twitter
    For Quick Alerts
    ALLOW NOTIFICATIONS  
    For Daily Alerts

    2020ರಲ್ಲಿ ನೆಟ್‌ಫ್ಲೆಕ್ಸ್, ಅಮೇಜಾನ್, ಹಾಟ್‌ಸ್ಟಾರ್ ಹೂಡಿದ ಬಂಡವಾಳ ಎಷ್ಟು?

    |

    ನೆಟ್‌ಫ್ಲೆಕ್ಸ್, ಅಮೇಜಾನ್ ಪ್ರೈಮ್, ಡಿಸ್ನಿ ಹಾಟ್‌ಸ್ಟಾರ್ ಹಾಗೂ ಇನ್ನಿತರ ಕೆಲವು ಒಟಿಟಿ ವೇದಿಕೆಗಳು ಬಹಳ ವರ್ಷದಿಂದಲೂ ಚಾಲ್ತಿಯಲ್ಲಿದೆ. ಸ್ಟಾರ್ ನಟರ ಸಿನಿಮಾಗಳು ಯಾವಾಗಲೂ ಥಿಯೇಟರ್‌ನಲ್ಲಿ ಬಿಡುಗಡೆಯಾಗುತ್ತಿತ್ತು. ವೆಬ್ ಸಿರೀಸ್ ಹಾಗೂ ಕೆಲವು ಕಿರುಚಿತ್ರಗಳು ಮಾತ್ರ ಒಟಿಟಿಯ ಟಾರ್ಗೆಟ್ ಆಗಿತ್ತು.

    ಆದ್ರೆ, ಲಾಕ್‌ಡೌನ್ ಆದ್ಮೇಲೆ ಆರೇಳು ತಿಂಗಳು ಚಿತ್ರಮಂದಿರಗಳು ಮುಚ್ಚಿದ್ದವು. ಸಿನಿಮಾ ಸಂಪೂರ್ಣವಾಗಿ ಮುಗಿಸಿ ರಿಲೀಸ್‌ಗೆ ರೆಡಿಯಿದ್ದ ನಿರ್ಮಾಪಕರು ಗೊಂದಲಕ್ಕೆ ಸಿಲುಕಿದರು. ಥಿಯೇಟರ್ ಯಾವಾಗ ಆರಂಭವಾಗುತ್ತೆ ಎನ್ನುವುದರ ಸುಳಿವು ಸಿಗದ ಚಿತ್ರತಂಡಗಳು ಈ ಹಂತದಲ್ಲಿ ಡಿಜಿಟಲ್ ವೇದಿಕೆಯ ಮೊರೆ ಹೋದವು. ಹಾಗ್ನೋಡಿದ್ರೆ, ಇಷ್ಟು ವರ್ಷದಿಂದ 2020ರಲ್ಲೇ ಅತಿ ಹೆಚ್ಚು ಸಿನಿಮಾಗಳು ಒಟಿಟಿಯಲ್ಲಿ ತೆರೆಕಂಡಿವೆ. ಮುಂದೆ ಓದಿ....

    2020: ನೆಟ್‌ಫ್ಲಿಕ್ಸ್‌ನಲ್ಲಿ ಭಾರತೀಯರು ಹೆಚ್ಚು ನೋಡಿದ ಸಿನಿಮಾಗಳಿವು2020: ನೆಟ್‌ಫ್ಲಿಕ್ಸ್‌ನಲ್ಲಿ ಭಾರತೀಯರು ಹೆಚ್ಚು ನೋಡಿದ ಸಿನಿಮಾಗಳಿವು

    ಒಟಿಟಿ ಮೊರೆ ಹೋದ ನಿರ್ಮಾಪಕರು

    ಒಟಿಟಿ ಮೊರೆ ಹೋದ ನಿರ್ಮಾಪಕರು

    ಥಿಯೇಟರ್‌ಗಳು ಇಲ್ಲದೇ ಕಂಗಲಾಗಿದ್ದ ನಿರ್ಮಾಪಕರು ಪರ್ಯಾಯವಾಗಿ ಕಂಡ ನೆಟ್‌ಫ್ಲೆಕ್ಸ್, ಅಮೇಜಾನ್, ಹಾಟ್‌ಸ್ಟಾರ್ ಮೊರೆ ಹೋದರು. ಹಾಕಿದ ಬಂಡವಾಳ ನಷ್ಟವಾಗದಂತಹ ಬೆಲೆಗೆ ಸಿನಿಮಾ ಮಾರಾಟ ಮಾಡಿ ರಿಲೀಸ್ ಮಾಡಿದರು. ಅದರಲ್ಲಿ ಕೆಲವು ಚಿತ್ರಗಳು ಹಿಟ್ ಆದವು, ಇನ್ನು ಕೆಲವು ಪ್ಲಾಫ್ ಆದವು.

    ಈ ವರ್ಷ ಒಟಿಟಿಯಲ್ಲಿ ತೆರೆಕಂಡ ಪ್ರಮುಖ ಚಿತ್ರಗಳು

    ಈ ವರ್ಷ ಒಟಿಟಿಯಲ್ಲಿ ತೆರೆಕಂಡ ಪ್ರಮುಖ ಚಿತ್ರಗಳು

    ಗುಲಾಬೋ ಸಿತಾಬೋ, ಲುಡು, ಲಕ್ಷ್ಮಿ, ಶಕುಂತಲಾ ದೇವಿ, ಗುಂಜಾನ್ ಸಕ್ಸೇನಾ, ದಿಲ್ ಬೆಚರಾ, ಖಾಲಿ ಪೀಲಿ, ದುರ್ಗಮತಿ, ತಮಿಳಿನಲ್ಲಿ ಸೂರರೈ ಪೊಟ್ರು, ತೆಲುಗಿನ 'ವಿ' ಸಿನಿಮಾ ಸೇರಿದಂತೆ ಹಲವು ಚಿತ್ರಗಳು ನೆಟ್‌ಫ್ಲೆಕ್ಸ್, ಅಮೇಜಾನ್, ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗಿದೆ. ಈ ಹಿಂದಿನ ವರ್ಷಗಳಿಗಿಂತ ಈ ವರ್ಷವೇ ಹೆಚ್ಚು ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಿದೆ.

    ಈ ವರ್ಷ ನೆಟ್‌ಫ್ಲೆಕ್ಸ್ & ಅಮೇಜಾನ್‌ನಲ್ಲಿ ತೆರೆಕಂಡ ಹಿಂದಿ ಚಿತ್ರಗಳುಈ ವರ್ಷ ನೆಟ್‌ಫ್ಲೆಕ್ಸ್ & ಅಮೇಜಾನ್‌ನಲ್ಲಿ ತೆರೆಕಂಡ ಹಿಂದಿ ಚಿತ್ರಗಳು

    2020ರಲ್ಲಿ ಒಟಿಟಿ ವೇದಿಕೆಗಳ ಬಂಡವಾಳ ಎಷ್ಟಿದೆ?

    2020ರಲ್ಲಿ ಒಟಿಟಿ ವೇದಿಕೆಗಳ ಬಂಡವಾಳ ಎಷ್ಟಿದೆ?

    ಈ ವರ್ಷ ನೆಟ್‌ಫ್ಲೆಕ್ಸ್, ಅಮೇಜಾನ್ ಪ್ರೈಮ್, ಡಿಸ್ನಿ ಹಾಟ್‌ಸ್ಟಾರ್ ಚಾನಲ್‌ಗಳು ಭಾರತದಲ್ಲಿ 3800 ಕೋಟಿ ($520 Million) ಬಂಡವಾಳ ಹೂಡಿದೆ ಎಂದು ದಕ್ಷಿಣ ಭಾರತದ ಖ್ಯಾತ ವಿಶ್ಲೇಷಕ ರಮೇಶ್ ಬಾಲ ತಮ್ಮ ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ.

    ಒಟಿಟಿ ಎಂಬ ಕಾರ್ಪೋರೇಟ್ ದೈತ್ಯರ ಷಡ್ಯಂತ್ರ: ಭಾಗ-3ಒಟಿಟಿ ಎಂಬ ಕಾರ್ಪೋರೇಟ್ ದೈತ್ಯರ ಷಡ್ಯಂತ್ರ: ಭಾಗ-3

    ಒಟಿಟಿಯಲ್ಲಿ ತೆರೆಕಂಡ ಕನ್ನಡ ಸಿನಿಮಾಗಳು

    ಒಟಿಟಿಯಲ್ಲಿ ತೆರೆಕಂಡ ಕನ್ನಡ ಸಿನಿಮಾಗಳು

    ಕಳೆದ ವರ್ಷಗಳಿಗೆ ಹೋಲಿಸಿಕೊಂಡರೆ ಕನ್ನಡದ ಕಮರ್ಷಿಯಲ್ ಚಿತ್ರಗಳು ಒಟಿಟಿಯಲ್ಲಿ ತೆರೆಕಂಡಿರುವುದು ಬಹಳ ಅಪರೂಪ. ಆದ್ರೆ, ಲಾಕ್‌ಡೌನ್‌ ಕಾರಣ ಈ ವರ್ಷ ಕನ್ನಡದ ಚಿತ್ರಗಳು ಒಟಿಟಿ ಮೊರೆ ಹೋಗಿದ್ದವು. ಪುನೀತ್ ರಾಜ್ ಕುಮಾರ್ ನಿರ್ಮಾಣದ 'ಲಾ' ಸಿನಿಮಾ, ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ಭೀಮಸೇನಾ ನಳಮಹಾರಾಜ ಹಾಗೂ ದ್ಯಾನಿಶ್ ಸೇಠ್ ನಟಿಸಿದ್ದ ಫ್ರೆಂಚ್ ಬಿರಿಯಾನಿ ಚಿತ್ರಗಳು ಒಟಿಟಿಯಲ್ಲಿ ತೆರೆಕಂಡಿದ್ದವು.

    English summary
    In 2020, Netflix, Amazon and Hotstar have invested $520 Million [₹ 3,800 Crs] for content in India.
    Friday, December 25, 2020, 8:56
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X