twitter
    For Quick Alerts
    ALLOW NOTIFICATIONS  
    For Daily Alerts

    ನೆಟ್‌ಫ್ಲಿಕ್ಸ್‌ನಲ್ಲಿಯೂ ಪ್ರಸಾರವಾಗಲಿದೆ ಜಾಹೀರಾತು! ಯಾವಾಗಲಿಂದ!

    |

    ಇದು ಒಟಿಟಿಗಳ ಜಮಾನಾ. ಹಲವಾರು ಒಟಿಟಿಗಳು ಭಾರತದಲ್ಲಿ ಸಕ್ರಿಯವಾಗಿವೆ ಮತ್ತು ಬಹುತೇಕ ಒಟಿಟಿಗಳು ಒಳ್ಳೆಯ ಲಾಭವನ್ನು ಮಾಡುತ್ತಿವೆ ಎನ್ನಲಾಗುತ್ತಿದೆ.

    ಆದರೆ ಗ್ಲೋಬಲ್ ಮಟ್ಟದಲ್ಲಿ ಚಿತ್ರಣ ಬೇರೆಯದ್ದೇ ರೀತಿಯಲ್ಲಿದೆ. ವಿಶ್ವದ ಜನಪ್ರಿಯ ಒಟಿಟಿ ಆಗಿರುವ ನೆಟ್‌ಫ್ಲಿಕ್ಸ್‌ ಪ್ರಸ್ತುತ ನಷ್ಟದಲ್ಲಿದೆ ಎನ್ನಲಾಗುತ್ತಿದೆ. ನೆಟ್‌ಫ್ಲಿಕ್ಸ್‌ನ ಪ್ರತಿಸ್ಪರ್ಧಿಗಳಾದ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್, ಅಮೆಜಾನ್ ಪ್ರೈಂ, ಸೋನಿ, ಆಪಲ್, ಡಿಸ್ಕವರಿ ಇನ್ನಿತರೆ ಒಟಿಟಿಗಳಿಗೆ ಅದರದ್ದೇ ಆದ ಬೇರೆ ಉದ್ಯಮ ಇದೆ. ಹಾಗಾಗಿ ಅವರು ನಷ್ಟವನ್ನು ಮ್ಯಾನೇಜ್ ಮಾಡುತ್ತಿವೆ ಆದರೆ ನೆಟ್‌ಫ್ಲಿಕ್ಸ್‌ಗೆ ಒಟಿಟಿ ಕಂಟೆಂಟ್ ಹೊರತಾಗಿ ಇನ್ನಾವುದೇ ವ್ಯವಹಾರ ಇಲ್ಲ.

    ಇದೇ ಕಾರಣಕ್ಕೆ ಕೋವಿಡ್ ಪ್ರಭಾವ ಇಳಿಯುತ್ತಾ ಬಂದಂತೆ ನೆಟ್‌ಫ್ಲಿಕ್ಸ್‌ ಆದಾಯವೂ ಕುಸಿಯುತ್ತಿದೆಯಂತೆ. ಅಮೆರಿಕದಲ್ಲಿ ನೆಟ್‌ಫ್ಲಿಕ್ಸ್‌ನ ಷೇರು ಮೌಲ್ಯ 497 ಡಾಲರ್ ಕುಸಿದಿದೆ. ಆರು ತಿಂಗಳ ಹಿಂದೆ 690 ರ ಆಸುಪಾಸು ಇದ್ದ ನೆಟ್‌ಪ್ಲಿಕ್ಸ್‌ನ ಷೇರು ಮೌಲ್ಯ ಈಗ 190 ಡಾಲರ್ ಇದೆ. ಒಂದು ಸಮಯದಲ್ಲಿ 150 ಡಾಲರ್‌ಗೂ ಕುಸಿದಿತ್ತು ಷೇರು ಬೆಲೆ. ಇದೇ ಕಾರಣಕ್ಕೆ ನೆಟ್‌ಫ್ಲಿಕ್ಸ್‌ ಇದೀಗ ಹೊಸ ಐಡಿಯಾ ಒಂದನ್ನು ಮಾಡಿದೆ. ಆದರೆ ಇದು ವರ್ಕೌಟ್‌ ಆಗುತ್ತದೆಯೇ ಇಲ್ಲವೇ ಕಾದು ನೋಡಬೇಕಿದೆ.

    ಜಾಹೀರಾತು ಪ್ರದರ್ಶಿಸಲಿರುವ ನೆಟ್‌ಫ್ಲಿಕ್ಸ್

    ಜಾಹೀರಾತು ಪ್ರದರ್ಶಿಸಲಿರುವ ನೆಟ್‌ಫ್ಲಿಕ್ಸ್

    ಸಾಮಾನ್ಯವಾಗಿ ಒಟಿಟಿಗಳಲ್ಲಿ ಜಾಹೀರಾತು ಬರುವುದಿಲ್ಲ. ಏಕೆಂದರೆ ಗ್ರಾಹಕ ಹಣ ನೀಡಿ ಅದರ ಸೇವೆ ಖರೀದಿಸಿರುತ್ತಾನೆ ಹಾಗಾಗಿ ಒಟಿಟಿಗಳು ಸಿನಿಮಾ ಪ್ರಸಾರ ಮಾಡುವಾಗ ಯಾವುದೇ ಜಾಹೀರಾತು ಪ್ರದರ್ಶನ ಮಾಡುವುದಿಲ್ಲ. ಆದರೆ ನೆಟ್‌ಫ್ಲಿಕ್ಸ್‌ ಇದೀಗ ತನ್ನ ನಷ್ಟವನ್ನು ಕಡಿಮೆ ಮಾಡಿಕೊಳ್ಳಲು ಒಟಿಟಿಯಲ್ಲಿ ಜಾಹೀರಾತು ಪ್ರದರ್ಶಿಸಲು ಯೋಜಿಸಿದೆ. ಆದರೆ ಇದನ್ನು ನೆಟ್‌ಫ್ಲಿಕ್ಸ್‌ನ ಸಬ್‌ಸ್ಕ್ರೈಬರ್‌ಗಳು ಒಪ್ಪುತ್ತಾರಾ? ಅನುಮಾನವಿದೆ.

    ಸಿಬ್ಬಂದಿಗೆ ಮಾಹಿತಿ ನೀಡಿರುವ ನೆಟ್‌ಫ್ಲಿಕ್ಸ್

    ಸಿಬ್ಬಂದಿಗೆ ಮಾಹಿತಿ ನೀಡಿರುವ ನೆಟ್‌ಫ್ಲಿಕ್ಸ್

    ಈ ವರ್ಷಾಂತ್ಯದಿಂದ ಒಟಿಟಿಯಲ್ಲಿ ಜಾಹೀರಾತುಗಳು ಪ್ರಸಾರವಾಗಬಹುದು ಎಂದು ಸ್ವತಃ ನೆಟ್‌ಫ್ಲಿಕ್ಸ್‌ ತನ್ನ ಸಿಬ್ಬಂದಿಗೆ ಸೂಚನೆ ನೀಡಿದೆಯಂತೆ. ಇದು ಮಾತ್ರವೇ ಅಲ್ಲದೆ, ಒಂದು ಖಾತೆಯಲ್ಲಿ ಇತರರು ನೆಟ್‌ಫ್ಲಿಕ್ಸ್ ಸೇವೆ ಆನಂದಿಸಬಹುದಾಗಿರುವ ಪ್ರಸ್ತುತ ಮಾದರಿಯನ್ನು ಪುನರ್‌ ಪರಿಶೀಲಿಸುವುದಾಗಿಯೂ ಹೇಳಿದೆ. ಜೊತೆಗೆ ಕಡಿಮೆ ಸಬ್‌ಸ್ಕ್ರೈಬರ್‌ ಶುಲ್ಕಕ್ಕೆ ಜಾಹೀರಾತು ಸಹಿತ ಕಂಟೆಂಟ್ ನೀಡುವ ಹೊಸ ಪ್ಲ್ಯಾನ್ ತರುವ ಆಲೋಚನೆಯೂ ಈ ಒಟಿಟಿ ದೈತ್ಯಕ್ಕಿದೆ.

    ಈ ವರೆಗೆ ಜಾಹೀರಾತು ಪ್ರದರ್ಶಿಸಿಲ್ಲ ನೆಟ್‌ಫ್ಲಿಕ್ಸ್

    ಈ ವರೆಗೆ ಜಾಹೀರಾತು ಪ್ರದರ್ಶಿಸಿಲ್ಲ ನೆಟ್‌ಫ್ಲಿಕ್ಸ್

    ನೆಟ್‌ಫ್ಲಿಕ್ಸ್‌ ತನ್ನ ಗುಣಮಟ್ಟಕ್ಕೆ ಹೆಸರುವಾಸಿಯಾಗಿದೆ. ನೆಟ್‌ಫ್ಲಿಕ್ಸ್‌ ಯಾವುದೇ ಜಾಹೀರಾತನ್ನು ಒಟಿಟಿಯಲ್ಲಿ ಪ್ರಸಾರ ಮಾಡುವುದಿಲ್ಲ. ತನ್ನ ಪ್ರತಿಸ್ಪರ್ಧಿ ಒಟಿಟಿಗಳಿಗಿಂತಲೂ ಹೆಚ್ಚು ಸಬ್‌ಸ್ಕ್ರಿಪ್ಷನ್ ಶುಲ್ಕ ಪಡೆವ ನೆಟ್‌ಫ್ಲಿಕ್ಸ್‌ ಜಾಹೀರಾತು ಪ್ರದರ್ಶಿಸಲು ಮುಂದಾದರೆ ಅದನ್ನು ಸಬ್‌ಸ್ಕ್ರೈಬರ್‌ಗಳು ಒಪ್ಪುವುದು ಅನುಮಾನ. ನೆಟ್‌ಫ್ಲಿಕ್ಸ್ ಒಟಿಟಿ ಪ್ರಾರಂಭವಾದಾಗಿನಿಂದಲೂ ಜಾಹೀರಾತು ಪ್ರಸಾರವಾಗಿದ್ದಿಲ್ಲ.

    ಮುಳುತ್ತಿರುವ ನೆಟ್‌ಫ್ಲಿಕ್ಸ್‌ ಅನ್ನು ಉಳಿಸುತ್ತವೆಯೇ?

    ಮುಳುತ್ತಿರುವ ನೆಟ್‌ಫ್ಲಿಕ್ಸ್‌ ಅನ್ನು ಉಳಿಸುತ್ತವೆಯೇ?

    ನೆಟ್‌ಫ್ಲಿಕ್ಸ್ ಇದೀಗ ತೀವ್ರ ಸಂಕಷ್ಟದಲ್ಲಿದೆ. ಈ ವರ್ಷಾರಂಭದ ಮೊದಲ ಮೂರು ತಿಂಗಳಿನಲ್ಲಿಯೇ ಸುಮಾರು 2 ಲಕ್ಷಕ್ಕೂ ಹೆಚ್ಚು ಸಬ್‌ಸ್ಕ್ರೈಬರ್‌ಗಳನ್ನು ನೆಟ್‌ಫ್ಲಿಕ್ಸ್ ಕಳೆದುಕೊಂಡಿದೆ. ಈ ದಶಮಾನದಲ್ಲಿಯೇ ಅತಿ ದೊಡ್ಡ ಸಬ್‌ಸ್ಕ್ರೈಬರ್ ಲಾಸ್ ಅನ್ನು ನೆಟ್‌ಫ್ಲಿಕ್ಸ್ ಎದುರಿಸಿದೆ. ಹಾಗಾಗಿ ಈ ಭಾರಿ ಹಿನ್ನಡೆಯನ್ನು ಸರಿತೂಗಿಸಲು ನೆಟ್‌ಫ್ಲಿಕ್ಸ್‌ ಈ ಯೋಜನೆ ರೂಪಿಸಿದೆ. ಇದರ ಜೊತೆಗೆ ನೆಟ್‌ಫ್ಲಿಕ್ಸ್‌ ಈಗ ನೀಡುತ್ತಿರುವ ವೆಬ್ ಸರಣಿ, ಸಿನಿಮಾ, ಡಾಕ್ಯುಮೆಂಟರಿಗಳ ಜೊತೆಗೆ ಲೈವ್ ಗೇಮ್‌ಗಳನ್ನು ಸಹ ನೀಡಲು ಮುಂದಾಗುತ್ತಿದೆ. ಈ ಯೋಜನೆಗಳು ಮುಳುಗುತ್ತಿರುವ ನೆಟ್‌ಫ್ಲೆಕ್ಸ್‌ ಅನ್ನು ಕಾಪಾಡುತ್ತವೆಯೇ? ಕಾದು ನೋಡಬೇಕಿದೆ.

    English summary
    Netflix will run advertisements on its OTT from this year end to stop heavy loss. Netflix is in heavy loss from the start of this year.
    Sunday, June 26, 2022, 23:25
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X