For Quick Alerts
  ALLOW NOTIFICATIONS  
  For Daily Alerts

  ಹದಿನಾರು ತೆಲುಗು ಸಿನಿಮಾಗಳ ಖರೀದಿಸಿದ ನೆಟ್‌ಫ್ಲಿಕ್ಸ್‌! ಯಾವುವವು?

  By ಫಿಲ್ಮಿಬೀಟ್ ಡೆಸ್ಕ್
  |

  ನೆಟ್‌ಫ್ಲಿಕ್ಸ್‌ ಒಟಿಟಿಗೆ ದಕ್ಷಿಣ ಭಾರತದ ಕಂಟೆಂಟ್‌ ಬಗ್ಗೆ ಆಸಕ್ತಿ ಕಡಿಮೆ ಅದೇನಿದ್ದರೂ ಬಾಲಿವುಡ್ ಹಾಗೂ ಹಾಲಿವುಡ್ ಕಂಟೆಂಟ್ ಗೆ ಮಾತ್ರವೇ ಪ್ರಾಧಾನ್ಯತೆ ನೀಡುತ್ತದೆ ಎಂಬ ಮಾತಿತ್ತು.

  ಆದರೆ ಈಗ ಬಾಲಿವುಡ್ ಅನ್ನು ದಕ್ಷಿಣದ ಸಿನಿಮಾಗಳು ಹಿಂದಿಕ್ಕಿ ಮುನ್ನುಗ್ಗುತ್ತಿದ್ದು ನೆಟ್‌ಫ್ಲಿಕ್ಸ್‌ ಸಹ ತನ್ನ ಕ್ರಿಯಾಯೋಜನೆಯನ್ನು ಬದಲಾಯಿಸಿಕೊಂಡಿದೆ. ಇತ್ತೀಚೆಗೆ ದಕ್ಷಿಣದ ಸಿನಿಮಾಗಳ ಕಡೆ ಹೆಚ್ಚಾಗಿ ಗಮನ ವಹಿಸುತ್ತಿದೆ ನೆಟ್‌ಫ್ಲಿಕ್ಸ್‌.

  ಇತ್ತೀಚೆಗೆ ತಮಿಳು, ತೆಲುಗು, ಮಲಯಾಳಂ ಸಿನಿಮಾಗಳನ್ನು ತನ್ನ ವೇದಿಕೆಯಲ್ಲಿ ಬಿಡುಗಡೆ ಮಾಡುತ್ತಿರುವ ನೆಟ್‌ಫ್ಲಿಕ್ಸ್‌ ಅದರಲ್ಲಿಯೂ ತೆಲುಗು ಕಂಟೆಂಟ್‌ ಮೇಲೆ ಕೋಟ್ಯಂತರ ಹಣ ಬಂಡವಾಳ ಹೂಡಿದೆ.

  ಸ್ವತಃ ನೆಟ್‌ಫ್ಲಿಕ್ಸ್‌ ಅನೌನ್ಸ್‌ ಮಾಡಿರುವಂತೆ ಬರೋಬ್ಬರಿ 16 ತೆಲುಗು ಸಿನಿಮಾಗಳನ್ನು ನೆಟ್‌ಫ್ಲಿಕ್ಸ್‌ ಬಿಡುಗಡೆ ಮಾಡುತ್ತಿದೆ. ಹೊಸದಾಗಿ ಬಿಡುಗಡೆ ಆದ ಸಿನಿಮಾಗಳು ಮಾತ್ರವೇ ಅಲ್ಲದೆ, ಇನ್ನೂ ಬಿಡುಗಡೆ ಆಗದ ತೆಲುಗು ಸಿನಿಮಾಗಳೂ ಸಹ ಈ ಪಟ್ಟಿಯಲ್ಲಿ ಸೇರಿವೆ.

  ಚಿತ್ರೀಕರಣ ಚಾಲ್ತಿಯಲ್ಲಿರುವ ಮಹೇಶ್ ಬಾಬು-ತ್ರಿವಿಕ್ರಮ್ ಸಿನಿಮಾ, ಇತ್ತೀಚೆಗಷ್ಟೆ ಚಿತ್ರೀಕರಣ ಮುಗಿಸಿರುವ ನಾನಿ ನಟನೆಯ 'ದಸರಾ' ಸಿನಿಮಾ, ಚಿತ್ರೀಕರಣ ಈಗಷ್ಟೆ ಪ್ರಾರಂಭ ಮಾಡಿರುವ ಅನುಷ್ಕಾ ಶೆಟ್ಟಿಯ ಹೊಸ ಸಿನಿಮಾ, ಇನ್ನೂ ಚಿತ್ರೀಕರಣ ಆರಂಭಿಸದ ಚಿರಂಜೀವಿ ಹಾಗೂ ಕೀರ್ತಿ ಸುರೇಶ್ ನಟನೆಯ ಭೋಲಾ ಶಂಕರ್, ಸೇರಿದಂತೆ ಈಗಾಗಲೇ ಬಿಡುಗಡೆ ಆಗಿ ಹಿಟ್ ಆಗಿರುವ ರವಿತೇಜ, ಕನ್ನಡತಿ ಶ್ರೀಲೀಲಾ ನಟನೆಯ 'ಧಮಾಕಾ', ನಿಖಿಲ್ ಹಾಗೂ ಅನುಪಮಾ ಪರಮೇಶ್ವರನ್ ನಟನೆಯ 18 ಪೇಜಸ್, ಟಿಲ್ಲು 2, 'ಕಾರ್ತಿಕೇಯ 8', 'ಮೀಟರ್' ಇನ್ನೂ ಹಲವು ಸಿನಿಮಾಗಳನ್ನು ನೆಟ್‌ಫ್ಲಿಕ್ಸ್ ಖರೀದಿಸಿದ್ದು, ಒಂದೊಂದಾಗಿ ಸ್ಟ್ರೀಮಿಂಗ್ ಆರಂಭಿಸಲಿದೆ.

  ನೆಟ್‌ಫ್ಲಿಕ್ಸ್‌ ಒಟಿಟಿಯು ಕನ್ನಡ ಸಿನಿಮಾಗಳ ಬಗ್ಗೆ ಇನ್ನೂ ತನ್ನ ನಿರ್ಲಕ್ಷ್ಯ ಭಾವ ಮುಂದುವರೆಸಿದೆ. ಕನ್ನಡದ 'ಕಾಂತಾರ' ಸಿನಿಮಾವನ್ನು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಮಾಡಲಾಗಿದೆಯಾದರೂ ಇನ್ನಾವುದೇ ಪ್ರಮುಖ ಕನ್ನಡ ಸಿನಿಮಾವನ್ನು ನೆಟ್‌ಫ್ಲಿಕ್ಸ್ ಪ್ರದರ್ಶಿಸುತ್ತಿಲ್ಲ. ಕನ್ನಡ ಸಿನಿಮಾಗಳು ಬಹುತೇಕ ಅಮೆಜಾನ್ ಪ್ರೈಂ, ಜೀ 5 ಹಾಗೂ ವೂಟ್‌ನಲ್ಲಿ ಪ್ರದರ್ಶಿತಗೊಳ್ಳುತ್ತಿವೆ.

  English summary
  Netflix announce 16 Telugu movies including Mahesh Babu and Chiranjeevi's unreleased movies.
  Monday, January 16, 2023, 19:40
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X