twitter
    For Quick Alerts
    ALLOW NOTIFICATIONS  
    For Daily Alerts

    ಮತ್ತೆ ಬಾಹುಬಲಿ ನಿರ್ಮಿಸಲು 150 ಕೋಟಿ ಸುರಿದಿದ್ದ ನೆಟ್‌ಫ್ಲಿಕ್ಸ್ ದಿಢೀರನೇ ಸಿರೀಸ್‌ಗೆ ಅಂತ್ಯ ಹಾಡಿದ್ದು ಏಕೆ?

    |

    'ಬಾಹುಬಲಿ' ಭಾರತೀಯ ಚಿತ್ರರಂಗದ ದಿಕ್ಕನ್ನೇ ಬದಲಿಸಿದ ಸಿನಿಮಾ. 'ಬಾಹುಬಲಿ' ಮತ್ತು 'ಬಾಹುಬಲಿ 2' ಎರಡೂ ಸಿನಿಮಾಗಳೂ ಬಾಕ್ಸಾಫೀಸ್‌ನಲ್ಲಿ ದಾಖಲೆಗಳನ್ನು ಬರೆದಿತ್ತು. ರಾಜಮೌಳಿ ನಿರ್ದೇಶಿಸಿದ ಈ ಸಿನಿಮಾಗೆ ಸಿಕ್ಕ ಯಶಸ್ಸು ಹೊಸ ಆಲೋಚನೆಗೆ ನಾಂದಿ ಹಾಡಿತ್ತು. ಬಾಹುಬಲಿಗೂ ಮುನ್ನ ಮಾಹಿಷ್ಮತಿ ಸಾಮ್ರಾಜ್ಯ ಹೇಗಿತ್ತು? ಅನ್ನುವುದನ್ನು ಜನರಿಗೆ ತೋರಿಸಬೇಕು ಅನ್ನುವ ನಿಟ್ಟಿನಲ್ಲಿ ನೆಟ್‌ಫ್ಲಿಕ್ಸ್ ಇಂಡಿಯಾ 'ಬಾಹುಬಲಿ ಬಿಫೋರ್ ದಿ ಬಿಗಿನಿಂಗ್' ಸಿರೀಸ್ ಅನ್ನು ಆರಂಭಿಸಿತ್ತು.

    'ಬಾಹುಬಲಿ' ಇಂದಿಗೂ ಪ್ರೇಕ್ಷಕರ ಫೇವರಿಟ್ ಸಿನಿಮಾ. ಇದರ ಎರಡೂ ಸಿರೀಸ್‌ಗಳನ್ನೂ ಪದೇ ಪದೆ ನೋಡುವ ಜನರಿದ್ದಾರೆ. ಅದರಲ್ಲೂ ಮಾಹಿಷ್ಮತಿ ಸಾಮ್ರಾಜ್ಯ ಬಾಹುಬಲಿ ಬರುವುದಕ್ಕೂ ಮುನ್ನ ಹೇಗಿತ್ತು? ಆ ಸಾಮ್ರಾಜ್ಯದ ಹುಟ್ಟು ಹೇಗಾಯುತ್ತು? ಇಂತಹದ್ದೇ ಒಂದಿಷ್ಟು ಕಲ್ಪನೆಗಳನ್ನು ಇಟ್ಟಿಕೊಂಡು ನೆಟ್‌ಫ್ಲಿಕ್ಸ್ ಸಿರೀಸ್ ಅನ್ನು ಆರಂಭಿಸಿತ್ತು. ಆದ್ರೀಗ ಆ ಸರಣಿಯನ್ನು ನಿಲ್ಲಿಸಿದೆ ಎನ್ನುವ ಬಗ್ಗೆ ಒಟಿಟಿ ವೇದಿಕೆಯಲ್ಲಿ ಚರ್ಚೆಯಾಗುತ್ತಿದೆ.

     'ಬಾಹುಬಲಿ' ವೆಬ್ ಸಿರೀಸ್‌ ನೆಟ್‌ಫ್ಲಿಕ್ಸ್ ತಿಲಾಂಜಲಿ

    'ಬಾಹುಬಲಿ' ವೆಬ್ ಸಿರೀಸ್‌ ನೆಟ್‌ಫ್ಲಿಕ್ಸ್ ತಿಲಾಂಜಲಿ

    ಬಾಹುಬಲಿ 2 ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆ ಬರೆಯುತ್ತಿದ್ದಂತೆ ನೆಟ್‌ಫ್ಲಿಕ್ಸ್ 'ಬಾಹುಬಲಿ ಬಿಫೋರ್ ದಿ ಬಿಗಿನಿಂಗ್' ಸಿರೀಸ್ ಮೇಲೆ ಕಣ್ಣಿಟ್ಟಿತ್ತು. ಈ ಸಿರೀಸ್‌ ಅನ್ನು ಸ್ವತಃ ನೆಟ್‌ಫ್ಲಿಕ್ಸ್ ನಿರ್ಮಿಸಲು ಮುಂದಾಗಿತ್ತು. ಈ ವೆಬ್ ಸಿರೀಸ್ ಬಾಹುಬಲಿ ಮೊದಲ ಅವತರಣಿಕೆಗೂ ಮುನ್ನ ಮಾಹಿಷ್ಮತಿ ಸಾಮ್ರಾಜ್ಯದ ಕಥೆಯನ್ನು ಪ್ರೇಕ್ಷಕರಿಗೆ ತೋರಿಸುವುದಾಗಿತ್ತು. ಈ ವೆಬ್ ಸಿರೀಸ್ ಭಾರತದ ದಾಖಲೆ ನಿರ್ಮಿಸಬೇಕು ಎಂಬ ಕಲ್ಪನೆಯಲ್ಲಿಯೇ ಆರಂಭ ಮಾಡಲಾಗಿತ್ತು. ಆದ್ರೀಗ ಈ ವೆಬ್ ಸಿರೀಸ್‌ಗೆ ನೆಟ್‌ಫ್ಲಿಕ್ಸ್ ತಿಲಾಂಜಲಿ ಇಟ್ಟಿಗೆ ಎನ್ನುವ ಮಾತು ಕೇಳಿ ಬರುತ್ತಿದೆ.

     'ಬಾಹುಬಲಿ' ವೆಬ್ ಸಿರೀಸ್‌ಗೆ 150 ಕೋಟಿ

    'ಬಾಹುಬಲಿ' ವೆಬ್ ಸಿರೀಸ್‌ಗೆ 150 ಕೋಟಿ

    'ಬಾಹುಬಲಿ' ಕಳೆದ ಕೆಲವು ವರ್ಷಗಳಿಂದ ಆರಂಭ ಆಗಿದೆ. ಈ ವೆಬ್ ಸಿರೀಸ್‌ಗಾಗಿ ನೆಟ್‌ಫ್ಲಿಕ್ಸ್ ಈಗಾಗಲೇ ಸುಮಾರು 150 ಕೋಟಿ ಹಣವನ್ನು ಸುರಿದಿದೆ. ಆದರೆ, ಅಂದುಕೊಂಡಂತೆ ವೆಬ್ ಸಿರೀಸ್ ಮೂಡಿ ಬರುತ್ತಿಲ್ಲ. ಹೀಗಾಗಿ 150 ಕೋಟಿ ವೆಚ್ಚ ಮಾಡಿದ ವೆಬ್ ಸಿರೀಸ್‌ಗೆ ತಿಲಾಂಜಲಿ ಇಡುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಈಗ ಈ ಪ್ರಾಜೆಕ್ಟ್ ಅನ್ನು ನೆಟ್‌ಫ್ಲಿಕ್ಸ್ ಮೂಲೆಗೆ ತಳ್ಳಿದ್ದು, ಮತ್ತೆ ಕೈಗೆತ್ತಿಕೊಳ್ಳುವ ಆಲೋಚನೆ ಇಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

     'ಬಾಹುಬಲಿ' ವೆಬ್ ಸಿರೀಸ್‌ನಿಂದ ನಿರ್ದೇಶಕರು ಔಟ್

    'ಬಾಹುಬಲಿ' ವೆಬ್ ಸಿರೀಸ್‌ನಿಂದ ನಿರ್ದೇಶಕರು ಔಟ್

    ಬಾಹುಬಲಿ ವೆಬ್ ಸಿರೀಸ್ ನಿರ್ಮಾಣ ಮಾಡುವ ನೆಟ್‌ಫ್ಲಿಕ್ಸ್ ಆಲೋಚನೆಗೆ ತೆಲುಗಿನ ಇಬ್ಬರು ನಿರ್ದೇಶಕರು ಕೈ ಜೋಡಿಸಿದ್ದರು. ಪ್ರವೀಣ್ ಸತ್ತರು ಹಾಗೂ ದೇವ ಕಟ್ಟ ಇಬ್ಬರು ನಿರ್ದೇಶಕರು ಈ ವೆಬ್ ಸಿರೀಸ್ ಅನ್ನು ನಿರ್ದೇಶನ ಮಾಡಬೇಕಿತ್ತು. ಆದರೆ, ನೆಟ್‌ಫ್ಲಿಕ್ಸ್ ಜೊತೆಗಿನ ಭಿನ್ನಾಬಿಪ್ರಾಯಗಳಿಂದಾಗಿ ಈ ಇಬ್ಬರೂ ನಿರ್ದೇಶಕರು ಹೊರಬಂದರು. ಬಳಿಕ ಎಕ್ಸ್‌ಪರ್ಟ್ ಟೀಮ್ ಅನ್ನು ಕರೆದುಕೊಂಡು ಬಂದಿತ್ತು. ರಾಜಮೌಳಿಯನ್ನು ಕ್ರಿಯೇಟಿವ್ ಹೆಡ್ ಸ್ಥಾನದಲ್ಲಿ ಕೂರಿಸಿತ್ತು. ಅದು ಕೂಡ ಕೈಗೂಡಲಿಲ್ಲ.

     'ಬಾಹುಬಲಿ' ವೆಬ್ ಸಿರೀಸ್ ನಿಂತಿದ್ದುಸುಳ್ಳು

    'ಬಾಹುಬಲಿ' ವೆಬ್ ಸಿರೀಸ್ ನಿಂತಿದ್ದುಸುಳ್ಳು

    ನೆಟ್‌ಫ್ಲಿಕ್ಸ್ 'ಬಾಹುಬಲಿ' ವೆಬ್ ಸಿರೀಸ್ ಅನ್ನು ನಿಲ್ಲಿಸಿರುವುದು ಕೇವಲ ವದಂತಿ ಅಷ್ಟೇ. ಈ ಸುದ್ದು ಸತ್ಯ ದೂರವಾಗಿದೆ ಎನ್ನುವ ಮಾಹಿತಿ ಕೂಡ ಕೇಳಿಬರುತ್ತಿದೆ. 150 ಕೋಟಿ ವೆಚ್ಚದ ವೆಬ್ ಸಿರೀಸ್‌ಗೆ ಅಂತ್ಯ ಹಾಡಿಲ್ಲ. ಬದಲಾಗಿ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಅಷ್ಟೇ ಎನ್ನುವ ಮಾತುಗಳು ಕೂಡ ಕೇಳಿ ಬರುತ್ತಿವೆ. ಏನೇ ಇದ್ದರೂ, 'ಬಾಹುಬಲಿ' ವೆಬ್ ಸಿರೀಸ್‌ಗಾಗಿ ಕಾದು ಕೂತಿರುವ ಪ್ರೇಕ್ಷಕರಿಗೆ ಈ ವಿಷಯ ನಿರಾಸೆಯನ್ನುಂಟು ಮಾಡಿರುವುದಂತೂ ಸತ್ಯ.

    English summary
    Netflix India shelved Baahubali Before The Beginning after spending 150 crore. It is also being said that this news is not true and the show has certainly not been shelved but put on hold for a while.
    Tuesday, January 25, 2022, 11:08
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X