ನೆಟ್‌ಫ್ಲಿಕ್ಸ್‌ ಭಾರತೀಯ ಬಳಕೆದಾರರಿಗೆ ಸಿಹಿ ಸುದ್ದಿ

ವಿಶ್ವದ ಜನಪ್ರಿಯ ಒಟಿಟಿ ನೆಟ್‌ಫ್ಲಿಕ್ಸ್‌ ಭಾರತದ ಬಳಕೆದಾರರ ಮೇಲೆ ವಿಶೇಷವಾಗಿ ಗಮನ ಕೇಂದ್ರೀಕರಿಸಿದೆ. ಭಾರತದ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದಲ್ಲಿ ಬಂಡವಾಳ ಹೂಡಿರುವ ನೆಟ್‌ಫ್ಲಿಕ್ಸ್‌ ಭಾರತದಲ್ಲಿ ಚಂದಾದಾರರನ್ನು ಹೆಚ್ಚಳ ಮಾಡಿಕೊಳ್ಳಲು ಹಲವು ಯತ್ನಗಳನ್ನು ಮಾಡುತ್ತಲೇ ಬರುತ್ತಿದೆ.

ಇದೀಗ ಭಾರತದ ನೆಟ್‌ಫ್ಲಿಕ್ಸ್‌ ಬಳಕೆದಾರರಿಗೆ ಭರ್ಜರಿ ಸಿಹಿ ಸುದ್ದಿಯನ್ನು ನೆಟ್‌ಫ್ಲಿಕ್ಸ್‌ ನೀಡಿದೆ. ಪ್ರಸ್ತುತ ಭಾರತದಲ್ಲಿ ಜನಪ್ರಿಯವಾಗಿರುವ ಒಟಿಟಿ ಫ್ಲ್ಯಾಟ್‌ಫಾರ್ಮ್‌ಗಳಲ್ಲಿ ಅತ್ಯಂತ ದುಬಾರಿ ಶುಲ್ಕ ಹೊಂದಿರುವುದು ನೆಟ್‌ಫ್ಲಿಕ್ಸ್‌. ಆದರೆ ಇದೀಗ ನೆಟ್‌ಫ್ಲಿಕ್ಸ್‌ ಭಾರತದ ಬಳಕೆದಾರರಿಗೆ ಮಾತ್ರವೆಂದೇ ತಮ್ಮ ಶುಲ್ಕವನ್ನು ಕಡಿತಗೊಳಿಸಿದೆ.

ನೆಟ್‌ಫ್ಲಿಕ್ಸ್‌ ಭಾರತೀಯ ಬಳಕೆದಾರರಿಗಾಗಿ ಮೂರು ಪ್ರಮುಖ ಆಫರ್‌ಗಳನ್ನು ನೀಡಿತ್ತು. 199, 649 ಮತ್ತು 799 ರೂಪಾಯಿಗಳ ತಿಂಗಳ ಯೋಜನೆಗಳು ಚಾಲ್ತಿಯಲ್ಲಿತ್ತು. 799 ಪಾವತಿಸುವವರು ನಾಲ್ಕು ಮಂದಿ ಅಥವಾ ನಾಲ್ಕು ಸಾಧನಗಳಲ್ಲಿ ನೆಟ್‌ಫ್ಲಿಕ್ಸ್‌ ವೀಕ್ಷಿಸಬಹುದಾಗಿತ್ತು. ಇದೀಗ ಈ ಮೂರು ಆಫರ್‌ಗಳನ್ನು ಬದಲಾವಣೆ ಮಾಡಿ ಬೆಲೆಯನ್ನು ಇನ್ನಷ್ಟು ಕಡಿತಗೊಳಿಸಲಾಗಿದೆ.

Netflix Cut Down Its Subscription Price In India

ತಿಂಗಳಿಗೆ 199 ರೂಪಾಯಿ ಇದ್ದ ಯೋಜನೆಯನ್ನು ತಿಂಗಳಿಗೆ 149 ರೂಪಾಯಿ ಮಾಡಲಾಗಿದೆ. ಈ ಪ್ಲ್ಯಾನ್ ಹಾಕಿಸಿಕೊಂಡವರು ಒಬ್ಬರು ಮಾತ್ರವೇ ಒಂದು ತಿಂಗಳು ನೆಟ್‌ಫ್ಲಿಕ್ಸ್‌ನ ಎಲ್ಲ ಶೋ, ಸಿನಿಮಾ ಹಾಗೂ ಡಾಕ್ಯುಮೆಂಟರಿಗಳನ್ನು ನೋಡಬಹುದಾಗಿದೆ.

649 ರೂ. ಪ್ರತಿ ತಿಂಗಳಿಗೆ ಇದ್ದ ಪ್ಲ್ಯಾನ್ ಅನ್ನು 499 ರೂಪಾಯಿಗೆ ಬದಲಾವಣೆ ಮಾಡಲಾಗಿದೆ. ಈ ಯೋಜನೆ ಆಯ್ಕೆ ಮಾಡಿಕೊಂಡವರು ನಾಲ್ಕು ಮಂದಿ ಅಥವಾ ನಾಲ್ಕು ಸಾಧನಗಳಲ್ಲಿ ಫುಲ್ ಎಚ್‌ಡಿ ಕ್ವಾಲಿಟಿಯಲ್ಲಿ ನೆಟ್‌ಫ್ಲಿಕ್ಸ್‌ ಶೋಗಳನ್ನು ನೋಡಬಹುದಾಗಿದೆ.

799 ರೂಪಾಯಿ ಇದ್ದ ಪ್ಲ್ಯಾನ್ ಅನ್ನು 650ಕ್ಕೆ ಇಳಿಕೆ ಮಾಡಿದ್ದು ಈ ಯೋಜನೆಯಲ್ಲಿಯೂ ಸಹ ನಾಲ್ಕು ಮಂದಿ ಅಥವಾ ನಾಲ್ಕು ಮೊಬೈಲ್ ಅಥವಾ ಕಂಪ್ಯೂಟರ್ ಸಾಧನಗಳಲ್ಲಿ ನೆಟ್‌ಫ್ಲಿಕ್ಸ್ ಶೋ, ಸಿನಿಮಾಗಳನ್ನು ಅಲ್ಟ್ರಾ ಎಚ್‌ಡಿ, ಹೈ ರೆಸಲ್ಯೂಷನ್‌ ಗುಣಮಟ್ಟದಲ್ಲಿ ವೀಕ್ಷಣೆ ಮಾಡಬಹುದಾಗಿದೆ.

ಭಾರತದಲ್ಲಿ ನೆಟ್‌ಫ್ಲಿಕ್ಸ್‌ನ ಪ್ರಮುಖ ಪ್ರತಿಸ್ಪರ್ಧಿಯಾಗಿರುವ ಹಾಟ್‌ಸ್ಟಾರ್ ಹಾಗೂ ಅಮೆಜಾನ್‌ಗಳು ತಮ್ಮ ಚಂದಾದಾರಿಕೆ ಶುಲ್ಕದಲ್ಲಿ ಕಡಿತ ಮಾಡಿವೆ. ಹಾಗಾಗಿಯೇ ನೆಟ್‌ಫ್ಲಿಕ್ಸ್‌ ಸಹ ತನ್ನ ಶುಲ್ಕವನ್ನು ಅನಿವಾರ್ಯವಾಗಿ ಕಡಿತಗೊಳಿಸಿದೆ.

ನೆಟ್‌ಫ್ಲಿಕ್ಸ್‌, ಭಾರತದ ಮನರಂಜನಾ ಮಾರುಕಟ್ಟೆ ಮೇಲೆ ಕಣ್ಣಿಟ್ಟಿದ್ದು, ಭಾರತದ ಮೇಲೆ ಸುಮಾರು 35000 ಕೋಟಿ ರುಪಾಯಿಗಳನ್ನು ತೊಡಗಿಸುತ್ತಿದೆ. ಕೆಲವು ತಿಂಗಳ ಹಿಂದಷ್ಟೆ ನೆಟ್‌ಫ್ಲಿಕ್ಸ್‌ನ ಸಿಇಒ ರೀಡ್ ಹ್ಯಾಸ್ಟಿಂಗ್ಸ್ ಭಾರತಕ್ಕೆ ಭೇಟಿ ನೀಡಿ ಕೇಂದ್ರದ ಮಾಹಿತಿ ಮತ್ತು ಪ್ರಸಾರ ಸಚಿವರೊಟ್ಟಿಗೆ ಮಾತುಕತೆ ನಡೆಸಿದ್ದರು. ನೆಟ್‌ಫ್ಲಿಕ್ಸ್‌ ಭಾರತದಲ್ಲಿ ಹೂಡಿಕೆ ಮಾಡಲು ಮೂಲಸೌಕರ್ಯ ಒದಗಿಸಿಕೊಡುವುದಾಗಿ ಹಾಗೂ ಇತರೆ ಸಹಕಾರ ನೀಡುವುದಾಗಿ ಸಚಿವರು ಆಶ್ವಾಸನೆ ನೀಡಿದ್ದಾರೆ ಎನ್ನಲಾಗಿದೆ.

ಭಾರತದಲ್ಲಿ ಹಾಟ್‌ಸ್ಟಾರ್‌ ಅತಿ ದೊಡ್ಡ ಒಟಿಟಿಯಾಗಿದೆ. ಅತಿ ಹೆಚ್ಚು ಚಂದಾದಾರರು ಇರುವುದು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ಗೆ. ಅದರ ನಂತರದ ಸ್ಥಾನ ಅಮೆಜಾನ್ ಪ್ರೈಂ ಅದರ ಬಳಿಕ ನೆಟ್‌ಫ್ಲಿಕ್ಸ್‌. ಆದರೆ ಅತಿ ಹೆಚ್ಚು ಹಣ ಗಳಿಸುತ್ತಿರುವುದು ನೆಟ್‌ಫ್ಲಿಕ್ಸ್‌. ಈ ಮೂರು ಒಟಿಟಿ ಫ್ಲ್ಯಾಟ್‌ಫಾರ್ಮ್‌ಗಳ ಹೊರತಾಗಿ ಜೀ5, ಸೋನಿ ಲಿವ್, ಆಹಾ, ಆಲ್ಟ್ ಬಾಲಾಜಿ, ಎಚ್‌ಬಿಓ, ಆಪಲ್ ಟಿವಿ, ಬಿಗ್‌ಫ್ಲಿಕ್ಸ್, ಊಲು, ನೀಸ್ಟ್ರೀಮ್, ವೂಟ್, ಸನ್‌ನೆಕ್ಸ್ಟ್‌, ಎಂಎಕ್ಸ್ ಪ್ಲೇಯರ್, ಜಿಯೋ ಸಿನಿಮಾ, ಟಿವಿಎಫ್‌ ಪ್ಲೇ ಇನ್ನೂ ಇತರ ಒಟಿಟಿಗಳಿವೆ. ಕನ್ನಡದಲ್ಲಿ ಸಹ ಕೆಲವು ಒಟಿಟಿಗಳು ಕೆಲಸ ಮಾಡುತ್ತಿವೆಯಾದರೂ ಅವು ಹೆಚ್ಚು ಜನಪ್ರಿಯವಾಗಿಲ್ಲ.

More from Filmibeat

English summary
Netflix Cut down its subscription charges for Indian users. Netflix aiming to increase subscribers in India. Netflix investing more than 35000 crore in Indian entertainment market.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X