ಸದ್ದಿಲ್ಲದೇ ಓಟಿಟಿಗೆ ಬಂತು ಕರಣ್ ಜೋಹರ್ ಕೈ ಕಚ್ಚಿದ ಸಿನಿಮಾ ; ಇಲ್ಲಾದರೂ ಕಾರ್ತಿಕ್ ಆರ್ಯನ್‌ಗೆ ಸಿಗುತ್ತಾ ಜನರ ಪ್ರೀತಿ ?

ಬೆಳ್ಳಿಪರದೆಯಲ್ಲಿ ಚಿತ್ರವನ್ನು ನೋಡುವ ಮಜಾನೇ ಬೇರೆ. ಆದರೆ ಇಂದು ಕಾಲ ಬದಲಾಗಿದೆ. ಬದಲಾದ ಕಾಲದಲ್ಲಿ ಓಟಿಟಿಯ ಮೂಲಕ ಸಿನಿಮಾ ಮನೆಯ ಲಿವಿಂಗ್ ರೂಮ್‌ವರೆಗೆ ಬಂದಿದೆ. ಆ ಕಾಲದಲ್ಲಿ ಚಿತ್ರವೊಂದು ಚಿತ್ರಮಂದಿರದಲ್ಲಿ ಸೋತರೆ ಕಥೆ ಮುಕ್ತಾಯವಾದಂತೆ ಇತ್ತು. ಆದರೆ ಇಂದು ಓಟಿಟಿಯ ಮೂಲಕ ಚಿತ್ರ ಎರಡನೇ ಜನ್ಮ ಪಡೆಯುತ್ತಿದೆ. ಹೀಗೆ ಬಿಡುಗಡೆಯಾಗುವ ಚಿತ್ರಗಳಲ್ಲಿ ಕೆಲ ಚಿತ್ರಗಳು ಹಲವರ ಬದುಕು ಬದಲಿಸಿವೆ.

ಚಿತ್ರಮಂದಿರದಲ್ಲಿ ಸೋತ ಚಿತ್ರಗಳಲ್ಲಿ ಕೆಲ ಚಿತ್ರಗಳು ಓಟಿಟಿಯಲ್ಲಿ ಸದ್ದು ಮಾಡಿವೆ. ಉದಾಹರಣೆಗೆ ಇಮ್ತಿಯಾಜ್ ಅಲಿಯ ''ತಮಾಷಾ'' ಇವತ್ತು ಹಲವರ ಪಾಲಿನ ಕ್ಲಾಸಿಕ್ ಚಿತ್ರ. ''ತುಂಬಾಡ್'' ಹಾರರ್ ಜಾನರ್ ನ ಮಾಸ್ಟರ್ ಪೀಸ್. ಕನ್ನಡದಲ್ಲಿ ಕೂಡ ಈ ತರಹದ ಉದಾಹರಣೆಗಳು ಹಲವಾರು ಇವೆ. ಈ ಸಾಲಿನಲ್ಲಿ ಕಾರ್ತಿಕ್ ಆರ್ಯನ್ ಅಭಿನಯದ ''ತು ಮೇರಿ ಮೇ ತೇರಾ, ಮೇ ತೇರಾ ತು ಮೇರಿ'' ಸೇರಿಕೊಳ್ಳುತ್ತಾ, ಇಲ್ಲವಾ ಎನ್ನುವುದು ಮುಂಬರುವ ದಿನಗಳಲ್ಲಿ ಗೊತ್ತಾಗಲಿದೆಯಾದರೂ ಸದ್ಯ ಈ ಸಿನಿಮಾ ಸದ್ದಿಲ್ಲದೇ ಓಟಿಟಿಗೆ ಬಂದಿದೆ.

Now Streaming Tu Meri Main Tera OTT Release Watch Kartik Aaryans Rom-Com on Prime Video

ಹೌದು, ಕಳೆದ ವರ್ಷಾಂತ್ಯದಲ್ಲಿ ಮತ್ತು ಈ ವರ್ಷದ ಆರಂಭದಲ್ಲಿ ಹಲವು ಚಿತ್ರಗಳು ''ಧುರಂಧರ್'' ಅಲೆಯ ಎದುರು ಕೊಚ್ಚಿಕೊಂಡು ಹೋದವು. ಆ ಪೈಕಿ ''ತು ಮೇರಿ ಮೇ ತೇರಾ, ಮೇ ತೇರಾ ತು ಮೇರಿ'' ಕೂಡ ಒಂದು. ಕರಣ್ ಜೋಹರ್ ಅಂತಹ ದೈತ್ಯ ನಿರ್ಮಾಪಕ ಮತ್ತು ಚತುರ ಚಾಲಾಕಿ ವ್ಯಾಪಾರಸ್ಥ ಈ ಚಿತ್ರದ ಹಿಂದೆ ಇದ್ದರೂ ಕೂಡ ಈ ಚಿತ್ರ ಸೋಲಿನ ದವಡೆಯಿಂದ ಪಾರಾಗಲಿಲ್ಲ.

ಕ್ರಿಸ್ಮಸ್ ಹಬ್ಬದ ಪ್ರಯುಕ್ತ ತೆರೆಗೆ ಬಂದ ಈ ಚಿತ್ರ ಮಕಾಡೆ ಮಲಗಿತ್ತು. ''koimoi'' ಪ್ರಕಾರ ಈ ಚಿತ್ರವನ್ನು ನಿರ್ಮಾಣ ಮಾಡಿದ ತಪ್ಪಿಗೆ ನಿರ್ಮಾಪಕ ಕರಣ್ ಜೋಹರ್‍‌ಗೆ 50 ಕೋಟಿ ನಷ್ಟ ಕೂಡ ಆಗಿತ್ತು. ಇನ್ನೂ ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ 90 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ ಭಾರತದಲ್ಲಿ ಗಳಿಸಿದ್ದು ಕೇವಲ ₹ 32.95 ಕೋಟಿ ಮಾತ್ರ.

ಕಥಾಹಂದರ

ದಕ್ಷಿಣ ಯುರೋಪ್‌ನ ಕ್ರೊಯೇಷಿಯಾದಲ್ಲಿ ಲಾಸ್ ಏಂಜಲೀಸ್‌ನಲ್ಲಿ ವೆಡ್ಡಿಂಗ್ ಪ್ಲಾನರ್ ಆದ ರೇ (ಕಾರ್ತಿಕ್ ಆರ್ಯನ್) ಮತ್ತು ಲೇಖಕಿ ರೂಮಿ ( ಅನನ್ಯಾ ಪಾಂಡೆ) ಭೇಟಿಯಾಗುತ್ತೆ. ಮೊದಲ ನೋಟದಲ್ಲಿಯೇ ಇಬ್ಬರ ನಡುವೆ ಪ್ರೇಮಾಂಕುರವೂ ಆಗುತ್ತೆ.

ಆದರೆ, ರೇ ಮುಕ್ತವಾದ ಮನಸಿನ ಹುಡುಗ. ಸಂಪ್ರದಾಯ.. ಮದುವೆ..ಕುಟುಂಬ.. ಇದೆಲ್ಲದರಿಂದ ದೂರ. ಯಾವುದರ ಮೇಲೆ ಕೂಡ ನಂಬಿಕೆ ಇರಲ್ಲ. ಇದಕ್ಕೆ ರೂಮಿ ತದ್ವಿರುದ್ದ. ಕೌಂಟುಂಬಿಕ ಮೌಲ್ಯಕ್ಕೆ ಬೆಲೆ ಕೊಡುವ ಹುಡುಗಿ. ರೇ ತಾಯಿ (ನೀನಾ ಗುಪ್ತಾ) ನನ್ನ ಮಗ ಸ್ವತಂತ್ರ ಹಕ್ಕಿಯಂತೆ ಇರಬೇಕು ಎಂದು ಬಯಸಿದರೆ, ರೂಮಿ ತಂದೆಗೆ (ಜಾಕಿ ಶ್ರಾಫ್) ಸಂಪ್ರದಾಯಸ್ಥ ಅಳಿಯ ಬೇಕು. ಹೀಗೆ ಬೇರೆ ಬೇರೆ ಆಲೋಚನೆ ಹೊಂದಿರುವ ಇವರು ಒಂದಾಗುತ್ತಾರಾ..? ಎನ್ನುವುದೇ ಚಿತ್ರದ ಕಥಾಹಂದರ.

Now Streaming Tu Meri Main Tera OTT Release Watch Kartik Aaryans Rom-Com on Prime Video

ತಾರಾಬಳಗ

ಕಾರ್ತಿಕ್ ಆರ್ಯನ್, ಅನನ್ಯಾ ಪಾಂಡೆ, ಜಾಕಿ ಶ್ರಾಫ್, ನೀನಾ ಗುಪ್ತಾ, ಟಿಕು ತಲ್ಸಾನಿಯಾ, ಚಾಂದಿನಿ ಭಾಭ್ಧಾ, ಲೋಕೇಶ್ ಮಿತ್ತಲ್, ಗೃಶಾ ಕಪೂರ್, ರಾಘವ್ ಬಿನಾನಿ, ಅಫ್ನಾನ್ ಫಜ್ಲಿ ಮತ್ತು ಗೌರವ್ ಪಾಂಡೆ ಮುಂತಾದವರು

ನಿರ್ದೇಶಕ- ಸಮೀರ್ ವಿದ್ವಾನ್ಸ್

ನಿರ್ಮಾಪಕರು- ಕರಣ್ ಜೋಹರ್, ಆಧಾರ್ ಪೂನಾವಾಲಾ, ಅಪೂರ್ವ ಮೆಹ್ತಾ, ಶರೀನ್ ಮಂತ್ರಿ ಕೇಡಿಯಾ ಮತ್ತು ಕಿಶೋರ್ ಅರೋರಾ

ಸಂಗೀತ ನಿರ್ದೇಶನ - ವಿಶಾಲ್ -ಶೇಖರ್

ಹಿನ್ನೆಲೆ ಸಂಗೀತ - ಹಿತೇಶ್ ಸೋನಿಕ್

ಎಲ್ಲಿ ನೋಡಬಹುದು ? ಎಂದಿನಿಂದ ?

ಇಂತಹ ''ತು ಮೇರಿ ಮೇ ತೇರಾ, ಮೇ ತೇರಾ ತು ಮೇರಿ'' ಚಿತ್ರ ನಿನ್ನೆಯಿಂದ ( ಫೆಬ್ರವರಿ 19) ಸದ್ದಿಲ್ಲದೇ ಅಮೆಜಾನ್ ಪ್ರೈಂನಲ್ಲಿ ಪ್ರಸಾರವಾಗುತ್ತಿದೆ. ಚಿತ್ರ ಕೇವಲ ಹಿಂದಿಯಲ್ಲಿ ಮಾತ್ರ ಲಭ್ಯ ಇದ್ದು, ಸಬ್ ಟೈಟಲ್‌ಗಳ ಸಹಾಯದಿಂದ ಬೇರೆ ಭಾಷಿಗರು ನೋಡಬಹುದು. ಆಸಕ್ತ ಚಿತ್ರಪ್ರೇಮಿಗಳು ಮನೆ ಮಂದಿ ಜೊತೆ ಕುಳಿತು ಚಿತ್ರವನ್ನು ಕಣ್ತುಂಬಿಕೊಳ್ಳಬಹುದು.

More from Filmibeat

English summary
Tu Meri Main Tera is finally on OTT! Stream the Kartik Aaryan and Ananya Panday starrer on Amazon Prime Video. Don't miss the chemistry—watch it online today!
Read more about: karan johar bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X