twitter
    For Quick Alerts
    ALLOW NOTIFICATIONS  
    For Daily Alerts

    ಕ್ಷಮೆ ಕೇಳಿ ಸಿನಿಮಾ ಪೋಸ್ಟರ್‌ ಹಿಂಪಡೆದ ನೆಟ್‌ಫ್ಲಿಕ್ಸ್: ಅಂಥಹದ್ದೇನಿತ್ತು ಅದರಲ್ಲಿ?

    |

    ಒಟಿಟಿ ದೈತ್ಯ ನೆಟ್‌ಫ್ಲಿಕ್ಸ್‌ ವಿರುದ್ಧ ಕೆಲವು ದಿನಗಳಿಂದ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಿನಿಮಾ ಒಂದನ್ನು ಒಟಿಟಿ ಫ್ಲಾಟ್‌ಫಾರ್ಮ್‌ನಿಂದ ತೆಗೆಯಬೇಕು ಎಂದು ಒತ್ತಾಯಿಸಿ ಪಿಟಿಶನ್ ಸಹ ಸಹಿ ಮಾಡಿದ್ದಾರೆ.

    Recommended Video

    ಬ್ರಹ್ಮ ಚಿತ್ರದಲ್ಲಿನ Upendra Pranitha ಮುಂಬೈನ ಕ್ಲಬ್‌ನಲ್ಲಿ ಹಾಡಿನ ಚಿತ್ರೀಕರಣ | Filmibeat Kannada

    ವಿಶ್ವದಾದ್ಯಂತ ಜನರ ಒತ್ತಾಯಕ್ಕೆ ಮಣಿದಿರುವ ನೆಟ್‌ಫ್ಲಿಕ್ಸ್ ಕ್ಷಮಾಪಣೆ ಕೇಳುವ ಜೊತೆಗೆ ಸಿನಿಮಾದ ಪೋಸ್ಟರ್‌ ಅನ್ನು ಹಿಂಪಡೆದಿದೆ. ಆದರೆ ಆ ಸಿನಿಮಾದ ಪೋಸ್ಟರ್‌ನಲ್ಲಿ ಅಂತಹುದ್ದೇನಿತ್ತು? ಎಂಬುದು ಕುತೂಹಲ ಕೆರಳಿಸಿದೆ.

    'ಮನಿ ಹೈಸ್ಟ್' ಪ್ರಿಯರಿಗೆ ಆಘಾತಕಾರಿ ಸುದ್ದಿ: ಮುಂದಕ್ಕಿಲ್ಲ ಕಳ್ಳ-ಪೊಲೀಸ್ ಆಟ'ಮನಿ ಹೈಸ್ಟ್' ಪ್ರಿಯರಿಗೆ ಆಘಾತಕಾರಿ ಸುದ್ದಿ: ಮುಂದಕ್ಕಿಲ್ಲ ಕಳ್ಳ-ಪೊಲೀಸ್ ಆಟ

    ಫ್ರೆಂಚ್ ಸಿನಿಮಾ 'ಕ್ಯೂಟೀಸ್' (ಫ್ರೆಂಚ್ ಹೆಸರು ಮಿಗ್ನೋನೆಸ್) ಕುರಿತು ಈ ವಿವಾದ ಎದ್ದಿತ್ತು. ಇನ್ನೂ ಬಿಡುಗಡೆ ಆಗದ ಈ ಸಿನಿಮಾದ ಪೋಸ್ಟರ್ ಒಂದನ್ನು ಜಾಹೀರಾತಿಗಾಗಿ ನೆಟ್‌ಫ್ಲಿಕ್ಸ್‌ ಪ್ರದರ್ಶಿಸಿತ್ತು. ಆದರೆ ಆ ಪೋಸ್ಟರ್ ಸಾಕಷ್ಟು ವಿವಾದ ಹುಟ್ಟುಹಾಕಿತು.

    ಪೋಸ್ಟರ್‌ನಲ್ಲಿರುವಂತೆ ಸಣ್ಣ ವಯಸ್ಸಿನ ಹೆಣ್ಣುಮಕ್ಕಳು ಮಾದಕವಾದ ನೃತ್ಯ ಮಾಡುತ್ತಿದ್ದಾರೆ. ಆ ನಾಲ್ವರು ಮಕ್ಕಳ ಭಾವ ಭಂಗಿಗಳು ವಯಸ್ಕರ ಭಾವ, ಭಂಗಿಗಳಿಂತಿವೆ. ಮಕ್ಕಳಿಂದ 'ಸೆಕ್ಸಯುಲ್ ಅಪೀಲ್‌'ಗೆ ಬಳಸಿಕೊಳ್ಳುವುದು ಅಕ್ಷಮ್ಯ ಎಂದು ಜನರು ಸಿಟ್ಟು ಹೊರಹಾಕಿದ್ದಾರೆ.

    ಸೆಪ್ಟೆಂಬರ್ 9 ಕ್ಕೆ ಬಿಡುಗಡೆ ಆಗಲಿರುವ 'ಕ್ಯೂಟೀಸ್'

    ಸೆಪ್ಟೆಂಬರ್ 9 ಕ್ಕೆ ಬಿಡುಗಡೆ ಆಗಲಿರುವ 'ಕ್ಯೂಟೀಸ್'

    ಫ್ರೆಂಚ್ ಸಿನಿಮಾ 'ಕ್ಯೂಟೀಸ್' ನೆಟ್‌ಫ್ಲಿಕ್ಸ್‌ನಲ್ಲಿ ಸೆಪ್ಟೆಂಬರ್ 9 ಕ್ಕೆ ಬಿಡುಗಡೆ ಆಗಲಿದೆ. ಹಾಗಾಗಿ ಸಿನಿಮಾದ ಪೋಸ್ಟರ್ ಅನ್ನು ಜಾಹೀರಾತಿಗಾಗಿ ಹಂಚಿಕೊಂಡಿತ್ತು ನೆಟ್‌ಫ್ಲಿಕ್ಸ್‌. ಅದರ ವಿರುದ್ಧ ಆಕ್ರೋಶ ಕೇಳಿಬಂದ ಕಾರಣ ಇದೀಗ ಪೋಸ್ಟರ್ ಅನ್ನು ಹಿಂಪಡೆದಿದೆ. ಸಿನಿಮಾವನ್ನು ಹಿಂಪಡೆದಿಲ್ಲ.

    ಮಕ್ಕಳ ವಿಭಾಗದಲ್ಲಿ ಪ್ರದರ್ಶಿಸಲಿತ್ತು ನೆಟ್‌ಫ್ಲಿಕ್ಸ್

    ಮಕ್ಕಳ ವಿಭಾಗದಲ್ಲಿ ಪ್ರದರ್ಶಿಸಲಿತ್ತು ನೆಟ್‌ಫ್ಲಿಕ್ಸ್

    'ಕ್ಯೂಟೀಸ್' ಸಿನಿಮಾವನ್ನು ನೆಟ್‌ಫ್ಲಿಕ್ಸ್‌ನ ಮಕ್ಕಳ ವಿಭಾಗದಲ್ಲಿ ಹಾಕಲು ನೆಟ್‌ಫ್ಲಿಕ್ಸ್ ನಿರ್ಧರಿಸಿತ್ತು. ಆದರೆ ಅದನ್ನು ಬದಲಾಯಿಸಿರುವ ನೆಟ್‌ಫ್ಲಿಕ್ಸ್ ವಯಸ್ಕರ ವಿಭಾಗದಲ್ಲಿ ಸಿನಿಮಾವನ್ನು ಪ್ರದರ್ಶಿಸಲಿದೆ.

    ಮಹೇಶ್ ಬಾಬು- ಜೂ. ಎನ್‌ಟಿಆರ್ ಫ್ಯಾನ್ಸ್ ಕಿತ್ತಾಟಕ್ಕೆ ಕಾರಣವಾಯ್ತು ಒಂದು ಡೈಲಾಗ್!ಮಹೇಶ್ ಬಾಬು- ಜೂ. ಎನ್‌ಟಿಆರ್ ಫ್ಯಾನ್ಸ್ ಕಿತ್ತಾಟಕ್ಕೆ ಕಾರಣವಾಯ್ತು ಒಂದು ಡೈಲಾಗ್!

    ತುಂಡುಬಟ್ಟೆಯಲ್ಲಿ ಬಾಲಕಿಯರು

    ತುಂಡುಬಟ್ಟೆಯಲ್ಲಿ ಬಾಲಕಿಯರು

    ಸಿನಿಮಾದ ಪೋಸ್ಟರ್‌ ನಲ್ಲಿ ನಾಲ್ವರು ಬಾಲಕಿಯರು ತುಂಡು ಬಟ್ಟೆ ಧರಿಸಿ, ಅಂಗಾಂಗ ಪ್ರದರ್ಶಿಸುತ್ತಿರುವ ಜೊತೆಗೆ ಲೈಂಗಿಕತೆ ಇಂಗಿತವ್ಯಕ್ತಪಡಿಸುವ ಭಂಗಿಗಳನ್ನು ಪ್ರದರ್ಶಿಸುತ್ತಿದ್ದಾರೆ. ಈ ಪೋಸ್ಟರ್‌ಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು.

    ಪ್ರಶಸ್ತಿ ವಿಜೇತ ಸಿನಿಮಾ ಕ್ಯೂಟೀಸ್

    ಪ್ರಶಸ್ತಿ ವಿಜೇತ ಸಿನಿಮಾ ಕ್ಯೂಟೀಸ್

    ವಿವಾದಕ್ಕೆ ಈಡಾಗಿರುವ ಕ್ಯೂಟೀಸ್ ಸಿನಿಮಾ 'ಸನ್‌ಡಾನ್ಸ್' ನಲ್ಲಿ ಪ್ರಶಸ್ತಿ ವಿಜೇತ ಸಿನಿಮಾ ಆಗಿದೆ. ನಾಲ್ವರು ಬಾಲಕಿಯರ ಕತೆಯನ್ನು ಸಿನಿಮಾ ಒಳಗೊಂಡಿದೆ. ಇದೀಗ ನೆಟ್‌ಫ್ಲಿಕ್ಸ್ ಕ್ಷಮಾಪಣೆ ಕೇಳಿದ್ದು ಸಿನಿಮಾದ ಪೋಸ್ಟರ್ ಅನ್ನು ಬದಲಾಯಿಸಿದೆ.

    ಹತ್ಯೆಯಾಗಿ 16 ವರ್ಷ ಕಳೆದರೂ ಕಾಡುಗಳ್ಳ ವೀರಪ್ಪನ್‌ಗೆ ಭಾರಿ ಬೇಡಿಕೆ!ಹತ್ಯೆಯಾಗಿ 16 ವರ್ಷ ಕಳೆದರೂ ಕಾಡುಗಳ್ಳ ವೀರಪ್ಪನ್‌ಗೆ ಭಾರಿ ಬೇಡಿಕೆ!

    English summary
    Netflix apologies for posting inappropriate poster of a movie called cuties. It took back the poster.
    Friday, August 21, 2020, 17:49
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X