ದೊಡ್ಡ ಚಿತ್ರಗಳಿಗೆ ಕೋಟಿ ಕೋಟಿ ಸುರಿದು ಓಟಿಟಿ ಸಂಸ್ಥೆಗಳು ಸುಸ್ತು; ಏನಿದು ಹೊಸ ಪ್ರಾಬ್ಲಂ

ಒಂದ್ಕಾಲದಲ್ಲಿ ಹೊಸ ಸಿನಿಮಾಗಳನ್ನು ನೋಡಲು ಜನ ಚಿತ್ರಮಂದಿರಗಳಿಗೆ ಹೋಗಬೇಕಿತ್ತು. ಜಮಾನ ಬದಲಾದಂತೆ ತಂತ್ರಜ್ಞಾನ ಅಭಿವೃದ್ದಿ ಆಗಿ ಎಲ್ಲವೂ ಬೆರಳಿನ ತುದಿಯಲ್ಲಿ ಸಿಗುವಂತಾಗಿದೆ. ಹೊಸ ಸಿನಿಮಾಗಳನ್ನು ಕೂಡ ಪ್ರೇಕ್ಷಕರು ಮನೆಯಲ್ಲೇ ಕೂತು ನೋಡುವಂತಾಗಿದೆ. ಓಟಿಟಿ ಟ್ರೆಂಡ್ ಸಿನಿಮಾ ನೋಡುವ ಪರಿಕಲ್ಪನೆಯನ್ನೇ ಬದಲಿಸಿಬಿಟ್ಟಿದೆ. ಈಗ ಹೊಸ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಹೋಗಬೇಕೆಂದು ಇಲ್ಲ. ಓಟಿಟಿಗಾಗಿಯೇ ಸಿನಿಮಾ ಮಾಡುವವರು ಇದ್ದಾರೆ.

ದಿನದಿಂದ ದಿನಕ್ಕೆ ಓಟಿಟಿ ಜನಪ್ರಿಯತೆ ಹೆಚ್ಚಾಗುತ್ತಿದೆ. ಚಂದಾದಾರರ ಸಂಖ್ಯೆಯೂ ವೃದ್ಧಿಯಾಗುತ್ತಿದೆ. ಪರಿಣಾಮ ಚಿತ್ರಮಂದಿರಗಳಿಗೆ ಹೋಗಿ ಸಿನಿಮಾ ನೋಡುವವರ ಸಂಖ್ಯೆ ಕಮ್ಮಿ ಆಗುತ್ತಿದೆ. ನೆಟ್‌ಫ್ಲಿಕ್ಸ್, ಅಮೇಜಾನ್ ಪ್ರೈಂ, ಸನ್‌ ನೆಕ್ಸ್ಟ್, ಜೀ-5, ಅಹಾ ಓಟಿಟಿ, ಸೋನಿ ಲಿವ್, ಹಾಟ್‌ಸ್ಟರ್ ಹೀಗೆ ಸಾಕಷ್ಟು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಸಿನಿಮಾ ಹಾಗೂ ವೆಬ್ ಸೀರಿಸ್‌ಗಳನ್ನು ಪ್ರದರ್ಶಿಸಿಸುತ್ತಿವೆ.

Netflix to Prime Video OTT companies are exhausted from spending crores on big films

ಆರಂಭದಲ್ಲಿ ತೆರೆಕಂಡು ಪ್ರದರ್ಶನ ಕಂಡ ಸಿನಿಮಾಗಳನ್ನು ಓಟಿಟಿ ಸಂಸ್ಥೆಗಳು ಕೊಂಡುಕೊಳ್ಳುತ್ತಿದ್ದವು. ನಿಧಾನವಾಗಿ ನೇರವಾಗಿ ಕೆಲ ಸಿನಿಮಾಗಳು ಓಟಿಟಿಗೆ ಬರಲು ಆರಂಭಿಸಿದವು. ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಹೀಗೆ ಕೆಲ ಸಿನಿಮಾಗಳು ನೇರವಾಗಿ ಓಟಿಟಿಗೆ ಎಂಟ್ರಿ ಕೊಟ್ಟವು. ಚಿತ್ರಮಂದಿರಗಳಲ್ಲಿ ನೂರಾರು ರೂಪಾಯಿ ಕೊಟ್ಟು ಟಿಕೆಟ್ ಖರೀದಿಸಿ, ಪಾರ್ಕಿಂಗ್, ಸ್ನ್ಯಾಕ್ಸ್ ಅಂತೆಲ್ಲಾ ಸಾವಿರಾರು ರೂಪಾಯಿ ಖರ್ಚು ಮಾಡುವಂತಾಗಿದೆ. ಆದರೆ ಓಟಿಟಿಯಲ್ಲಿ ಖರ್ಚು ಕಮ್ಮಿ ಆಗುತ್ತದೆ.

ಸಿನಿಮಾ ನೋಡಲು ನಿಗದಿತ ಸಮಯಕ್ಕೆ ಚಿತ್ರಮಂದಿರಕ್ಕೆ ಹೋಗಬೇಕು. ಒಮ್ಮೆ ನೋಡಿದರೆ ಮುಗೀತು ಮತ್ತೆ ಅದನ್ನು ರಿವೈಂಡ್ ಮಾಡಿ ನೋಡೋಕೆ ಸಾಧ್ಯವಿಲ್ಲ. ಆದರೆ ಓಟಿಟಿಯಲ್ಲಿ ನಮಗಿಷ್ಟ ಬಂದ ಜಾಗದಲ್ಲೇ ಕೂತು ಸಿನಿಮಾ, ವೆಬ್ ಸೀರಿಸ್ ನೋಡಬಹುದು. ಬೋರ್ ಎನಿಸಿದರೆ ಫಾರ್ವರ್ಡ್ ಮಾಡಬಹುದು. ಇಂಟ್ರೆಸ್ಟಿಂಗ್ ಎನಿಸಿದರೆ ರಿವೈಂಡ್ ಮಾಡಿ ಕೂಡ ವೀಕ್ಷಿಸಬಹುದು. ಹಾಗಾಗಿ ನಿಧಾನವಾಗಿ ಸಿನಿಮಾ ಓಟಿಟಿ ಕಡೆ ಮುಖ ಮಾಡುತ್ತಿದೆ.

ದೊಡ್ಡ ಪರದೆ, ಡಿಟಿಎಸ್ ಸೌಂಡ್‌ನಲ್ಲಿ ಸಿನಿಮಾ ನೋಡಬಹುದು ಎನ್ನುವ ಒಂದೇ ಕಾರಣಕ್ಕೆ ಪ್ರೇಕ್ಷಕರು ಇವತ್ತಿಗೂ ಚಿತ್ರಮಂದಿರಗಳಿಗೆ ಹೋಗುತ್ತಿದ್ದಾರೆ. ಆದರೆ ಕೆಲವರು ಮನೆಯಲ್ಲೇ ಹೋಂ ಥಿಯೇಟರ್ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ. ದಶಕದ ಹಿಂದೆಯೇ ನಟ ಕಮಲ್ ಹಾಸನ್ ಹೊಸ ಸಿನಿಮಾವನ್ನು ಚಿತ್ರಮಂದಿರಕ್ಕೂ ಮುನ್ನ ಡಿಟಿಹೆಚ್ ಮೂಲಕ ಮನೆ ಮನೆಗೂ ತಲುಪಿಸುವ ಪ್ರಯತ್ನ ಮಾಡಿದ್ದರು.

Netflix to Prime Video OTT companies are exhausted from spending crores on big films

'ವಿಶ್ವರೂಪಂ' ಚಿತ್ರವನ್ನು ಹಣ ಪಾವತಿಸಿ ಡಿಟಿಹೆಚ್‌ ಮೂಲಕ ಮನೆಯ ಟಿವಿಯಲ್ಲೇ ನೋಡುವಂತೆ ಮಾಡಲು ಮುಂದಾಗಿದ್ದರು. ಆದರೆ ಅದನ್ನು ಕೆಲ ಚಿತ್ರಮಂದಿರದ ಮಾಲೀಕರ ವಿರೋಧಿಸಿದ್ದರು. ಆದರೆ ಓಟಿಟಿ ಬಂದ ಮೇಲೆ ಯಾರು ಕೇಳಲಿಲ್ಲ. ಸದ್ಯ ನಾಲ್ಕೈದು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಮಾತ್ರ ಸಿನಿಮಾಗಳನ್ನು ಕೊಂಡುಕೊಳ್ಳುತ್ತಿವೆ. ಆದರೆ ದೊಡ್ಡ ಸಿನಿಮಾಗಳ ರೈಟ್ಸ್‌ಗಾಗಿ ಅವುಗಳ ನಡುವೆ ಪೈಪೋಟಿ ಏರ್ಪಟ್ಟಿದೆ.

ಸ್ಟಾರ್ ನಟರ ದೊಡ್ಡ ಸಿನಿಮಾಗಳನ್ನು ಜನ ಓಟಿಟಿಯಲ್ಲಿ ನೋಡಲು ಹೆಚ್ಚು ಬಯಸುತ್ತಾರೆ. ಅದೇ ಕಾರಣಕ್ಕೆ ಭಾರೀ ಮೊತ್ತಕ್ಕೆ ರೈಟ್ಸ್ ಮಾರಾಟವಾಗುತ್ತದೆ. ಸಿನಿಮಾ ತೆರೆಕಂಡ 30 ದಿನಕ್ಕೆಲ್ಲಾ ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗುವಂತಾಗಿದೆ. ಆದರೆ ದೊಡ್ಡ ದೊಡ್ಡ ಸಿನಿಮಾಗಳು ಒಂದರ ಹಿಂದೆ ಒಂದು ಬರುತ್ತಿರುವುದು ಈಗ ಓಟಿಟಿ ಸಂಸ್ಥೆಗಳಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಸದ್ಯ ತಮಿಳು, ತೆಲುಗಿನ ದೊಡ್ಡ ದೊಡ್ಡ ಸಿನಿಮಾಗಳ ಓಟಿಟಿ ರೈಟ್ಸ್ ಭಾರೀ ಬೆಲೆ ಮಾರಾಟವಾಗಿದೆ.

ಅಜಿತ್ ನಟನೆಯ 'ಗುಡ್‌ ಬ್ಯಾಡ್ ಅಗ್ಲಿ' ಚಿತ್ರದ ರೈಟ್ಸ್ ಅನ್ನು ನೆಟ್‌ಫ್ಲಿಕ್ಸ್ 95 ಕೋಟಿ ರೂ.ಗೆ ಖರೀದಿಸಿದೆ. ವಿಜಯ್ ನಟನೆಯ 'ಜನ ನಾಯಕನ್' ಡಿಜಿಟಲ್ ರೈಟ್ಸ್ ಪ್ರೈ ವೀಡಿಯೋ ಪಾಲಾಗಿದೆ. 120 ಕೋಟಿ ರೂ.ಗೆ ಡೀಲ್ ಕುದುರಿಸಲಾಗಿದೆ. ರಜನಿಕಾಂತ್ ನಟನೆಯ 'ಕೂಲಿ' ಸಿನಿಮಾ ರೈಟ್ಸ್ 110 ಕೋಟಿ ರೂ.ಗೆ ಪ್ರೈಂ ವೀಡಿಯೋ ಸ್ವಂತ ಮಾಡಿಕೊಂಡಿದೆ. ಇನ್ನು ಕಮಲ್ ಹಾಸನ್ ಹಾಗೂ ಮಣಿರತ್ನಂ ಜೋಡಿಯ 'ಥಗ್ ಲೈಫ್' ಚಿತ್ರದ ಓಟಿಟಿ ರೈಟ್ಸ್ ನೆಟ್‌ಫ್ಲಿಕ್ಸ್ 150 ಕೋಟಿ ರೂ.ಗೆ ಕೊಂಡುಕೊಂಡಿದೆ ಎನ್ನಲಾಗ್ತಿದೆ.

Netflix to Prime Video OTT companies are exhausted from spending crores on big films

ಹೀಗೆ ಡಿಮ್ಯಾಂಡ್, ಕ್ರೇಜ್ ಇರುವ ಸಿನಿಮಾಗಳ ಓಟಿಟಿ ರೈಟ್ಸ್‌ ಕೊಂಡುಕೊಳ್ಳಲು ಭಾರೀ ಪೈಪೋಟಿ ಏರ್ಪಟ್ಟಿದೆ. ಓಟಿಟಿ ಸಂಸ್ಥೆಗಳು ಅದಕ್ಕಾಗಿ ನೂರಾರು ಕೋಟಿ ಸುರಿಯುವಂತಾಗಿದೆ. ಆದರೆ ಬರ್ತಾ ಬರ್ತಾ ಇದು ದುಸ್ಥರವಾಗುತ್ತಿದೆ. ಓಟಿಟಿಗೆ ಈಗ ಪೈರಸಿ ಕಾಟ ಶುರುವಾಗಿದೆ. ಹೌದು ತೆರೆಕಂಡ ಸಿನಿಮಾಗಳು ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಬರುವ ಮುನ್ನ ಲೀಕ್ ಆಗುತ್ತಿದೆ. ಹಾಗಾಗಿ ಓಟಿಟಿಯಲ್ಲಿ ಸಿನಿಮಾ ನೋಡಲು ಜನ ಹಿಂದೇಟು ಹಾಕುತ್ತಿದ್ದಾರೆ. ನೂರಾರು ಕೋಟಿ ಕೊಟ್ಟು ರೈಟ್ಸ್ ಕೊಂಡುಕೊಳ್ಳುವ ಸಂಸ್ಥೆಗೆ ಇದು ಸಮಸ್ಯೆಯಾಗಿ ಪರಿಣಮಿಸಿದೆ.

ಓಟಿಟಿ ಸಂಸ್ಥೆಗಳು ಪ್ರತಿವರ್ಷ ಸಿನಿಮಾಗಳ ರೈಟ್ಸ್ ಕೊಂಡುಕೊಳ್ಳಲು ಇಂತಿಷ್ಟು ಹಣವನ್ನು ಎತ್ತಿ ಇಡುತ್ತವೆ. ಆದರೆ ದೊಡ್ಡ ಸಿನಿಮಾಗಳಿಗೆ ಜಾಸ್ತಿ ಹಣ ತೆತ್ತು ಬಳಿಕ ಬೇರೆ ಚಿತ್ರಗಳ ರೈಟ್ಸ್ ಖರೀದಿಸಲು ಹಣ ಇಲ್ಲದಂತೆ ಆಗುತ್ತಿದೆ. ಇದೇ ಕಾರಣಕ್ಕೆ ಸ್ಟಾರ್ ನಟರು ತಮ್ಮ ಸಿನಿಮಾಗಳನ್ನು ಒಂದರ ಹಿಂದೊಂದು ರಿಲೀಸ್ ಮಾಡಬೇಡಿ ಎಂದು ಮನವಿ ಮಾಡುವಂತಾಗಿದೆ. ಅಜಿತ್ ನಟಿಸಿದ 'ವಿಡಮುಯರ್ಚಿ' ಸಿನಿಮಾ ಬಂದು 2 ತಿಂಗಳು ಕಳೆದಿಲ್ಲ. ಅಷ್ಟರಲ್ಲೇ 'ಗುಡ್‌ ಬ್ಯಾಡ್ ಅಗ್ಲಿ' ಸಿನಿಮಾ ಬರ್ತಿದೆ. 2 ಚಿತ್ರದ ಓಟಿಟಿ ರೈಟ್ಸ್ ಅನ್ನು ನೆಟ್‌ಫ್ಲಿಕ್ಸ್ ಕೊಂಡುಕೊಂಡಿದೆ.

2 ವರ್ಷಗಳ ಹಿಂದೆ ಕನ್ನಡದಲ್ಲಿ 'ಕಬ್ಜ' ಸಿನಿಮಾ ಭಾರೀ ಸದ್ದು ಮಾಡಿತ್ತು. ದುಬಾರಿ ಮೊತ್ತಕ್ಕೆ ಚಿತ್ರದ ಓಟಿಟಿ ರೈಟ್ಸ್ ಅನ್ನು ಪ್ರೈಂ ವೀಡಿಯೋ ಕೊಂಡುಕೊಂಡಿತ್ತು. ಬಳಿಕ ಆ ವರ್ಷ ಕನ್ನಡದ ಯಾವುದೇ ಸಿನಿಮಾ ಕೊಂಡುಕೊಳ್ಳಲು ನಮ್ಮ ಬಳಿ ಫಂಡ್ ಇಲ್ಲ ಎಂದು ಸಂಸ್ಥೆ ಹೇಳಿದ್ದಾಗಿ ಗುಸುಗುಸು ಕೇಳಿಬಂದಿತ್ತು. 'ಕಬ್ಜ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸೋತಿತ್ತು. ಓಟಿಟಿಯಲ್ಲೂ ಒಳ್ಳೆ ರೆಸ್ಪಾನ್ಸ್ ಸಿಕ್ಕಿರಲಿಲ್ಲ. ಹಾಗಾಗಿ ಆರ್. ಚಂದ್ರು ನಿರ್ದೇಶನದ ಆ ಚಿತ್ರದಿಂದ ಪ್ರೈಂ ವೀಡಿಯೋಗೆ ನಷ್ಟವಾಗಿತ್ತು ಎನ್ನುವ ವದಂತಿ ಹರಿದಾಡಿತ್ತು.

ತಮಿಳು ಮಾತ್ರವಲ್ಲ ತೆಲುಗಿನ ದೊಡ್ಡ ದೊಡ್ಡ ಸಿನಿಮಾಗಳು ಈ ವರ್ಷ ಬಿಡುಗಡೆಗೆ ಸಜ್ಜಾಗುತ್ತಿವೆ. ಸಿನಿಮಾ ತೆರೆಗೆ ಬಂದ ತಿಂಗಳಲ್ಲಿ ಓಟಿಟಿಗೆ ಬರುತ್ತಿದೆ. ಸಿನಿಮಾ ಮೇಕಿಂಗ್ ಹಂತದಲ್ಲೇ ಓಟಿಟಿ ರೈಟ್ಸ್ ಡೀಲ್ ಮುಗಿಯುತ್ತದೆ. ಥ್ರಿಯೇಟ್ರಿಕಲ್ ರೈಟ್ಸ್‌ಗಿಂತ ಓಟಿಟಿ ರೈಟ್ಸ್‌ಗೆ ಡಿಮ್ಯಾಂಡ್ ಜಾಸ್ತಿ ಆಗುತ್ತಿದೆ. ಓಟಿಟಿಯಿಂದ ಸ್ಯಾಟಲೈಟ್ ರೈಟ್ಸ್‌ಗೆ ಡಿಮ್ಯಾಂಡ್ ಕಮ್ಮಿ ಆಗುತ್ತಿದೆ.

ಮೊದಲೆಲ್ಲಾ ಜನ ಚಿತ್ರಮಂದಿರಗಳಲ್ಲಿ ಮೊದಲು ಸಿನಿಮಾ ನೋಡುತ್ತಿದ್ದರು. ಬಳಿಕ ಟಿವಿಯಲ್ಲಿ ಪ್ರಸಾರವಾಗುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಟಿವಿಗೂ ಮುನ್ನ ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗುವಂತಾಗಿದೆ. ಇದೇ ಕಾರಣಕ್ಕೆ ಸ್ಯಾಟಲೈಟ್ ರೈಟ್ಸ್ ಬೇಡಿಕೆ ಕಮ್ಮಿ ಆಗಿದೆ. ಓಟಿಟಿಯಲ್ಲಿ ಸಿನಿಮಾ ನೋಡಿದ ಬಳಿಕ ಜನ ಟಿವಿಯಲ್ಲಿ ನೋಡಲು ಹಿಂದೇಟು ಹಾಕುತ್ತಾರೆ. ಇತ್ತೀಚೆಗೆ ಕೆಲವರು ಓಟಿಟಿಯನ್ನು ಟಿವಿಗೆ ಕನೆಕ್ಟ್ ಮಾಡಿ ಮನೆಮಂದಿಯೆಲ್ಲಾ ಕೂತು ಸಿನಿಮಾ ನೋಡುತ್ತಿದ್ದಾರೆ.

ಟಿವಿಯಲ್ಲಿ ಜಾಹೀರಾತುಗಳ ನಡುವೆ ಸಿನಿಮಾ ನೋಡಬೇಕು. ಅದು ಸಿನಿಮಾ ಪ್ರಸಾರವಾಗುವ ಸಮಯಕ್ಕೆ ಕಾದು ಕೂರಬೇಕು. ಆದರೆ ಓಟಿಟಿಯಲ್ಲಿ ಜಾಹೀರಾತು ರಗಳೆ ಇಲ್ಲದೇ ತಮಗೆ ಇಷ್ಟಬಂದ ಸಮಯದಲ್ಲಿ ನೋಡಬಹುದು. ಹಾಗಾಗಿ ಟಿವಿಯಲ್ಲಿ ಸಿನಿಮಾ ನೋಡುವ ಕ್ರೇಜ್ ಕಮ್ಮಿ ಆಗ್ತಿದೆ.

ಟಿವಿಯಲ್ಲಿ ಸಿನಿಮಾ ವೀಕ್ಷಣೆ ಕಮ್ಮಿ ಆಗಿ ಟಿಆರ್‌ಪಿ ಬಿದ್ದು ಹೋಗಿದೆ. ಇದರಿಂದ ವಾಹಿನಿಗಳಿಗೆ ಜಾಹೀರಾತುಗಳು ಸಿಗುತ್ತಿಲ್ಲ. ಇದೇ ಕಾರಣಕ್ಕೆ ಇತ್ತೀಚೆಗೆ ಜೀ ಸಂಸ್ಥೆ ಸಿನಿಮಾಗಳನ್ನು ಮೊದಲು ಓಟಿಟಿಯಲ್ಲಿ ರಿಲೀಸ್ ಮಾಡಲು ಹಿಂದೇಟು ಹಾಕುತ್ತಿದೆ. ಏಕಕಾಲಕ್ಕೆ ಟಿವಿ ಹಾಗೂ ಓಟಿಟಿಯಲ್ಲಿ ಸಿನಿಮಾ ಪ್ರಸಾರ ಮಾಡುವ ತಂತ್ರದ ಮೊರೆ ಹೋಗಿದೆ.

More from Filmibeat

English summary
OTT giants like Netflix and Prime Video are feeling the strain of spending crores on blockbuster movies;
Read more about: kollywood tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X