For Quick Alerts
  ALLOW NOTIFICATIONS  
  For Daily Alerts

  ಮಾಹಿತಿ ಪ್ರಸಾರ ಇಲಾಖೆ ಅಡಿಗೆ ಒಟಿಟಿ: ಆನ್‌ಲೈನ್ ಕಂಟೆಂಟ್‌ಗೆ ಲಗಾಮು?

  |

  ಒಟಿಟಿಗಳಲ್ಲಿ ಪ್ರಸಾರವಾಗುವ ಸಿನಿಮಾಗಳು, ವೆಬ್ ಸರಣಿ, ಡಾಕ್ಯುಮೆಂಟರಿ ಇತರೆ ಕಂಟೆಂಟ್‌ಗಳಿಗೆ ನಿಯಂತ್ರಣವೇ ಇರಲಿಲ್ಲ. ಆದರೆ ಈಗ ಒಟಿಟಿಯು ಕೇಂದ್ರದ ಮಾಹಿತಿ ಮತ್ತು ಪ್ರಸಾರ ಇಲಾಖೆಯ ಅಡಿಗೆ ತರಲಾಗಿದ್ದು, ಇನ್ನು ಮುಂದೆ ಒಟಿಟಿ ಕಂಟೆಂಟ್‌ಗೆ ಲಗಾಮು ಬೀಳುವ ಸಾಧ್ಯತೆ ಇದೆ.

  ಒಟಿಟಿ ಮಾತ್ರವೇ ಅಲ್ಲದೆ, ಆನ್‌ಲೈನ್ ಸುದ್ದಿ ಮಾಧ್ಯಮಗಳು, ಆನ್‌ಲೈನ್ ವಾರ್ತೆಗಳು, ಆನ್‌ಲೈನ್ ಸಿನಿಮಾ ಇನ್ನೂ ಕೆಲವು ಆನ್‌ಲೈನ್ ಕಂಟೆಂಟ್ ಪ್ರೊವೈಡರ್‌ಗಳನ್ನು ಮಾಹಿತಿ ಹಾಗೂ ಪ್ರಸಾರ ಇಲಾಖೆ ವ್ಯಾಪ್ತಿಯ ಒಳಕ್ಕೆ ತರಲಾಗಿದೆ.

  ನೆಟ್‌ಫ್ಲಿಕ್ಸ್, ಅಮೆಜಾನ್, ಡಿಸ್ನಿ ಹಾಟ್‌ಸ್ಟಾರ್ ಇನ್ನೂ ಹಲವು ಒಟಿಟಿ ಫ್ಲಾಟ್‌ಫಾರ್ಮ್‌ಗಳ ಮೇಲೆ ಇನ್ನು ಮುಂದೆ ಕೇಂದ್ರದ ಮಾಹಿತಿ ಮತ್ತು ಪ್ರಸಾರ ಇಲಾಖೆಯ ಕಣ್ಗಾವಲಿರುತ್ತದೆ. ಇಲಾಖೆಯನ್ನು ಸಚಿವ ಪ್ರಕಾಶ್ ಜಾವಡೇಕರ್ ಮುನ್ನಡೆಸುತ್ತಿದ್ದಾರೆ.

  ಇಲಾಖೆಯು ಒಟಿಟಿಗಳ ಕಂಟೆಂಟ್‌ ಮೇಲೆ ಕಣ್ಣಿಡಲಿದೆ

  ಇಲಾಖೆಯು ಒಟಿಟಿಗಳ ಕಂಟೆಂಟ್‌ ಮೇಲೆ ಕಣ್ಣಿಡಲಿದೆ

  ಒಟಿಟಿ ಗಳಲ್ಲಿ ಪ್ರಸಾರವಾಗುವ ಕಂಟೆಂಟ್ ಬಗ್ಗೆ ಈ ಹಿಂದೆ ಕೆಲವು ದೂರುಗಳು ಬಂದಿದ್ದವು. ಹಾಗಾಗಿ ಒಟಿಟಿಗಳನ್ನು ಹಾಗೂ ಇತರ ಸ್ವತಂತ್ರ್ಯ ಕಂಟೆಂಟ್‌ ಪ್ರೊವೈಡರ್‌ಗಳನ್ನು ಇಲಾಖೆಯ ಅಡಿಗೆ ತರಲಾಗಿದೆ. ಇನ್ನು ಮುಂದೆ ಇಲಾಖೆಯು ಈ ಎಲ್ಲಾ ಕಂಟೆಂಟ್‌ ಪ್ರೊವೈಡರ್‌ಗಳ 'ಮೇಲುಸ್ತುವಾರಿ' ನೋಡಲಿದೆ ಎಂದಿದೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ.

  ಈಗಿನಿಂದಲೇ ಜಾರಿಗೆ ಬರಲಿದೆ

  ಈಗಿನಿಂದಲೇ ಜಾರಿಗೆ ಬರಲಿದೆ

  ಒಟಿಟಿ ಹಾಗೂ ಇತರೆ ಆನ್‌ಲೈನ್‌ ಕಂಟೆಂಟ್‌ಗಳನ್ನು ಇಲಾಖೆಯ ಅಡಿಗೆ ತರಲು ಸಂವಿಧಾನದ 77 ನೇ ವಿಧಿಗೆ ತಿದ್ದುಪಡಿ ತರಲಾಗಿದ್ದು, ರಾಷ್ಟ್ರಪತಿ ರಮಾನಾಥ ಕೋವಿಂದ್ ಅವರ ಅಂಕಿತವನ್ನೂ ಪಡೆಯಲಾಗಿದೆ. ಈ ತಿದ್ದುಪಡಿಯು ಶೀಘ್ರವಾಗಿ ಜಾರಿಗೆ ಬರಲಿದೆ.

  ಕಂಟೆಂಟ್‌ ರದ್ದು ಮಾಡುವ ಹಕ್ಕು ಇಲಾಖೆಗೆ

  ಕಂಟೆಂಟ್‌ ರದ್ದು ಮಾಡುವ ಹಕ್ಕು ಇಲಾಖೆಗೆ

  ಈಗಿನಿಂದ ಒಟಿಟಿಗಳು ಪ್ರಸಾರ ಮಾಡುವ ಸಿನಿಮಾ, ವೆಬ್ ಸರಣಿ, ಪಾಡ್‌ಕಾಸ್ಟ್‌, ಡಾಕ್ಯುಮೆಂಟರಿ ಇನ್ನಿತರೆ ಆನ್‌ಲೈನ್ ಕಂಟೆಂಟ್‌ಗಳನ್ನು ರದ್ದು ಮಾಡುವ, ಬದಲಾಯಿಸುವ, ತಡೆಹಿಡಿಯುವ ಅಧಿಕಾರ ಮಾಹಿತಿ ಹಾಗೂ ಪ್ರಸಾರ ಇಲಾಖೆಗೆ ಇರಲಿದೆ.

  ಇಷ್ಟುದಿನ ಸೆನ್ಸಾರ್‌ಶಿಪ್‌ ಇರಲಿಲ್ಲ

  ಇಷ್ಟುದಿನ ಸೆನ್ಸಾರ್‌ಶಿಪ್‌ ಇರಲಿಲ್ಲ

  ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಂ, ಹಾಟ್‌ಸ್ಟಾರ್, ಆಹಾ ಇನ್ನೂ ಹಲವಾರು ಒಟಿಟಿಗಳು ಪ್ರಸ್ತುತ ಕಾರ್ಯನಿರ್ವಹಿಸುತ್ತಿವೆ. ಆದರೆ ಒಟಿಟಿಗಳನ್ನು ಪ್ರಸಾರವಾಗುವ ಸಿನಿಮಾ, ವೆಬ್ ಸರಣಿಗಳಿಗೆ ಸೆನ್ಸಾರ್‌ಶಿಪ್ ಇರಲಿಲ್ಲ. ಆದರೆ ಈಗ ಈ ಫ್ಲಾಟ್‌ಫಾರ್ಮ್‌ನ ಕಂಟೆಂಟ್ ಮೇಲೆ ಇಲಾಖೆಗೆ ಹಿಡಿತ ದೊರೆತಿದೆ.

  English summary
  OTT and many online content and online news will come under information and broadcast ministry.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X