OTT releases this week: 'ಟೋಬಿ', 'ಸಪ್ತ ಸಾಗರ.. ಬಿಟ್ಟು ಇನ್ನು ಯಾವ್ಯಾವ ಸಿನಿಮಾ, ಸೀರಿಸ್ ಸ್ಟ್ರೀಮಿಂಗ್?
ವರ್ಷದ ಕೊನೆಯ ಎರಡು ವಾರ ಸಿನಿರಸಿಕರಿಗೆ ಹಬ್ಬವೋ ಹಬ್ಬ. 'ಸಲಾರ್', 'ಡಂಕಿ', 'ಕಾಟೇರ' ರೀತಿಯ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾಗಳು ತೆರೆಗಪ್ಪಳಿಸುತ್ತಿವೆ. ಇನ್ನು ಓಟಿಟಿಯಲ್ಲೂ ಕೂಡ ಬಹುನಿರೀಕ್ಷಿತ ಸಿನಿಮಾಗಳು ಸ್ಟ್ರೀಮಿಂಗ್‌ಗೆ ರೆಡಿಯಾಗಿದೆ. ಈ ವಾರ ಕನ್ನಡ 2 ಸಿನಿಮಾಗಳು ಓಟಿಟಿ ವೀಕ್ಷಕರ ಮುಂದೆ ಬರ್ತಿವೆ.
ಓಟಿಟಿಯಲ್ಲಿ ಕನ್ನಡ ಕಂಟೆಂಟ್ ಕಮ್ಮಿ ಎನ್ನುವ ಬೇಸರ ವ್ಯಕ್ತವಾಗುತ್ತಲೇ ಇರುತ್ತದೆ. ಆದರೆ ಅದಕ್ಕೆ ಅಪವಾದ ಎನ್ನುವಂತೆ ಅಮೇಜಾನ್ ಪ್ರೈಂ, ಸೋನಿಲಿವ್‌ನಲ್ಲಿ ಕನ್ನಡ ಸಿನಿಮಾಗಳು ಬರ್ತಿವೆ. ಥಿಯೇಟರ್‌ನಲ್ಲಿ ನೋಡಿರುವವರು, ನೋಡದೇ ಓಟಿಟಿಗಾಗಿ ಕಾಯುತ್ತಿದ್ದವರಿಗೆ ಇದು ಸಿಹಿಸುದ್ದಿ. ಇನ್ನು ಕಳೆದ 3 ದಿನಗಳಿಂದ ಧನಂಜಯ ನಿರ್ಮಾಣದ 'ಟಗರುಪಲ್ಯ' ಸಿನಿಮಾ ಕೂಡ ಸ್ಟ್ರೀಮಿಂಗ್ ಆಗುತ್ತಿದೆ.

'ಸಪ್ತಸಾಗರದಾಚೆ ಎಲ್ಲೋ: ಸೈಡ್ B' ಹಾಗೂ 'ಟೋಬಿ' ಜೊತೆಗೆ ಮತ್ತಷ್ಟು ಸಿನಿಮಾಗಳು, ವೆಬ್ ಸೀರಿಸ್‌ಗಳು ಈ ವಾರ ಸ್ಟ್ರೀಮಿಂಗ್‌ಗೆ ಸಿದ್ಧವಾಗಿದೆ. ಅಮೇಜಾನ್ ಪ್ರೈಂ, ನೆಟ್‌ಫ್ಲಿಕ್ಸ್, ಜಿಯೋ ಸಿನಿಮಾ, ಜೀ5ನಲ್ಲಿ ಈ ವಾರ ಯಾವೆಲ್ಲಾ ಸಿನಿಮಾಗಳು ರಿಲೀಸ್ ಆಗುತ್ತಿವೆ ಎನ್ನುವ ಲಿಸ್ಟ್ ಇಲ್ಲಿದೆ ನೋಡಿ.
ಅಮೇಜಾನ್ ಪ್ರೈಂ
1. ಸಪ್ತಸಾಗರದಾಚೆ ಎಲ್ಲೋ: ಸೈಡ್ B
ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ನಟನೆಯ 'ಸಪ್ತಸಾಗರದಾಚೆ ಎಲ್ಲೋ: ಸೈಡ್ B' ಡಿಸೆಂಬರ್ 22ಕ್ಕೆ ಅಮೇಜಾನ್ ಪ್ರೈಂನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಹೇಮಂತ್ ರಾವ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಇದಕ್ಕೂ ಮುನ್ನ ಬಂದಿದ್ದ ಸರಣಿಯ ಮೊದಲ ಸಿನಿಮಾ ಥಿಯೇಟರ್ ಹಾಗೂ ಓಟಿಟಿಯಲ್ಲಿ ಹಿಟ್ ಆಗಿತ್ತು. ಮೊದಲ ಭಾಗಕ್ಕೆ ಹೋಲಿಸಿದರೆ 2ನೇ ಭಾಗಕ್ಕೆ ಥಿಯೇಟರ್‌ಗಳಲ್ಲಿ ದೊಡ್ಡಮಟ್ಟದ ರೆಸ್ಪಾನ್ಸ್ ಸಿಕ್ಕಿರಲಿಲ್ಲ. ನವೆಂಬರ್ 17ಕ್ಕೆ ತೆರೆಗಪ್ಪಳಿಸಿದ್ದ ಸಿನಿಮಾ ಇದೀಗ ಡಿಜಿಟಲ್ ಸ್ಟ್ರೀಮಿಂಗ್ ಆಗುತ್ತಿದೆ.
2. ಡ್ರೈ ಡೇ (ಹಿಂದಿ ಸಿನಿಮಾ) ಡಿಸೆಂಬರ್ -22
3. ಸಾಲ್ಟ್ ಬರ್ನ್(ಇಂಗ್ಲೀಷ್ ಸಿನಿಮಾ) ಡಿಸೆಂಬರ್ 22
4. ಫ್ಲೇಮ್ಸ್ - ಸೀಸನ್ 4 (ವೆಬ್ ಸೀರಿಸ್) ಡಿಸೆಂಬರ್ 21
ನೆಟ್‌ಫ್ಲಿಕ್ಸ್
1. ಆದಿಕೇಶವ
ತೆಲುಗಿನ 'ಆದಿಕೇಶವ' ಸಿನಿಮಾ ಶುಕ್ರವಾರ ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಆಗುತ್ತಿದೆ. ಶ್ರೀಕಾಂತ್ ರೆಡ್ಡಿ ನಿರ್ದೇಶನದ ಚಿತ್ರದಲ್ಲಿ ಪಂಜಾ ವೈಷ್ಣ ತೇಜ್ ಜೋಡಿಯಾಗಿ ಶ್ರೀಲೀಲಾ ನಟಿಸಿದ್ದಾರೆ. ನವೆಂಬರ್ 24ಕ್ಕೆ ತೆರೆಗೆ ಬಂದಿದ್ದ ಸಿನಿಮಾ ನಿರಾಸೆ ಮೂಡಿಸಿತ್ತು.
2. ಮ್ಯಾಸ್ಟ್ರೋ (ವೆಬ್ ಸೀರಿಸ್) - ಡಿಸೆಂಬರ್ 20
3. ಕರಿ ಮತ್ತು ಸೆನೈಡ್ (ವೆಬ್ ಸೀರಿಸ್) - ಡಿಸೆಂಬರ್ 22
4. ರೆಬೆಲ್ ಮೂನ್: ಪಾರ್ಟ್ 1 (ಇಂಗ್ಲೀಷ್ ಸಿನಿಮಾ) ಡಿಸೆಂಬರ್ 22
5. ಕುಯಿಕೊ (ತಮಿಳು ಸಿನಿಮಾ) ಡಿಸೆಂಬರ್ 22

ಸೋನಿಲಿವ್
1. ಟೋಬಿ
ರಾಜ್ ಬಿ. ಶೆಟ್ಟಿ ಹಾಗೂ ಚೈತ್ರಾ ಆಚಾರ್ ನಟನೆಯ 'ಟೋಬಿ' ಸಿನಿಮಾ ಇದೇ ವಾರ ಓಟಿಟಿಗೆ ಬರ್ತಿದೆ. ಜನ ಮರತೇಹೋಗಿದ್ದ ಸಿನಿಮಾ ಇದೀಗ ಸೋನಿಲಿವ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಕನ್ನಡ ಜೊತೆಗೆ ಮಲಯಾಳಂನಲ್ಲೂ ಸಿನಿಮಾ ವೀಕ್ಷಕರಿಗೆ ಸಿಗಲಿದೆ. ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿದರೂ ಕೆಲವರು ಚಿತ್ರವನ್ನು ಮೆಚ್ಚಿಕೊಂಡಿದ್ದರು.
ಜೀ5
1. ಆಡಿ(ಮಲಯಾಳಂ ಸಿನಿಮಾ) ಡಿಸೆಂಬರ್ 22
2. ಹ್ಯೂಮರಸ್ಲಿ ಯುವರ್ಸ್ (ವೆಬ್ ಸೀರಿಸ್) ಡಿಸೆಂಬರ್ 22
ಜಿಯೋ ಸಿನಿಮಾ
1. ಬಾರ್ಬಿ (ಇಂಗ್ಲೀಷ್ ಸಿನಿಮಾ) ಡಿಸೆಂಬರ್ 21
2. ಹೇ ಕಾಮೀನಿ (ಹಿಂದಿ ಸಿನಿಮಾ) ಡಿಸೆಂಬರ್ 22
ಡಿಸ್ನಿ ಪ್ಲಸ್ ಹಾಟ್‌ಸ್ಟರ್
1. BTS ಮಾನ್ಯುಮೆಂಟ್ಸ್: ಬಿಯಾಂಡ್ ದಿ ಸ್ಟಾರ್ಸ್ - (ಡಾಕ್ಯು ಸೀರೀಸ್) - ಡಿಸೆಂಬರ್ 20
2. ಪರ್ಸಿ ಜಾಕ್ಸನ್ ಮತ್ತು ಒಲಂಪಿಯನ್ಸ್ (ಬೆವ್ ಸೀರಿಸ್) ಡಿಸೆಂಬರ್ 20
3. ವಾಟ್ ಇಫ್, ಸೀಸನ್ -2 (ವೆಬ್ ಸೀರೀಸ್) ಡಿಸೆಂಬರ್ 22


Click it and Unblock the Notifications











