For Quick Alerts
  ALLOW NOTIFICATIONS  
  For Daily Alerts

  ಓಟಿಟಿ ನಲ್ಲಿ ಸಿನಿಮಾ ರಿಲೀಸ್ ಮಾಡಿದರೆ ತಪ್ಪೆನ್ನಲಾಗದು: ಓಟಿಟಿ ಪರ ಸತೀಶ್ ನಿಲವು

  |

  ಕೊರೊನಾ ಲಾಕ್‌ಡೌನ್ ಮುಂದುವರೆದಂತೆ ಚಿತ್ರರಂಗದವರಿಗೆ ತಳಮಳ ಶುರುವಾಗಿದೆ. ಚಿತ್ರಮಂದಿರಗಳು, ಚಿತ್ರೀಕರಣ ಬಂದ್ ಆಗಿ 45 ಕ್ಕೂ ಮೇಲಾಯಿತು ಹಾಗಾಗಿ ಭವಿಷ್ಯದ ಆತಂಕ ಎಲ್ಲರಲ್ಲೂ ತೀವ್ರಗೊಂಡಿದೆ.

  ನಿಮ್ಮೆಲ್ಲರ ಸಹಕಾರದಿಂದಲೇ ನಾನು ಇಷ್ಟೆಲ್ಲ ಮಾಡ್ತಿರೋದು | Ragini | Filmibeat Kannada

  ಸಾಲತಂದು ಹಣ ಹೂಡಿ ಚಿತ್ರಬಿಡುಗಡೆಗೆ ಕಾಯುತ್ತಿದ್ದ ನಿರ್ಮಾಪಕರು ಲಾಕ್‌ಡೌನ್‌ನಿಂದ ಕಂಗಾಲಾಗಿದ್ದು ಚಿತ್ರಮಂದಿರಗಳು ಯಾವಾಗ ಪುನರರಾರಂಭ ಆಗುತ್ತವೆಯೆಂಬ ಭರವಸೆಯೂ ಇಲ್ಲ. ಸಿನಿಮಾ ಮಾಡಲು ತಂದ ಸಾಲದ ಹೊರೆಗೆ ಬಡ್ಡಿ ಸೇರಿ ಇನ್ನಷ್ಟು ಭಾರವಾಗುತ್ತಿದೆ.

  ಇಂಥಹಾ ಸಮಯದಲ್ಲಿ ನಿರ್ಮಾಪಕರುಗಳು ಓಟಿಟಿಗಳತ್ತ ಹೊರಳಿದ್ದು, ಡಬ್ಬದಲ್ಲಿರುವ ಸಿನಿಮಾಗಳನ್ನು ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಂ, ವೂಟ್, ಡಿಸ್ನಿ ಪ್ಲಸ್ ರೀತಿಯ ಓಟಿಟಿಗಳಿಗೆ ಮಾರುವ ಯೋಚನೆ ಮಾಡುತ್ತಿದ್ದಾರೆ. ಆದರೆ ಈ ಬಗ್ಗೆ ಸಿನಿ ಉದ್ಯಮದಲ್ಲಿಯೇ ಎರಡು ರೀತಿಯ ಚರ್ಚೆಗಳು ಹುಟ್ಟಿವೆ.

  ಓಟಿಟಿಗೆ ಬಿಡುಗಡೆ ಮಾಡಿದರೆ ತಪ್ಪೆನ್ನಲಾಗದು: ಸತೀಶ್

  ಓಟಿಟಿಗೆ ಬಿಡುಗಡೆ ಮಾಡಿದರೆ ತಪ್ಪೆನ್ನಲಾಗದು: ಸತೀಶ್

  ಮಾಧ್ಯಮವೊಂದರ ಜೊತೆ ಇತ್ತೀಚೆಗೆ ಮಾತನಾಡಿದ ನಟ ಸತೀಶ್ ನೀನಾಸಂ, ಸಿನಿಮಾವನ್ನು ನೇರವಾಗಿ ಓಟಿಟಿ ಗೆ ಬಿಡುಗಡೆ ಮಾಡಿದರೆ ತಪ್ಪೆಂದು ಹೇಳಲಾಗದು, ಪರಿಸ್ಥಿತಿಗೆ ತಕ್ಕಂತೆ ವರ್ತಿಸಬೇಕಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  ಅನೇಕರು ಚಿತ್ರಮಂದಿರಗಳನ್ನು ನಂಬಿಕೊಂಡಿದ್ದಾರೆ: ಸತೀಶ್

  ಅನೇಕರು ಚಿತ್ರಮಂದಿರಗಳನ್ನು ನಂಬಿಕೊಂಡಿದ್ದಾರೆ: ಸತೀಶ್

  ಚಿತ್ರಮಂದಿರಗಳ ಬಗ್ಗೆಯೂ ಮಾತನಾಡಿರುವ ಸತೀಶ್, 'ಚಿತ್ರಮಂದಿರಗಳನ್ನು ನಂಬಿಕೊಂಡು ಹಲವಾರು ಮಂದಿ ಇದ್ದಾರೆ, ವಿತರಕರು, ಚಿತ್ರಮಂದಿರಗಳ ಮಾಲೀಕರು, ಚಿತ್ರಮಂದಿರಗಳಲ್ಲಿ ಕೆಲಸ ಮಾಡುವವರು ಹೀಗೆ ಅನೇಕರು ಚಿತ್ರಮಂದಿರಗಳನ್ನೇ ನಂಬಿಕೊಂಡಿದ್ದಾರೆ' ಎಂದು ಅವರು ಹೇಳಿದ್ದಾರೆ.

  ವೈಯಕ್ತಿಕವಾಗಿ ಥಿಯೇಟರ್‌ ಗೆ ಹೋಗುವುದೇ ನನಗೆ ಇಷ್ಟ: ಸತೀಶ್

  ವೈಯಕ್ತಿಕವಾಗಿ ಥಿಯೇಟರ್‌ ಗೆ ಹೋಗುವುದೇ ನನಗೆ ಇಷ್ಟ: ಸತೀಶ್

  ನನಗೆ ವೈಯಕ್ತಿಕವಾಗಿ ಥಿಯೇಟರ್‌ ಗೆ ಹೋಗಿಯೇ ಸಿನಿಮಾ ನೋಡುವುದು ಇಷ್ಟ. ಕೊನೆಯದಾಗಿ ಏನೂ ಬೇರೆ ಪರ್ಯಾಯವಿಲ್ಲ ಎಂದಾಗ ಓಟಿಟಿಗಳಲ್ಲಿ ಬಿಡುಗಡೆ ಮಾಡಲೇಬೇಕಾಗುತ್ತದೆ. ಹಾಗೆ ಮಾಡಿದರೆ ತಪ್ಪೇನಿಲ್ಲ ಎನಿಸುತ್ತದೆ, ಒಟ್ಟಿನಲ್ಲಿ ಎಲ್ಲರಿಗೂ ಒಳ್ಳೆಯದಾಗಲಿ' ಎಂದು ಸತೀಶ್ ಹೇಳಿದ್ದಾರೆ.

  ಲಾಕ್‌ಡೌನ್‌ ನಲ್ಲಿ ಏನು ಮಾಡುತ್ತಿದ್ದಾರೆ ನೀನಾಸಂ

  ಲಾಕ್‌ಡೌನ್‌ ನಲ್ಲಿ ಏನು ಮಾಡುತ್ತಿದ್ದಾರೆ ನೀನಾಸಂ

  ನೀನಾಸಂ ಸತೀಶ್ ಲಾಕ್‌ಡೌನ್ ಸಮಯದಲ್ಲಿ ಕತೆಗಳನ್ನು ಕೇಳುತ್ತಿದ್ದಾರಂತೆ. ಮತ್ತೆ ಮುಂದಿನ ಸಿನಿಮಾಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದಾರಂತೆ. ಲಾಕ್‌ಡೌನ್ ಮುಗಿದ ಮೇಲೆ ಪಾಪಸ್‌ಕಳ್ಳಿ, ಪರಿಮಳ ಲಾಡ್ಜ್, ಗೋಧ್ರಾ ಬಿಡುಗಡೆ ಆಗಲಿವೆ.

  English summary
  Ninasam Satish gave opinion about releasing movie directly to OTT like Netflix and Amazon Prime. He said if producer has no choice than he can sell movie to OTT.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X