ಕನ್ನಡಿಗರಿಂದ ಕನ್ನಡಿಗರಿಗಾಗಿ ಬಂತು ಹೊಸ OTT ಪ್ಲಾಟ್‌ಫಾರ್ಮ್; ಚಂದನವನಕ್ಕೆ ಬಲ ತುಂಬುತ್ತಾ?

ಕನ್ನಡ ಸಿನಿಮಾಗಳನ್ನು ಓಟಿಟಿ ಸಂಸ್ಥೆಗಳು ಕೊಂಡುಕೊಳ್ಳಲು ಮುಂದೆ ಬರುವುದಿಲ್ಲ ಎನ್ನವ ಆರೋಪ ಪದೇ ಪದೆ ಕೇಳಿಬರುತ್ತದೆ. ನೆಟ್‌ಫ್ಲಿಕ್ಸ್ ರೀತಿಯ ಓಟಿಟಿ ವೇದಿಕೆ ಈವರೆಗೆ ಬೆರಳೆಣಿಕೆಯಷ್ಟು ಕನ್ನಡ ಸಿನಿಮಾಗಳನ್ನು ಮಾತ್ರ ಕೊಂಡುಕೊಂಡಿದೆ. ಇದೇ ಕಾರಣಕ್ಕೆ ಕನ್ನಡದಲ್ಲೇ ಒಂದು ಓಟಿಟಿ ಪ್ಲಾಟ್‌ಫಾರ್ಮ್ ಬೇಕು ಎನ್ನುವ ಕೂಗು ಬಹಳ ದಿನಗಳಿಂದ ಕೇಳಿಬರ್ತಿತ್ತು.

ಒಂದೆರಡು ಕನ್ನಡ ಡಿಜಿಟಲ್ ವೇದಿಕೆಗಳಲ್ಲಿ ಕನ್ನಡ ಸಿನಿಮಾಗಳನ್ನು ಸ್ಟ್ರೀಮಿಂಗ್ ಮಾಡಲಾಗ್ತಿದೆ. ಆದರೆ ದೊಡ್ಡಮಟ್ಟದಲ್ಲಿ ಅದು ರೀಚ್ ಆಗಿಲ್ಲ. ಅಮೇಜಾನ್, ನೆಟ್‌ಫ್ಲಿಕ್ಸ್, ಜೀ-5, ಜಿಯೋ ಹಾಟ್‌ಸ್ಟರ್ ರೀತಿ ಪ್ರಚಾರ ಪಡೆದಿಲ್ಲ. ಹೆಚ್ಚು ಜನ ಚಂದಾದಾರರು ಇಲ್ಲ. ಇದೆಲ್ಲದರ ನಡುವೆ ಕನ್ನಡದಲ್ಲಿ AVR CINEMAX ಎಂಬ ಓಟಿಟಿ ಫ್ಲಾಟ್‌ಫಾರ್ಮ್ ಶುರುವಾಗಿದೆ. ಈಗಾಗಲೇ ಸಾಕಷ್ಟು ಕನ್ನಡ ಸಿನಿಮಾಗಳು ಅಲ್ಲಿ ವೀಕ್ಷಣೆಗೆ ಲಭ್ಯವಿದೆ. ಅರವಿಂದ್ ರೆಡ್ಡಿ ಎಂಬುವವರು ಈ ಓಟಿಟಿ ವೇದಿಕೆ ಆರಂಭಿಸಿದ್ದಾರೆ.

New Kannada OTT Platform AVR CINEMAX Launches to Boost Regional Cinema

ಡೈನಾಮಿಕ್ ಸ್ಟಾರ್ ದೇವರಾಜ್, ಸಿಂಪಲ್ ಸುನಿ, ಶ್ರೀನಗರ ಕಿಟ್ಟಿ ಸೇರಿದಂತೆ ಸಾಕಷ್ಟು ತಾರೆಯರು AVR CINEMAX ಓಟಿಟಿ ಪ್ಲಾಟ್‌ಫಾರ್ಮ್‌ ಬಗ್ಗೆ ಮಾತನಾಡಿದ್ದಾರೆ. ಅರವಿಂದ್ ರೆಡ್ಡಿ ಅವರ ಪ್ರಯತ್ನಕ್ಕೆ ಸ್ವಾಗತ ಕೋರಿದ್ದರು. ಎಲ್ಲರೂ ಸಬ್‌ಸ್ಕ್ರಿಪ್ಷನ್ ತಗೊಳ್ಳಿ ಎಂದು ಮನವಿ ಮಾಡಿದ್ದಾರೆ. ಸದ್ಯಕ್ಕೆ ಉಚಿತವಾಗಿ ಈ ಓಟಿಟಿಯಲ್ಲಿ ಸಿನಿಮಾಗಳನ್ನು ವೀಕ್ಷಿಸಬಹುದು. ನೂರಾರು ಸಿನಿಮಾಗಳು ಈಗಾಗಲೇ ಅಲ್ಲಿ ವೀಕ್ಷಣೆಗೆ ಲಭ್ಯವಿದೆ.

ಒಂದು ಓಟಿಟಿ ಸಂಸ್ಥೆಯನ್ನು ಆರಂಭಿಸಿ ನಿಭಾಯಿಸುವುದು ಅಷ್ಟು ಸುಲಭದ ಮಾತಲ್ಲ. ಹೆಚ್ಚು ಚಂದಾದಾರರು ಇದ್ದರೆ ಮಾತ್ರ ಪ್ಲಾಟ್‌ಫಾರ್ಮ್ ಉಳಿಸಿ ಬೆಳೆಸಲು ಸಾಧ್ಯ. ಇದೇ ಕಾರಣಕ್ಕೆ ಓಟಿಟಿ ಸಂಸ್ಥೆಯನ್ನು ಆರಂಭಿಸಲು ಎಲ್ಲರೂ ಹಿಂದು ಮುಂದು ನೋಡುತ್ತಾರೆ. ರಾಜ್ಯ ಸರ್ಕಾರ ಕೂಡ ಕನ್ನಡಕ್ಕೆ ಒಂದು ಪ್ಲಾಟ್‌ಫಾರ್ಮ್ ಆರಂಭಿಸುವ ಬಗ್ಗೆ ಹೇಳಿತ್ತು. ಇದರಿಂದ ಕನ್ನಡ ಸಿನಿಮಾಗಳಿಗೆ ಅನುಕೂಲವಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಎಲ್ಲಾ ಭಾಷೆಯ ಸಿನಿಮಾಗಳನ್ನು ಸ್ಟ್ರೀಮಿಂಗ್ ಮಾಡಿದರೆ ಹೆಚ್ಚು ರೀಚ್ ಇರುತ್ತದೆ. ಇದರಿಂದ ಚಂದಾದಾರರು ಹೆಚ್ಚಾಗುತ್ತಾರೆ. ಹೆಚ್ಚು ಹಣ ಕೊಟ್ಟು ದೊಡ್ಡ ಸಿನಿಮಾಗಳು ಓಟಿಟಿ ಸಂಸ್ಥೆಗಳು ಕೊಂಡುಕೊಂಡರೆ ಜನ ಸಬ್‌ಸ್ಕ್ರಿಪ್ಷನ್ ಪಡೆದು ನೋಡುತ್ತಾರೆ. ಅದಕ್ಕಾಗಿ ಭಾರೀ ಬಂಡವಾಳದ ಅವಶ್ಯಕತೆಯಿದೆ. AVR CINEMAX ಸಂಸ್ಥೆ ಈ ಸವಾಲನ್ನು ಹೇಗೆ ನಿಭಾಯಿಸುತ್ತದೆ ಎಂದು ಕಾದು ನೋಡಬೇಕು.

ಅಮೇಜಾನ್ ಹಾಗೂ ಜೀ-5 ಸಂಸ್ಥೆಗಳು ಮಾತ್ರ ಸದ್ಯಕ್ಕೆ ಕನ್ನಡ ಸಿನಿಮಾಗಳನ್ನು ಕೊಂಡುಕೊಂಡು ಸ್ಟ್ರೀಮಿಂಗ್ ಮಾಡುತ್ತಿವೆ. ದೊಡ್ಡ ಸಿನಿಮಾಗಳನ್ನು ಮಾತ್ರ ಅವರು ಖರೀದಿ ಮಾಡುತ್ತಾರೆ ಎನ್ನುವ ಅಸಮಾಧಾನವಿದೆ. ಇತ್ತೀಚೆಗೆ ಸ್ಟಾರ್ ನಟರ ಸಿನಿಮಾ ರೈಟ್ಸ್ ಪಡೆಯಲು ಚೌಕಾಸಿ ಮಾಡುತ್ತಿದ್ದಾರೆ. ಇದರಿಂದ ನಿರ್ಮಾಪಕರಿಗೆ ಹಿನ್ನೆಡೆ ಆಗುತ್ತಿದೆ. ಇನ್ನು ಮೀಡಿಯಂ ಬಜೆಟ್ ಸಿನಿಮಾಗಳು, ಹೊಸಬರ ಸಿನಿಮಾಗಳ ಓಟಿಟಿ ರೈಟ್ಸ್ ವಿಚಾರ ದೇವರಿಗೆ ಪ್ರೀತಿ. ಅಪ್ಪಿ ತಪ್ಪಿ ಸ್ಟ್ರೀಮಿಂಗ್ ಮಾಡಿದ್ರು ಪೇ ಫಾರ್ ವೀವ್ ಲೆಕ್ಕದಲ್ಲಿ ಒಪ್ಪಂದ ಮಾಡಿಕೊಳ್ಳುತ್ತಾರೆ. ಇದರಿಂದಲೂ ಅಷ್ಟೇ ಲಾಭ ಇಲ್ಲ.

AVR CINEMAX ವೇದಿಕೆಯಲ್ಲಿ ದೊಡ್ಡ ಕನ್ನಡ ಸಿನಿಮಾಗಳು ಸ್ಟ್ರೀಮಿಂಗ್ ಆಗಿ ಜನರನ್ನು ಸೆಳೆದರೆ ಚಂದಾದಾರರ ಸಂಖ್ಯೆ ಹೆಚ್ಚುತ್ತದೆ. ಸದ್ಯಕ್ಕೆ ಉಚಿತವಾಗಿ AVR CINEMAX ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ಜನ ಸಿನಿಮಾ ವೀಕ್ಷಿಸುವ ಅವಕಾಶವಿದ್ದು ಮುಂದೆ ಹಣ ಪಾವತಿಸಿ ಸಬ್‌ಸ್ಕ್ರಿಪ್ಷನ್ ಪಡೆಯಬೇಕು. ತೆಲುಗು, ತಮಿಳಿನಲ್ಲಿ ಇಂತಹ ಸಣ್ಣ ಓಟಿಟಿ ವೇದಿಕೆಗಳಿವೆ. ಕನ್ನಡ ಸಿನಿಮಾ ತಾರೆಯರು ಕೂಡ ಅರವಿಂದ್ ರೆಡ್ಡಿ ಪ್ರಯತ್ನಕ್ಕೆ ಬೆಂಬಲ ಸೂಚಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಹೊಸ ಓಟಿಟಿ ಹೇಗೆ ಸದ್ದು ಮಾಡುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

Read more about: sandalwood kannada suni
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X