Mango Pachcha OTT: 'ಮ್ಯಾಂಗೋ ಪಚ್ಚ' ಓಟಿಟಿ, ಸ್ಯಾಟಲೈಟ್ ಪಾರ್ಟ್ನರ್ ಯಾರು? ಯಾವಾಗ ಸ್ಟ್ರೀಮಿಂಗ್?

ಕಿಚ್ಚ ಸುದೀಪ್ ಸೋದರಳಿಯ ಸಂಚಿತ್ ನಟನೆಯ 'ಮ್ಯಾಂಗೋ ಪಚ್ಚ' ಸಿನಿಮಾ ಚಿತ್ರಮಂದಿರಗಳಲ್ಲಿ ಪ್ರದರ್ಶನ ಮುಂದುವರೆಸಿದೆ. 2ನೇ ವಾರ ಸಿನಿಮಾ ಪ್ರೇಕ್ಷಕರನ್ನು ರಂಜಿಸುತ್ತಿದೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಸಿನಿಮಾ ಪ್ರೇಕ್ಷಕರನ್ನು ಸೆಳೆಯಲು ವಿಫಲವಾಗಿದೆ. ಸಿನಿಮಾ ನೋಡಿದವರಿಂದ ಒಳ್ಳೆ ಮಾತುಗಳು ಕೇಳಿದ್ರು, ಜನ ಯಾಕೋ ಚಿತ್ರಮಂದಿರಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ.

ವಿವೇಕ ನಿರ್ದೇಶನದ 'ಮ್ಯಾಂಗೋ ಪಚ್ಚ' ಸಿನಿಮಾ ಜೂನ್ 5ರಂದು ತೆರೆಗೆ ಬಂದಿತ್ತು. ತೆಲುಗಿನ 'ಪೆದ್ದಿ' ಸಿನಿಮಾ ಆರ್ಭಟದ ಎದುಕು ಸಂಚಿತ್ ನಟನೆಯ ಸಿನಿಮಾ ಕೊಂಚ ಮಂಕಾಗಿದ್ದು ಸುಳ್ಳಲ್ಲ. ಕೇವಲ ಒಂದೂವರೆ ಗಂಟೆಯ ಸಿನಿಮಾ ಇದು. ಎಲ್ಲೂ ಬೋರ್ ಹೊಡೆಸದಂತೆ ಬಹಳ ಚಿಕ್ಕದಾಗಿ ಚೊಕ್ಕವಾಗಿ ಕಥೆ ಹೇಳಿ ಮುಗಿಸಿದ್ದಾರೆ. ಹೊಸ ನಟನನ್ನು ಪರಿಚಯಿಸಲು ರೆಗ್ಯುಲರ್ ಕಮರ್ಷಿಯಲ್ ಅಂಶಗಳನ್ನು ಬಿಟ್ಟು ವಿಭಿನ್ನವಾಗಿ ಕಥೆ ಹೇಳುವ ಪ್ರಯತ್ನ ಮಾಡಲಾಗಿತ್ತು. ಅದಕ್ಕೆ ನೋಡುಗರ ಬೆಂಬಲವೂ ಸಿಕ್ಕಿದೆ.

OTT and TV Partners Buzz Mango Pachcha Likely Headed to Jio Hotstar and Colors Kannada

'ಮ್ಯಾಂಗೋ ಪಚ್ಚ' ಸಿನಿಮಾ ಓಟಿಟಿ ಹಾಗೂ ಟಿವಿ ರೈಟ್ಸ್ ಬಗ್ಗೆ ಈ ಚರ್ಚೆ ಶುರುವಾಗಿದೆ. ಜಿಯೋ ಹಾಟ್‌ಸ್ಟರ್ ಚಿತ್ರದ ಓಟಿಟಿ ರೈಟ್ಸ್ ಕೊಂಡುಕೊಂಡಿದ್ದಾರೆ ಎಂದು ಹೇಳಲಾಗ್ತಿದೆ. ಅದೇ ರೀತಿ ಕಲರ್ಸ್ ಕನ್ನಡ ವಾಹಿನಿಗೆ ಟಿವಿ ರೈಟ್ಸ್ ಸೇಲ್ ಆಗಿದೆ. ತಿಂಗಳಿಗೂ ಮುನ್ನ ಸಿನಿಮಾ ಜಿಯೋ ಹಾಟ್‌ಸ್ಟರ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸುವ ಸುಳಿವು ಸಿಕ್ತಿದೆ. ಜೂನ್ ಕೊನೆ ವಾರ ಅಥವಾ ಜುಲೈ ಮೊದಲ ವಾರವೇ ಸಿನಿಮಾ ಸ್ಮಾಲ್‌ಸ್ಕ್ರೀನ್‌ಗೆ ಬರುತ್ತದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ.

ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋಸ್ ಹಾಗೂ ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆಗಳು ಜಂಟಿಯಾಗಿ 'ಮ್ಯಾಂಗೋ ಪಚ್ಚ' ಸಿನಿಮಾ ನಿರ್ಮಾಣ ಮಾಡಿವೆ. ಸುದೀಪ್ ಕೂಡ ಸಂಚಿತ್ ಸಿನಿಮಾ ಬೆಂಬಲಕ್ಕೆ ನಿಂತಿದ್ದಾರೆ. ಬಿಡುಗಡೆ ಹೊಸ್ತಿಲಲ್ಲಿ ತಂಡದ ಜೊತೆ ನಿಂತು ಪ್ರಚಾರ ಮಾಡಿದ್ದರು. ಸಿನಿಮಾ ಬಿಡುಗಡೆ ಬಳಿಕ ಸಂಚಿತ್ ಕೆಲ ಚಿತ್ರಮಂದಿರಗಳಿಗೆ ಭೇಟಿ ನೀಡಿ ಪ್ರೇಕ್ಷಕರ ಜೊತೆ ಸಿನಿಮಾ ವೀಕ್ಷಿಸಿದ್ದರು. ಬೆನ್ನು ತಟ್ಟಿದವರಿಗೆ ಧನ್ಯವಾದ ತಿಳಿಸಿದ್ದರು.

OTT and TV Partners Buzz Mango Pachcha Likely Headed to Jio Hotstar and Colors Kannada

ಸಂಚಿತ್ ಜೊತೆಗೆ ಕಾಜಲ್ ಕುಂದರ್, ಪ್ರಶಾಂತ್ ಹಿರೇಮಠ, ಮಯೂರ್ ಪಟೇಲ್, ಜೈ , ಹರಿಣಿ ಶ್ರೀಕಾಂತ್, ಹಂಸ ಚಿತ್ರದಲ್ಲಿ ನಟಿಸಿದ್ದಾರೆ. ಶೇಖರ್ ಚಂದ್ರ ಹಾಗೂ ಸ್ವಾಮಿ ಛಾಯಾಗ್ರಹಣ, ಚರಣ್ ರಾಜ್ ಸಂಗೀತ ಚಿತ್ರಕ್ಕಿದೆ. ಚಿತ್ರಗಳು ಹಾಡುಗಳು ಹಿಟ್ ಆಗಿದೆ. 2001 ರಿಂದ 2011ರ ನಡುವಿನ ಕಾಲಘಟ್ಟದಲ್ಲಿ ಮೈಸೂರು ಭಾಗದಲ್ಲಿ ನಡೆಯುವ ಕಥೆ ಚಿತ್ರದಲ್ಲಿದೆ. ಸಿಡಿ ಅಂಗಡಿ ಇಟ್ಟುಕೊಂಡಿರುವ ಪ್ರಶಾಂತ-ಪಚ್ಚ ಮುಂದೆ ಅನಿವಾರ್ಯ ಕಾರಣದಿಂದ ಗಾಂಜಾ ಬೆಳೆಯುವ ವ್ಯವಹಾರ ಮಾಡಬೇಕಾಗುತ್ತದೆ. ಮುಂದೆ ಅವನ ಜೀವನದಲ್ಲಿ ನಡೆಯುವ ಘಟನೆಗಳೇ ಸಿನಿಮಾ ಕಥೆ.

ರಿವರ್ಸ್ ಸ್ಕ್ರೀನ್‌ಪ್ಲೇ ಶೈಲಿಯಲ್ಲಿ 'ಮ್ಯಾಂಗೋ ಪಚ್ಚ' ಕಥೆಯನ್ನು ನಿರ್ದೇಶಕ ವಿವೇಕ ಬಿಚ್ಚಿಟ್ಟಿದ್ದಾರೆ. ಕೊನೆಗೆ ಸೀಕ್ವೆಲ್ ಬಗ್ಗೆ ಸುಳಿವು ಕೊಟ್ಟು ಕುತೂಹಲ ಮೂಡಿಸಿದ್ದಾರೆ. 2ನೇ ಭಾಗದಲ್ಲಿ ಡಾಲಿ ಧನಂಜಯ್ ಕೂಡ ಅಬ್ಬರಿಸುವ ಸುಳಿವು ಸಿಕ್ಕಿದೆ. ಕೆಆರ್‌ಜಿ ಸಂಸ್ಥೆ ತಮ್ಮ ಸಿನಿಮಾ ಓಟಿಟಿ ರೈಟ್ಸ್ ಅನ್ನು ಅಮೇಜಾನ್ ಪ್ರೈಂ ವೀಡಿಯೋಗೆ ಮಾರಾಟ ಮಾಡ್ತಿತ್ತು. ತಪ್ಪಿದ್ರೆ, ಜೀ-5ನಲ್ಲಿ ಸ್ಟ್ರೀಮಿಂಗ್ ಆಗ್ತಿತ್ತು. ಆದರೆ ಈ ಬಾರಿ ಜಿಯೋ ಹಾಟ್‌ಸ್ಟರ್‌ ಜೊತೆ ಒಪ್ಪಂದ ಮಾಡಿಕೊಂಡಿರುವುದಾಗಿ ಹೇಳಲಾಗ್ತಿದೆ. ಶೀಘ್ರದಲ್ಲೇ ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಲಿದೆ.

ವಿಶೇಷ ಸೂಚನೆ: 'ಮ್ಯಾಂಗೋ ಪಚ್ಚ' ಸಿನಿಮಾ ಓಟಿಟಿ ಪಾರ್ಟ್ನರ್, ಸ್ಟ್ರೀಮಿಂಗ್ ಡೇಟ್ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಹೊರಬಂದಿಲ್ಲ. ಜಿಯೋ ಹಾಟ್‌ಸ್ಟರ್‌ನಲ್ಲಿ ಸ್ಟ್ರೀಮಿಂಗ್ ಆಗಬಹುದು ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ.

Read more about: sudeep sandalwood kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X