OTT Releases This Week: 'ಎಕ್ಕ' ಸೇರಿ ಬ್ಲಾಕ್‌ಬಸ್ಟರ್ ಚಿತ್ರಗಳು ಈ ವಾರ ಓಟಿಟಿಗೆ; ಇಲ್ಲಿದೆ ಲಿಸ್ಟ್
10 ದಿನಗಳ ಹಿಂದೆ ಓಟಿಟಿಗೆ ಬಂದಿದ್ದ 'ಕಾಂತಾರ- 1', 'ಇಡ್ಲಿ ಕಡೇ' ಹಾಗೂ 'ಲೋಕ' ಚಿತ್ರಗಳು ಇನ್ನು ಸದ್ದು ಮಾಡುತ್ತಿವೆ. ಕಳೆದ ವೀಕೆಂಡ್ ಯಾವುದೇ ದೊಡ್ಡ ಸಿನಿಮಾ ಸ್ಮಾಲ್ ಸ್ಕ್ರೀನ್‌ಗೆ ಎಂಟ್ರಿ ಕೊಟ್ಟಿರಲಿಲ್ಲ. ಆದರೆ ಈ ವಾರ ಇಂಟ್ರೆಸ್ಟಿಂಗ್ ಸಿನಿಮಾಗಳು ವೀಕ್ಷಕರ ಮುಂದೆ ಬರ್ತಿವೆ. ಪಟ್ಟಿಯಲ್ಲಿ ಕನ್ನಡ ಚಿತ್ರಗಳು ಇವೆ.
ದೊಡ್ಡ ಸಿನಿಮಾಗಳೇ ತಿಂಗಳಿಗೂ ಮುನ್ನ ಓಟಿಟಿಗೆ ಬರ್ತಿವೆ. 'ಕಾಂತಾರ- 1' ಸಿನಿಮಾ 4 ವಾರಕ್ಕೆ ಪ್ರೈಂ ವೀಡಿಯೋಗೆ ಬಂದಿದ್ದು ಗೊತ್ತೇಯಿದೆ. ಭಾರೀ ಮೊತ್ತಕ್ಕೆ ರೈಟ್ಸ್ ಕೊಂಡುಕೊಳ್ಳುವ ಓಟಿಟಿ ಸಂಸ್ಥೆಗಳು ಪಟ್ಟು ಹಿಡಿದು ಬೇಗನೆ ಸಿನಿಮಾಗಳು ರಿಲೀಸ್ ಮಾಡುತ್ತಿವೆ. ಹಾಗಾಗಿ ಕೆಲವರು ಚಿತ್ರಮಂದಿರಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ.

ಬಾಲಿವುಡ್‌ನಲ್ಲಿ ಮಾತ್ರ 8 ವಾರಗಳ ಬಳಿಕ ಓಟಿಟಿಯಲ್ಲಿ ಸಿನಿಮಾ ಬಿಡುಗಡೆ ಮಾಡುವ ನಿಯಮ ಪಾಲಿಸುತ್ತಿದ್ದಾರೆ. 'ಕಾಂತಾರ- 1' ಚಿತ್ರದ ದಕ್ಷಿಣದ 4 ಭಾಷೆಗಳಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಆದರೆ ಹಿಂದಿ ವರ್ಷನ್ ಮಾತ್ರ ಇನ್ನು ಬಂದಿಲ್ಲ. ಇನ್ನು ಈ ವಾರ ಯಾವೆಲ್ಲಾ ಸಿನಿಮಾಗಳು ಓಟಿಟಿಗೆ ಬರ್ತಿವೆ ಮುಂದೆ ಓದಿ.
ಎಕ್ಕ
ಕನ್ನಡದ 'ಎಕ್ಕ' ಸಿನಿಮಾ ಜುಲೈ 18ಕ್ಕೆ ತೆರೆಗೆ ಬಂದಿತ್ತು. ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಆದರೆ ಓಟಿಟಿಗೆ ಮಾತ್ರ ಇನ್ನು ಬರಲೇ ಇಲ್ಲ. ಸಿನಿರಸಿಕರು ಕಾದು ಕಾದು ಸುಸ್ತಾಗಿದ್ದರು. ಅಂತಿಮವಾಗಿ ಈ ವಾರ ಸಿನಿಮಾ ಸನ್‌ನೆಕ್ಸ್ಟ್ ಓಟಿಟಿಗೆ ಬರ್ತಿದೆ. ಈ ಹಿಂದೆ ಜೀ5ನಲ್ಲಿ ಸಿನಿಮಾ ರಿಲೀಸ್ ಆಗುತ್ತದೆ ಎನ್ನಲಾಗಿತ್ತು. ಅದು ಸುಳ್ಳಾಗಿದೆ.

ಯುವರಾಜ್‌ಕುಮಾರ್ ನಟನೆಯ 2ನೇ ಸಿನಿಮಾ ಇದು. ರೋಹಿತ್ ಪದಕಿ ನಿರ್ದೇಶನದ ಚಿತ್ರದ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಸಂಜನಾ ಆನಂದ್ ನಾಯಕಿಯಾಗಿ ನಟಿಸಿದ್ದಾರೆ. ಚರಣ್ ರಾಜ್ ಸಂಗೀತದಲ್ಲಿ ಹಾಡುಗಳು ಹಿಟ್ ಆಗಿತ್ತು. ನವೆಂಬರ್ 13ಕ್ಕೆ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ. ಪಿಆರ್‌ಕೆ ಪ್ರೊಡಕ್ಷನ್ಸ್, ಜಯಣ್ಣ ಫಿಲ್ಮ್ಸ್ ಹಾಗೂ ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆಗಳು ಚಿತ್ರ ನಿರ್ಮಾಣ ಮಾಡಿದ್ದವು.
ಡ್ಯೂಡ್
ತಮಿಳಿನ ಸೂಪರ್ ಹಿಟ್ 'ಡ್ಯೂಡ್' ಚಿತ್ರ ಕೂಡ ಇದೇ ವಾರ ಓಟಿಟಿಗೆ ಎಂಟ್ರಿ ಕೊಡ್ತಿದೆ. ಕೀರ್ತಿಶ್ವರನ್ ನಿರ್ದೇಶನದ ಚಿತ್ರದಲ್ಲಿ ಪ್ರದೀಪ್ ರಂಗನಾಥನ್ ಹೀರೊ ಆಗಿ ಮಿಂಚಿದ್ದಾರೆ. ಮಮಿತಾ ಬೈಜು, ನೇಹಾ ಶೆಟ್ಟಿ ನಾಯಕಿಯರಾಗಿ ಸಾಥ್ ಕೊಟ್ಟಿದ್ದರು. ಅಕ್ಟೋಬರ್ 17ಕ್ಕೆ ತೆರೆಕಂಡು ಈ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ದೀಪಾವಳಿ ಹಿಟ್ ಎನಿಸಿಕೊಂಡಿತ್ತು. 35 ಕೋಟಿ ರೂ. ಬಜೆಟ್ ಸಿನಿಮಾ 100 ಕೋಟಿ ರೂ.ಗೂ ಅಧಿಕ ಗಳಿಕೆ ಕಂಡಿತ್ತು. ನವೆಂಬರ್ 14ಕ್ಕೆ ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ವೀಕ್ಷಣೆಗೆ ಸಿಗಲಿದೆ.
ತೆಲುಸು ಕದಾ
ಸಿದ್ದು ಜೊನ್ನಲಗಡ್ಡ, ರಾಶಿ ಖನ್ನಾ ಹಾಗೂ ಶ್ರೀನಿಧಿ ಶೆಟ್ಟಿ ನಟನೆಯ 'ತೆಲುಸು ಕದಾ' ಚಿತ್ರ ಕೂಡ ಈ ವಾರವೇ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗಲಿದೆ. ನೀರಜಾ ಕೋನ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಭಾರೀ ನಿರೀಕ್ಷೆ ಹುಟ್ಟಾಕ್ಕಿದ್ದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು. ನವೆಂಬರ್ 14 ಸಿನಿಮಾ ಓಟಿಟಿಯಲ್ಲೇ ನೋಡಬಹುದು.
ಪ್ರೈಂ ವೀಡಿಯೋ
1. ಪ್ಲೇ ಡೇಟ್(ಇಂಗ್ಲೀಷ್ ಸಿನಿಮಾ) ನವೆಂಬರ್ 12
ಹಾಟ್‌ಸ್ಟರ್
1. ಅವಿಹಿತಂ (ಮಲಯಾಳಂ ಸಿನಿಮಾ) ನವೆಂಬರ್ 14
2. ಜಾಲಿ ಎಲ್‌ಎಲ್‌ಬಿ- 3 (ಹಿಂದಿ ಸಿನಿಮಾ) ನವೆಂಬರ್ 14
3. ಜುರಾಸಿಕ್ ವರ್ಲ್ಡ್ ರೀಬರ್ತ್(ಇಂಗ್ಲೀಷ್ ಸಿನಿಮಾ) (ಮಲಯಾಳಂ ಸಿನಿಮಾ) ನವೆಂಬರ್ 14
ಜೀ5
1. ಇನ್ಸ್‌ಸ್ಪೆಕ್ಷನ್ ಬಂಗ್ಲಾ(ಮಲಯಾಳಂ ವೆಬ್ ಸೀರಿಸ್) ನವೆಂಬರ್ 14
2. ದಶಾವತಾರ್(ಮರಾಠಿ ಸಿನಿಮಾ) ನವೆಂಬರ್ 14
ಅಹಾ ಓಟಿಟಿ
1. ಕೆ ರ್ಯಾಂಪ್ (ತೆಲುಗು ಸಿನಿಮಾ)ನವೆಂಬರ್ 15
ನೆಟ್‌ಫ್ಲಿಕ್ಸ್
1. ಡೆಲ್ಲಿ ಕ್ರೈಂ ಸೀಸನ್-3 (ಹಿಂದಿ ವೆಬ್ ಸೀರಿಸ್) ನವೆಂಬರ್ 12
2. ಇನ್ ಯುವರ್ ಡ್ರೀಮ್ಸ್(ಇಂಗ್ಲೀಷ್ ಸಿನಿಮಾ) ನವೆಂಬರ್ 14
3. ಜಾಕ್ ಪಾಲ್ vs ಟ್ಯಾಂಕ್ ಡೇವಿಸ್(ಇಂಗ್ಲೀಷ್ ಸಿನಿಮಾ) ನವೆಂಬರ್ 14
4. ಎ ಮೇರಿ ಲಿಟ್ಲ್ ಎಕ್ಸ್-ಮಸ್(ಇಂಗ್ಲೀಷ್ ಸಿನಿಮಾ) ನವೆಂಬರ್ 14


Click it and Unblock the Notifications











