OTT releases this week: ಈ ಓಟಿಟಿಯಲ್ಲಿ ಭರ್ಜರಿ ಮನರಂಜನೆ; ಇಲ್ಲಿದೆ ಸಿನಿಮಾ, ಸೀರಿಸ್ ಲಿಸ್ಟ್

ಸದ್ಯ ದೇಶದಲ್ಲಿ ಎರಡೇ ವಿಚಾರ ಹೆಚ್ಚು ಸುದ್ದಿಯಲ್ಲಿರೋದು. ಒಂದು ಲೋಕಸಭೆ ಚುನಾವಣೆ, ಮತ್ತೊಂದು ಐಪಿಎಲ್ ಕ್ರಿಕೆಟ್. ಇವೆರಡರ ಆರ್ಭಟದ ನಡುವೆ ಸಿನಿಮಾ ಗೌಣವಾಗಿಬಿಟ್ಟಿದೆ. ಥಿಯೇಟರ್‌ಗಳಲ್ಲಿ ಯಾವುದೇ ದೊಡ್ಡ ಸಿನಿಮಾಗಳು ಬರ್ತಿಲ್ಲ.

ಸಿನಿರಸಿಕರು ಸದ್ಯ ಓಟಿಟಿ ಸಿನಿಮಾಗಳತ್ತ ಹೆಚ್ಚು ಮುಖ ಮಾಡಿದ್ದಾರೆ. ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸ್ಟ್ರೀಮಿಂಗ್ ಆಗುವ ಸಿನಿಮಾ ಹಾಗೂ ವೆಬ್‌ಸೀರಿಸ್ ನೋಡಲು ಮುಗಿಬಿದ್ದಿದ್ದಾರೆ. ಕನ್ನಡದಲ್ಲೂ ಈ ವಾರ ಯಾವುದೇ ದೊಡ್ಡ ಸಿನಿಮಾ ರಿಲೀಸ್ ಆಗುತ್ತಿಲ್ಲ. ಸದ್ಯ ಓಟಿಟಿಯಲ್ಲಿ ಯಾವೆಲ್ಲಾ ಸಿನಿಮಾಗಳು ಸ್ಟ್ರೀಮಿಂಗ್ ಆಗುತ್ತಿವೆ ಬನ್ನಿ ನೋಡೋಣ.

New OTT Releases This Week For Regn Bheema Tillu Square and More Movies to Watch Online

ಅಮೇಜಾನ್ ಪ್ರೈಮ್

1. ಫಾರ್ ರಿಜಿಸ್ಟ್ರೇಷನ್

ಪೃಥ್ವಿ ಅಂಬರ್ ಹಾಗೂ ಮಿಲನಾ ನಾಗರಾಜ್ ನಟನೆಯ 'ಫಾರ್ ರಿಜಿಸ್ಟ್ರೇಷನ್' ಸಿನಿಮಾ ಸದ್ದಿಲ್ಲದೇ ಪ್ರೈಂ ವೀಡಿಯೋಗೆ ಬಂದಿದೆ. ಕನ್ನಡ ಸಿನಿಮಾ, ವೆಬ್‌ ಸೀರಿಸ್ ಓಟಿಟಿಗೆ ಬರೋದೆ ಕಮ್ಮಿ ಆಗಿಬಿಟ್ಟಿದೆ. ಸದ್ಯಕ್ಕೆ ಕನ್ನಡ ಸಿನಿರಸಿಕರು 'ಫಾರ್ ರಿಜಿಸ್ಟ್ರೇಷನ್' ಸಿನಿಮಾ ನೋಡಬಹುದು. ಫೆಬ್ರವರಿ 23ಕ್ಕೆ ತೆರೆಕಂಡಿದ್ದ ಸಿನಿಮಾ 2 ದಿನಗಳಿಂದ ಓಟಿಟಿಯಲ್ಲಿ ಲಭ್ಯವಿದೆ.

2. ರವಿಕೆ ಪ್ರಸಂಗ

ಕಿರುತೆರೆ ನಟಿ ಗೀತಾ ಭಾರತಿ ಭಟ್ ನಟನೆಯ 'ರವಿಕೆ ಪ್ರಸಂಗ' ಸಿನಿಮಾ ಅಮೇಜಾನ್ ಪ್ರೈಂನಲ್ಲಿ ಸಿಗುತ್ತಿದೆ. ಆದರೆ 99 ರೂ. ಕಟ್ಟಿ ಬಾಡಿಗೆ ಪದ್ಧತಿ ಆಧಾರದಲ್ಲಿ ಸದ್ಯಕ್ಕೆ ಸಿನಿಮಾ ವೀಕ್ಷಿಸಬಹುದಾಗಿದೆ.

3. ದಿಲ್ ದೋಸ್ತಿ ಡೆಲೆಮಾ(ಹಿಂದಿ ಸೀರಿಸ್)- ಏಪ್ರಿಲ್ 25

ನೆಟ್‌ಫ್ಲಿಕ್ಸ್

1. ಟಿಲ್ಲು ಸ್ಕ್ವೇರ್

ಇತ್ತೀಚೆಗೆ ತೆಲುಗಿನಲ್ಲಿ ಭಾರೀ ಸದ್ದು ಮಾಡಿದ 'ಟಿಲ್ಲು ಸ್ಕ್ವೇರ್' ಸಿನಿಮಾ ಈ ವೀಕೆಂಡ್ ಓಟಿಟಿಗೆ ಬರ್ತಿದೆ. ಅನುಪಮಾ ಪರಮೇಶ್ವರನ್ ಸಿಕ್ಕಾಪಟ್ಟೆ ಬೋಲ್ಡ್ ಆಗಿ ನಟಿಸಿರೋದು ಸಿನಿಮಾ ಬಗ್ಗೆ ನಿರೀಕ್ಷೆ ಮೂಡಿಸಿತ್ತು. 'ಡಿಜೆ ಟಿಲ್ಲು' ಹಿಟ್ ಆಗಿತ್ತು. ಅದರ ಮುಂದುವರೆದ ಭಾಗವಾಗಿ ಬಂದ 'ಟಿಲ್ಲು ಸ್ಕ್ವೇರ್' ಪ್ರೇಕ್ಷಕರ ಮನಗೆದ್ದಿತ್ತು. ಈ ಸಿನಿಮಾ ಓಟಿಟಿ ಸ್ಟ್ರೀಮಿಂಗ್‌ಗಾಗಿ ಬಹಳ ಜನ ಕಾಯುತ್ತಿದ್ದಾರೆ. ಸಿದ್ದು, ಅನುಪಮಾ ಜೊತೆಗೆ ಕನ್ನಡ ನಟಿ ನೇಹಾ ಶೆಟ್ಟಿ ಚಿತ್ರದಲ್ಲಿದ್ದಾರೆ.

New OTT Releases This Week For Regn Bheema Tillu Square and More Movies to Watch Online

2. ಗುಡ್ ಬಾಯ್ ಅರ್ಥ್(ಕೊರಿಯನ್ ಸೀರಿಸ್) ಏಪ್ರಿಲ್ 26

3. ಫೈಟ್ ಫಾರ್ ಪ್ಯಾರಡೈಸ್(ಜರ್ಮನ್ ಸೀರಿಸ್) ಏಪ್ರಿಲ್ 23

4. ಡೆಡ್ ಬಾಯ್ ಡಿಟೆಕ್ಟಿವ್ಸ್(ಇಂಗ್ಲೀಷ್ ಸೀರಿಸ್) ಏಪ್ರಿಲ್ 25

5. ದಿ ಅಸುಂತ ಕೇಸ್(ಸ್ಪ್ಯಾನಿಷ್ ಸೀರಿಸ್) ಏಪ್ರಿಲ್ 26

6. ಸಿಟಿ ಹಂಟರ್(ಜಪಾನೀಸ್ ಸಿನಿಮಾ) ಏಪ್ರಿಲ್ 25

7. ಡೆಲಿವರಿ ಮಿ(ಸ್ವೀಡಿಶ್ ಸೀರಿಸ್) ಏಪ್ರಿಲ್ 24

ಹಾಟ್‌ಸ್ಟರ್

1. ಭೀಮ

ತೆಲುಗಿನಲ್ಲಿ ಕನ್ನಡ ನಿರ್ದೇಶಕ ಎ. ಹರ್ಷ ನಿರ್ದೇಶನದ ಸಿನಿಮಾ 'ಭೀಮ'. ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿದ್ದ ಈ ಸಿನಿಮಾ ಏಪ್ರಿಲ್ 25ಕ್ಕೆ ಡಿಸ್ನಿ ಹಾಟ್‌ಸ್ಟರ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಚಿತ್ರದಲ್ಲಿ ಗೋಪಿಚಂದ್ ಹೀರೊ ಆಗಿ ನಟಿಸಿದ್ದಾರೆ. ಈ ಪ್ಯಾಂಟಸಿ ಆಕ್ಷನ್ ಡ್ರಾಮಾ ಚಿತ್ರದಲ್ಲಿ ಪ್ರಿಯಾ ಭವಾನಿ ಶಂಕರ್ ನಾಯಕಿಯಾಗಿ ನಟಿಸಿದ್ದಾರೆ.

2. ಕ್ರ್ಯಾಕ್

ವಿದ್ಯುತ್ ಜಮ್ವಾಲ್ ನಟನೆಯ ಸ್ಪೋರ್ಸ್ಟ್ ಆಕ್ಷನ್ ಡ್ರಾಮಾ 'ಕ್ರ್ಯಾಕ್' ಸಿನಿಮಾ ಓಟಿಟಿಗೆ ರಿಲೀಸ್‌ಗೆ ಸಜ್ಜಾಗಿದೆ. ಆದಿತ್ಯಾ ದತ್ ನಿರ್ದೇಶನದ ಈ ಸಿನಿಮಾ ಫೆಬ್ರವರಿ 23ಕ್ಕೆ ತೆರೆಗಪ್ಪಳಿಸಿತ್ತು. ಅರ್ಜುನ್ ರಾಂಪಾಲ್, ನೋರಾ ಫತೇಹಿ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿತ್ತು. ಬಾಕ್ಸಾಫೀಸ್‌ನಲ್ಲಿ 'ಕ್ರ್ಯಾಕ್' ಸಿನಿಮಾ ಸೋತಿತ್ತು. ಏಪ್ರಿಲ್ 26ಕ್ಕೆ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ.

3. ಥ್ಯಾಂಕ್ಯೂ, ಗುಡ್ ನೈಟ್(ಇಂಗ್ಲೀಷ್ ಸೀರಿಸ್) ಏಪ್ರಿಲ್ 26

ಬುಕ್‌ಮೈ ಶೀ

1. ಕುಂಗ್‌ಫು ಪಾಂಡಾ 4(ಇಂಗ್ಲೀಷ್ ಸಿನಿಮಾ) ಏಪ್ರಿಲ್ 26

ಜಿಯೋ ಸಿನಿಮಾ

1. ವೀ ಆರ್ ಹಿಯರ್ ಸೀಸನ್-2(ಇಂಗ್ಲೀಷ್ ಸೀರಿಸ್) ಏಪ್ರಿಲ್ 27

2. ದಿ ಜಿಂಕ್ಸ್ ಪಾರ್ಟ್-2 (ಇಂಗ್ಲೀಷ್ ಸೀರಿಸ್) ಏಪ್ರಿಲ್ 22

More from Filmibeat

English summary
OTT releases this week on Netflix, Prime Video and Hotstar;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X