For Quick Alerts
  ALLOW NOTIFICATIONS  
  For Daily Alerts

  ಕನ್ನಡಕ್ಕಾಗಿ ಬರಲಿದೆ ನೆಟ್‌ಫ್ಲಿಕ್ಸ್‌ ಅಮೆಜಾನ್ ಮಾದರಿ ಪ್ರತ್ಯೇಕ ಒಟಿಟಿ

  |

  ಈಗೇನಿದ್ದರೂ ಒಟಿಟಿಗಳ ಕಾಲ. ಮನೊರಂಜನಾ ವಿಭಾಗದಲ್ಲಿ ವಿಶ್ವದಾದ್ಯಂತ ಭಾರಿ ಕ್ರಾಂತಿಯನ್ನೇ ಮಾಡುತ್ತಿವೆ ಈ ಒಟಿಟಿಗಳು.

  Jogi Prem : ಅಮ್ಮನನ್ನು ನೆನೆದು ಭಾವುಕರಾದ ಪ್ರೇಮ್ | Filmibeat Kannada

  ಮೊಬೈಲ್, ಟಿವಿ, ಲ್ಯಾಪ್‌ಟಾಪ್‌ಗಳ ಮೂಲಕ ವೀಕ್ಷಕರ ಅನುಕೂಲಕ್ಕೆ ತಕ್ಕಂತೆ ಮನೊರಂಜನಾ ಸರಕನ್ನು ಬೆರಳ ತುದಿಗೆ ಒದಗಿಸುತ್ತಿರುವ ಒಟಿಟಿಗಳು ಭಾರಿ ಜನಪ್ರಿಯವಾಗಿವೆ. ಇದೀಗ ಕನ್ನಡಕ್ಕೆಂದೇ ಪ್ರತ್ಯೇಕ ಒಟಿಟಿ ನಿರ್ಮಿಸುವ ಯೋಜನೆಯೊಂದು ಉತ್ಸಾಹಿ ತಂಡವೊಂದು ಹಾಕಿಕೊಂಡಿದೆ.

  ಕೇವಲ ಕನ್ನಡದ ಸಿನಿಮಾ, ಕಿರುಚಿತ್ರ, ಡಾಕ್ಯುಮೆಂಟರಿಗಳ ಪ್ರದರ್ಶನಕ್ಕೆಂದೇ ಈ ಒಟಿಟಿಯನ್ನು ನಿರ್ಮಾಣ ಮಾಡಲಾಗುತ್ತಿತ್ತು. ಈಗಾಗಲೇ ಒಟಿಟಿಗೆ ಹೆಸರನ್ನೂ ಸಹ ಇಡಲಾಗಿದೆ.

  ಬರುತ್ತಿದೆ 'ಓನ್ಲಿ ಕನ್ನಡ' ಒಟಿಟಿ

  ಬರುತ್ತಿದೆ 'ಓನ್ಲಿ ಕನ್ನಡ' ಒಟಿಟಿ

  ಒಟಿಟಿಗೆ 'ಓಕೆ' ಎಂದು ಹೆಸರಿಟ್ಟಿದ್ದು, ಇದರರ್ಥ 'ಓನ್ಲಿ ಕನ್ನಡ' ಎಂದು. ಪ್ರಯೋಗ್ ಸ್ಟುಡಿಯೋ ಹಾಗೂ ಮಯೂರ ಮೋಷನ್ ಪಿಕ್ಚರ್ಸ್ ಸಹಭಾಗಿತ್ವದಲ್ಲಿ ಈ ಒಟಿಟಿ ನಿರ್ಮಾಣವಾಗುತ್ತಿದ್ದು, ಕೆಲವೇ ದಿನಗಳಲ್ಲಿ ಮೊಬೈಲ್‌ಗಳಲ್ಲಿ ಲಭ್ಯವಾಗಲಿದೆ ಎಂದಿದೆ ತಂಡ.

  ಸಹಭಾಗಿತ್ವದಲ್ಲಿ ಒಟಿಟಿ ನಿರ್ಮಾಣ

  ಸಹಭಾಗಿತ್ವದಲ್ಲಿ ಒಟಿಟಿ ನಿರ್ಮಾಣ

  ಮಯೂರ ಮೋಷನ್ ಪಿಕ್ಚರ್ಸ್ ನ ಡಿ.ಮಂಜುನಾಥ್ ಹಾಗೂ ಮೋಷನ್ ಪಿಕ್ಚರ್ಸ್ ನ ಪ್ರದೀಪ್ ಮಳ್ಳೂರು ಅವರು ಜಂಟಿಯಾಗಿ ಈ ಸಾಹಸಕ್ಕೆ ಕೈ ಹಾಕಿದ್ದು, ರಾಜ್ಯದ ಎಂಜಿನಿಯರ್‌ಗಳೇ ಈ ಒಟಿಟಿಯನ್ನು ಅಭಿವೃದ್ಧಿಪಡಿಸಲಿದ್ದಾರಂತೆ.

  ವಿದೇಶಿಗರಿಗೆ ತಲುಪಿಸುವ ಇರಾದೆ

  ವಿದೇಶಿಗರಿಗೆ ತಲುಪಿಸುವ ಇರಾದೆ

  ಕನ್ನಡ ನಟ, ನಿರ್ದೇಶಕರು, ತಂತ್ರಜ್ಞರು, ಸಂಗೀತ ನಿರ್ದೇಶಕರಿಗೆ ಅವಕಾಶ ನೀಡುವ ದೃಷ್ಟಿಯಿಂದ ಈ ಒಟಿಟಿ ನಿರ್ಮಿಸುತ್ತಿದ್ದು, ಕನ್ನಡಿಗರ ಕಂಟೆಂಟ್ ಅನ್ನು ವಿದೇಶಿ ಕನ್ನಡಿಗರಿಗೂ ತಲುಪಿಸುವ ದೂರಾಲೋಚನೆಯೂ ತಂಡಕ್ಕೆ ಇದೆ.

  'ನಮ್ಮ ಫ್ಲಿಕ್ಸ್' ಈಗಾಗಲೇ ಕಾರ್ಯ ನಿರ್ವಹಿಸುತ್ತಿದೆ

  'ನಮ್ಮ ಫ್ಲಿಕ್ಸ್' ಈಗಾಗಲೇ ಕಾರ್ಯ ನಿರ್ವಹಿಸುತ್ತಿದೆ

  ಕಂಟೆಂಟ್ ಮಾತ್ರವಲ್ಲದೆ, ಒಟಿಟಿಯ ನಿರ್ಮಾಣ, ಅದರ ವ್ಯವಸ್ಥಾಪನೆ ಎಲ್ಲಾ ವಿಭಾಗದಲ್ಲೂ ಕನ್ನಡಿಗರಿಗೆ ಮಾತ್ರವೇ ಆದ್ಯತೆ ನೀಡಲಾಗುತ್ತಿದೆ ಎಂದು ತಂಡ ಹೇಳಿದೆ. ಇದಕ್ಕೆ ಮುನ್ನಾ 'ನಮ್ಮ ಫ್ಲಿಕ್ಸ್' ಎಂಬ ಕನ್ನಡದ ಒಟಿಟಿ ಈಗಾಗಲೇ ಬಿಡುಗಡೆ ಆಗಿದೆ.

  English summary
  Only Kannada or OK named OTT platform coming soon on mobile. This OTT streams only Kannada content.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X