರೀದಿಸಿರುವ ನೆಟ್‌ಫ್ಲಿಕ್ಸ್ ಆನ್‌ಲೈನ್ ಗೇಮಿಂಗ್ ಅನ್ನು ಯಾವ ಮಾದರಿಯಲ್ಲಿ ಪರಿಚಯಿಸುತ್ತದೆ ಎಂಬುದು ಕುತೂಹಲ ಕೆರಳಿಸಿದೆ. ಈಗಿರುವ ನೆಟ್‌ಪ್ಲಿಕ್ಸ್ ಅಪ್ಲಿಕೇಶನ್‌ನಲ್ಲಿಯೇ ಗೇಮಿಂಗ್ ಸೌಲಭ್ಯ ನೀಡುತ್ತದೆಯೇ, ಗೇಮಿಂಗ್‌ಗಾಗಿ ಹೊಸ ಅಪ್ಲಿಕೇಶನ್ ಪರಿಚಯಿಸುತ್ತದೆಯೇ ಅಥವಾ ಪಿಎಸ್‌ 5, ಎಕ್ಸ್ ಬಾಕ್ಸ್ ಮಾದರಿಯಲ್ಲಿ ಗೇಮಿಂಗ್ ಡಿವೈಸ್ ಅನ್ನೇ ಮಾರುಕಟ್ಟೆಗೆ ಪರಿಚಯಿಸುತ್ತದೆಯೇ ಕಾದು ನೋಡಬೇಕಿದೆ. ಗೇಮಿಂಗ್ ಅನ್ನು ಜಾಹೀರಾತು ಮುಕ್ತವಾಗಿ ಹಾಗೂ ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲದೆ, ಚಂದಾದಾರರಿಗೆ ನೀಡುವ ಕುರಿತು ನೆಟ್‌ಫ್ಲಿಕ್ಸ್ ಯೋಜನೆ ರೂಪಿಸಿದೆ ಎನ್ನಲಾಗುತ್ತಿದೆ.

    ನೆಟ್‌ಫ್ಲಿಕ್ಸ್‌ ಒಟಿಟಿ ದೈತ್ಯ ಆಗಿದ್ದರೂ ಸಹ ಇತ್ತೀಚಿನ ದಿನಗಳಲ್ಲಿ ಇತರೆ ಒಟಿಟಿಗಳಿಂದ ಬಹುದೊಡ್ಡ ಸ್ಪರ್ಧೆಯನ್ನು ನೆಟ್‌ಫ್ಲಿಕ್ಸ್‌ ಎದುರಿಸುತ್ತಿದೆ. ಡಿಸ್ನಿಪ್ಲಸ್, ಎಚ್‌ಬಿಒ, ಅಮೆಜಾನ್, ಸೋನಿ, ಜೀ 5 ಜೊತೆಗೆ ಹಲವು ಸ್ಥಳೀಯ ಒಟಿಟಿಗಳು ಸಹ ಉಗಮವಾಗಿದ್ದು ದುಬಾರಿಯಾಗಿರುವ ನೆಟ್‌ಫ್ಲಿಕ್ಸ್ ನಿಧಾನಕ್ಕೆ ಸಬ್‌ಸ್ಕ್ರೈಬರ್‌ಗಳನ್ನು ಕಳೆದುಕೊಳ್ಳುತ್ತಿದೆ. ಅದೇ ಕಾರಣಕ್ಕೆ ತನ್ನ ದಿಕ್ಕನ್ನು ಬದಲಿಸುತ್ತಿದೆ ನೆಟ್‌ಫ್ಲಿಕ್ಸ್.

    ನೆಟ್‌ಫ್ಲಿಕ್ಸ್‌ ಜೊತೆ ಕೈಜೋಡಿಸಿರುವ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ನೈಟ್‌ ಸ್ಕೂಲ್ ಸ್ಟುಡಿಯೋ ''ನೆಟ್‌ಫ್ಲಿಕ್ಸ್‌ ಜೊತೆ ಕೈಜೋಡಿಸಿರುವ ಮೊದಲ ಗೇಮಿಂಗ್ ಸಂಸ್ಥೆ ನಾವೆಂಬ ಹೆಮ್ಮೆ ನಮಗೆ ಇದೆ. ನೆಟ್‌ಫ್ಲಿಕ್ಸ್‌ ನೀಡುತ್ತಿರುವ ಕ್ರಿಯಾತ್ಮಕ ಸ್ವಾತಂತ್ರ್ಯವನ್ನು ಬಳಸಿ ಅತ್ಯುತ್ತಮ ಗುಣಮಟ್ಟದ, ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಂಥಹಾ ಗೇಮ್‌ಗಳನ್ನು ನಿರ್ಮಿಸುತ್ತೇವೆ'' ಎಂದು ಸಂಸ್ಥೆ ಹೇಳಿದೆ.

    ನೆಟ್‌ಫ್ಲಿಕ್ಸ್‌ ಸಂಸ್ಥೆಯು ಭವಿಷ್ಯದಲ್ಲಿ ಇನ್ನಷ್ಟು ಗೇಮಿಂಗ್ ಸಂಸ್ಥೆಗಳ ಜೊತೆಗೆ ಒಪ್ಪಂದ ಮಾಡಿಕೊಳ್ಳಲಿದೆ. ಭಾರತದಲ್ಲಿಯೂ ಕೆಲವು ಉತ್ತಮ ಗೇಮಿಂಗ್ ಸಂಸ್ಥೆಗಳಿದ್ದು ಅವುಗಳೊಟ್ಟಿಗೂ ನೆಟ್‌ಫ್ಲಿಕ್ಸ್ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇದೆ.

    ಕೆಲವು ದಿನಗಳ ಹಿಂದೆಯಷ್ಟೆ ನೆಟ್‌ಫ್ಲಿಕ್ಸ್‌ನ ಸಂಸ್ಥಾಪಕ ಮತ್ತು ಸಿಇಒ ರೀಡ್ ಹೇಸ್ಟಿಂಗ್ ಭಾರತಕ್ಕೆ ಬಂದಿದ್ದರು. ಭಾರತದಲ್ಲಿ ನೆಟ್‌ಫ್ಲಿಕ್ಸ್ 30,000 ಕೋಟಿಗೂ ಹೆಚ್ಚು ಹಣವನ್ನು ಹೂಡುತ್ತಿದ್ದು, ವಿಡಿಯೋ ಕಂಟೆಂಟ್‌ಗೆ ಭಾರಿ ಬೇಡಿಕೆ ಇರುವ ಭಾರತದಲ್ಲಿ ತನ್ನ ಚಂದಾದಾರರನ್ನು ಹೆಚ್ಚು ಮಾಡಿಕೊಳ್ಳುವ ಆಲೋಚನೆಯಲ್ಲಿದೆ.

    English summary
    Netflix acquired gaming company nigh school studio. Netflix shifting to online gaming from video content.
    Wednesday, September 29, 2021, 23:29
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X