6750 ಕೋಟಿ ಮೌಲ್ಯದ ನೆಟ್‌ಫ್ಲಿಕ್ಸ್‌ ವೆಬ್‌ ಸರಣಿ 'ಸ್ಕ್ವಿಡ್ ಗೇಮ್'

ನೆಟ್‌ಫ್ಲಿಕ್ಸ್‌ನ ಭಾರತೀಯ ಬಳಕೆದಾರರು ತಿಂಗಳಿಗೆ 800 ರು ಚಂದಾದಾರಿಕೆ ಶುಲ್ಕ ಪಾವತಿಸಬೇಕು (ನಾಲ್ಕು ಮಂದಿಗೆ). ಹಲವರಿಗೆ ಇದು ಬಹಳ ದೊಡ್ಡ ಮೊತ್ತವೇನೂ ಅಲ್ಲ ಎನಿಸಬಹುದು, ಆದರೆ ಈ ಕಡಿಮೆ ಶುಲ್ಕದಿಂದಲೇ ನೆಟ್‌ಫ್ಲಿಕ್ಸ್‌ ಇಂದು ಲಕ್ಷಾಂತರ ಕೋಟಿ ಮೊತ್ತದ ಉದ್ದಿಮೆಯಾಗಿದೆ.

ನೆಟ್‌ಫ್ಲಿಕ್ಸ್ ಒಂದೊಂದು ವೆಬ್ ಸರಣಿಗಳ ಮೌಲ್ಯ ಸಾವಿರಾರು ಕೋಟಿ ರುಪಾಯಿಗಳು. ಬಳಕೆದಾರರು ಕೇವಲ 800 ರು ಮಾಸಿಕ ಶುಲ್ಕ ಪಾವತಿಸಿ (ನಾಲ್ಕು ಜನರಿಗೆ) ನೂರಾರು ವೆಬ್ ಸರಣಿ, ಸಿನಿಮಾ, ಡಾಕ್ಯುಮೆಂಟರಿಗಳನ್ನು ನೋಡುತ್ತಿದ್ದಾರೆ. ಆದರೆ ಬಳಕೆದಾರರು ನೋಡುತ್ತಿರುವ ವೆಬ್ ಸರಣಿ, ಸಿನಿಮಾಗಳ ನಿಜವಾದ ಮೌಲ್ಯ ಸಾವಿರಾರು ಕೋಟಿಗಳದ್ದು.

ಇದೀಗ ಸ್ಕ್ವಿಡ್ ಗೇಮ್ ಹೆಸರಿನ ವೆಬ್ ಸರಣಿಯೊಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗಿದೆ. ಕೊರಿಯನ್ ಭಾಷೆಯ ಈ ವೆಬ್ ಸರಣಿಯನ್ನು ಬಿಡುಗಡೆ ಆದ ಕೇವಲ 28 ದಿನಗಳಲ್ಲಿ ವಿಶ್ವದಾದ್ಯಂತ 11.10 ಕೋಟಿಗೂ ಹೆಚ್ಚು ನೆಟ್‌ಫ್ಲಿಕ್ಸ್‌ ಖಾತೆಗಳಿಂದ ವೀಕ್ಷಿಸಲಾಗಿದೆ. ಆ ಮೂಲಕ ನೆಟ್‌ಫ್ಲಿಕ್ಸ್‌ನಲ್ಲಿ ಅತಿ ಹೆಚ್ಚು ವೀಕ್ಷಣೆಗೆ ಒಳಗಾದ ವೆಬ್ ಸರಣಿ ಎಂಬ ಖ್ಯಾತಿ ಗಳಿಸಿಕೊಂಡಿದೆ.

Netflixs Squid Game Web Series To Be Worth 6750 Crore Rs

ವಿಶ್ವದಾದ್ಯಂತ ವೈರಲ್ ಆಗಿರುವ ವೆಬ್ ಸರಣಿ 'ಸ್ಕ್ವಿಡ್ ಗೇಮ್‌'ನ ನಿಜವಾದ ಮೌಲ್ಯ ಸಾವಿರಾರು ಕೋಟಿಗಳು. ಈ ವೆಬ್ ಸರಣಿಯ ಮೌಲ್ಯ 6750 ಕೋಟಿ ರುಪಾಯಿಗಳು. ನೆಟ್‌ಫ್ಲಿಕ್ಸ್‌ನ ವೆಬ್ ಸರಣಿ, ಸಿನಿಮಾಗಳ ಮಾರುಕಟ್ಟೆಯನ್ನು ಟಿವಿ ಕಾರ್ಯಕ್ರಮಗಳ ಟಿಆರ್‌ಪಿ, ಸಿನಿಮಾಗಳ ಬಾಕ್ಸ್‌ಆಫೀಸ್‌ ಮಾದರಿಯಲ್ಲಿ ಲೆಕ್ಕಹಾಕಲಾಗುವುದಿಲ್ಲವಾದರೂ, ನೆಟ್‌ಫ್ಲಿಕ್ಸ್‌ ತನ್ನ ಕಂಟೆಂಟ್‌ನ ಒಟ್ಟು ವೀಕ್ಷಣೆಯ ಮಾಹಿತಿಯ ಆಧಾರದಲ್ಲಿ ಯಾವ ಕಂಟೆಂಟ್ ಎಷ್ಟು ಮಾರುಕಟ್ಟೆ ರೆವಿನ್ಯೂ ತರಬಹುದು ಎಂಬುದನ್ನು ಲೆಕ್ಕ ಹಾಕುತ್ತದೆ. ಅದರ ಆಧಾರದಲ್ಲಿ 'ಸ್ಕ್ವಿಡ್‌ ಗೇಮ್'ನ ಒಟ್ಟು ಮಾರುಕಟ್ಟೆ ಮೌಲ್ಯ 900 ಮಿಲಿಯನ್ ಡಾಲರ್ ಭಾರತೀಯ ರೂಪಾಯಿ ಲೆಕ್ಕದಲ್ಲಿ 6750 ಕೋಟಿ ರು ಎಂದಾಗುತ್ತದೆ.

'ಸ್ಕ್ವಿಡ್ ಗೇಮ್' ವೆಬ್ ಸರಣಿಯ ಬಂಡವಾಳ ಕೇವಲ 161 ಕೋಟಿ ಬಂಡವಾಳದಲ್ಲಿ ನಿರ್ಮಿಸಲಾಗಿದೆ. 9 ಎಪಿಸೋಡ್‌ಗಳನ್ನು ಹೊಂದಿರುವ ಈ ವೆಬ್ ಸರಣಿ ಈಗಾಗಲೇ ವಿಶ್ವದ ಜನಪ್ರಿಯ ಶೋ ಎನಿಸಿಕೊಂಡಿದೆ. ಮಕ್ಕಳು ಆಡುವ ಆಟಗಳನ್ನು ಆಡಿಸಿ ಸೋತವರನ್ನು ಕೊಲ್ಲುವ, ಗೆದ್ದ ಒಬ್ಬ ವ್ಯಕ್ತಿಗೆ ಸಾವಿರಾರು ಕೋಟಿ ಬಹುಮಾನ ನೀಡುವ ಗೇಮ್ ಆಡಿಸುವ ಕತೆಯನ್ನು ಈ ವೆಬ್ ಸರಣಿ ಹೊಂದಿದೆ.

More from Filmibeat

English summary
Netflix's Squid Game web series to be worth 6750 crore rs. It is a Korean web series. Squid Game is most watched web series of Netflix.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X