OTT Releases this week: ಈ ವಾರ ಓಟಿಟಿಗೆ ಬರ್ತಿರೋ ಚಿತ್ರಗಳ ಪಟ್ಟಿ, ಕನ್ನಡ ಚಿತ್ರ ಕೂಡ ಇದೆ
ಚಿತ್ರಮಂದಿರಗಳಲ್ಲಿ 'ಭೀಮ', 'ಕೃಷ್ಣಂ ಪ್ರಣಯ ಸಖಿ', 'ಸ್ತ್ರೀ-2' ಹಾಗೂ 'ತಂಗಲಾನ್' ಸಿನಿಮಾಗಳ ಆರ್ಭಟ ಮುಂದುವರೆದಿದೆ. ಕಳೆದ ಶುಕ್ರವಾರ ಮತ್ತೊಂದಷ್ಟು ಸಿನಿಮಾಗಳು ತೆರೆಕಂಡು ಪ್ರೇಕ್ಷಕರ ಮೆಚ್ಚುಗೆ ಗಳಿಸಿವೆ. ಈ ವೀಕೆಂಡ್ ಕೂಡ ಇಂಟ್ರೆಸ್ಟಿಂಗ್ ಸಿನಿಮಾಗಳು ಪ್ರೇಕ್ಷಕರನ್ನು ರಂಜಿಸಲು ಬರಲಿವೆ.
ವಿನಯ್ ರಾಜ್‌ಕುಮಾರ್ ನಟನೆಯ 'ಪೆಪೆ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್ ಸಹ ಶುರುವಾಗಿದೆ. ರಿಷಬ್ ಶೆಟ್ಟಿ ನಿರ್ಮಾಣದ 'ಲಾಫಿಂಗ್ ಬುದ್ಧ' ಕೂಡ ತೆರೆಗೆ ಬರಲು ಸಜ್ಜಾಗಿದೆ. ಇನ್ನು ತೆಲುಗಿನಲ್ಲಿ ನಾನಿ ನಟನೆಯ 'ಸರಿಪೋದ ಶನಿವಾರಂ' ಸೇರಿ ಒಂದಷ್ಟು ಚಿತ್ರಗಳು ಪ್ರೇಕ್ಷಕರನ್ನು ರಂಜಿಸಲು ಬರ್ತಿವೆ.

ಬರೀ ಚಿತ್ರಮಂದರಿಗಳಲ್ಲಿ ಮಾತ್ರವಲ್ಲ ಓಟಿಟಿಯಲ್ಲಿ ಕೂಡ ಈ ವಾರ ಇಂಟ್ರೆಸ್ಟಿಂಗ್ ಸಿನಿಮಾ ಹಾಗೂ ವೆಬ್ ಸೀರಿಸ್ ಸ್ಟ್ರೀಮಿಂಗ್‌ಗೆ ಸಜ್ಜಾಗುತ್ತಿದೆ. ಲಿಸ್ಟ್‌ನಲ್ಲಿ ಒಂದು ಕನ್ನಡ ಸಿನಿಮಾ ಕೂಡ ಇದೆ. ಹಾಗಿದ್ದರೆ ಈ ವಾರ ಓಟಿಟಿಗೆ ಅಪ್‌ಲೋಡ್ ಆಗುತ್ತಿರುವ ಸಿನಿಮಾ, ಸೀರಿಸ್ ಲಿಸ್ಟ್ ಮುಂದೆ ಓದಿ.
ಅಮೇಜಾನ್ ಪ್ರೈಂ
1. ಚಿಲ್ಲಿ ಚಿಕ್ಕನ್
ಪ್ರತೀಕ್ ಪ್ರದೋಶ್ ನಿರ್ದೇಶನದ 'ಚಿಲ್ಲಿ ಚಿಕನ್' ಕನ್ನಡ ಸಿನಿಮಾ ಈ ವಾರ ಓಟಿಟಿಗೆ ಬರ್ತಿದೆ. ಜೂನ್ 21ಕ್ಕೆ ಸಿನಿಮಾ ತೆರೆಗೆ ಬಂದಿತ್ತು. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಕೂಡ ಸಿಕ್ಕಿತ್ತು. ಆದರೆ ದೊಡ್ಡಮಟ್ಟದಲ್ಲಿ ಸಿನಿಮಾ ಸದ್ದು ಮಾಡಿರಲಿಲ್ಲ. ಇದೀಗ ಅಮೇಜಾನ್ ಪ್ರೈಂನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ. ಸದ್ಯಕ್ಕೆ ಭಾರತದಲ್ಲಿ ಸಿನಿಮಾ ವೀಕ್ಷಣೆಗೆ ಸಿಗುತ್ತಿಲ್ಲ. ಇನ್ನೆರಡು ದಿನಗಳಲ್ಲಿ ಸಿನಿಮಾ ಭಾರತದ ಚಂದಾದಾರರಿಗೂ ಸಿಗಲಿದೆ. ಬಿ ವಿ ಶೃಂಗ, ಬಿಜೌ ತಂಗ್ಜಮ್ ಈ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.
2. ದಿ ರಿಂಗ್ಸ್ ಆಫ್ ಪವರ್ ಸೀಸನ್-2(ಇಂಗ್ಲೀಷ್ ಸೀರಿಸ್) ಆಗಸ್ಟ್ 29

ನೆಟ್‌ಫ್ಲಿಕ್ಸ್
1. ಬಡ್ಡಿ
ಅಲ್ಲು ಸಿರೀಶ್ ನಟನೆಯ ತೆಲುಗಿನ ಫ್ಯಾಂಟಸಿ ಆಕ್ಷನ್ ಸಿನಿಮಾ 'ಬಡ್ಡಿ' ಈ ವಾರ ಓಟಿಟಿಗೆ ಬರ್ತಿದೆ. ಆಗಸ್ಟ್ 30ಕ್ಕೆ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಸಾಮ್ ಆಂಟೊನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಗಾಯತ್ರಿ ಭಾರಧ್ವಜ್, ಅಲಿ, ಮುಖೇಶ್ ರಿಷಿ ತಾರಾಗಣದಲ್ಲಿದ್ದಾರೆ. ಮೋಷನ್ ಕ್ಯಾಪ್ಚರ್ ತಂತ್ರಜ್ಞಾನದಲ್ಲಿ ಬಡ್ಡಿ ಎನ್ನುವ ಒಂದು ಟೆಡ್ಡಿ ಪಾತ್ರವನ್ನು ಕ್ರಿಯೇಟ್ ಮಾಡಲಾಗಿದೆ.
2. ಪೊಲೈಟ್ ಸೊಸೈಟಿ (ಇಂಗ್ಲಿಷ್ ಸಿನಿಮಾ) - ಆಗಸ್ಟ್ 28
3. ಐಸಿ814 ದಿ ಕಂದಹಾರ್ ಹೈಜಾಕ್ (ಹಿಂದಿ ವೆಬ್ ಸೀರಿಸ್) - ಆಗಸ್ಟ್ 29
4. ಕಾವೋಸ್ (ಇಂಗ್ಲಿಷ್ ವೆಬ್ ಸೀರಿಸ್) - ಆಗಸ್ಟ್ 29
5. ಟರ್ಮಿನೇಟರ್ ಝೀರೋ (ಇಂಗ್ಲಿಷ್ ವೆಬ್ ಸೀರಿಸ್) - ಆಗಸ್ಟ್ 29
ಜೀ-5
1. ಮುರ್ಷಿದ್ (ಹಿಂದಿ ವೆಬ್ ಸೀರಿಸ್) - ಆಗಸ್ಟ್ 30
2. ಇಂಟ್ರಾಗೇಷನ್ (ಹಿಂದಿ ಸಿನಿಮಾ) - ಆಗಸ್ಟ್ 30
ಜಿಯೋ ಸಿನಿಮಾ
1. ಗಾಡ್ಜಿಲ್ಲಾ ಎಕ್ಸ್ ಕಿಂಗ್: ದಿ ನ್ಯೂ ಎಂಪೈರ್ (ಇಂಗ್ಲಿಷ್ ಸಿನಿಮಾ) - ಆಗಸ್ಟ್ 29
2. ಅಬಿಗೈಲ್ (ಇಂಗ್ಲಿಷ್ ಸಿನಿಮಾ) - ಆಗಸ್ಟ್ 26
3. ಕೆಡೆಟ್ಸ್ (ಹಿಂದಿ ವೆಬ್ ಸೀರಿಸ್) - ಆಗಸ್ಟ್ 30
ಲಯನ್ ಗೆಟ್‌ಪ್ಲೇ
1. ದಿ ಸೆಪ್ರಿಂಟ್ ಕ್ವೀನ್ ಸೀಸನ್-2 (ಇಂಗ್ಲೀಷ್ ಸೀರಿಸ್) ಆಗಸ್ಟ್ 30
2. ಹೆನ್ರೀಸ್ ಕ್ರೈಂ(ಇಂಗ್ಲೀಷ್ ಸಿನಿಮಾ) ಆಗಸ್ಟ್ 30
ಅಹಾ ಓಟಿಟಿ
1. ಪೇಚಿ(ತಮಿಳು ಸಿನಿಮಾ) ಆಗಸ್ಟ್ 29


Click it and Unblock the Notifications