OTT releases this week : ಈ ವೀಕೆಂಡ್‌ನಲ್ಲಿ ಒಟಿಟಿ ಫುಲ್ ಬ್ಯುಸಿ: ದೊಡ್ಡ ದೊಡ್ಡ ಸಿನಿಮಾ ರಿಲೀಸ್

ಇತ್ತೀಚೆಗಿನ ದಿನಗಳಲ್ಲಿ ಸಿನಿ ಪ್ರಿಯರು ಥಿಯೇಟರ್‌ನಲ್ಲಿ ಯಾವ ಸಿನಿಮಾಗಳು ಬರುತ್ತೆ? ಅಂತ ನೋಡುವುದರ ಜೊತೆಗೆ ಒಟಿಟಿ ಮೇಲೂ ಕಣ್ಣಿಟ್ಟಿದ್ದಾರೆ. ಈ ವಾರ ಯಾವ ಸಿನಿಮಾ ತೆರೆಗೆ ಬರುತ್ತೆ ಅನ್ನೋದನ್ನು ಚಾಚು ತಪ್ಪದೇ ಗಮನಿಸುತ್ತಾರೆ. ಥಿಯೇಟರ್‌ಗೆ ಹೋಗಿ ಸಿನಿಮಾ ನೋಡಲು ಸಾಧ್ಯವಾಗದೆ ಇದ್ದವರು ಒಟಿಟಿಯಲ್ಲಿ ಸಿನಿಮಾಗಳನ್ನು ನೋಡಿ ಸಮಯ ಕಳೆಯುತ್ತಾರೆ.

ಕೊರೊನಾ ಶುರುವಾದ ಬಳಿಕ ಒಟಿಟಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಜನ ಹೆಚ್ಚಾಗಿ ಮನರಂಜನೆಗಾಗಿ ಒಟಿಟಿಯನ್ನೇ ಅವಲಂಬಿಸಿದ್ದಾರೆ. ಹೀಗಾಗಿ ಒಟಿಟಿಯಲ್ಲೂ ಸಾಲು ಸಾಲು ಸಿನಿಮಾಗಳು ಪ್ರತಿ ವಾರವೂ ರಿಲೀಸ್ ಆಗುತ್ತಿದೆ. ಜೊತೆಗೆ ಒಟಿಟಿ ವ್ಯಾಪ್ತಿಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಈ ವಾರ ಕೂಡ ಒಟಿಟಿಯಲ್ಲಿ ಸಾಕಷ್ಟು ಸಿನಿಮಾಗಳು ರಿಲೀಸ್‌ಗೆ ರೆಡಿಯಾಗುತ್ತಿದೆ. ಕನ್ನಡ, ಹಿಂದಿ ಸೇರಿದಂತೆ ಸಾಕಷ್ಟು ಸಿನಿಮಾಗಳು ರಿಲೀಸ್‌ಗೆ ತುದಿಗಾಲಲ್ಲಿ ನಿಂತಿವೆ. ಇನ್ನು ಈ ವಾರ ಒಟಿಟಿ ರಿಲೀಸ್‌ನಲ್ಲಿ ಭಿನ್ನ ವಿಭಿನ್ನ ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ.

 ಒಟಿಟಿ: ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌

ಒಟಿಟಿ: ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌

ಈ ವಾರ ಹಾಲಿವುಡ್‌ನ 'ಮೂನ್ ನೈಟ್' ಸಿನಿಮಾ ರಿಲೀಸ್ ಆಗುತ್ತಿದೆ. ಆಕ್ಷನ್, ಸಾಹಸ ಭರಿತ ಸಿನಿಮಾ ಇದಾಗಿದ್ದು, 'ಮೂನ್ ನೈಟ್' ಸರಣಿಯ ಈ ಚಿತ್ರದಲ್ಲಿ ಆಸ್ಕರ್ ಐಸಾಕ್, ಎಥಾನ್ ಹಾಕ್, ಮೇ ಕ್ಯಾಲಮಾವಿ, ಗ್ಯಾಸ್ಪರ್ಡ್ ಉಲ್ಲಿಯೆಲ್ ಸೇರಿದಂತೆ ಹಲವರ ಪಾತ್ರವರ್ಗವಿದೆ. 'ಮೂನ್ ನೈಟ್' ಸರಣಿಯನ್ನು ಮಾರ್ವೆಲ್ ಸ್ಟುಡಿಯೋಸ್ ನಿರ್ಮಿಸಿದ್ದು, ಮಾರ್ಚ್ 30ಕ್ಕೆ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ 'ಮೂನ್ ನೈಟ್' ರಿಲೀಸ್ ಆಗುತ್ತಿದೆ.

ಒಟಿಟಿ: ನೆಟ್‌ಫ್ಲಿಕ್ಸ್

ಒಟಿಟಿ: ನೆಟ್‌ಫ್ಲಿಕ್ಸ್

ಏಪ್ರಿಲ್ 1ರಂದು 'ಡ್ರೈವ್ ಮೈ ಕಾರ್' ಸಿನಿಮಾ ರಿಲೀಸ್ ಆಗುತ್ತಿದೆ. ಇದೊಂದು ಡ್ರಾಮಾ ಜಾನರ್‌ನಲ್ಲಿ ಮೂಡಿ ಬರುತ್ತಿರುವ ಸಿನಿಮಾವಾಗಿದ್ದು, 'ಡ್ರೈವ್ ಮೈ ಕಾರ್' ಚಿತ್ರವು ಜಪಾನೀಸ್, ಇಂಡೋನೇಷಿಯ, ಇಂಗ್ಲಿಷ್, ಟ್ಯಾಗಲೋಗ್, ಮ್ಯಾಂಡರಿನ್, ಜರ್ಮನ್ ಮತ್ತು ಕೊರಿಯನ್ ಭಾಷೆಗಳಲ್ಲಿ ಒಟಿಟಿಗೆ ಎಂಟ್ರಿ ಕೊಡಲಿದೆ. ಈ ಚಿತ್ರದ ಟ್ರೈಲರ್ ಈಗಾಗಲೇ ದುಪ್ಪಟ್ಟು ನಿರೀಕ್ಷೆಯನ್ನು ಮೂಡಿಸಿದ್ದು, ನೆಟ್‌ಫ್ಲಿಕ್ಸ್‌ನಲ್ಲಿ ಏಪ್ರಿಲ್ 1ರಂದು ತೆರೆಕಾಣುತ್ತಿದೆ. ಈ 'ಡ್ರೈವ್ ಮೈ ಕಾರ್' ಸಿನಿಮಾ ಒಬ್ಬ ಯುವತಿಯ ಸುತ್ತ ಸುತ್ತುವ ಕಥೆಯಾಗಿದೆ.

ಒಟಿಟಿ: ಸೋನಿ ಲೈವ್

ಒಟಿಟಿ: ಸೋನಿ ಲೈವ್

ನಟಿ ರಶ್ಮಿಕಾ ಮಂದಣ್ಣ ಮತ್ತು ತೆಲುಗು ನಟ ಶರ್ವಾನಂದ್ ಅಭಿನಯದ ಸಿನಿಮಾ 'ಆಡವಾಳ್ಳು ಮೀಕು ಜೋಹರ್ಲು'. ಈ ಸಿನಿಮಾ ಮಾರ್ಚ್ 4ರಂದು ಥಿಯೇಟರ್‌ಗೆ ಪ್ರವೇಶ ಪಡೆದಿತ್ತು. ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದ್ದು, ಇದೀಗ ಒಟಿಟಿ ರಿಲೀಸ್‌ಗೆ ಸಜ್ಜಾಗಿದೆ. ತೆಲುಗು, ತಮಿಳು ಹಾಗೂ ಹಿಂದಿಯ ಸ್ಟಾರ್ ನಟರ ಜೊತೆ ಸಿನಿಮಾ ಮಾಡುತ್ತಿರುವ ರಶ್ಮಿಕಾಗೆ 'ಆಡವಾಳ್ಳು ಮೀಕು ಜೋಹರ್ಲು' ಸಿನಿಮಾ ಮೊದಲು ಸೋಲು ಕೊಟ್ಟ ಚಿತ್ರ. ಇದೇ ಚಿತ್ರ ಏಪ್ರಿಲ್ 2ರಂದು ಸೋನಿ ಲೈವ್‌ನಲ್ಲಿ ಪ್ರದರ್ಶನ ಕಾಣಲಿದೆ. ಥಿಯೇಟರ್‌ನಲ್ಲಿ ಹೆಚ್ಚು ಪ್ರತಿಕ್ರಿಯೆ ಪಡೆಯದ ಈ ಸಿನಿಮಾಗೆ ಒಟಿಟಿಯಲ್ಲಿ ಯಾವ ರೀತಿ ರೆಸ್ಪಾನ್ಸ್ ಸಿಗುತ್ತೆ ಅನ್ನೋದನ್ನು ನೋಡಬೇಕಿದೆ.

ಒಟಿಟಿ: ಅಮೆಜಾನ್ ಪ್ರೈಮ್

ಒಟಿಟಿ: ಅಮೆಜಾನ್ ಪ್ರೈಮ್

ಹಾಲಿವುಡ್‌ನ 'ದಿ ಔಟ್‌ಲಾಸ್' ವೆಬ್ ಸೀರಿಸ್ ಕೂಡ ಈ ವಾರ ಒಟಿಟಿಗೆ ಪ್ರವೇಶ ಪಡೆಯಲಿದೆ. 'ದಿ ಔಟ್‌ಲಾಸ್' ವೆಬ್ ಸರಣಿಯಲ್ಲಿ ಆರು ಎಪ್ಪಿಸೋಡ್‌ಗಳು ಇರಲಿದೆ. ಕಾಮಿಡಿ, ಕ್ರೈಂ, ಸಸ್ಪೆನ್ಸ್ ಜಾನರ್‌ನಲ್ಲಿ ಈ ವೆಬ್ ಸೀರಿಸ್ ಬರುತ್ತಿದ್ದು, ಸ್ಟೀಫನ್ ಮರ್ಚೆಂಟ್, ಕ್ರಿಸ್ಟೋಫರ್ ವಾಲ್ಕೆನ್, ರಿಯಾನ್ನೆ ಬ್ಯಾರೆಟೊ ಮತ್ತು ಡ್ಯಾರೆನ್ ಬಾಯ್ಡ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಏಪ್ರಿಲ್ 1ರಂದು ಅಮೆಜಾನ್ ಪ್ರೈಮ್ ವೀಡಿಯೋದಲ್ಲಿ ಈ ವೆಬ್ ಸೀರಿಸ್ ರಿಲೀಸ್ ಆಗಲಿದೆ.

More from Filmibeat

English summary
Here’s the list of titles premiering on top OTT platforms like Netflix, Amazon Prime, Disney Hotstar, and others this week.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X