For Quick Alerts
  ALLOW NOTIFICATIONS  
  For Daily Alerts

  ಹೊಸ ದಾಖಲೆ ಬರೆಯಲು ಸಜ್ಜಾಗಿದೆ ದುಲ್ಕರ್ ಸಲ್ಮಾನ್ ಸಿನಿಮಾ

  |

  ವರ್ಷಕ್ಕೆ ಎರಡು, ಮೂರು, ಒಮ್ಮೊಮ್ಮೆ ನಾಲ್ಕು ಸಿನಿಮಾಗಳಲ್ಲಿ ನಟಿಸುತ್ತಿದ್ದರು ಮಲಯಾಳಂ ನಟ ದುಲ್ಕರ್ ಸಲ್ಮಾನ್. ಆದರೆ ಈಗ ಅವರು ನಟಿಸಿರುವ ಸಿನಿಮಾ ಒಂದು ಬಿಡುಗಡೆ ಆಗಿ ಒಂದೂವರೆ ವರ್ಷವಾಗಿದೆ.

  ಇದೀಗ ದುಲ್ಕರ್ ನಟಿಸಿರುವ ಎರಡು ಸಿನಿಮಾಗಳು ಬಿಡುಗಡೆಗೆ ತಯಾರಾಗಿವೆ. ಅದರಲ್ಲಿ ಮೊದಲನೇಯದ್ದು 'ಕುರುಪ್'. ಒಬ್ಬ ಬುದ್ಧಿವಂತ ಅಪರಾಧಿಯೊಬ್ಬನ ಕ್ರೈಂ ಕತೆಯನ್ನು ಆಧರಿಸಿ ಮಾಡಿರುವ ಸಿನಿಮಾ ಇದು. ಈ ಸಿನಿಮಾಕ್ಕಾಗಿ ಮಲಯಾಳಂ ಮಾತ್ರವೇ ಅಲ್ಲದೆ ತೆಲುಗು, ತಮಿಳು, ಕನ್ನಡ ಸಿನಿಪ್ರೇಮಿಗಳು ಸಹ ಕಾತರದಿಂದ ಕಾಯುತ್ತಿದ್ದಾರೆ.

  'ಕುರುಪ್' ಸಿನಿಮಾ ಬಿಡುಗಡೆಗೆ ತಯಾರಾಗುತ್ತಿದ್ದಂತೆ ಕೊರೊನಾ ಪ್ರಕರಣಗಳು ದೇಶದಾದ್ಯಂತ ಹೆಚ್ಚಳವಾಗಿವೆ. ಹಾಗಾಗಿ ಸಿನಿಮಾವನ್ನು ಚಿತ್ರಮಂದಿರದಲ್ಲಿ ಬಿಡುಗಡೆ ಮಾಡುವ ಬದಲಿಗೆ ಒಟಿಟಿಯಲ್ಲಿ ಬಿಡುಗಡೆ ಮಾಡಲು ಮಾತುಕತೆ ನಡೆಸಿದೆ ಚಿತ್ರತಂಡ.

  ಅಮೆಜಾನ್ ಪ್ರೈಂ ಹಾಗೂ ನೆಟ್‌ಫ್ಲಿಕ್ಸ್ ಎರಡೂ ಒಟಿಟಿಗಳ ಜೊತೆಗೆ ಸಿನಿಮಾ ತಂಡ ಚರ್ಚೆ ನಡೆಸುತ್ತಿದ್ದು ನೆಟ್‌ಫ್ಲಿಕ್ಸ್‌ ಜೊತೆಗೆ ಡೀಲ್ ಅಂತಿಮಗೊಳಿಸಿದ್ದಾರೆ ಎನ್ನಲಾಗುತ್ತಿದೆ.

  ನೆಟ್‌ಫ್ಲಿಕ್ಸ್‌ ಜೊತೆಗೆ ಒಪ್ಪಂದ?

  ನೆಟ್‌ಫ್ಲಿಕ್ಸ್‌ ಜೊತೆಗೆ ಒಪ್ಪಂದ?

  ಮಲಯಾಳಂ ಮಾತ್ರವೇ ಅಲ್ಲದೆ ದಕ್ಷಿಣ ಭಾರತ ಸಿನಿಮಾರಂಗದಲ್ಲಿಯೇ ಅತಿ ಹೆಚ್ಚು ಮೊತ್ತವನ್ನು ದುಲ್ಕರ್ ಸಲ್ಮಾನ್ ನಟನೆಯ 'ಕುರುಪ್' ಸಿನಿಮಾಕ್ಕೆ ನೆಟ್‌ಫ್ಲಿಕ್ಸ್ ನೀಡುತ್ತಿದೆ. ವಿಜಯ್ ನಟನೆಯ 'ಮಾಸ್ಟರ್' ಸಿನಿಮಾಕ್ಕೆ ದೊಡ್ಡ ಮೊತ್ತವನ್ನು ಅಮೆಜಾನ್ ಪ್ರೈಂ ನೀಡಿತ್ತು, ಅದಕ್ಕೂ ಹೆಚ್ಚು ಮೊತ್ತವನ್ನು ನೆಟ್‌ಫ್ಲಿಕ್ಸ್‌ 'ಕುರುಪ್‌' ಸಿನಿಮಾಕ್ಕೆ ಆಫರ್ ಮಾಡಿದೆ.

  'ಮಾಸ್ಟರ್‌' ಸಿನಿಮಾಕ್ಕಿಂತಲೂ ಹೆಚ್ಚಿನ ಮೊತ್ತ

  'ಮಾಸ್ಟರ್‌' ಸಿನಿಮಾಕ್ಕಿಂತಲೂ ಹೆಚ್ಚಿನ ಮೊತ್ತ

  'ಮಾಸ್ಟರ್' ಸಿನಿಮಾಕ್ಕೆ 36 ಕೋಟಿ ಹಣವನ್ನು ಅಮೆಜಾನ್ ಪ್ರೈಂ ನೀಡಿತ್ತು. ಆ ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆ ಆದ ಬಳಿಕ ಅಮೆಜಾನ್‌ನಲ್ಲಿ ತೆರೆಕಂಡಿತ್ತು. ಆದರೆ 'ಕುರುಪ್' ಸಿನಿಮಾ ನೇರವಾಗಿ ಒಟಿಟಿಯಲ್ಲಿ ಬಿಡುಗಡೆ ಆಗಲಿದ್ದು, ಈ ಸಿನಿಮಾಕ್ಕೆ 40 ಕೋಟಿ ನೀಡುತ್ತಿದೆ ನೆಟ್‌ಫ್ಲಿಕ್ಸ್‌!

  ಅಪರಾಧಿಯೊಬ್ಬನ ನಿಜ ಜೀವನದ ಕುರಿತ ಸಿನಿಮಾ

  ಅಪರಾಧಿಯೊಬ್ಬನ ನಿಜ ಜೀವನದ ಕುರಿತ ಸಿನಿಮಾ

  ಕುರುಪ್ ಅಲಿಯಾಸ್ ಸುಕುಮಾರ ಕುರುಪ್ ಎಂಬಾತನೊಬ್ಬ ವಿಮೆ ಸಂಸ್ಥೆಗೆ ಮೋಸ ಮಾಡಿ ಹಣ ಹೊಡೆಯಲು ಚಾಕೋ ಎಂಬಾತನನ್ನು ಕೊಲೆ ಮಾಡುತ್ತಾನೆ. ಆ ಕೊಲೆ, ಅದರ ಸುತ್ತ ನಡೆವ ತನಿಖೆ ಹಾಗೂ ಸುಮಾರು 3 ದಶಕಗಳ ಕಾಲ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ ಸುಕುಮಾರ ಕುರುಪ್ ಕತೆಯನ್ನು ಸಿನಿಮಾ ಒಳಗೊಂಡಿದೆ.

  ಚಾಕೋ ಪಾತ್ರದಲ್ಲಿ ಟೋವಿನೊ ಥಾಮಸ್

  ಚಾಕೋ ಪಾತ್ರದಲ್ಲಿ ಟೋವಿನೊ ಥಾಮಸ್

  'ಕುರುಪ್' ಸಿನಿಮಾವನ್ನು ದುಲ್ಕರ್ ಅವರೇ ನಿರ್ಮಾಣ ಮಾಡಿದ್ದು ಸಿನಿಮಾವನ್ನು ಶ್ರೀನಾಥ್ ರಾಜೇಂದ್ರನ್ ನಿರ್ದೇಶನ ಮಾಡಿದ್ದಾರೆ. ಚಿತ್ರಕತೆ ಬರೆದಿರುವ ಅರವಿಂದ್. ಸಿನಿಮಾದಲ್ಲಿ ಕುರುಪ್ ಪಾತ್ರದಲ್ಲಿ ದುಲ್ಕರ್ ನಟಿಸಿದ್ದಾರೆ. ಚಾಕೋ ಪಾತ್ರದಲ್ಲಿ ಟೋವಿನೊ ಥಾಮಸ್ ನಟಿಸಿದ್ದಾರೆ. ಸಿನಿಮಾದ ನಾಯಕಿ ಶೋಭಿತಾ ದುಲಿಪಲಾ, ತನಿಖಾಧಿಕಾರಿ ಪಾತ್ರದಲ್ಲಿ ಇಂದ್ರಜಿತ್ ಸುಕುಮಾರ್ ನಟಿಸುತ್ತಿದ್ದಾರೆ.

  English summary
  Dulquer Salman's 'Kurup' movie likely to get release on Netflix OTT. Movie got huge money from Netflix.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X