For Quick Alerts
  ALLOW NOTIFICATIONS  
  For Daily Alerts

  'ಕಾರ್ತಿಕೇಯ'- 2 & 'ಬಿಂಬಿಸಾರ' ಓಟಿಟಿ ರಿಲೀಸ್ ಡೇಟ್ ಫಿಕ್ಸ್ !

  |

  ಟಾಲಿವುಡ್‌ನಲ್ಲಿ ಈ ವರ್ಷ ಸಂಚಲನ ಸೃಷ್ಟಿಸಿದ ಸಿನಿಮಾಗಳು ಅಂದರೆ 'ಕಾರ್ತಿಕೇಯ'- 2 ಹಾಗೂ 'ಬಿಂಬಿಸಾರ'. ಎಲ್ಲರ ನಿರೀಕ್ಷೆ ಮೀರಿ ಈ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದ್ದವು. ಅದರಲ್ಲೂ ಫ್ಯಾಂಟಸಿ ಥ್ರಿಲ್ಲರ್ 'ಕಾರ್ತಿಕೇಯ'- 2 ಸಿನಿಮಾ ಹಿಂದಿಗೂ ಡಬ್ ಆಗಿ ದಾಖಲೆ ಬರೆದಿತ್ತು. ಬಾಲಿವುಡ್‌ ಮಂದಿಯೇ ಶಾಕ್‌ ಆಗುವಂತೆ ಈ ಸಿನಿಮಾ ಹಿಂದಿ ಬೆಲ್ಟ್‌ನಲ್ಲಿ ಕಲೆಕ್ಷನ್ ಮಾಡಿತ್ತು.

  ನಿಖಿಲ್ ಸಿದ್ದಾರ್ಥ್ ಹಾಗೂ ಅನುಪಮಾ ಪರಮೇಶ್ವರ್‌ ನಟನೆಯ ಮಿಸ್ಟರಿ ಥ್ರಿಲ್ಲರ್ 'ಕಾರ್ತಿಕೇಯ'-2 ಸಿನಿಮಾ ಆಂಧ್ರ, ತೆಲಂಗಾಣ ಮಾತ್ರವಲ್ಲ ಉತ್ತರ ಭಾರತದಲ್ಲೂ ಸೂಪರ್ ಹಿಟ್ ಆಗಿದೆ. ಓವರ್‌ಸೀಸ್‌ ಮಾರ್ಕೆಟ್‌ನಲ್ಲೂ ಸಿನಿಮಾ ಸಖತ್ ಸದ್ದು ಮಾಡಿದೆ. ಶ್ರೀಕೃಷ್ಣನ ಜನ್ಮಸ್ಥಳವಾದ ಮಥುರಾ ಹಾಗೂ ದ್ವಾರಕೆಯ ಹಿನ್ನೆಲೆಯಲ್ಲಿ ಸಿನಿಮಾ ಕಥೆ ಇರುವುದರಿಂದ ದೊಡ್ಡಮಟ್ಟದಲ್ಲಿ ಹಿಂದಿ ಪ್ರೇಕ್ಷಕರನ್ನು ಸಿನಿಮಾ ಸೆಳೆದಿತ್ತು. ಜೀ5 ಸಂಸ್ಥೆ ಚಿತ್ರದ ಡಿಜಿಟಲ್ ರೈಟ್ಸ್ ಖರೀದಿಸಿದ್ದು ದಸರಾ ಸಂಭ್ರಮದಲ್ಲಿ ಸ್ಮಾಲ್‌ಸ್ಕ್ರೀನ್‌ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗುವ ಸಾಧ್ಯತೆಯಿದೆ.

  ಬಿಡುಗಡೆಯಾಗಿ 36 ದಿನ ಕಳೆದ ನಂತರ ತನ್ನ ಸಿನಿಮಾ ನೋಡಿದ ನಟ ನಿಖಿಲ್!ಬಿಡುಗಡೆಯಾಗಿ 36 ದಿನ ಕಳೆದ ನಂತರ ತನ್ನ ಸಿನಿಮಾ ನೋಡಿದ ನಟ ನಿಖಿಲ್!

  ಆಮೀರ್ ಖಾನ್ ನಟನೆಯ 'ಲಾಲ್‌ ಸಿಂಗ್ ಚಡ್ಡ' ಹಾಗೂ ಅಕ್ಷಯ್ ಕುಮಾರ್ ಅಭಿನಯದ 'ರಕ್ಷಾಬಂಧನ್‌'ಗಿಂತಲೂ 'ಕಾರ್ತಿಕೇಯ' -2 ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಅಷ್ಟಕ್ಕೂ ಈ ಸಿನಿಮಾದಲ್ಲಿ ಅಂಥಾದ್ದೇನಿದೆ ಎಂದು ನೋಡಲು ಕೆಲವರು ಓಟಿಟಿ ರಿಲೀಸ್ ಎದುರು ನೋಡುತ್ತಿದ್ದಾರೆ. ಮೀಡಿಯಂ ಬಜೆಟ್ ಸಿನಿಮಾ 120 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ಈ ವಾರ ಮಲಯಾಳಂ ಭಾಷೆಗೂ ಡಬ್ ಮಾಡಿ ರಿಲೀಸ ಮಾಡಲಾಗ್ತಿದೆ.

  'ಕಾರ್ತಿಕೇಯ'- 2 ರೀತಿಯಲ್ಲೇ ಆಗಸ್ಟ್‌ನಲ್ಲಿ 'ಬಿಂಬಿಸಾರ' ಸಿನಿಮಾ ಕೂಡ ರಿಲೀಸ್ ಆಗಿ ಸದ್ದು ಮಾಡಿತ್ತು. ಕ್ರಿಸ್ತ ಪೂರ್ವ 5ನೇ ಶತಮಾನದ ಮಗಧ ರಾಜ ಬಿಂಬಿಸಾರನ ಜೀವನವನ್ನಾಧರಿಸಿ ಈ ಸಿನಿಮಾ ಕಟ್ಟಿಕೊಡಲಾಗಿತ್ತು. ಟೈಂ ಟ್ರಾವೆಲ್ ಕಥಾಹಂದರ ಚಿತ್ರದಲ್ಲಿ ನಂದಮೂರಿ ಕಲ್ಯಾಣ್ ರಾಮ್ ಬಿಂಬಿಸಾರನ ಪಾತ್ರದಲ್ಲಿ ಅಬ್ಬರಿಸಿದ್ದರು. ಮಲ್ಲಿಡಿ ವಸಿಸ್ಟ ನಿರ್ದೇಶನದ ಈ ಫ್ಯಾಂಟಸಿ ಆಕ್ಷನ್ ಥ್ರಿಲ್ಲರ್ ಸಿನಿಮಾ ಡಿಜಿಟಲ್ ರೈಟ್ಸ್‌ ಜೀ5 ಸಂಸ್ಥೆ ಕೊಂಡುಕೊಂಡಿದೆ.

  "ಗಂಡಸರು ಅದನ್ನು ಕಂಟ್ರೋಲ್ ಮಾಡಿಕೊಳ್ಳಬೇಕು": ಕಾಸ್ಟಿಂಗ್ ಕೌಚ್ ಬಗ್ಗೆ ವಿಷ್ಣುಪ್ರಿಯಾ ಹೇಳಿಕೆ

  Nikhil Siddhartha Starrer Karthikeya 2 And Kalyanram Starrer Bimbisara OTT dates locked

  ಸೆಪ್ಟೆಂಬರ್ 30ಕ್ಕೆ 'ಬಿಂಬಿಸಾರ' ಸಿನಿಮಾ ಓಟಿಟಿಗೆ ಬರುವ ಸಾಧ್ಯತೆಯಿದೆ. ಅಂದಹಾಗೆ ಈ ಸಿನಿಮಾ ಸೀಕ್ವೆಲ್ ಮಾಡುವ ಪ್ರಯತ್ನ ಕೂಡ ಶುರುವಾಗಿದೆ. ಥಿಯೇಟರ್‌ನಲ್ಲಿ ಈ ಸಿನಿಮಾ ನೋಡದೇ ಇರುವವರು ಸ್ಮಾಲ್‌ ಸ್ಕ್ರೀನ್‌ನಲ್ಲಿ 'ಬಿಂಬಿಸಾರ'ನ ಆರ್ಭಟ ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ. ಶೀಘ್ರದಲ್ಲೇ ಅಧಿಕೃತವಾಗಿ 2 ಸಿನಿಮಾಗಳ ಓಟಿಟಿ ಸ್ಟ್ರೀಮಿಂಗ್ ಡೇಟ್ ಅನೌನ್ಸ್ ಆಗಲಿದೆ.

  English summary
  Nikhil Siddhartha Starrer Karthikeya 2 And Kalyanram Starrer Bimbisara OTT dates locked. Know More.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X