ಈ ವಾರಾಂತ್ಯಕ್ಕೆ OTTಯಲ್ಲಿ 15 ಚಿತ್ರಗಳು ರಿಲೀಸ್!
ಈಗ ವೀಕೆಂಡ್ ಬಂತೂ ಅಂದರೆ ಸಾಕು ಯಾವ ಹೊಸ ಸಿನಿಮಾ ರಿಲೀಸ್ ಆಗುತ್ತಿದೆ. ಯಾವ ಸಿನಿಮಾ ನೋಡುವುದು ಎನ್ನುವ ಲೆಕ್ಕಾಚಾರ ಶುರುವಾಗಿ ಬಿಡುತ್ತೆ. ಆದರೆ ಈಗ ಥಿಯೇಟರ್ ಸಿನಿಮಾ ಮಾತ್ರ ಅಲ್ಲ, ಯಾವ ಒಟಿಟಿ ಪ್ಲಾಟ್ ಫಾರ್ಮ್‌ನಲ್ಲಿ ಯಾವ ಸಿನಿಮಾ ರಿಲೀಸ್ ಆಗುತ್ತಿದೆ ಎನ್ನುವ ಬಗ್ಗೆ ಕುತೂಹಲ ಇರುತ್ತೆ. ಒಟಿಟಿಯಲ್ಲಿ ರಿಲೀಸ್ ಆಗುವ ಚಿತ್ರಗಳ ಸಂಖ್ಯೆ ಹೆಚ್ಚಾಗಿದೆ. ವಾರಾಂತ್ಯ ಬಂದರೆ ಒಂದಲ್ಲ ಒಂದು ಚಿತ್ರಗಳು ಒಟಿಟಿಯಲ್ಲಿ ರಿಲೀಸ್ ಆಗುತ್ತವೆ.
ಇನ್ನು ಒಟಿಟಿಯಲ್ಲಿ ಬಂದ ಸಿನಿಮಾಗಳು ದೊಡ್ಡ ಮಟ್ಟದ ಯಶಸ್ಸು ಕೂಡ ಕಾಣುತ್ತಿವೆ. ಸಿನಿಮಾವನ್ನು ಥಿಯೇಟರ್‌ನಲ್ಲಿ ಹೋಗಿಯೇ ನೋಡಬೇಕು ಎನ್ನುವ ಕಾನ್ಸೆಪ್ಟ್ ಈಗ ಉಳಿದಿಲ್ಲ. ಒಟಿಟಿಯಲ್ಲಿ ಸಿನಿಮಾಗಳನ್ನು ನೋಡಲು ಜನ ಅಭ್ಯಾಸ ಮಾಡಿಕೊಂಡಿದ್ದಾರೆ. ಹಾಗಾಗಿ ಸಿನಿಮಾ ತಯಾರಕರು ಕೂಡ ಒಟಿಟಿಗಾಗಿಯೇ ಸಿನಿಮಾಗಳನ್ನು ಮಾಡುತ್ತಿದ್ದಾರೆ.
ಸದ್ಯ ಒಟಿಟಿಯತ್ತ ಮುಖ ಮಾಡುವ ಸಿನಿಮಾಗಳ ಸಂಖ್ಯೆ ಹೆಚ್ಚಾಗಿದೆ. ಈ ವಾರಾಂತ್ಯದಲ್ಲಿ ಅಂದರೆ ಮಾರ್ಚ್ 10 ರಿಂದ 13ರ ತನಕ ಯಾವೆಲ್ಲಾ ಸಿನಿಮಾಗಳು ಒಟಿಟಿಯಲ್ಲಿ ತೆರೆಗೆ ಬರುತ್ತಿದೆ ಎನ್ನುವ ವಿವರ ಇಲ್ಲಿದೆ ಮುಂದೆ ಓದಿ...

ಸ್ಟಾರ್ ಸಿನಿಮಾಗಳಾದ ಮಾರನ್, ಕಿಲಾಡಿ ಒಟಿಟಿಯಲ್ಲಿ ರಿಲೀಸ್!
ಈ ಬಾರಿ ಒಟಿಟಿಯಲ್ಲಿ ದೊಡ್ಡ, ದೊಡ್ಡ ಚಿತ್ರಗಳು ರಿಲೀಸ್ ಆಗುತ್ತಿವೆ. ಅದರಲ್ಲೂ ಚಿತ್ರಮಂದಿರದಲ್ಲಿ ತೆರೆಗೆ ಬರುತ್ತವೆ ಎಂದು ನಿರೀಕ್ಷೆ ಮಾಡಿದ್ದ, ದೊಡ್ಡ ಚಿತ್ರಗಳು ಒಟಿಟಿಯಲ್ಲಿ ರಿಲೀಸ್ ಆಗುತ್ತಿವೆ. ಮಾರ್ಚ್ 11ಕ್ಕೆ ತಮಿಳು ಮತ್ತು ತೆಲುಗಿನ ದೊಡ್ಡ ಚಿತ್ರಗಳು ರವಿತೇಜ ಮತ್ತು ಧನುಷ್ ಅಭಿನಯದ ಚಿತ್ರಗಳು ರಿಲೀಸ್ ಆಗುತ್ತಿವೆ. ಧನುಷ್ ಅಭಿನಯದ ತಮಿಳಿನ 'ಮಾರನ್' ಮತ್ತು ರವಿತೇಜ ಅಭಿನಯದ ತೆಲುಗು ಚಿತ್ರ 'ಕಿಲಾಡಿ' ರಿಲೀಸ್ ಆಗಿವೆ. ಈ ಚಿತ್ರಗಳು ಒಟಿಟಿಯಲ್ಲಿ ಹೇಗೆ ದಾಖಲೆ ಬರೆಯುತ್ತವೆ ಎನ್ನುವುದನ್ನು ನೋಬೇಕಿದೆ. ಈ ಎರಡೂ ಚಿತ್ರಗಳು ಒಟಿಟಿಯಲ್ಲಿ ತೆರೆಕಾಣುತ್ತಿವೆ.

ನೆಕ್‌ಫ್ಲಿಕ್ಸ್‌ನಲ್ಲಿ ಹಿಂದಿಯ 'ಬದಾಯಿ ದೋ' ರಿಲೀಸ್!
ಹಿಂದಿಯ 'ಬದಾಯಿ ದೋ' ಚಿತ್ರ ಕೂಡ ಮಾರ್ಚ್ 11 (ಇಂದು) ರಿಲೀಸ್ ಆಗಿದೆ. ಈ ಚಿತ್ರದಲ್ಲಿ ಬಾಲಿವುಡ್ ನಟ ರಾಜ್‌ಕುಮಾರ್ ರಾವ್, ನಟಿ ಭೂಮಿ ಪೆಂಡೇನ್ಕರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಹಿಂದೆ ಬಂದ 'ಬದಾಯಿ ಹೋ' ಚಿತ್ರದ ಎರಡನೇ ಸರಣಿ ಸಿನಿಮಾ ಇದು. ಹಾಗಾಗಿ ಈ ಚಿತ್ರದ ಮೆಲು ಹೆಚ್ಚಿನ ನಿರೀಕ್ಷೆ ಇದೆ. ಇದರೊಂದಿಗೆ ಹಿಂದಿ ಮತ್ತು ತೆಲುಗಿನ ವೆಬ್ ಸರಣಿ 'ಕಬೂಲ್ ಹೈ' ಕೂಡ ರಿಲೀಸ್ ಆಗುತ್ತಿದೆ. ಈ ವೆಬ್ ಸರಣಿ 'ಆಹಾ' ಒಟಿಟಿಯಲ್ಲಿ ತೆರೆಕಾಣುತ್ತಿದೆ. ಬೆಂಗಾಲಿ ಭಾಷೆಯ ವೆಬ್ ಸರಣಿ 'ಸುಂದರ್ ಬ್ಯಾನರ್ ವಿದ್ಯಾಸಾಗರ್' ಹೋಯ್ ಚೋಯ್ ಒಟಿಟಿಯಲ್ಲಿ ತೆರೆಕಾಣಲಿದೆ.

Zee5 Ottಯಲ್ಲಿ ಸೂಪರ್ ಸಿನಿಮಾಗಳು!
ಇನ್ನು ಜನಪ್ರಿಯ ಜೀ5 ಒಟಿಟಿಯಲ್ಲಿ 5 ಚಿತ್ರಗಳು ರಿಲೀಸ್ ಆಗುತ್ತಿವೆ. ಮಲಯಾಳಂನ 'ಸೂಪರ್ ಶರಣ್ಯ', ತೆಲುಗಿನ 'ರೌಡಿ ಬಾಯ್ಸ್', ಕನ್ನಡದ 'ರೈಡರ್' ಚಿತ್ರಗಳು ರಿಲೀಸ್ ಆಗುತ್ತಿದ್ದು ಜೊತೆಗೆ ಉರ್ದು ವೆಬ್ ಸರಣಿ ಮಿಸ್ಸಸ್ ಅಂಡ್ ಮಿಸ್ಟರ್ ಶಮೀಮ್ ಕೂಡ ರಿಲೀಸ್ ಆಗುತ್ತಿದೆ. ಇದರಲ್ಲಿ ತೆಲುಗಿನ 'ರೌಡಿ ಬಾಯ್ಸ್' ಮತ್ತು ಕನ್ನಡದ ರೈಡರ್ ಚಿತ್ರಗಳು ಈಗಾಗಲೇ ಚಿತ್ರಮಂದಿರದಲ್ಲಿ ರಿಲೀಸ್ ಆಗಿ ಗಮನ ಸೆಳೆದಿರುವ ಚಿತ್ರಗಳು. ಹಾಗೆ ಮಾರ್ಚ್ 12 ಮಲಯಾಳಂನ 'ಕುಂಜೆಲ್ದೊ' ಚಿತ್ರ ಕೂಡ ರಿಲೀಸ್ ಆಗುತ್ತಿದೆ.

ವಾರಾಂತ್ಯಕ್ಕೆ ಒಟಿಟಿಯಲ್ಲಿ ತಮಿಳು ಚಿತ್ರಗಳ ಹಾವಳಿ!
ಇನ್ನು ಈ ವಾರಾತ್ಯಕ್ಕೆ ತಮಿಳಿನ ಚಿತ್ರಗಳು ಕೂಡ ಒಟಿಟಿಯಲ್ಲಿ ರಿಲೀಸ್ ಆಗುತ್ತಿವೆ. ತಮಿಳಿನ 'ಕಡೈಸಿ ವ್ಯವಸಾಯಿ' ಮತ್ತು 'ಕ್ಲ್ಯಾಪ್' ಚಿತ್ರಗಳು ಸೋನಿ ಲೈವ್‌ನಲ್ಲಿ ತೆರೆಕಾಣುತ್ತಿವೆ. ಹಾಗೆ 'ಎಫ್ ಐ ಆರ್' ಚಿತ್ರ ಆಮೆಜಾನ್‌ನಲ್ಲಿ ರಿಲೀಸ್ ಆಗುತ್ತಿದೆ. ಈ ಚಿತ್ರಗಳ ಜೊತೆಗೆ ಮಾರ್ಚ್ 12ಕ್ಕೆ ಮಲಯಾಳಂನ 'ವರ್ತಮಾನಂ' ಚಿತ್ರ ಮನೋರಮ ಮ್ಯಾಕ್ಸ್ ಮತ್ತು ಅಮೆಜಾನ್‌ನಲ್ಲಿ ರಿಲೀಸ್ ಆಗುತ್ತಿದೆ.


Click it and Unblock the Notifications











