twitter
    For Quick Alerts
    ALLOW NOTIFICATIONS  
    For Daily Alerts

    ಒಟಿಟಿಗಿಲ್ಲ ಸರ್ಕಾರದ ಮೂಗುದಾರ, ಟಿವಿ ಮಾಧ್ಯಮಗಳಿಗೆ ಸ್ವಯಂ ಲಗಾಮು

    |

    ಒಟಿಟಿ, ಆನ್‌ಲೈನ್ ಸುದ್ದಿ ಮಾಧ್ಯಮಗಳು, ಆನ್‌ಲೈನ್ ಕಂಟೆಂಟ್ ಡೆವೆಲಪರ್‌ಗಳು ಇನ್ನೂ ಹಲವನ್ನು ಕೇಂದ್ರದ ಮಾಹಿತಿ ಮತ್ತು ಪ್ರಸಾರ ಇಲಾಖೆ ಅಧೀನಕ್ಕೆ ತರಲು ಆದೇಶಸ ಹೊರಡಿಸಲಾಗಿತ್ತು.

    ಒಟಿಟಿ ಹಾಗೂ ಆನ್‌ಲೈನ್ ಕಂಟೆಂಟ್, ಸುದ್ದಿಗಳ ಮೇಲೆ ಇನ್ನು ಮುಂದೆ ಕೇಂದ್ರ ಸರ್ಕಾರವು ನಿಗಾ ವಹಿಸಲಿದೆ, ಆನ್‌ಲೈನ್ ಕಂಟೆಂಟ್ ಅನ್ನು ನಿಯಂತ್ರಿಸಲಿದೆ ಎನ್ನಲಾಗಿತ್ತು. ಇಂದು ಈ ಬಗ್ಗೆ ಮಾಹಿತಿ ಮತ್ತು ಪ್ರಸಾರ ಇಲಾಖೆ ಸಚಿವ ಪ್ರಕಾಶ್ ಜಾವಡೇಕರ್ ಸ್ಪಷ್ಟನೆ ನೀಡಿದ್ದಾರೆ.

    ಪ್ರಕಾಶ್ ಜಾವಡೇಕರ್ ಹೇಳಿರುವಂತೆ, ಒಟಿಟಿಗಳ ಮೇಲೆ ಅವುಗಳ ಕಂಟೆಂಟ್‌ಗಳ ಮೇಲೆ ಯಾವುದೇ ನಿಯಂತ್ರಣ ಇರುವುದಿಲ್ಲ ಎಂದಿದ್ದಾರೆ. ಆ ಮೂಲಕ ಒಟಿಟಿ ಕಂಟೆಂಟ್‌ ಮೇಲೆ ಸೆನ್ಸಾರ್ ಹೂಡಬೇಕು ಎನ್ನುತ್ತಿದ್ದವರಿಗೆ ಮತ್ತೆ ನಿರಾಸೆಯಾಗಿದೆ.

    ಒಟಿಟಿ ಕಂಟೆಂಟ್‌ ಮೇಲೆ ನಿಯಂತ್ರಣವಿಲ್ಲ

    ಒಟಿಟಿ ಕಂಟೆಂಟ್‌ ಮೇಲೆ ನಿಯಂತ್ರಣವಿಲ್ಲ

    ಒಟಿಟಿ ಕಂಟೆಂಟ್ ನಿಯಂತ್ರಣ ಮಂಡಳಿ ಇರುವುದಿಲ್ಲ ಜೊತೆಗೆ ಒಟಿಟಿಗೆ ಸ್ವಯಂ ನಿಯಂತ್ರಣ ಮಂಡಳಿ ಸಹ ಇರುವುದಿಲ್ಲ. ಆದರೆ ಕಂಟೆಂಟ್ ತಯಾರಕರು ತಾವೇ ಸ್ವತಃ ಯೋಚಿಸಿ ಸ್ವಾತಂತ್ರ್ಯವನ್ನು ದುರುಪಯೋಗ ಪಡಿಸಿಕೊಳ್ಳದೆ ಸಭ್ಯ ಕಂಟೆಂಟ್ ಅನ್ನು ನೀಡಬೇಕು ಎಂದಿದ್ದಾರೆ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್.

    ನಿಗಾವಣೆ ಸಹ ಇರುವುದಿಲ್ಲ: ಪ್ರಕಾಶ್ ಜಾವಡೇಕರ್

    ನಿಗಾವಣೆ ಸಹ ಇರುವುದಿಲ್ಲ: ಪ್ರಕಾಶ್ ಜಾವಡೇಕರ್

    ಒಟಿಟಿಗಳಲ್ಲಿ ಪ್ರಸಾರವಾಗುವ ಕಂಟೆಂಟ್ ಅನ್ನು ನಿಯಂತ್ರಿಸಲು ಯಾವುದೇ ಸಮಿತಿ ರಚಿಸಿಲ್ಲ, ಯಾವುದೇ ನಿಗಾವಣೆ ಸಹ ಇರುವುದಿಲ್ಲ. ಒಟಿಟಿ ಕಂಟೆಂಟ್ ಅನ್ನು ನಿಯಂತ್ರಣಕ್ಕೆ ಒಳಪಡಿಸುವಂತೆ ಸಾಕಷ್ಟು ಒತ್ತಾಯ ಸರ್ಕಾರದ ಮೇಲೆ ಬಂದಿತ್ತು ಎಂದು ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

    ಟಿವಿ ಮಾಧ್ಯಮಗಳಿಗೆ ಸ್ವಯಂ ನಿಯಂತ್ರಣ

    ಟಿವಿ ಮಾಧ್ಯಮಗಳಿಗೆ ಸ್ವಯಂ ನಿಯಂತ್ರಣ

    ಟಿವಿ ಮಾಧ್ಯಮಗಳಿಗೂ ಸರ್ಕಾರದ ವತಿಯಿಂದ ಯಾವುದೇ ನಿಯಂತ್ರಣ ಅಥವಾ ನಿಗಾ ಇರುವುದಿಲ್ಲ. ಬದಲಿಗೆ ಟಿವಿ ಮಾಧ್ಯಮಗಳು ಒಟ್ಟಾಗಿ ಸ್ವಯಂ ನಿಯಂತ್ರಣ ಮಂಡಳಿಯೊಂದನ್ನು ಸ್ಥಾಪಿಸಿಕೊಂಡು ಅದರ ನಿಯಮಗಳಿಗೆ ಒಳಪಡಬೇಕು ಎಂದಿದ್ದಾರೆ ಪ್ರಕಾಶ್ ಜಾವಡೇಕರ್.

    ಮಾಧ್ಯಮ ನಿಯಂತ್ರಣಕ್ಕೆ ಒತ್ತಡವಿತ್ತು: ಜಾವಡೇಕರ್

    ಮಾಧ್ಯಮ ನಿಯಂತ್ರಣಕ್ಕೆ ಒತ್ತಡವಿತ್ತು: ಜಾವಡೇಕರ್

    ಮುಂದುವರೆದು, ನ್ಯಾಯಮೂರ್ತಿ ಎಕೆ ಶಿಕ್ರಿ ಸಮಿತಿ ವರದಿಯು ಟಿವಿ ಮಾಧ್ಯಮಗಳನ್ನು ನಿಯಂತ್ರಿಸಲು ಸಲಹೆ ನೀಡಿದೆ. ಬೇರೆ ಕೆಲವು ಸಲಹೆಗಳಲ್ಲಿಯೂ ಟಿವಿ ಮಾಧ್ಯಮಗಳನ್ನು ನಿಯಂತ್ರಿಸುವಂತೆ ಹೇಳಲಾಗಿದೆ. ಆದರೆ ಟಿವಿ ಮಾಧ್ಯಗಳು ತಮ್ಮದೇ ಆದ ಸ್ವಯಂ ನಿಯಂತ್ರಣ ಮಂಡಳಿ ಅಧೀನಕ್ಕೆ ಒಳಪಡುವುದು ಉತ್ತಮವೆಂಬ ಅಭಿಪ್ರಾಯವನ್ನು ಸಚಿವರು ಹೊರಹಾಕಿದ್ದಾರೆ.

    English summary
    Central minister Prakash Javdekar said there will be no regulatory body to govern OTT content.
    Monday, November 16, 2020, 19:40
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X