ಅಕ್ಷಯ್ ಕುಮಾರ್ ಚಿತ್ರ ನೋಡೋಕೆ ಜನ ಥಿಯೇಟರ್‌ಗೆ ಬರ್ತಿಲ್ಲ: ನೇರವಾಗಿ ಓಟಿಟಿಗೆ 'ಓ ಮೈ ಗಾಡ್- 2'
ಬಾಲಿವುಡ್ ಖಿಲಾಡಿ ಅಕ್ಷಯ್ ಕುಮಾರ್‌ಗೆ ನಸೀಬೇ ಚೆನ್ನಾಗಿಲ್ಲ. ಯಾಕೋ ಇತ್ತೀಚಿಗೆ ಬಿಡುಗಡೆಯಾದ ಅಕ್ಕಿ ಸಿನಿಮಾಗಳು ಸದ್ದು ಮಾಡ್ತಿಲ್ಲ. 4 ವರ್ಷಗಳ ಹಿಂದೆ ಸಾಲು ಸಾಲು ಹಿಟ್ ಸಿನಿಮಾಗಳನ್ನು ಕೊಟ್ಟ ಅಕ್ಷಯ್ ಕುಮಾರ್ ಈಗ ಒಂದು ಹಿಟ್‌ಗಾಗಿ ಆಕಾಶ ನೋಡುವಂತಾಗಿದೆ. ಇದೆಲ್ಲದರ ಬೆನ್ನಲ್ಲೇ 'ಓ ಮೈ ಗಾಡ್'- 2 ಸಿನಿಮಾ ನೇರವಾಗಿ ಓಟಿಟಿಗೆ ಬರುವ ಸುದ್ದಿ ಕೇಳಿಬರ್ತಿದೆ.
ಅದ್ಯಾಕೋ ಇತ್ತಿಚೆಗೆ ಬಾಲಿವುಡ್ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸುತ್ತಲೇ ಇವೆ. ಶಾರುಕ್ ಖಾನ್ ನಟನೆಯ 'ಪಠಾಣ್' ಸಿನಿಮಾ ಮಾತ್ರ 1000 ಕೋಟಿ ರೂ. ಕಲೆಕ್ಷನ್ ಮಾಡಿ ಎಲ್ಲರ ಹುಬ್ಬೇರಿಸಿದೆ. ಇನ್ನುಳಿದಂತೆ ದೊಡ್ಡ ದೊಡ್ಡ ಸಿನಿಮಾಗಳೇ ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗುತ್ತಿವೆ. 'ಸಾಮ್ರಾಟ್ ಪೃಥ್ವಿರಾಜ್', 'ರಕ್ಷಾ ಬಂಧನ್', 'ರಾಮ್‌ಸೇತು', 'ಸೆಲ್ಫಿ' ಒಂದರ ಹಿಂದೊಂದರಂತೆ ಅಕ್ಷಯ್ ಕುಮಾರ್ ಸಿನಿಮಾಗಳು ಸೋಲುಂಡಿವೆ. ಇತ್ತೀಚೆಗೆ ಬಂದ 'ಸೆಲ್ಫಿ' 10 ಕೋಟಿ ಕಲೆಕ್ಷನ್ ಮಾಡೋದಕ್ಕೂ ತಿಣುಕಾಡುವಂತಾಯಿತು.

ಬಾಲಿವುಡ್ ಪ್ರೇಕ್ಷಕರು ಥಿಯೇಟರ್‌ಗೆ ಬರೋದೇ ಕಮ್ಮಿ ಆಗಿದೆ. ಸೌತ್ ಪ್ಯಾನ್ ಇಂಡಿಯಾ ಸಿನಿಮಾಗಳೇ ಕೊಂಚಮಟ್ಟಿಗೆ ಹಿಂದಿ ಬೆಲ್ಟ್‌ನಲ್ಲೂ ಸದ್ದು ಮಾಡ್ತಿವೆ. ಹೃತಿಕ್, ಸಲ್ಮಾನ್ ಖಾನ್, ಅಕ್ಷಯ್ ಕುಮಾರ್, ಆಮಿರ್ ಖಾನ್‌ರಂತಹ ಸೂಪರ್ ಸ್ಟಾರ್‌ಗಳು ಪ್ರೇಕ್ಷಕರನ್ನು ಥಿಯೇಟರ್‌ಗೆ ಸೆಳೆಯಲು ಸಾಧ್ಯವಾಗುತ್ತಿಲ್ಲ. ಅಕ್ಷಯ್ ಕುಮಾರ್ 'ಸೂರರೈ ಪೋಟ್ರು' ರಿಮೇಕ್, 'ಓ ಮೈ ಗಾಡ್ 2', 'ಕ್ಯಾಪ್ಸುಲ್ ಗಿಲ್', ಟೈಗರ್ ಶ್ರಾಫ್ ಜೊತೆ 'ಬಡೆ ಮಿಯ್ಯಾ ಛೋಟೆ ಮಿಯ್ಯಾ', 'ಹೇರಾ ಪೇರಿ 3' ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. ಆದರೆ ಈಗ ಅಕ್ಕಿ ಸಿನಿಮಾಗಳನ್ನು ಕೇಳುವವರೇ ಇಲ್ಲವಂತೆ.
ಇತ್ತೀಚೆಗೆ ವಿವಾದಾತ್ಮಕ ಸಿನಿಮಾ ಕ್ರಿಟಿಕ್ ಕಮಾಲ್ ಆರ್ ಖಾನ್ ಟ್ವೀಟ್ ಮಾಡಿ 'ಸೆಲ್ಫಿ' ಸಿನಿಮಾ ಸೋಲಿನ ನಂತರ 'ಓ ಮೈ ಗಾಡ್'- 2 ಚಿತ್ರವನ್ನು ಕೇಳುವವರೇ ಇಲ್ಲ ಎಂದಿದ್ದರು. ಇದೀಗ ಬಾಲಿವುಡ್ ಮೂಲಗಳ ಮಾಹಿತಿ ಪ್ರಕಾರ ಸಿನಿಮಾ ನೇರವಾಗಿ ಓಟಿಟಿಗೆ ಬರ್ತಿದೆಯಂತೆ. ಇದನ್ನು ಕೇಳಿ ಕೆಲವರು ಅಚ್ಚರಿಗೊಂಡಿದ್ದಾರೆ. ಅರೇ ಅಕ್ಷಯ್ ಕುಮಾರ್ ಸಿನಿಮಾ ನೇರವಾಗಿ ಓಟಿಟಿಗೆ ಬರೋದು ಅಂದ್ರೆ ಏನು? ಅದು ಕೂಡ ಸೂಪರ್ ಹಿಟ್ ಸಿನಿಮಾ ಟೈಟಲ್‌ನಲ್ಲಿ ಬರ್ತಿರೋ ಎಂದು ಹುಬ್ಬೇರಿಸಿದ್ದಾರೆ. 10 ವರ್ಷಗಳ ಹಿಂದೆ ಈ ಸಿನಿಮಾ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು.

ಉಮೇಶ್ ಶುಕ್ಲಾ ನಿರ್ದೇಶನದ ಈ ಚಿತ್ರದಲ್ಲಿ ಶ್ರೀಕೃಷ್ಣ ಪರಮಾತ್ಮನಾಗಿ ನಟ ಅಕ್ಷಯ್‌ಕುಮಾರ್ ನಟಿಸಿದ್ದರು. ಈ ಸಿನಿಮಾ ಮುಂದೆ ಕನ್ನಡ, ತೆಲುಗಿಗೂ ರೀಮೆಕ್ ಆಗಿ ಸೂಪರ್ ಹಿಟ್ ಆಗಿತ್ತು. ಕನ್ನಡದಲ್ಲಿ ಉಪೇಂದ್ರ, ಸುದೀಪ್ 'ಮುಕುಂದ ಮುರಾರಿ' ಆಗಿ ನಟಿಸಿ ಗೆದ್ದಿದ್ದರು. ಇದೀಗ 'ಓ ಮೈ ಗಾಡ್'- 2 ರಿಲೀಸ್‌ಗೆ ರೆಡಿಯಾಗಿದೆ. ಅಮಿತ್ ರೈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಪಂಕಜ್ ತ್ರಿಪಾಠಿ, ಅರುಣ್ ಗೋವಿಲ್, ಯಾಮಿ ಗೌತಮ್ ಈ ಭಕ್ತಿ ಪ್ರಧಾನ ಚಿತ್ರದ ತಾರಾಗಣದಲ್ಲಿದ್ದಾರೆ. ಈ ಬಾರಿ ಚಿತ್ರದಲ್ಲಿ ಅಕ್ಷಯ್‌ಕುಮಾರ್ ಶಿವನಾಗಿ ದರ್ಶನ ಕೊಡಲಿದ್ದಾರೆ.
ಶೀಘ್ರದಲ್ಲೇ 'ಓ ಮೈ ಗಾಡ್'- 2' ಸಿನಿಮಾ ನೇರವಾಗಿ ವೂಟ್ ಹಾಗೂ ಜಿಯೋ ಸಿನಿಮಾದಲ್ಲಿ ಸ್ಟ್ರೀಮಿಂಗ್ ಆಗುತ್ತದೆ ಎನ್ನಲಾಗುತ್ತಿದೆ. ಈ ಸಂಬಂಧ 120 ಕೋಟಿ ರೂ.ಗೆ ಒಪ್ಪಂದ ನಡೆದಿದೆಯಂತೆ. ಈ ಚಿತ್ರದ ಕಥೆ ದೇಶದ ಶಿಕ್ಷಣ ವ್ಯವಸ್ಥೆಯ ಸುತ್ತಾ ಸುತ್ತುತ್ತದೆ ಎನ್ನಲಾಗುತ್ತಿದೆ. ಸಾಮಾನ್ಯವಾಗಿ ಸೂಪರ್ ಸ್ಟಾರ್‌ಗಳ ಸಿನಿಮಾಗಳು ಮೊದಲು ಥಿಯೇಟರ್‌ನಲ್ಲಿ ರಿಲೀಸ್ ಆಗಿ ನಂತರ ಓಟಿಟಿಗೆ ಬರುತ್ತವೆ. ಆದರೆ ಈ ಸಿನಿಮಾ ಓಟಿಟಿಗೆ ಬರ್ತಿರೋದು ಅಕ್ಷಯ್ ಕುಮಾರ್ ಸಿನಿಮಾ ನೋಡಲು ಜನ ಥಿಯೇಟರ್‌ಗೆ ಬರ್ತಿಲ್ಲ ಎನ್ನುವುದನ್ನು ಸಾರಿ ಹೇಳಿವಂತಿದೆ. ಅಂದಹಾಗೆ ಇದು 'ಓ ಮೈ ಗಾಡ್' ಚಿತ್ರದ ಮುಂದುವರೆದ ಭಾಗ ಅಲ್ಲ. ಅದೇ ಟೈಟಲ್‌ನಲ್ಲಿ ಹೆಚ್ಚು ಕಡಿಮೆ ಅದೇ ರೀತಿಯ ಕಥೆ ಇರುವ ಸಿನಿಮಾ.


Click it and Unblock the Notifications











