Latest Ott Releases: ಶುಕ್ರವಾರ(ನವೆಂಬರ್ 21) ಒಂದೇ ದಿನ 10 ಹಿಟ್ ಚಿತ್ರಗಳು ಓಟಿಟಿಗೆ

'ಕಾಂತಾರ- 1' ಬಳಿಕ ಯಾವುದೇ ಸಿನಿಮಾಗಳ ದೊಡ್ಡದಾಗಿ ಸದ್ದು ಮಾಡ್ತಿಲ್ಲ. ಇತ್ತ ಓಟಿಟಿಯಲ್ಲಿ ಕೂಡ ಅಂತಹ ಇಂಟ್ರೆಸ್ಟಿಂಗ್ ಸಿನಿಮಾಗಳು ಸ್ಟ್ರೀಮಿಂಗ್ ಆಗ್ತಿಲ್ಲ. ಆದರೆ ಕಳೆದೊಂದು ತಿಂಗಳಲ್ಲಿ ಬಿಡುಗಡೆಯಾಗಿದ್ದ ಒಂದಷ್ಟು ಸಿನಿಮಾಗಳು ಈ ವಾರ ಓಟಿಟಿಗೆ ಬರ್ತಿವೆ. ಇದರಲ್ಲಿ ಕನ್ನಡ ಚಿತ್ರಗಳು ಇವೆ.

ಹಿಟ್ ಸಿನಿಮಾಗಳ ಜೊತೆಗೆ ಇಂಟ್ರೆಸ್ಟಿಂಗ್ ವೆಬ್ ಸೀರಿಸ್‌ಗಳು ಕೂಡ ಓಟಿಟಿ ಸ್ಟ್ರೀಮಿಂಗ್‌ಗೆ ಸಜ್ಜಾಗಿವೆ. ತಮಿಳು ಚಿತ್ರರಂಗದಲ್ಲಿ ಬಹಳ ಚರ್ಚೆ ಹುಟ್ಟಾಕ್ಕಿದ್ದ 'ಬೈಸನ್', ಕನ್ನಡದ 'ಒಂದು ಸರಳ ಪ್ರೇಮಕಥೆ' ಹಾಗೂ 'ದಿ ಫ್ಯಾಮಿಲಿಮ್ಯಾನ್ ಸೀಸನ್- 3' ವೆಬ್ ಸೀರಿಸ್ ಕೂಡ ಈ ಲಿಸ್ಟ್‌ನಲ್ಲಿದೆ.

New OTT Releases This Week Bison Family Man 3 Kannada Films and More Streaming from Nov 21

ಈ ವಾರ ಓಟಿಟಿಗೆ ಬರ್ತಿರೋ ಹೊಸ ಸಿನಿಮಾಗಳು ಜೊತೆಗೆ ಶುಕ್ರವಾರ(ನವೆಂಬರ್ 21) ಒಂದೇ ದಿನ ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಎಂಟ್ರಿ ಕೊಡುತ್ತಿರುವ ಹಲವು ಸಿನಿಮಾ, ವೆಬ್ ಸೀರಿಸ್ ಲಿಸ್ಟ್ ಮುಂದೆ ಓದಿ.

1. ಬೈಸನ್

ಮಾರಿ ಸೆಲ್ವರಾಜ್ ನಿರ್ದೇಶನದ ಸೆನ್ಸೇಷನಲ್ ಸಿನಿಮಾ ಇದು. ಸಾಕಷ್ಟು ಜನ ಈ ಚಿತ್ರವನ್ನು ಓಟಿಟಿಯಲ್ಲಿ ವೀಕ್ಷಿಸಲು ಕಾಯುತ್ತಿದ್ದಾರೆ. ತಮಿಳು ನಟ ಚಿಯಾನ್ ವಿಕ್ರಮ್ ಪುತ್ರ ಧ್ರುವ್ ಚಿತ್ರದ ಲೀಡ್ ರೋಲ್‌ನಲ್ಲಿ ನಟಿಸಿದ್ದಾರೆ. ಇನ್ನುಳಿದಂತೆ ಪಶುಪತಿ, ಅಮೀರ್, ಲಾಲ್ ಹಾಗೂ ಅನುಪಮಾ ಪರಮೇಶ್ವರನ್ ತಾರಾಗಣದಲ್ಲಿದ್ದಾರೆ.

30 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ 'ಬೈಸನ್' ಸಿನಿಮಾ 60 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ನವೆಂಬರ್ 21ರಂದು ನೆಟ್‌ಫ್ಲಿಕ್ಸ್‌ನಲ್ಲಿ ಈ ಸ್ಪೋರ್ಟ್ಸ್ ಆಕ್ಷನ್ ಡ್ರಾಮಾ ಸಿನಿಮಾ ಬಿಡುಗಡೆ ಆಗಲಿದೆ. ಕನ್ನಡಕ್ಕೂ ಡಬ್ ಆಗಿ ಬರ್ತಿದೆ.

2. ದಿ ಫ್ಯಾಮಿಲಿ ಮ್ಯಾನ್-3

ರಾಜ್‌ & ಡಿಕೆ ಜೋಡಿ ನಿರ್ದೇಶನದ ಸೂಪರ್ ಹಿಟ್ ವೆಬ್ ಸೀರಿಸ್ ದಿ ಫ್ಯಾಮಿಲಿ ಮ್ಯಾನ್. ಈಗಾಗಲೇ 2 ಸೀಸನ್ ರಿಲೀಸ್ ಆಗಿ ಹಿಟ್ ಆಗಿತ್ತು. ಈ ವಾರ 3ನೇ ಸೀಸನ್ ಪ್ರೈಂ ವೀಡಿಯೋದಲ್ಲಿ ಸ್ಟ್ರೀಮಿಂಗ್ ಆಗಲಿದೆ. ಮನೋಜ್ ಬಾಜ್ಪೆ, ಪ್ರಿಯಾಮಣಿ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಈ ಹಿಂದೆ ಸೀಸನ್‌ಗಳಲ್ಲಿ ಇದ್ದ ಕಲಾವಿದರ ಜೊತೆ ಹೊಸದಾಗಿ ಮತ್ತಷ್ಟು ಜನ ಸೇರಿಕೊಂಡಿದ್ದಾರೆ.

3. ಒಂದು ಸರಳ ಪ್ರೇಮಕಥೆ

ವಿನಯ್ ರಾಜ್‌ಕುಮಾರ್ ನಟನೆಯ 'ಒಂದು ಸರಳ ಪ್ರೇಮಕಥೆ' ಸಿನಿಮಾ ಕಳೆದ ವರ್ಷ ತೆರೆಗೆ ಬಂದಿತ್ತು. ಸಿಂಪಲ್ ಸುನಿ ನಿರ್ದೇಶನದ ಈ ರೊಮ್ಯಾಂಟಿಕ್ ಚಿತ್ರದಲ್ಲಿ ಮಲ್ಲಿಕಾ ಸಿಂಗ್, ಸ್ವಾತಿಷ್ಟ ಹಾಗೂ ರಾಜೇಶ್ ನಟರಂಗ ಚಿತ್ರದ ತಾರಾಗಣದಲ್ಲಿದ್ದಾರೆ. ಈ ಹಿಂದೆ ಈ ಸಿನಿಮಾ ಅಮೇಜಾನ್ ಪ್ರೈಂ ವೀಡಿಯೋದಲ್ಲಿ ಸ್ಟ್ರೀಮಿಂಗ್ ಆಗಿತ್ತು.

ಕಡಿಮೆ ಅವಧಿಗೆ ಪ್ರೈಂ ವೀಡಿಯೋ ಈ ಸಿನಿಮಾ ಕೊಂಡುಕೊಂಡಿತ್ತು. ಅವಧಿ ಮುಗಿದಿದ್ದು ಅಲ್ಲಿಂದ ತೆಗೆದು ಜೀ-5ನಲ್ಲಿ ಸ್ಟ್ರೀಮಿಂಗ್ ಮಾಡಲಾಗುತ್ತಿದೆ. ನವೆಂಬರ್ 21ರಿಂದ ಜೀ5 ಚಂದಾದಾರರು 'ಒಂದು ಸರಳ ಪ್ರೇಮಕಥೆ' ಸಿನಿಮಾ ಎಂಜಾಯ್ ಮಾಡಬಹುದು.

4. ಉಸಿರು

ಪಣೆಮ್ ಪ್ರಭಾಕರ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದ 'ಉಸಿರು' ಕನ್ನಡ ಸಿನಿಮಾ ಈ ವಾರ ಓಟಿಟಿಗೆ ಬರ್ತಿದೆ. ತಿಲಕ್, ಪ್ರಿಯಾ ಹೆಗಡೆ, ಸಂತೋಷ ನಂದಿವಾಡ, ಅಪೂರ್ವ ನಾಗರಾಜ್, ರಾಘು ರಾಮನಕೊಪ್ಪ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದು ಶುಕ್ರವಾರ ಸನ್‌ ನೆಕ್ಸ್ಟ್‌ ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಸಿನಿಮಾ ನೋಡಬಹುದು.

New OTT Releases This Week Bison Family Man 3 Kannada Films and More Streaming from Nov 21

5. ದಿ ಬೆಂಗಾಲ್ ಫೈಲ್ಸ್

ಹಿಂದಿ ಪೊಲಿಟಿಕಲ್ ಡ್ರಾಮಾ ಸಿನಿಮಾ 'ದಿ ಬೆಂಗಾಲ್ ಫೈಲ್ಸ್' ಸೆಪ್ಟೆಂಬರ್ 5ಕ್ಕೆ ತೆರೆಗೆ ಬಂದಿತ್ತು. ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಸಿನಿಮಾ ಭಾರೀ ವಿವಾದ ಹುಟ್ಟು ಹಾಕಿತ್ತು. ಮಿಥುನ್ ಚಕ್ರವರ್ತಿ, ಪಲ್ಲವಿ ಜೋಶಿ, ಅನುಪಮ್ ಖೇರ್ ನಟನೆಯ ಈ ಸಿನಿಮಾ ಜೀ-5ನಲ್ಲಿ ಸ್ಟೀಮಿಂಗ್ ಆರಂಭಿಸಲಿದೆ. ಇನ್ನು ಯಾವೆಲ್ಲಾ ಸಿನಿಮಾಗಳು ಈ ವಾರ ಓಟಿಟಿಗೆ ಬರ್ತಿದೆ ಎನ್ನುವ ಲಿಸ್ಟ್ ಇಲ್ಲಿದೆ.

ನೆಟ್‌ಫ್ಲಿಕ್ಸ್

1. ‍ಷಾಂಪೇನ್ ಪ್ರಾಬ್ಲಂಸ್(ಇಂಗ್ಲೀಷ್ ಸಿನಿಮಾ) ನವೆಂಬರ್ 19

2. ಬೇಬ್ಸ್ (ಇಂಗ್ಲೀಷ್ ಸಿನಿಮಾ) ನವೆಂಬರ್ 17

3. ಹೋಮ್ ಬೌಂಡ್(ಹಿಂದಿ ಸಿನಿಮಾ) (ಇಂಗ್ಲೀಷ್ ಸಿನಿಮಾ) ನವೆಂಬರ್ 21

4. ಟ್ರೈನ್ ಡ್ರೀಮ್ಸ್ (ಇಂಗ್ಲೀಷ್ ಸಿನಿಮಾ) ನವೆಂಬರ್ 21

5. ಡೈನಿಂಗ್ ವಿತ್ ದಿ ಕಪೂರ್ಸ್(ಹಿಂದಿ ಶೋ) ನವೆಂಬರ್ 21

6. ಬ್ಲಾಕ್ ಟು ಬ್ಲಾಕ್ (ಇಂಗ್ಲೀಷ್ ಸಿನಿಮಾ) ನವೆಂಬರ್ 17

ಪ್ರೈಂ ವೀಡಿಯೋ

1. ದಿ ಮೈಟಿ ನೆನ್(ಇಂಗ್ಲೀಷ್ ವೆಬ್ ಸೀರಿಸ್) ನವೆಂಬರ್ 19

ಜಿಯೋ ಹಾಟ್‌ಸ್ಟರ್

1. ನೈಟ್ ಸ್ವಿಮ್(ಇಂಗ್ಲೀಷ್ ಸಿನಿಮಾ) ನವೆಂಬರ್ 19

2. ಲ್ಯಾಂಡ್‌ ಮ್ಯಾನ್ ಸೀಸನ್-2 (ಇಂಗ್ಲೀಷ್ ವೆಬ್ ಸೀರಿಸ್) ನವೆಂಬರ್ 17

3. ನಾಡು ಸೆಂಟರ್(ತಮಿಳು ವೆಬ್ ಸೀರಿಸ್) ನವೆಂಬರ್ 20

4. ಜಿದ್ದಿ ಇಷ್ಕ್(ಹಿಂದಿ ವೆಬ್ ಸೀರಿಸ್) ನವೆಂಬರ್ 21

5. ದಿ ರೋಜಸ್(ಇಂಗ್ಲೀಷ್ ಸಿನಿಮಾ) ನವೆಂಬರ್ 20

6. ಅಜ್‌ಟೆಕ್ ಬ್ಯಾಟ್‌ಮ್ಯಾನ್ (ಇಂಗ್ಲೀಷ್ ಸಿನಿಮಾ) ನವೆಂಬರ್ 23

More from Filmibeat

English summary
OTT Releases this week: Get the full list of movies and web series releasing on OTT this week, including Tamil hit Bison, The Family Man Season 3 and 2 Kannada films.
Read more about: sandalwood kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X