ಅಭಿಮಾನಿಗಳ ಹುಬ್ಬೇರಿಸಿದ ನಟಿ ನಿತ್ಯಾ ಮೆನನ್ ಲಿಪ್ ಲಾಕ್

ಕನ್ನಡತಿ ನಿತ್ಯಾ ಮೆನನ್ ದಕ್ಷಿಣ ಭಾರತ ಚಿತ್ರಗಳಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಇತ್ತೀಚೆಗೆ ಅವರು ವೆಬ್ ಸೀರೀಸ್ ಗೆ ಜಿಗಿದ್ದಿದ್ದಾರೆ.

Recommended Video

Kannad Gothilla :ರಚಿತಾ ರಾಮ್ ಚಾನ್ಸ್ ಮಿಸ್ ಮಾಡ್ಕೊಂಡ್ರು ಹರಿಪ್ರಿಯಾ ಕ್ಯಾಚ್ ಹಾಕೊಂಡ್ರು |Mayuraa Raghavendra

ಬಹುತೇಕ ಸಿನಿಮಾಗಳಲ್ಲಿ ಗ್ಲಾಮರ್‌ ರಹಿತ ಪಾತ್ರಗಳನ್ನೇ ಮಾಡಿಕೊಂಡು ಬಂದಿದ್ದ ನಟಿ ನಿತ್ಯಾ, ವೆಬ್ ಸೀರೀಸ್‌ನಲ್ಲಿ ತುಸು ಹಾಟ್ ಎನಿಸುವ ದೃಶ್ಯಗಳಲ್ಲಿ ನಟಿಸಿ ಅಭಿಮಾನಿಗಳ ಹುಬ್ಬೇರಿಸಿದ್ದಾರೆ.

ನಟಿ ನಿತ್ಯಾ ಮೆನನ್, ಅಭಿಷೇಕ್ ಬಚ್ಚನ್ ಜೊತೆ 'ಬ್ರೀತ್' ವೆಬ್ ಸರಣಿಯಲ್ಲಿ ನಾಯಕಿಯಾಗಿ ನಟಿಸಿದ್ದು, ಸರಣಿಯಲ್ಲಿ ಲಿಪ್‌ ಲಾಕ್ ದೃಶ್ಯಗಳಲ್ಲಿ ನಟಿಸಿದ್ದಾರೆ. ತುಟಿಯೊತ್ತುವ ದೃಶ್ಯಗಳಲ್ಲಿ ನಿತ್ಯಾ ನಟಿಸಿರುವುದು ಇದೇ ಮೊದಲು. ಆದರೆ ಅದರಲ್ಲೂ ವಿಶೇಷವಿದೆ.

ದಕ್ಷಿಣ ಭಾರತದ ಸಿನಿಮಾಗಳಿಗೂ ವ್ಯಾಪಿಸಿದೆ

ದಕ್ಷಿಣ ಭಾರತದ ಸಿನಿಮಾಗಳಿಗೂ ವ್ಯಾಪಿಸಿದೆ

ಮೊದಲಿಗೆ ಬಾಲಿವುಡ್‌ನಲ್ಲಿ ಸಿನಿಮಾಗಳಲ್ಲಿ ಮಾತ್ರವೇ ಕಂಡುಬರುತ್ತಿದ್ದ ಲಿಪ್ ಲಾಕ್ ದೃಶ್ಯಗಳು ದಕ್ಷಿಣ ಭಾರತ ಚಿತ್ರಗಳಲ್ಲೂ ಈಗ ಢಾಳಾಗಿ ಕಂಡುಬರುತ್ತಿವೆ. ಆದರೆ ಎಲ್ಲಾ ನಟಿಯರೂ ಲಿಪ್ ಲಾಕ್ ದೃಶ್ಯಗಳು ಅಭಿನಯಿಸುತ್ತಿದ್ದಾರೆಂದಲ್ಲ. ಕೆಲವರು ಅಂಥಹಾ ದೃಶ್ಯಗಳಿಂದ ಅಂತರ ಕಾಯ್ದುಕೊಂಡಿದ್ದಾರೆ. ಅಂಥಹವರಲ್ಲಿ ನಿತ್ಯಾ ಮೆನನ್ ಸಹ ಒಬ್ಬರು.

ನಟಿಯೊಂದಿಗೆ ನಿತ್ಯಾ ಲಿಪ್ ಲಾಕ್

ನಟಿಯೊಂದಿಗೆ ನಿತ್ಯಾ ಲಿಪ್ ಲಾಕ್

ಆದರೆ 'ಬ್ರೀತ್' ವೆಬ್ ಸರಣಿಯಲ್ಲಿ ನಿತ್ಯಾ ಮೆನನ್ ಲಿಪ್ ಲಾಕ್ ಮಾಡಿದ್ದಾರೆ. ಆದರೆ ಅದು ಮಹಿಳೆಯ ಜೊತೆಗೆ! ಹೌದು ಮಹಿಳಾ ಸಹ ನಟಿಯೊಂದಿಗಿನ ದೃಶ್ಯವೊಂದರಲ್ಲಿ ತುಟಿಗೆ ಚುಂಬಿಸುವ ದೃಶ್ಯದಲ್ಲಿ ನಿತ್ಯಾ ನಟಿಸಿದ್ದಾರೆ. ಆದರೆ ಇದು ಕತೆಗೆ ಪೂರಕವಾಗಿಯೇ ಇದೆ.

ಕತೆಗೆ ಪೂರಕವಾಗಿಯೇ ಇದೆ

ಕತೆಗೆ ಪೂರಕವಾಗಿಯೇ ಇದೆ

ವೆಬ್ ಸರಣಿಯ ಕತೆಯಲ್ಲಿ ನಿತ್ಯಾ ಮೆನನ್ ಮತ್ತು ಆಕೆಯ ಪತಿ ಪಾತ್ರಧಾರಿ ಅಭಿಷೇಕ್ ಬಚ್ಚನ್ ಮಹಿಳೆಯೊಬ್ಬಾಕೆಯನ್ನು ಕೊಲ್ಲಬೇಕಾಗಿರುತ್ತದೆ. ಅದೂ ಆಕೆಯಲ್ಲಿ ಲೈಂಗಿಕ ವಾಂಛೆ ಹುಟ್ಟಿಸಿಯೇ ಕೊಲ್ಲಬೇಕಾಗಿರುತ್ತದೆ. ಸಲಿಂಗಿ ಆಗಿರುವ ಆಕೆಯೊಂದಿಗೆ ನಿತ್ಯಾ ಮೆನನ್ ಸರಸವಾಡಿ ಆಕೆಯನ್ನು ಕೊಲ್ಲುವ ಯೋಜನೆ ಮಾಡುತ್ತಾರೆ.

ನಿತ್ಯಾ ಮೆನನ್ ನಟನೆಗೆ ಮೆಚ್ಚುಗೆ

ನಿತ್ಯಾ ಮೆನನ್ ನಟನೆಗೆ ಮೆಚ್ಚುಗೆ

ಬ್ರೀತ್ ವೆಬ್ ಸರಣಿಯು ಅಮೆಜಾನ್ ಪ್ರೈಂ ನಲ್ಲಿ ಬಿಡುಗಡೆ ಆಗಿದ್ದು, ಉತ್ತಮ ಪ್ರತಿಕ್ರಿಯೆ ಗಳಿಸಿದೆ. ನಿತ್ಯಾ ಮೆನನ್ ನಟನೆಯನ್ನು ವೀಕ್ಷಕರು ಮೆಚ್ಚಿದ್ದಾರೆ. ಈ ಹಿಂದೆ ಇದೇ ಹೆಸರಿನ ಸರಣಿಯಲ್ಲಿ ಮಾಧವನ್ ನಟಿಸಿದ್ದರು. ಅದು ಸಹ ಸಾಕಷ್ಟು ಹಿಟ್ ಆಗಿತ್ತು.

More from Filmibeat

English summary
Actress Nithya Menon did fearless acting in Breath web series which telecasting on Amazon prime.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X