twitter
    For Quick Alerts
    ALLOW NOTIFICATIONS  
    For Daily Alerts

    ಭಾರತದಲ್ಲಿ ಬೆಲೆ ಇಳಿಸಿ ಅಮೆರಿದಲ್ಲಿ ಬೆಲೆ ಏರಿಸಿದ ನೆಟ್‌ಫ್ಲಿಕ್ಸ್‌: ತಿಂಗಳ ಶುಲ್ಕ ಎಷ್ಟು?

    |

    ಅಂತರಾಷ್ಟ್ರೀಯ ಸಂಸ್ಥೆಗಳ ಮಾರುಕಟ್ಟೆ ಯೋಜನೆಗಳು ಸಾಮಾನ್ಯರ ನಿಲುಕಿಗೆ ದೂರ. ಜನಪ್ರಿಯ ಒಟಿಟಿ ವೇದಿಕೆ ನೆಟ್‌ಫ್ಲಿಕ್ಸ್‌ ಕೆಲವು ದಿನಗಳ ಹಿಂದಷ್ಟೆ ಭಾರತದಲ್ಲಿ ತನ್ನ ಚಂದಾ ಶುಲ್ಕವನ್ನು ದೊಡ್ಡ ಮಟ್ಟದಲ್ಲಿ ಇಳಿಸಿತು. ಇದೀಗ ಅಮೆರಿಕ ಮತ್ತು ಕೆನಡಾದಲ್ಲಿ ಶುಲ್ಕವನ್ನು ದೊಡ್ಡ ಮಟ್ಟದಲ್ಲಿ ಹೆಚ್ಚಿಸಿದೆ.

    ಅಮೆರಿಕದಲ್ಲಿ ನೆಟ್‌ಫ್ಲಿಕ್ಸ್‌ನ ತಿಂಗಳ ಸಾಧಾರಣ ಚಂದಾದಾರಿಕೆ ಪಡೆಯಲು ಕೇವಲ ಒಂದು ಡಾಲರ್ ಪಾವತಿ ಮಾಡಬೇಕಿತ್ತು, ಆದರೆ ಈಗ ಒಂದು ತಿಂಗಳ ಸಾಧಾರಣ ಚಂದಾದಾರಿಕೆ ಪಡೆಯಲು ಬರೋಬ್ಬರಿ 9.99 ಡಾಲರ್ ಸರಿಸುಮಾರು 10 ಡಾಲರ್ ಪಾವತಿಸಬೇಕಿದೆ. ಭಾರತೀಯ ರುಪಾಯಿ ಲೆಕ್ಕಾಚಾರದಲ್ಲಿ 743 ರುಪಾಯಿ ನೀಡಬೇಕಾಗುತ್ತದೆ.

    ನೆಟ್‌ಫ್ಲಿಕ್ಸ್‌ನ ಒಂದು ತಿಂಗಳ ಸ್ಟಾಂಡರ್ಡ್‌ ಯೋಜನೆ 13.99 ಡಾಲರ್‌ನಿಂದ ಎರಡು ಡಾಲರ್ ಹೆಚ್ಚಳವಾಗಿ 15.49 ಡಾಲರ್‌ಗೆ ಏರಿಕೆಯಾಗಿದೆ. ನೆಟ್‌ಫ್ಲಿಕ್ಸ್‌ನ ಒಂದು ತಿಂಗಳ ಪ್ರೀಮಿಯಂ ಚಂದಾದಾರಿಕೆ ಪಡೆಯಲು ಅಮೆರಿಕನ್ನರು 19.99 ಡಾಲರ್ ಪಾವತಿಸಬೇಕು. ಮುಂಚೆ ಈ ಮೊತ್ತ 17.99 ಡಾಲರ್ ಇತ್ತು. ಅಮೆರಿಕದಲ್ಲಿ ಮಾತ್ರವೇ ಅಲ್ಲ ನೆರೆಯ ಕೆನಡಾದಲ್ಲಿಯೂ ಇದೇ ರೀತಿ ಬೆಲೆ ಏರಿಕೆಯನ್ನು ನೆಟ್‌ಫ್ಲಿಕ್ಸ್ ಮಾಡಿದೆ.

    Netflix Hiked Subscription Charges In America And Canada

    ಶುಕ್ರವಾರ ನೆಟ್‌ಫ್ಲಿಕ್ಸ್‌ ಚಂದಾದಾರಿಕೆ ಶುಲ್ಕ ಏರಿಸಿದ್ದು, ಅದೇ ದಿನ ಅಮೆರಿಕದ ಷೇರು ಮಾರುಕಟ್ಟೆಯಲ್ಲಿ ನೆಟ್‌ಫ್ಲಿಕ್ಸ್‌ನ ಷೇರು ಮೌಲ್ಯ 3% ಹೆಚ್ಚಳವಾಗಿದೆ. ಈಗ ನೆಟ್‌ಫ್ಲಿಕ್ಸ್‌ನ ಪ್ರತಿ ಷೇರಿನ ಮೌಲ್ಯ 525 ಡಾಲರ್ ಇದೆ. ಶುಕ್ರವಾರ ನೆಟ್‌ಫ್ಲಿಕ್ಸ್‌ ಷೇರಿನ ಮೌಲ್ಯ 538 ಡಾಲರ್ ತಲುಪಿತ್ತು. ಭಾರತದ ರೂಪಾಯಿ ಲೆಕ್ಕದಲ್ಲಿ 40,019 ರುಪಾಯಿ.

    ನೆಟ್‌ಫ್ಲಿಕ್ಸ್‌ ಕಳೆದ ತಿಂಗಳು (ಡಿಸೆಂಬರ್‌)ನಲ್ಲಿ ಭಾರತದಲ್ಲಿ ನೆಟ್‌ಫ್ಲಿಕ್ಸ್‌ ತಿಂಗಳ ಶುಲ್ಕವನ್ನು ಭಾರಿಯಾಗಿ ಇಳಿಕೆ ಮಾಡಿದೆ. ತಿಂಗಳಿಗೆ 199 ರೂಪಾಯಿ ಇದ್ದ ಯೋಜನೆಯನ್ನು ತಿಂಗಳಿಗೆ 149 ರೂಪಾಯಿ ಮಾಡಲಾಗಿದೆ. ಈ ಪ್ಲ್ಯಾನ್ ಹಾಕಿಸಿಕೊಂಡವರು ಒಬ್ಬರು ಮಾತ್ರವೇ ಒಂದು ತಿಂಗಳು ನೆಟ್‌ಫ್ಲಿಕ್ಸ್‌ನ ಎಲ್ಲ ಶೋ, ಸಿನಿಮಾ ಹಾಗೂ ಡಾಕ್ಯುಮೆಂಟರಿಗಳನ್ನು ನೋಡಬಹುದಾಗಿದೆ. 649 ರೂ. ಪ್ರತಿ ತಿಂಗಳಿಗೆ ಇದ್ದ ಪ್ಲ್ಯಾನ್ ಅನ್ನು 499 ರೂಪಾಯಿಗೆ ಬದಲಾವಣೆ ಮಾಡಲಾಗಿದೆ. ಈ ಯೋಜನೆ ಆಯ್ಕೆ ಮಾಡಿಕೊಂಡವರು ನಾಲ್ಕು ಮಂದಿ ಅಥವಾ ನಾಲ್ಕು ಸಾಧನಗಳಲ್ಲಿ ಫುಲ್ ಎಚ್‌ಡಿ ಕ್ವಾಲಿಟಿಯಲ್ಲಿ ನೆಟ್‌ಫ್ಲಿಕ್ಸ್‌ ಶೋಗಳನ್ನು ನೋಡಬಹುದಾಗಿದೆ. 799 ರೂಪಾಯಿ ಇದ್ದ ಪ್ಲ್ಯಾನ್ ಅನ್ನು 650ಕ್ಕೆ ಇಳಿಕೆ ಮಾಡಿದ್ದು ಈ ಯೋಜನೆಯಲ್ಲಿಯೂ ಸಹ ನಾಲ್ಕು ಮಂದಿ ಅಥವಾ ನಾಲ್ಕು ಮೊಬೈಲ್ ಅಥವಾ ಕಂಪ್ಯೂಟರ್ ಸಾಧನಗಳಲ್ಲಿ ನೆಟ್‌ಫ್ಲಿಕ್ಸ್ ಶೋ, ಸಿನಿಮಾಗಳನ್ನು ಅಲ್ಟ್ರಾ ಎಚ್‌ಡಿ, ಹೈ ರೆಸಲ್ಯೂಷನ್‌ ಗುಣಮಟ್ಟದಲ್ಲಿ ವೀಕ್ಷಣೆ ಮಾಡಬಹುದಾಗಿದೆ.

    ಭಾರತದ ಮನೊರಂಜನಾ ಮಾರುಕಟ್ಟೆ ಮೇಲೆ ನೆಟ್‌ಫ್ಲಿಕ್ಸ್ ಕಣ್ಣು ಹಾಕಿದೆ. ಹಾಗಾಗಿ ಭಾರತದ ಹೆಚ್ಚಾನುಹೆಚ್ಚು ಬಳಕೆದಾರರನ್ನು ಆಕರ್ಷಿಸಲೆಂದು ನೆಟ್‌ಫ್ಲಿಕ್ಸ್ ಶುಲ್ಕವನ್ನು ಇಳಿಸಿದೆ. ಅದು ಮಾತ್ರವೇ ಅಲ್ಲದೆ ಭಾರತದ ಕಂಟೆಂಟ್ ಮೇಲೆ ಸಾವಿರಾರು ಕೋಟಿ ಬಂಡವಾಳವನ್ನು ಸಹ ನೆಟ್‌ಫ್ಲಿಕ್ಸ್ ಹೂಡಿಕೆ ಮಾಡುತ್ತಿದೆ. ಕಳೆದ ವರ್ಷ ಭಾರತಕ್ಕೆ ಬಂದಿದ್ದ ನೆಟ್‌ಫ್ಲಿಕ್ಸ್‌ ಸಿಇಒ ರೀಡ್ ಹೇಸ್ಟಿಂಗ್, ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವರೊಡನೆ ಮಾತುಕತೆ ನಡೆಸಿದ್ದಾರೆ. ಹೂಡಿಕೆಗೆ ಅನುಕೂಲಕರ ವಾತಾವರಣ ಮತ್ತು ಸಂಪನ್ಮೂಲಗಳಿಗೆ ಮನವಿ ಮಾಡಿದ್ದಾರೆ.

    English summary
    Netflix hiked its monthly subscription charges in America and Canada. Netflix reduced its Monthly charges in India last month.
    Saturday, January 15, 2022, 19:33
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X