ಕೇರಳದ ಜನಪ್ರಿಯ ದೈವಿಕ ಧನುಸ್ಸು ವಿಶೇಷತೆ ಏನು? ಒಣವಿಲ್ಲು ಸಾಕ್ಷಚಿತ್ರದ ವಿಶೇಷತೆ ಏನು?

By ಫಿಲ್ಮಿಬೀಟ್ ಡೆಸ್ಕ್

ಮಲಯಾಳಂ ಭಾಷೆಯಲ್ಲಿ ವಿನೂತನವಾದ ಡಾಕ್ಯೂಮೆಂಟರಿ ನಿರ್ಮಾಣ ಆಗಿದೆ. ಅದುವೇ 'ಓಣವಿಲ್ಲು, ದ ಡಿವೈನ್ ಬೋವ್' (ದೇವ ಧನುಸ್ಸು) . 'ಓಣವಿಲ್ಲು' ಒಂದು ಸಾಂಪ್ರದಾಯಿಕ ಆಚರಣೆಯ ಮಹತ್ವ ಮತ್ತು ಅದರ ಸಾಂಸ್ಕೃತಿಕ ಶ್ರೀಮಂತಿಕೆಯ ಮೇಲೆ ಡಾಕ್ಯೂಮೆಂಟರಿ ನಿರ್ಮಾಣ ಮಾಡಲಾಗಿದೆ. ಈಗಾಗಲೇ ಇದು ಸಿನಿಮಾ ಆಸಕ್ತರ ಗಮನ ಸೆಳೆಯುತ್ತಿದೆ.

'ಓಣವಿಲ್ಲು, ದ ಡಿವೈನ್ ಬೋವ್' (ದೇವ ಧನುಸ್ಸು) ಮಲಯಾಳಂ ಭಾಷೆಯ ಕುತೂಹಲ ಕೆರಳಿಸುವ ಸಾಕ್ಷ್ಯಚಿತ್ರ. ಇದು ಮಾರ್ಚ್‌ 8ರಿಂದ ಜಿಯೊ ಸಿನಿಮಾದಲ್ಲಿ ಉಚಿತವಾಗಿ ಪ್ರದರ್ಶನ ಆಗುತ್ತಿದೆ. ತಿರುವನಂತಪುರಂ ಮೂಲದ ಸಿನಿಮಾ ನಿರ್ದೇಶಕ ಆನಂದ್ ಬನಾರಸ್ ಮತ್ತು ಶರತ್‌ ಚಂದ್ರ ಮೋಹನ್ ಈ ಡಾಕ್ಯೂಮೆಂಟರಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಅಂದ್ಹಾಗೆ, ಅಭಿನವ್ ಕಾಲ್ರಾ ನಿರ್ಮಾಣ ಮಾಡಿದ್ದು, ಖ್ಯಾತ ಸಂಗೀತ ನಿರ್ದೇಶಕ ಸ್ಟೀಫನ್ ಒರ್ಲಾಂಡೊ ಟ್ಯೂನ್ ಹಾಕಿದ್ದಾರೆ.

Onavillu The Divine Bow Malayalam Documentary Online Releasing on Jio Cinema

ಏನಿದು 'ಒಣವಿಲ್ಲು'?

'ಓಣವಿಲ್ಲು' ಎಂಬುದು ಕೇರಳ ಭಾಗದ ಒಂದು ದೈವೀಕ ಧನುಸ್ಸು. ಅದರ ಮೇಲೆ ವಿಷ್ಣುವಿನ ದಶಾವತಾರ ಮತ್ತು ಕೃಷ್ಣನ ಲೀಲೆಗಳ ಸಿನಿಮಾಗಳನ್ನು ಬಿಡಿಸಲಾಗಿರುತ್ತೆ. ಇದನ್ನು ಕೇರಳದ ತಿರುವನಂತಪುರದ ಪದ್ಮನಾಭಸ್ವಾಮಿ ದೇವಸ್ಥಾನದಲ್ಲಿ ತಿರುಓಣಂ ಹಬ್ಬದ ಸಮಯದಲ್ಲಿ ದೇವರಿಗೆ ನೀಡಲಾಗುತ್ತೆ. 'ಓಣವಿಲ್ಲು' (ದೇವ ಧನುಸ್ಸು) ಅನ್ನು ಎಲ್ಲರೂ ಮಾಡುವಂತಿಲ್ಲ. ಒಣವಿಲ್ಲು ಸಿದ್ಧ ಪಡಿಸುವ ಕರಮಾನ ಮೆಲಾರನ್ನೂರ್ ವಿಲಾಯಿಲ್ ವೀಡು ಕುಟುಂಬ ಮಾತ್ರ ಮಾಡುತ್ತೆ. ಈ ಡಾಕ್ಯೂಮೆಂಟರಿ ಆ ಕುಟುಂಬದ ಬಗ್ಗೆಯೂ ಮಾಹಿತಿಯನ್ನು ನೀಡುತ್ತಿದೆ.

'ಒಣವಿಲ್ಲು'ಗೆ ಮಮ್ಮುಟ್ಟಿ ಧ್ವನಿ

ಕೇರಳದಲ್ಲಿ ತಲೆಮಾರುಗಳಿಂದ ಈ ಸಂಪ್ರದಾಯ ಬೆಳೆದು ಬಂದಿದೆ. ಈ ವಿಶಿಷ್ಟ ಸಾಂಪ್ರದಾಯಿಕ ಆಚರಣೆಯ ಕುರಿತಾದ ಡಾಕ್ಯೂಮೆಂಟರಿ ವಿಶೇಷತೆ ಏನೆಂದ್ರೆ, ಮಲಯಾಳಂನ ಲೆಜೆಂಡರಿ ನಟ ಮಮ್ಮೂಟ್ಟಿ ಹಾಗೂ ಯುವನಟ ಉನ್ನಿ ಮುಕುಂದನ್‌ ಧ್ವನಿ ನೀಡಿದ್ದಾರೆ. 'ಒಣವಿಲ್ಲು' ಆಚರಣೆಯ ಕುರಿತಾದ ಹಲವು ಮಾಹಿತಿಗಳನ್ನು ಈ ಸ್ಟಾರ್ ನಟರ ಧ್ವನಿಯಲ್ಲಿ ಕೇಳಬಹುದು. ಈ ಮಹತ್ವದ ಆಚರಣೆ ಮತ್ತು ಅದರ ಸಾಂಸ್ಕೃತಿಕ ಮಹತ್ವದ ಕುರಿತು 'ಓಣವಿಲ್ಲು: ದ ಡಿವೈನ್ ಬೋವ್' ಡಾಕ್ಯೂಮೆಂಟರಿ ಮಾಹಿತಿ ನೀಡಲಿದೆ.

ಅಂದ ಹಾಗೆ ಈ ದೇವ ಧನಸ್ಸನ್ನು ಕದಂಬ ಮತ್ತು ಮಹಾಗನಿ ಮರದಿಂದ ಈ ಬಿಲ್ಲನ್ನು ರೂಪಿಸಲಾಗುತ್ತದೆ. ಒಮ್ಮೆ ಬಿಲ್ಲು ನಿರ್ಮಾಣಗೊಂಡ ಬಳಿಕ ಇದರ ಮೇಲೆ ಸುಂದರವಾಗಿ ವಿಷ್ಣುವಿನ ದಶಾವತಾರ ಮತ್ತು ಕೃಷ್ಣನ ಲೀಲೆಯಂತಹ ಚಿತ್ರಗಳನ್ನು ಕೆತ್ತಲಾಗುತ್ತೆ. ಈ ಸಾಂಪ್ರದಾಯಿಕ ಕಲೆಯನ್ನು ದೈವೀಭಕ್ತಿಯಿಂದ ಬಿಲ್ಲು ನಿರ್ಮಾಣ ಮಾಡುವ ಕುಟುಂಬದವರು ಕಾಪಾಡಿಕೊಂಡು ಬರುತ್ತಿದ್ದಾರೆ. ಈ ಕುರಿತು ಸಾಕ್ಷ್ಯಚಿತ್ರ ಕುತೂಹಲಕಾರಿ ಮಾಹಿತಿಯನ್ನು ನೀಡುತ್ತದೆ.

ಈ ಹಿಂದೆ ತಿರುವಾಂಕೂರು ರಾಜ್ಯದ ರಾಷ್ಟ್ರಗೀತೆಯಾಗಿದ್ದ 'ವಾಂಚಿ ಭೂಮಿ' ಎಂಬ ಹಾಡೂ ಈ ಡಾಕ್ಯೂಮೆಂಟರಿಯಲ್ಲಿ ಸೇರಿಸುವುದು ವಿಶೇಷ. ಈ ಹಾಡನ್ನು ಉಲ್ಲೂರು ಎಸ್ ಪರಮೇಶ್ವರ ಅಯ್ಯರ್ ರಚಿಸಿದ್ದಾರೆ. ಬಾಲಿವುಡ್‌ ಗಾಯಕ ತಾನಿಯಾ ದೇವ ಗುಪ್ತ ಹಾಡಿದ್ದಾರೆ. ಕೇರಳದ ಸಮೃದ್ಧ ಪರಂಪರೆಯ ಪರಿಚಯ, ಕಲೆ, ಸಂಸ್ಕೃತಿಗಳ ಹಿನ್ನೆಲೆಯಲ್ಲಿ ಒಣವಿಲ್ಲು ಎಂಬ ವಿಶಿಷ್ಟ ದೈವೀಕ ಧನುಸ್ಸು ಅರ್ಪಣೆ ಆಚರಣೆಯ ಕುರಿತಾದ ಡಾಕ್ಯೂಮೆಂಟರಿಯನ್ನು ಮಾರ್ಚ್‌ 8ರಿಂದ ಜಿಯೊಸಿನಿಮಾದಲ್ಲಿ ಉಚಿತವಾಗಿ ನೋಡಬಹುದಾಗಿದೆ.

More from Filmibeat

English summary
Onavillu The Divine Bow in Jio cinema on March 8th
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X