For Quick Alerts
  ALLOW NOTIFICATIONS  
  For Daily Alerts

  ನಿಖಿಲ್ ಕುಮಾರ್ ಅಭಿನಯದ 'ರೈಡರ್' OTTಯಲ್ಲಿ ರಿಲೀಸ್!

  |

  ನಟ ನಿಖಿಲ್ ಕುಮಾರ್ ಅಭಿನಯದ 'ರೈಡರ್' ಸಿನಿಮಾ ಈಗ ಒಟಿಟಿ ಮೂಲಕ ಮತ್ತೇ ಜಾದು ಮಾಡಲು ಮುಂದಾಗಿದೆ. 'ರೈಡರ್' ಚಿತ್ರ ಲಾಕ್‌ಡೌನ್ ಬಳಿಕ ಚಿತ್ರ ಮಂದಿರದಲ್ಲಿ ತೆರೆಕಂಡು ಮಿಶ್ರ ಪ್ರತಿಕ್ರಿಯೆ ಪಡೆದಿತ್ತು. ಈ ಚಿತ್ರದ 2021 ಡಿಸೆಂಬರ್‌ನಲ್ಲಿ ರಿಲೀಸ್ ಆಗಿತ್ತು. ಈಗ ಒಟಿಟಿಯಲ್ಲಿ ಬಿಡುಗಡೆ ಆಗುತ್ತಿದೆ.

  ನಿಖಿಲ್ ಕುಮಾರ್ 'ರೈಡರ್' ಚಿತ್ರದ ಮೂಲಕ ವಿಭಿನ್ನವಾಗಿ ಗುರುತಿಸಿಕೊಂಡಿದ್ದರು. ಅಂದರೆ ಪ್ರತೀ ಸಿನಿಮಾದಲ್ಲೂ ದೊಡ್ಡ, ದೊಡ್ಡ ಫೈಟ್, ವಿಲನ್‌ಗಳ ಜೊತೆಗೆ ಸವಾಲಿಗಿಳಿದು ಗುದ್ದಾಡಿ ಗೆಲ್ಲುವುದು, ಕೇವಲ ಹೀರೋಗೆ ಮಾತ್ರ ಹೆಚ್ಚಿನ ಬಿಲ್ಡಪ್‌ಗಳೇ ತುಂಬಿ ಇರುತ್ತಿದ್ದವು. ಆದರೆ ರೈಡರ್ ಸಿನಿಮಾ ಈ ಎಲ್ಲ ಕ್ಲೀಷೆಗಳನ್ನು ಬ್ರೇಕ್ ಮಾಡಿ ವಿಭಿನ್ನ ಸಿನಿಮಾ ಎನಿಸಿಕೊಂಡಿದೆ.

  ಭಾರಿ ಮೊತ್ತಕ್ಕೆ ಒಟಿಟಿಗೆ ಸೇಲ್ ಆಯ್ತು 'ಭೀಮ್ಲಾ ನಾಯಕ್'ಭಾರಿ ಮೊತ್ತಕ್ಕೆ ಒಟಿಟಿಗೆ ಸೇಲ್ ಆಯ್ತು 'ಭೀಮ್ಲಾ ನಾಯಕ್'

  'ರೈಡರ್' ಚಿತ್ರ ಒಂದು ನವಿರಾದ ಪ್ರೇಮಕಥೆ. ಚಿತ್ರದಲ್ಲಿ ಕೇವಲ ಪ್ರೇಮಕಥೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಇಲ್ಲಿ ಕತೆಯೇ ಹೀರೋ ಆಗಿ ನಿಂತಿದೆ. ಹಾಗಾಗಿ ಸಿನಿಮಾ ಹೊಸ ಟಾಕ್ ಹುಟ್ಟು ಹಾಕಿತ್ತು. ಈಗ ರೈಡರ್ ಒಟಿಟಿ ಮೂಲಕ ಮತ್ತಷ್ಟು ಸದ್ದು ಮಾಡಲು ಸಜ್ಜಾಗಿದೆ. ಈ ಮೂಲಕ ನಟ ನಿಖಿಲ್ ಕುಮಾರ್ ಕೂಡ ಒಟಿಟಿಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

  ಇದೇ ಮಾರ್ಚ್ 11ಕ್ಕೆ 'ರೈಡರ್' ಚಿತ್ರ 'ಜೀ 5' ಒಟಿಟಿಯಲ್ಲಿ ತೆರೆಗೆ ಬರುತ್ತಿದೆ. ಈಗಾಗಲೇ ಕನ್ನಡದ ಅನೇಕ ಸಿನಿಮಾಗಳು ಒಟಿಟಿಯಲ್ಲಿ ದಾಖಲೆ ಬರೆದಿವೆ. ಅದರಲ್ಲ ಇದೇ 'ಜೀ 5' ನಲ್ಲಿ ರಿಲೀಸ್ ಆದ, ಶಿವರಾಜ್ ಕುಮಾರ್ ಅಭಿನಯದ ಭಜರಂಗಿ 2 ಮತ್ತು ಗರುಡ ಗಮನ ವೃಷಭ ವಾಹನ ಚಿತ್ರಗಳು ಒಟಿಟಿಯಲ್ಲಿ ದೊಡ್ಡ ಮಟ್ಟದ ದಾಖಲೆ ಬರೆದಿದೆ.

  ಈಗ 'ರೈಡರ್' ಚಿತ್ರದ ಸರದಿ ಈ ಚಿತ್ರ ಒಟಿಟಿಗೆ ದಾಖಲೆಯ ಮೊತ್ತಕ್ಕೆ ಮಾರಾಟ ಆಗಿದೆ ಎನ್ನಲಾಗಿದೆ. ಒಟಿಟಿಯಲ್ಲಿ ನಿಖಿಲ್ ಕುಮಾರ್ ಸಿನಿಮಾ ಯಾವ ಮಟ್ಟದ ದಾಖಲೆ ಮಾಡುತ್ತದೆ ಎನ್ನುವ ಬಗ್ಗೆ ಕುತೂಹಲ ಹೆಚ್ಚಾಗಿವೆ. ಸಿನಿಮಾ ಮಾರ್ಚ್ 11ಕ್ಕೆ ರಿಲೀಸ್ ಆಗಲಿದ್ದು, ನಂತರ ಭವಿಷ್ಯ ಗೊತ್ತಾಗಲಿದೆ.

  English summary
  Nikhi Kumar Starrer Rider Movie Releasing In OTT Zee5 On March 11th,
  Wednesday, March 2, 2022, 14:48
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X