For Quick Alerts
  ALLOW NOTIFICATIONS  
  For Daily Alerts

  ಬ್ಲಾಕ್‌ಬಸ್ಟರ್ 'ಕಾರ್ತಿಕೇಯ'- 2 ಓಟಿಟಿಗೆ ಯಾವಾಗ?

  |

  ಬಾಕ್ಸಾಫೀಸ್‌ನಲ್ಲಿ ಟಾಲಿವುಡ್ 'ಕಾರ್ತಿಕೇಯ'ನ ನಾಗಾಲೋಟ ಮುಂದುವರೆದಿದೆ. 100 ಕೋಟಿ ರೂ. ಕ್ಲಬ್ ಸೇರುವತ್ತ ಸಿನಿಮಾ ದಾಪುಗಾಲು ಇಟ್ಟಿದೆ. ನಿಖಿಲ್ ಸಿದ್ದಾರ್ಥ್ ಹಾಗೂ ಅನುಪಮಾ ಪರಮೇಶ್ವರ್‌ ನಿರ್ದೇಶನದ ಮಿಸ್ಟರಿ ಥ್ರಿಲ್ಲರ್ 'ಕಾರ್ತಿಕೇಯ'-2 ಸಿನಿಮಾ ಹಿಂದಿ ಬೆಲ್ಟ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. 'ಲಾಲ್‌ ಸಿಂಗ್ ಚಡ್ಡ' ಹಾಗೂ 'ರಕ್ಷಾಬಂಧನ್‌'ಗಿಂತ ತೆಲುಗು ಸಿನಿಮಾ ಹಿಂದಿ ಡಬ್ ಆಗಿ ಸಖತ್ ಸದ್ದು ಮಾಡುತ್ತಿದೆ. ಇದೀಗ ಸೂಪರ್ ಹಿಟ್ ಸಿನಿಮಾ ಓಟಿಟಿಗೆ ಯಾವಾಗ ಬರುತ್ತೆ ಅನ್ನುವುದರ ಬಗ್ಗೆ ಶುರುವಾಗಿದೆ.

  ಚಂದು ಮೊಂಡೇಟಿ ನಿರ್ದೇಶನದ 'ಕಾರ್ತಿಕೇಯ'-2 ಆಗಸ್ಟ್ 13ರಂದು ತೆರೆಗೆ ಬಂದಿತ್ತು. ಚಿತ್ರದಲ್ಲಿ ಅನುಪಮ್ ಕೇರ್ ನಟಿಸಿದ್ದಾರೆ ಮತ್ತು ದ್ವಾರಕೆಯಲ್ಲಿ ಕಥೆ ಸಾಗುತ್ತದೆ ಅನ್ನು ಕಾರಣಕ್ಕೆ ಹಿಂದಿಗೆ ಡಬ್ ಮಾಡಿ ರಿಲೀಸ್ ಮಾಡಲಾಗಿತ್ತು. ಕೇವಲ 50 ಸ್ಕ್ರೀನ್‌ಗಳಲ್ಲಿ ಶುರುವಾದ ಸಿನಿಮಾ ಪ್ರದರ್ಶನ ರೆಸ್ಪಾನ್ಸ್ ಹೆಚ್ಚಾದಂತೆ ಸ್ಕ್ರೀನ್‌ಗಳ ಸಂಖ್ಯೆ ಹೆಚ್ಚಿಸಲಾಯಿತು. ಸದ್ಯ 1000 ಸ್ಕ್ರೀನ್‌ಗಳಲ್ಲಿ 'ಕಾರ್ತಿಕೇಯ'-2 ಸಿನಿಮಾ ಹಿಂದಿ ವರ್ಷನ್ ಪ್ರದರ್ಶನ ಕಾಣುತ್ತಿದೆ. ಬಾಲಿವುಡ್ ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ. ಶ್ರೀಕೃಷ್ಣನ ಜನ್ಮಸ್ಥಳವಾದ ಮಥುರಾ ಹಾಗೂ ದ್ವಾರಕೆಯ ಹಿನ್ನೆಲೆಯಲ್ಲಿ ಸಿನಿಮಾ ಕಥೆ ಇರುವುದರಿಂದ ದೊಡ್ಡಮಟ್ಟದಲ್ಲಿ ಹಿಂದಿ ಪ್ರೇಕ್ಷಕರನ್ನು ಸಿನಿಮಾ ಸೆಳೆಯುತ್ತಿದೆ.

  ಬಾಲಿವುಡ್‌ನಲ್ಲಿ 'ಕಾರ್ತಿಕೇಯ'- 2 ಕಾರುಬಾರು: 100 ಕೋಟಿ ರೂ. ಕ್ಲಬ್‌ನತ್ತ ಮಿಸ್ಟರಿ ಥ್ರಿಲ್ಲರ್!ಬಾಲಿವುಡ್‌ನಲ್ಲಿ 'ಕಾರ್ತಿಕೇಯ'- 2 ಕಾರುಬಾರು: 100 ಕೋಟಿ ರೂ. ಕ್ಲಬ್‌ನತ್ತ ಮಿಸ್ಟರಿ ಥ್ರಿಲ್ಲರ್!

  ಆಂಧ್ರ- ತೆಲಂಗಾಣದಲ್ಲೂ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಓವರ್‌ಸೀನ್‌ ಮಾರ್ಕೆಟ್‌ನಲ್ಲಿ 'ಕಾರ್ತಿಕೇಯ'-2 ಹವಾ ಜೋರಾಗಿದೆ. ಎರಡನೇ ವಾರವೂ ಮಿಸ್ಟರಿ ಅಡ್ವೆಂಚರಸ್ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಭಾರತದಲ್ಲಿ ಮಾತ್ರ ಚಿತ್ರದ ಹಿಂದಿ ವರ್ಷನ್ 18 ಕೋಟಿ ರೂ. ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ.

  ಯುವ ನಟನೊಬ್ಬನ ಸಿನಿಮಾ ಹಿಂದಿಗೆ ಡಬ್ ಆಗಿ ಈ ಪಾಟಿ ಸದ್ದು ಮಾಡುತ್ತಿರುವುದು ಇದೇ ಮೊದಲು. ವೀಕ್‌ಡೇಸ್‌ನಲ್ಲೂ ಕೂಡ ಸಿನಿಮಾ 80ರಿಂದ 90 ಲಕ್ಷ ರೂ. ಕಲೆಕ್ಷನ್ ಮಾಡುತ್ತಿದೆ. ಇನ್ನು 'ಕಾರ್ತಿಕೇಯ'-2 ಸಿನಿಮಾ 100 ಕೋಟಿ ರೂ. ಗ್ರಾಸ್‌ ಕಲೆಕ್ಷನ್ ಮಾಡಿದ್ದು, ಭರ್ಜರಿಯಾಗಿ ಸಂಭ್ರಮಾಚರಣೆಗೆ ಸಿದ್ಧತೆ ನಡೀತಿದೆ. ನಾಳೆ (ಆಗಸ್ಟ್ 26) ಕರ್ನೂಲ್‌ನಲ್ಲಿ ಸಿನಿಮಾ 100 ಕೋಟಿ ರೂ. ಕಲೆಕ್ಷನ್ಸ್ ಈವೆಂಟ್ ಏರ್ಪಡಿಸಲಾಗಿದೆ.

  Nikhil Siddhartha and Anupama Parameswarans Karthikeya-2 to stream on Zee5

  ಎಷ್ಟೇ ದೊಡ್ಡ ಸಿನಿಮಾ ಆದರೂ ಮಹಾ ಅಂದರೆ ಒಂದು ತಿಂಗಳ ನಂತರ ಓಟಿಟಿಗೆ ಬಂದೇ ಬರುತ್ತದೆ ಎಂದು ಸಿನಿರಸಿಕರು ಕಾಯುತ್ತಿರುತ್ತಾರೆ. 'ಕಾರ್ತಿಕೇಯ'-2 ಸಿನಿಮಾ ಕೂಡ ಸ್ಮಾಲ್‌ ಸ್ಕ್ರೀನ್‌ಗೆ ಯಾವಾಗ ಬರುತ್ತೆ? ಸಿನಿಮಾದಲ್ಲಿ ಅಂಥಾದ್ದೇನಿದೆ? ಎಂದು ನೋಡಲು ಸಾಕಷ್ಟು ಜನ ಕಾತರರಾಗಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಸಿನಿಮಾ ಡಿಜಿಟಲ್, ಸ್ಯಾಟಲೈಟ್ ಡೈಟ್ಸ್ ಜೀ ಸಂಸ್ಥೆ ಪಾಲಾಗಿದೆ. ಜೀ5 ಓಟಿಟಿ ಫ್ಲಾಟ್‌ಫಾರ್ಮ್‌ನಲ್ಲಿ 'ಕಾರ್ತಿಕೇಯ'-2 ಸಿನಿಮಾ ಸ್ಟ್ರೀಮಿಂಗ್ ಆಗಲಿದೆ. ಸದ್ಯ ನಿಯಮದ ಪ್ರಕಾರ ಯಾವುದೇ ಸಿನಿಮಾ ಆದರೂ ಥಿಯೇಟರ್‌ ರಿಲೀಸ್ ಆದ 6 ವಾರಗಳ ನಂತರ ಓಟಿಟಿಗೆ ಬರಬೇಕು ಅನ್ನುವ ನಿಯಮ ಇದೆ. ಅದರ ಪ್ರಕಾರ ಅಕ್ಟೋಬರ್‌ ಮೊದಲ ವಾರದಲ್ಲಿ ಸಿನಿಮಾ ಸ್ಮಾಲ್‌ಸ್ಕ್ರೀನ್‌ಗೆ ಎಂಟ್ರಿ ಕೊಡಲಿದೆ.

  English summary
  Nikhil Siddhartha and Anupama Parameswaran's Karthikeya-2 to stream on Zee5. Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X