For Quick Alerts
  ALLOW NOTIFICATIONS  
  For Daily Alerts

  Exclusive: ಪುನೀತ್ ಕೊನೆಯ ಸಿನಿಮಾ 'ಗಂಧದ ಗುಡಿ'ಗೆ ಕಾಂಪಿಟೇಷನ್: ಯಾರಿಗೆ ಸೇರುತ್ತೆ ಹಕ್ಕು?

  |

  ಕರ್ನಾಟಕ ರತ್ನ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಕೊನೆಯ ಸಿನಿಮಾ 'ಗಂಧದ ಗುಡಿ' ಬಿಡುಗಡೆಗೆ ಇನ್ನೊಂದು ತಿಂಗಳು ಬಾಕಿ ಉಳಿದಿದೆ. ಇದು ಪವರ್‌ಸ್ಟಾರ್ ಡ್ರೀಮ್ ಪ್ರಾಜೆಕ್ಟ್. ಹೀಗಾಗಿ ಸಿನಿಮಾವನ್ನು ಅದ್ಧೂರಿಯಾಗಿ ರಿಲೀಸ್ ಮಾಡುವುದಕ್ಕೆ ಇಡೀ ತಂಡ ಸಜ್ಜಾಗಿ ನಿಂತಿದೆ.

  ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಈಗಾಗಲೇ 'ಗಂಧದ ಗುಡಿ' ಸಿನಿಮಾದ ಜಿಲ್ಲೆ ಜಿಲ್ಲೆಗಳಲ್ಲೂ ಸೆಲೆಬ್ರೆಷನ್ ಶುರು ಮಾಡಿದ್ದಾರೆ. ಚಾಮರಾಜನಗರ, ಚನ್ನಪಟ್ಟಣ, ತುಮಕೂರು ಜಿಲ್ಲೆಗಳಲ್ಲಿ 'ಗಂಧದ ಗುಡಿ'ಗೆ ಅದ್ಧೂರಿ ಸ್ವಾಗತ ಸಿಕ್ಕಿದೆ.

  ಚಾಮರಾಜನಗರ, ಚನ್ನಪಟ್ಟಣ, ತುಮಕೂರಿನಲ್ಲಿ ಅಪ್ಪು ಫ್ಯಾನ್ಸ್‌ನಿಂದ 'ಗಂಧದ ಗುಡಿ'ಗೆ ಸ್ವಾಗತ!ಚಾಮರಾಜನಗರ, ಚನ್ನಪಟ್ಟಣ, ತುಮಕೂರಿನಲ್ಲಿ ಅಪ್ಪು ಫ್ಯಾನ್ಸ್‌ನಿಂದ 'ಗಂಧದ ಗುಡಿ'ಗೆ ಸ್ವಾಗತ!

  ಈ ಮಧ್ಯೆ ಅಪ್ಪು ಡ್ರೀಮ್ ಪ್ರಾಜೆಕ್ಟ್ ಅನ್ನು ಖರೀದಿ ಮಾಡಲು ಓಟಿಟಿ ವೇದಿಕೆಗಳು ಹಾಗೂ ಟಿವಿ ಚಾನೆಲ್‌ಗಳು ಕಾಂಪಿಟೇಷನ್‌ಗೆ ಬಿದ್ದಿವೆಯಂತೆ. ಸಿನಿಮಾ ಬಿಡುಗಡೆಗೆ ಇನ್ನೊಂದು ತಿಂಗಳು ಇರುವಾಗಲೇ ಈ ಸಿನಿಮಾ ಖರೀದಿ ಮಾಡುವುದಕ್ಕೆ ಪೈಪೋಟಿ ಬಿದ್ದಿವೆ ಎನ್ನಲಾಗುತ್ತಿದೆ. ಅಸಲಿಗೆ ಗಂಧದ ಗುಡಿ ಖರೀದಿಗೆ ಕ್ಯೂನಲ್ಲಿರುವ ಓಟಿಟಿ ವೇದಿಕೆಗಳ್ಯಾವುವು? ಟಿವಿ ಚಾನೆಲ್‌ಗಳ್ಯಾವುವು? ಅನ್ನೋದನ್ನು ತಿಳಿಯಲು ಮುಂದೆ ಓದಿ.

  ಓಟಿಟಿಗಳಿಂದ ಪೈಪೋಟಿ

  ಓಟಿಟಿಗಳಿಂದ ಪೈಪೋಟಿ

  'ಗಂಧದ ಗುಡಿ' ಮೂಲಕ ಪುನೀತ್ ರಾಜ್‌ಕುಮಾರ್ ವಿಶಿಷ್ಟ ಪ್ರಯತ್ನಕ್ಕೆ ಕೈ ಹಾಕಿದ್ದರು. ಸ್ಯಾಂಡಲ್‌ವುಡ್ ಅಷ್ಟೇ ಅಲ್ಲ, ಇಡೀ ಇಂಡಿಯಾದಲ್ಲೇ ಸೂಪರ್‌ಸ್ಟಾರ್ ಒಬ್ಬರು ಇಂತಹ ಪ್ರಯತ್ನಕ್ಕೆ ಮುಂದಾದ ಉದಾಹಣೆಗಳೇ ಇಲ್ಲ. ಹೀಗಾಗಿ ಇದು ನಿಜಕ್ಕೂ ವಿಶಿಷ್ಠ ಪ್ರಯತ್ನ. ಈ ಕಾರಣಕ್ಕೆ ಓಟಿಟಿ ವೇದಿಕೆಗಳು ಈ ಸಿನಿಮಾವನ್ನು ಖರೀದಿ ಮಾಡಲೇ ಬೇಕು ಅಂತ ಪಣ ತೊಟ್ಟು ನಿಂತಿವೆ ಎನ್ನಲಾಗಿದೆ. ಜೀ ಹಾಗೂ ಅಮೆಜಾನ್ ಎರಡೂ ಸಂಸ್ಥೆಗಳು 'ಗಂಧದ ಗುಡಿ' ಖರೀದಿಗೆ ಆಸಕ್ತಿ ತೋರಿವೆ ಎನ್ನಲಾಗಿದೆ. ಅಮೆಜಾನ್‌ ಜೊತೆ ಪುನೀತ್ ಉತ್ತಮ ಬಾಂಧವ್ಯ ಹೊಂದಿದ್ದರಿಂದ ಈ ಪ್ರಾಜೆಕ್ಟ್ ಅಮೆಜಾನ್ ಪಲಾಗಬಹುದು ಎಂದು ಸ್ಯಾಂಡಲ್‌ವುಡ್‌ನಲ್ಲಿ ಚರ್ಚೆಯಾಗುತ್ತಿದೆ.

  ಒಂದು ತಿಂಗಳಿಗೂ ಮುನ್ನವೇ ಅಪ್ಪು ಅಭಿಮಾನಿಗಳಿಂದ 'ಗಂಧದ ಗುಡಿ' ಸಂಭ್ರಮ!ಒಂದು ತಿಂಗಳಿಗೂ ಮುನ್ನವೇ ಅಪ್ಪು ಅಭಿಮಾನಿಗಳಿಂದ 'ಗಂಧದ ಗುಡಿ' ಸಂಭ್ರಮ!

  ಟಿವಿಯಲ್ಲಿ ಪ್ರಸಾರಕ್ಕೂ ಕಾಂಪಿಟೇಷನ್‌

  ಟಿವಿಯಲ್ಲಿ ಪ್ರಸಾರಕ್ಕೂ ಕಾಂಪಿಟೇಷನ್‌

  ಕರುನಾಡಿನ ಪರಿಸರ, ಜಲಸಂಪತ್ತು, ಕಾಡು-ಮೇಡು, ಪ್ರಾಣಿ ಸಂಕುಲಗಳನ್ನು ತೋರಿಸಲು ಹೊರಟಿರೋ 'ಗಂಧದ ಗುಡಿ' ಸ್ಯಾಟಲೈಟ್ಸ್ ರೈಟ್ಸ್‌ಗೂ ಬೇಡಿಕೆ ಇದೆ. ಜೀ ಹಾಗೂ ಕಲರ್ಸ್ ಎರಡೂ ಸಂಸ್ಥೆಗಳೂ ಗಂಧದ ಗುಡಿಯನ್ನು ರೈಟ್ಸ್ ಅನ್ನು ಕೇಳಿವೆ ಅನ್ನೋದು ಮೂಲಗಳಿಂದ ಬಂದ ಮಾಹಿತಿ. ಜೀ ಹಾಗೂ ಕಲರ್ಸ್ ಎರಡೂ ಸಂಸ್ಥೆಗಳು ಕೇವಲ ಸ್ಯಾಟಲೈಟ್ ಅಷ್ಟೇ ಅಲ್ಲ. ಓಟಿಟಿ ಹಕ್ಕುಗಳನ್ನೂ ಸೇರಿಸಿ ಬೇಡಿಕೆ ಇಟ್ಟಿದೆ ಎನ್ನಲಾಗಿದೆ.

  ಜೀ ಸ್ಟುಡಿಯೋ ಆಸಕ್ತಿ?

  ಜೀ ಸ್ಟುಡಿಯೋ ಆಸಕ್ತಿ?

  ಜೀ ಸ್ಟುಡಿಯೋ ಸಿನಿಮಾ ವಿತರಣೆಯನ್ನೂ ಮಾಡುತ್ತಿದೆ. ಈಗಾಗಲೇ ಕನ್ನಡದ ಕೆಲವು ಸಿನಿಮಾಗಳ ಡಿಸ್ಟ್ರಿಬ್ಯೂಷನ್ ಮಾಡಿದೆ. ಹೀಗಾಗಿ 'ಗಂಧದ ಗುಡಿ' ಸಿನಿಮಾವನ್ನು ಕರ್ನಾಟಕದಲ್ಲಿ ರಿಲೀಸ್ ಮಾಡಲು ಜೀ ಸ್ಟುಡಿಯೋ ಆಸಕ್ತಿ ತೋರಿದೆ ಎಂದು ಹೇಳಲಾಗುತ್ತಿದೆ. ಆದರೆ, ಅಶ್ವಿನಿ ಪುನೀತ್ ರಾಜ್‌ಕಮಾರ್ ಯಾರಿಗೆ ಹಕ್ಕು ಕೊಡುತ್ತಾರೆ? ಇಲ್ಲವೇ ಅವರದ್ದೇ ಸಂಸ್ಥೆನೇ ಸಿನಿಮಾವನ್ನು ಬಿಡುಗಡೆ ಮಾಡುತ್ತಾ? ಅನ್ನೋ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಸಿಕ್ಕಿಲ್ಲ.

  ಪಿಆರ್‌ಕೆಯಿಂದಲೇ ರಿಲೀಸ್?

  ಪಿಆರ್‌ಕೆಯಿಂದಲೇ ರಿಲೀಸ್?

  ಪುನೀತ್ ಡ್ರೀಮ್ ಪ್ರಾಜೆಕ್ಟ್‌ 'ಗಂಧದ ಗುಡಿ' ಅಕ್ಟೋಬರ್‌ 28ಕ್ಕೆ ರಿಲೀಸ್ ಆಗುತ್ತಿದೆ. ಈಗಾಗಲೇ ಚಿತ್ರತಂಡ ಇದು ಡಾಕ್ಯೂಮೆಂಟರಿ ಅಲ್ಲ. ಸಿನಿಮಾನೇ ಅಂತ ಪರೋಕ್ಷವಾಗಿ ಹೇಳಿದೆ. ಹೀಗಾಗಿ ಗಂಧದ ಗುಡಿ ಪುನೀತ್ ಅಭಿನಯದ ಕೊನೆಯ ಸಿನಿಮಾ ಆಗಲಿದೆ. ಈ ಕಾರಣಕ್ಕೆ ಸ್ವತ: ಪಿಆರ್‌ಕೆ ಸಂಸ್ಥೆನೇ ಈ ಸಿನಿಮಾವನ್ನು ರಿಲೀಸ್ ಮಾಡಲಿದೆ ಎಂದೂ ಹೇಳಲಾಗಿದೆ. ಸದ್ಯ ಯಾವುದಕ್ಕೂ ಅಧಿಕೃತ ಮಾಹಿತಿ ಇಲ್ಲ. ಇನ್ನು ಕೆಲವು ದಿನಗಳಲ್ಲಿ ಅಧಿಕೃತ ಮಾಹಿತಿ ಹೊರಬೀಳಬಹುದು.

  English summary
  OTT And TV Channels Are In Que to Purchase Puneeth Rajkumar Movie Gandhada Gudi, Know More.
  Friday, September 23, 2022, 16:55
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X