ಹಿಂಗಾದ್ರೆ ಹೆಂಗೆ ? ಕೇವಲ 20 ದಿನಕ್ಕೆ ಓಟಿಟಿಗೆ ಬಂತು ಖ್ಯಾತ ನಿರೂಪಕಿಯ ಮಗನ ಸಿನಿಮಾ ; ಎಲ್ಲಿ ನೋಡಬಹುದು ?

ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಚಿತ್ರಮಂದಿರಗಳಲ್ಲಿ ಕುಳಿತು ಚಿತ್ರ ನೋಡಿದಾಗಲೇ ಮನರಂಜನೆಯ ಕಿಕ್ಕೇರುತ್ತಿತ್ತು. ಇನ್ನು ಚಿತ್ರತಂಡಕ್ಕೆ ಕೂಡ ಆ ಕಾಲದಲ್ಲಿ ನೂರು ದಿನ ಚಿತ್ರಮಂದಿರದಲ್ಲಿ ತಮ್ಮ ಚಿತ್ರ ಪ್ರದರ್ಶನ ಕಂಡರೆ ಅದೇ ದೊಡ್ಡ ಸಾಧನೆಯಾಗಿತ್ತು. ಆದರೆ.. ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಓಟಿಟಿ ವೇದಿಕೆಗಳ ಹಾವಳಿ ಹೆಚ್ಚಾಗಿದೆ. ಚಿತ್ರಮಂದಿರಗಳ ಅಳಿವು ಉಳಿವಿನ...

ವಿಚಾರದಲ್ಲಿ ಆತಂಕ ಶುರುವಾಗಿದೆ. ಯಾಕೆಂದರೆ ಚಿತ್ರವೊಂದು ತೆರೆಗೆ ಬಂದು ಒಂದು ತಿಂಗಳು ಕೂಡ ಆಗಿರುವುದಿಲ್ಲ. ಆಗಲೇ ಓಟಿಟಿಗೆ ಆ ಚಿತ್ರ ಬಂದು ಬಿಡುತ್ತೆ. ಇದರಿಂದ ಪ್ರೇಕ್ಷಕ ಹೇಗಿದ್ದರೂ ತಿಂಗಳೊಳಗೆ ಫೋನ್ ಅಥವಾ ಟಿವಿಯಲ್ಲಿ ಸಿನಿಮಾ ಬಂದೇ ಬರುತ್ತದೆ, ಸಾವಿರಾರು ರೂಪಾಯಿ ಖರ್ಚು ಮಾಡಿ ಚಿತ್ರಮಂದಿರಕ್ಕೆ ಯಾಕೆ ಹೋಗಬೇಕು? ಎಂಬ ಯೋಚನೆ ಮಾಡುತ್ತಿದ್ದಾನೆ. ಚಿತ್ರಮಂದಿರಕ್ಕೆ ಹೋಗದೇ ಮನೆಯಲ್ಲಿಯೇ ಕಾಯುತ್ತಿದ್ದಾನೆ.

New Year Treat Mowgli OTT Release Date Out Where to Watch Roshan Kanakala s Latest Online

ಪ್ರೇಕ್ಷಕ ಮಹಾಪ್ರಭುವಿನ ಈ ''ವೇಯ್ಟಿಂಗ್ ಪಾಲಿಸಿ''ಯಿಂದಾಗಿ ಹಲವು ಚಿಕ್ಕ-ಪುಟ್ಟ ಚಿತ್ರಗಳು ನೆಲಕಚ್ಚುತ್ತಿವೆ. ಇನ್ನು ಚಿತ್ರತಂಡಗಳ ಮತ್ತು ನಿರ್ಮಾಪಕರ ಧೋರಣೆ ಕೂಡ ಹಾಗೇ ಇದೆ. ತೆರೆಗೆ ಬಂದು ತಿಂಗಳ ಒಳಗೆ ಓಟಿಟಿಗೆ ಚಿತ್ರ ಬಂದರೆ ಆದಾಯಕ್ಕೆ ಧಕ್ಕೆ ಆಗುತ್ತೆ ಎಂದು ವಾದ ಮಾಡುವ ನಿರ್ಮಾಪಕರೇ ತಮ್ಮ ಚಿತ್ರ ಅಪ್ಪಿ-ತಪ್ಪಿ ಫ್ಲಾಪ್ ಆದರೆ ಮೊದಲು ಓಡಿ ಹೋಗಿ ಇದೇ ಓಟಿಟಿಯವರ ಹತ್ತಿರ ವ್ಯಾಪಾರ ಕುದುರಿಸಿಕೊಳ್ಳುತ್ತಾರೆ. ತಮಗಾದ ನಷ್ಟದ ಪ್ರಮಾಣ ಕಡಿಮೆ ಮಾಡಿಕೊಳ್ಳಲು ತಿಂಗಳು ತುಂಬುವ ಮುನ್ನವೇ ಓಟಿಟಿಗೆ ತಮ್ಮ ಚಿತ್ರವನ್ನು ನೀಡುತ್ತಾರೆ. ಇದಕ್ಕೆ ''ಮೋಗ್ಲಿ'' ಸದ್ಯದ ಉದಾಹರಣೆ.

ಹೌದು, ಮೋಗ್ಲಿ.. ಆಂಧ್ರದ ಪ್ರಖ್ಯಾತ ನಿರೂಪಕಿ ಸುಮಾ ಕನಕಲಾ ಅವರ ಮಗ ರೋಶನ್ ನಾಯಕನಾಗಿ ಅಭಿನಯಿಸಿರುವ ಸಿನಿಮಾ. ರಾಷ್ಟ್ರ ಪ್ರಶಸ್ತಿ ವಿಜೇತ 'ಕಲರ್ ಫೋಟೋ' ಖ್ಯಾತಿಯ ನಿರ್ದೇಶಕ ಸಂದೀಪ್ ರಾಜ್ ನಿರ್ದೇಶನದ ಚಿತ್ರ ಇದು.ಅಪಾರವಾದ ಭರವಸೆಯನ್ನು ಮೂಡಿಸಿದ್ದ ಈ ಚಿತ್ರ ಕಳೆದ ಡಿಸೆಂಬರ್ 13ರಂದು ''ಅಖಂಡ 2'' ಎದುರು ಬಿಡುಗಡೆಯಾಗಿತ್ತು. ಆದರೆ, ಪ್ರೇಕ್ಷಕರು ಈ ಚಿತ್ರವನ್ನು ಕೈ ಹಿಡಿಯಲಿಲ್ಲ. ಚಿತ್ರ ಬಾಕ್ಸಾಫೀಸ್‌ನಲ್ಲಿ ಗೆಲ್ಲಲಿಲ್ಲ.

New Year Treat Mowgli OTT Release Date Out Where to Watch Roshan Kanakala s Latest Online

ಕಥಾಹಂದರವೇನು ?

ಚಿತ್ರದ ಹೆಸರೇ ಹೇಳುವಂತೆ ''ಮೋಗ್ಲಿ'' ಕಾಡಲ್ಲಿ ಬೆಳೆದ ಹುಡುಗನ ಕಥೆ. ಕೃಷ್ಣ ಅಲಿಯಾಸ್ ''ಮೋಗ್ಲಿ'' ಸುತ್ತ ಈ ಚಿತ್ರದ ಕಥೆ ಸಾಗುತ್ತೆ. ಕೃಷ್ಣ ಇದ್ದ ಕಾಡಿಗೆ ಚಿತ್ರೀಕರಣಕ್ಕೆ ಮಾತು ಬಾರದ ನೃತ್ಯಗಾರ್ತಿ ಜಾಸ್ಮಿನ್ ( ಸಾಕ್ಷಿ ಮಡೋಲ್ಕರ್ ) ಬಂದಾಗ ಇಬ್ಬರ ನಡುವೆ ಪ್ರೇಮಾಂಕುರವಾಗುತ್ತೆ. ಆದರೆ ಎಲ್ಲ ಪ್ರೇಮಕಥೆಯಲ್ಲಿ ಖಳನಾಯಕ ಇರಲೇಬೇಕು. ಈ ನಿಯಮದಡಿ ಇಲ್ಲಿಯೂ ಕೂಡ ಇವರ ಪ್ರೇಮಕ್ಕೆ ಕ್ರೂರ ಪೊಲೀಸ್ ಅಧಿಕಾರಿಯೊಬ್ಬ ಅಡ್ಡಗಾಲು ಹಾಕುತ್ತಾನೆ. ಮುಂದೇನಾಗುತ್ತೆ ಎನ್ನುವುದೇ ಈ ಚಿತ್ರದ ಹೂರಣ.

ಎಲ್ಲಿ ಮತ್ತು ಎಂದಿನಿಂದ ನೋಡಬಹುದು ?

ಹೊಸ ವರ್ಷದ ಪ್ರಯುಕ್ತ ಜನವರಿ 1ರಂದು ಈ ಚಿತ್ರ ETV Win ಅಲ್ಲಿ ಪ್ರಸಾರವಾಗಲಿದೆ. ಚಿತ್ರಮಂದಿರದಲ್ಲಿ ನೋಡಲು ಸಾಧ್ಯವಾಗದಿರುವರು, ಆಸಕ್ತ ಚಿತ್ರಪ್ರೇಮಿಗಳು, ನಿರೂಪಕಿ ಸುಮಾ ಅವರ ಅಭಿಮಾನಿಗಳು ಈ ಚಿತ್ರವನ್ನು ಮನೆಯಲ್ಲಿ ಮನೆ ಮಂದಿ ಜೊತೆ ಕುಳಿತು ಜನವರಿ 1ರಿಂದ ನೋಡಬಹುದು.

ಹಿಂಗಾದ್ರೆ ಹೆಂಗೆ ?

ಆಗಲೇ ಹೇಳಿದಂತೆ ಬಿಡುಗಡೆಯಾಗಿ ಕೇವಲ 20 ದಿನಕ್ಕೆ ''ಮೋಗ್ಲಿ'' ಓಟಿಟಿ ವೇದಿಕೆ ಬರುತ್ತಿದೆ. ಈ ಹಿನ್ನೆಲೆ ಹಲವರು ಚಿತ್ರತಂಡದ ಈ ನಿರ್ಧಾರದ ವಿರುದ್ಧ ತಮ್ಮ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಮೊದಲೇ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರಲು ಯೋಚನೆ ಮಾಡುತ್ತಿದ್ದಾರೆ. ಹೀಗಿರುವಾಗ ಕೇವಲ ಮೂರು ವಾರಕ್ಕೆ ಓಟಿಟಿಗೆ ತಮ್ಮ ಚಿತ್ರವನ್ನು ಚಿತ್ರತಂಡ ನೀಡಿದರೆ, ಪ್ರೇಕ್ಷಕರಾದರು ಚಿತ್ರಮಂದಿರಕ್ಕೆ ಯಾಕೆ ಬರುತ್ತಾರೆ ಎಂದು ಚರ್ಚೆಯನ್ನು ಮಾಡುತ್ತಿದ್ದಾರೆ. ಕೊನೆ ಪಕ್ಷ 8 ವಾರದ ಅಂತರವನ್ನು ಎಲ್ಲರೂ ಕಾಪಾಡಿಕೊಳ್ಳಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.

ಸದ್ಯ ಚಿತ್ರಮಂದಿರದಲ್ಲಿ ಸೋತ ''ಮೋಗ್ಲಿ'' ಓಟಿಟಿಗೆ ಬರುತ್ತಿದೆ. ಓಟಿಟಿಯಲ್ಲಾದರು ಈ ಚಿತ್ರಕ್ಕೆ ಉತ್ತಮವಾದ ಪ್ರತಿಕ್ರಿಯೆ ಸಿಗುತ್ತಾ..? ಓಟಿಟಿಯಲ್ಲಿ ಚಿತ್ರ ಪ್ರೇಕ್ಷಕರ ಹೃದಯವನ್ನು ಗೆಲ್ಲುತ್ತಾ..? ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
Ready for a New Year treat? Mowgli is coming to ETV Win! Discover when and where to watch Roshan Kanakala and Sandeep Raj’s latest Telugu blockbuster online.
Read more about: tollywood star anchor
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X