For Quick Alerts
  ALLOW NOTIFICATIONS  
  For Daily Alerts

  ಮನಿಹೈಸ್ಟ್ 5 ಬಿಡುಗಡೆ ಖಾತ್ರಿಪಡಿಸಿದ ನೆಟ್‌ಫ್ಲಿಕ್ಸ್: ದಿನಾಂಕ?

  |

  ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿರುವ 'ಮನಿ ಹೈಸ್ಟ್‌' ವೆಬ್ ಸರಣಿ ಈವರೆಗೆ ನಾಲ್ಕು ಸೀಸನ್ ಪ್ರಸಾರವಾಗಿದ್ದು ಐದನೇ ಸೀಸನ್‌ಗಾಗಿ ಅಭಿಮಾನಿಗಳು ಕಾತರರಾಗಿದ್ದಾರೆ. 'ಲಾ ಕಾಸಾ ಡಿ ಪಪೇಲ್' ಹೆಸರಿನ ಫ್ರೆಂಚ್ ವೆಬ್ ಸರಣಿಯಾಗಿರುವ ಇದನ್ನು ಇಂಗ್ಲಿಷ್‌ನಲ್ಲಿ 'ಮನಿ ಹೈಸ್ಟ್' ಹೆಸರಿನಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರ ಮಾಡಲಾಗುತ್ತದೆ.

  ಇದೀಗ ನೆಟ್‌ಫ್ಲಿಕ್ಸ್‌ ವೆಬ್ ಸರಣಿಯ ಹೊಸ ಸೀಸನ್‌ ಬಗ್ಗೆ ಅಧಿಕೃತ ಹೇಳಿಕೆ ನೀಡಿದ್ದು ಇದೇ ವರ್ಷ 'ಮನಿ ಹೈಸ್ಟ್5' ಬಿಡುಗಡೆ ಆಗಲಿದೆ ಎಂದಿದೆ. ಆದರೆ ನಿಖರ ದಿನಾಂಕವನ್ನು ನೆಟ್‌ಫ್ಲಿಕ್ಸ್‌ ಹೇಳಿಲ್ಲ. ಬದಲಿಗೆ ಇದೇ ವರ್ಷದ ಜೂನ್‌ ತಿಂಗಳ ನಂತರ 'ಮನಿ ಹೈಸ್ಟ್ 5' ಬಿಡುಗಡೆ ಆಗುವುದಾಗಿ ಹೇಳಿದೆ.

  ಐದನೇ ಸೀಸನ್ 'ಮನಿ ಹೈಸ್ಟ್' ಸರಣಿಯ ಕೊನೆಯ ಸೀಸನ್ ಆಗಿರಲಿದೆ. ಈ ಸರಣಿ ಬಳಿಕ ಮನಿ ಹೈಸ್ಟ್ ವೆಬ್ ಸರಣಿ ಮುಂದುವರೆಯುವುದಿಲ್ಲ. ನಾಲ್ಕನೇ ಸರಣಿಯಲ್ಲಿ ಸೂತ್ರಧಾರ ಪ್ರೊಫೆಸರ್‌ ಅನ್ನು ಮಾಜಿ ಪೊಲೀಸ್ ಅಧಿಕಾರಿ ಅಲಿಸಾ ಕಂಡು ಹಿಡಿದು ಆತನ ತನೆಗೆ ಗನ್ ಹಿಡಿಯುತ್ತಾಳೆ. ಐದನೇ ಸರಣಿಯ ಕತೆ ಅಲ್ಲಿಂದಲೇ ಆರಂಭವಾಗಲಿದೆ.

  'ಮನಿ ಹೈಸ್ಟ್' ಬಿಡುಗಡೆ ಬಗ್ಗೆ ಕೆಲ ತಿಂಗಳ ಹಿಂದೆ ಮಾತನಾಡಿದ್ದ ನಿರ್ದೇಶಕ ಅಲೆಕ್ಸ್ ಪಿನ್ಯಾ, 'ಜೂನ್‌ನಲ್ಲಿ ಮನಿಹೈಸ್ಟ್ 5 ನೇ ಸೀಸನ್ ಬಿಡುಗಡೆ ಮಾಡುವ ಬಗ್ಗೆ ಯೋಚಿಸಲಾಗಿತ್ತು. ಆದರೆ ಕೊರೊನಾ ಹಾಗೂ ಇನ್ನಿತರೆ ಕಾರಣಗಳಿಂದ ಚಿತ್ರೀಕರಣ ತಡವಾಗಿದ್ದು ಸೆಪ್ಟೆಂಬರ್ ವೇಳೆಗೆ ಬಿಡುಗಡೆ ಆಗಲಿದೆ' ಎಂದಿದ್ದರು. ಈಗ ನೆಟ್‌ಫ್ಲಿಕ್ಸ್‌ ಸಹ ಇದನ್ನೇ ಹೇಳಿದೆ.

  'ಮನಿ ಹೈಸ್ಟ್ 5' ಮಾತ್ರವೇ ಅಲ್ಲದೆ ನೆಟ್‌ಫ್ಲಿಕ್ಸ್‌ನಲ್ಲಿ ಜನಪ್ರಿಯವಾಗಿರುವ ಇತರ ವೆಬ್ ಸರಣಿಗಳಾದ 'ವಿಚ್ಲರ್ 2', 'ಯೂ ಸೀಸನ್ 3', 'ಸೆಕ್ಸ್ ಎಜುಕೇಶನ್ 3' , 'ಲಾಸ್ಟ್ ಇನ್ ಸ್ಪೇಸ್ 3', 'ಕೋಬ್ರ ಕೈ 4' ವೆಬ್‌ ಸರಣಿಗಳು ಇದೇ ವರ್ಷದ ದ್ವಿತೀಯಾರ್ಧದಲ್ಲಿ ಬಿಡುಗಡೆ ಆಗಲಿವೆ. ವೆಬ್ ಸರಣಿಗಳು ಮಾತ್ರವಲ್ಲದೆ 'ರೆಡ್ ನೋಟೀಸ್', 'ಎಸ್ಕೇಪ್ ಫ್ರಂ ಸ್ಪೈಡರ್‌ಹೆಡ್' ಅಂಥಹಾ ದೊಡ್ಡ ಬಜೆಟ್‌ ಸಿನಿಮಾಗಳು ಇದೇ ವರ್ಷದಲ್ಲಿ ಬಿಡುಗಡೆ ಆಗಲಿವೆ. 'ರೆಡ್ ನೊಟೀಸ್' ಸಿನಿಮಾದಲ್ಲಿ ಡ್ವೇನ್ ಜಾನ್ಸನ್, 'ವಂಡರ್ ವುಮನ್' ಪಾತ್ರಧಾರಿ ಗಲ್ ಗಡೋಟ್ ಮತ್ತು 'ಡೆಡ್‌ಪೂಲ್' ಪಾತ್ರಧಾರಿ ರ್ಯಾನ್ ರೆನಾಲ್ಡಸ್ ನಟಿಸಿದ್ದಾರೆ.

  English summary
  Money Heist season 5 will release in Netflix after 2021 June said Netflix content chief Ted Sarandos.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X